ಎ.ಪಂಕಜಾ
ಗೋಚರ
ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್ ಪದವಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಕಾದಂಬರಿ
[ಬದಲಾಯಿಸಿ]- ಅನುರಾಗ ಬಂಧನ
- ಅವನೇ ಕಾರಣ
- ಕಾಗದದ ದೋಣಿ
- ನಾದಭಂಗ
- ನೀನಾ (ಪತ್ತೇದಾರಿ)
- ನೋವು ನಲಿವು
- ಪ್ರೇಮಸಂಗಮ
- ಬಂಗಾರದ ಬಲೆ
- ಬಯಕೆಯ ಬೆಂಕಿ
- ಬಲಿಪಶು
- ಮಮತೆಯ ಮಡಿಲಲ್ಲಿ
- ರಾಗಸುಧಾ
- ವಿಜಯಗೀತ
- ಸುಖಸ್ವಪ್ನ
- ಸೊಗಸುಗಾತಿ
- ಸ್ನೇಹಸಂಬಂಧ
- ಹೊಸ ಹಾದಿಯಲ್ಲಿ
ನಾಟಕ
[ಬದಲಾಯಿಸಿ]- ಊರ್ಮಿಳಾ
ವಿಚಾರ ಸಾಹಿತ್ಯ
[ಬದಲಾಯಿಸಿ]- ಮದುವೆ ಮತ್ತು ಸ್ತ್ರೀ
ಪುರಸ್ಕಾರ
[ಬದಲಾಯಿಸಿ]ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’