Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಅಯಡೊಫಾರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಯೊಡೊಫಾರಮ್‍ನ ರಚನಾ ಸೂತ್ರ
ಅಯಡೊಫಾರಮ್

ಅಯಡೊಫಾರಮ್ (ಟ್ರೈಅಯೊಡೊಮೀಥೇನ್ ಎಂದೂ ಪರಿಚಿತವಾಗಿದೆ) ಒಂದು ಸಾವಯವ ಸಂಯುಕ್ತ. ಇದರ ರಾಸಾಯನಿಕ ಸೂತ್ರ CHI3.

ತಯಾರಿಕೆ

[ಬದಲಾಯಿಸಿ]

೧. ಅಯೋಡೀನನ್ನು ಮದ್ಯಸಾರದಲ್ಲಿ ಕರಗಿಸಿ ಆ ದ್ರಾವಣವನ್ನು ಸೋಡಿಯಮ್ ಕಾರ್ಬೊನೇಟ್ ಕ್ಷಾರದ ಜೊತೆಯಲ್ಲಿ ಕುದಿಸಿದಾಗ ಒಂದು ಹಳದಿ ಬಣ್ಣದ ದ್ರಾವಣ ಉತ್ಪನ್ನವಾಗುತ್ತದೆ. ಇದನ್ನು ತಣಿಸಿದರೆ ಹಳದಿ ಬಣ್ಣದ ಅಯಡೊಫಾರಮ್ ಹರಳುಗಳು (CHI₃) ಘನೀಕರಿಸುತ್ತವೆ.

೨. ಇದನ್ನು ಪಡೆಯುವ ಇನ್ನೊಂದು ವಿಧಾನ: ಮದ್ಯಸಾರ (C₂H₅.OH) ಅಥವಾ ಅಸಿಟೋನ್ (CH₃CO.CH₃) ಜೊತೆಗೆ ಸೋಡಿಯಮ್ ಕಾರ್ಬೊನೇಟ್ ಮತ್ತು ಪೊಟಾಸಿಯಮ್ ಅಯೊಡೈಡ್‌ಗಳನ್ನು ಸೇರಿಸಿ ಆ ಮಿಶ್ರಣದ ಮೂಲಕ ವಿದ್ಯುಚ್ಛಕ್ತಿ ಹಾಯಿಸಿದರೆ ಅಯಡೊಫಾರಮ್ ಸಿಕ್ಕುತ್ತದೆ.

ಮೀಥೈಲ್ ಆಲ್ಕೋಹಾಲ್ (CH₃.OH) ಮೇಲೆ ತಿಳಿಸಿದ ಯಾವ ರೀತಿಯಲ್ಲೂ ಅಯಡೋಫಾರಮನ್ನು ಕೊಡಲಾರದು. ಆದರೆ ಈಥೈಲ್ ಆಲ್ಕೋಹಾಲ್ ಇದನ್ನು ಕೊಡಬಲ್ಲದು. ಇವೆರಡು ಮದ್ಯಸಾರಗಳನ್ನು ಹೋಲಿಸಲು ಇದು ಒಳ್ಳೆಯ ಪರೀಕ್ಷೆ (ಅಯಡೊಫಾರಮ್ ಟೆಸ್ಟ್).

ಗುಣಗಳು ಮತ್ತು ಉಪಯೋಗಗಳು

[ಬದಲಾಯಿಸಿ]

ಅಯಡೊಫಾರಮ್ ತೀವ್ರ ವಾಸನೆಯಿರುವ ಹಳದಿ ಬಣ್ಣದ ಹರಳು; (120) ಸೆಂ.ಗ್ರೇ.ನಲ್ಲಿ ದ್ರವೀಕರಿಸುತ್ತದೆ. ಅಯಡೊಫಾರಮ್ ಕ್ಲೋರೋಫಾರಮ್ಮನ್ನು ಅನೇಕ ಲಕ್ಷಣಗಳಲ್ಲಿ ಹೋಲುತ್ತದೆ. ಔಷಧಿಯಲ್ಲಿ ಇದನ್ನು ಕ್ರಿಮಿನಾಶಕ ವಸ್ತುವಾಗಿ ಬಳಸುತ್ತಾರೆ.[][]

ಉಲ್ಲೇಖಗಳು

[ಬದಲಾಯಿಸಿ]
  1. Merck Index, 12 Edition, 5054
  2. Lyday, Phyllis A. (2005), "Iodine and Iodine Compounds", Ullmann's Encyclopedia of Industrial Chemistry, Wiley-VCH, Weinheim, pp. 1–13, doi:10.1002/14356007.a14_381.pub2, ISBN 9783527306732

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: