ಆಂಗಸ್ ಡೀಟನ್
ಆಂಗಸ್ ಡೀಟನ್ | |
---|---|
ಜನನ | ಆಂಗಸ್ ಸ್ಟೆವಾರ್ಟ್ ಡೀಟನ್ ೧೯ ಅಕ್ಟೋಬರ್ ೧೯೪೫ ಎಡಿನ್ ಬರ್ಗ್, ಸ್ಕಾಟ್‍ಲ್ಯಾಂಡ್, ಸಂಯುಕ್ತ ರಾಜ್ಯ |
ಪೌರತ್ವ | ಸಂಯುಕ್ತ ರಾಜ್ಯ - ಅಮೇರಿಕ ಸಂಯುಕ್ತ ಸಂಸ್ಥಾನ |
ಕಾರ್ಯಕ್ಷೇತ್ರ | ಮೈಕ್ರೋ ಎಕಾನಾಮಿಕ್ಸ್ |
ಸಂಸ್ಥೆಗಳು | ಬ್ರಿಸ್ಟಾಲ್ ವಿಶ್ವವಿದ್ಯಾನಿಲಯ ಪ್ರಿನ್ಸಟಾನ್ ವಿಶ್ವವಿದ್ಯಾನಿಲಯ |
ವಿದ್ಯಾಭ್ಯಾಸ | ಫೆಟ್ಸ್ ಕಾಲೇಜು |
ಅಭ್ಯಸಿಸಿದ ವಿದ್ಯಾಪೀಠ | ಫಿಟ್ಜ್ವಿಲಿಯಂ ವಿದ್ಯಾಲಯ, ಕೆಂಬ್ರಿಡ್ಜ್ |
ಮಹಾಪ್ರಬಂಧ | ಮಾಡೆಲ್ಸ್ ಆಫ್ ಕನ್ಸ್ಉಮರ್ ಡಿಮ್ಯಾಂಡ್ ಅಂಡ್ ದೇರ್ ಅಪ್ಲಿಕೇಶನ್ ಟು ದಿ ಯುನೈಟೆಡ್ ಕಿಂಗ್ಡಂ(Models of consumer demand and their application to the United Kingdom) (೧೯೭೫) |
ಗಮನಾರ್ಹ ಪ್ರಶಸ್ತಿಗಳು |
|
ಆಂಗಸ್ ಸ್ಟೀವರ್ಟ್ ಡೀಟನ್(ಜನನ: 19 ಅಕ್ಟೋಬರ್ 1945), ಎಫಬಿಏ(FBA)[೧] ಅವರು ಬ್ರಿಟೀಶ್-ಅಮೇರಿಕನ್ ಅರ್ಥಶಾಸ್ತ್ರಜ್ಞನಾಗಿದ್ದಾರೆ. ಅವರು ೨೦೧೫ ರಲ್ಲಿ ಬಳಕೆ, ಬಡತನ, ಮತ್ತು ಕಲ್ಯಾಣ ದ ತಮ್ಮ ವಿಶ್ಲೇಷಣೆಗಾಗಿ ಅರ್ಥಶಾಸ್ತ್ರ ವಿಜ್ಞಾನಗಳಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.[೨][೩]
ಜೀವನಚರಿತ್ರೆ
[ಬದಲಾಯಿಸಿ]ಆಂಗಸ್ ಡೀಟನ್ ಅವರು 19 ಅಕ್ಟೋಬರ್ 1945 ರಲ್ಲಿ ಎಡಿನ್ಬರೊ, ಸ್ಕಾಟ್ಲೆಂಡ್ನಲ್ಲಿ ಜನಿಸಿದರು ಮತ್ತು ತಮ್ಮ ವಿದ್ಯಾಭ್ಯಾಸವನ್ನು ಫೆಟಿಸ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಬಿ. ಎ., ಎಂಎ ಮತ್ತು ಡಿ.ಫಿಲ್ ಪದವಿಗಳನ್ನು ಪಡೆದರು. 1975 ರಲ್ಲಿ ಅವರ ಪ್ರಬಂಧ ಅನುಭೋಗಿ ಬೇಡಿಕೆಯ ಮಾದರಿಗಳು ಮತ್ತು ಸಂಯುಕ್ತ ಸಂಸ್ಥಾನಕ್ಕೆ ಅದರ ಅನ್ವಯ ನಂತರ ಅವರು ಫಿಟ್ಜ್ ವಿಲಿಯಮ್ ಕಾಲೇಜಿನಲ್ಲಿ ಸಂಶೋಧನಾರ್ಥಿಯಾಗಿ, ಮತ್ತು ಸಂಶೋಧನಾ ಆಫೀಸರ್ ಆಗಿ 'ಅನ್ವಯಿಕ ಅರ್ಥಶಾಸ್ತ್ರ' ವಿಭಾಗದಲ್ಲಿ ರಿಚರ್ಡ ಸ್ಟೋನ್ ಮತ್ತು ಟೆರ್ರಿ ಬಾರ್ಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.[೨] 1976ರಲ್ಲಿ ಡೀಟನ್ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯದಲ್ಲಿ 'ಸಂಖ್ಯಾಗಣಿತಶಾಸ್ತ್ರ' ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದರು. ಈ ಸಮಯದಲ್ಲಿ, ಅವರು ತಮ್ಮ ಅತ್ಯಂತ ಪ್ರಭಾವಶಾಲಿ ಕೃತಿಯ ಗುರುತರವಾದ ಭಾಗವನ್ನು ಪೂರ್ಣಗೊಳಿಸಿದರು. 1978 ರಲ್ಲಿ ಅವರು 'ಸಂಖ್ಯಾಗಣಿತಶಾಸ್ತ್ರ ಸೊಸೈಟಿ' ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡುವ 'ಫ್ರಿಶ್ಚ್ ಪದಕ' ಪಡೆದ ಮೊಟ್ಟ ಮೊದಲಿಗರು. 1980 ರಲ್ಲಿ ಅವರ 'ವಿವಿಧ ಅನುಭೋಗಿ ಸರಕುಗಳ ಬೇಡಿಕೆ ಹೇಗೆ ಬೆಲೆ ಮತ್ತು ಆದಾಯವನ್ನು ಅವಲಂಬಿಸಿರುತ್ತದೆ' ಎಂಬ ಲೇಖನ ದಿ ಅಮೇರಿಕನ್ ಎಕನಾಮಿಕ್ ರಿವ್ಯೂ ನಲ್ಲಿ ಪ್ರಕಟವಾಯಿತು. ಈ ಲೇಖನವು 1970 ರಿಂದೀಚೆಗೆ ಈ ಪತ್ರಿಕೆಯಲ್ಲಿ ಪ್ರಕಟಗೊಂಡ 20 ಅತ್ಯಂತ ಪ್ರಭಾವಶಾಲಿ ಲೇಖನಗಳಲ್ಲೊಂದಾಗಿದೆ.[೪] 1980 ರಲ್ಲಿ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯವನ್ನು ಸೇರಿದರು.[೫] ಅವರು ಡ್ವೈಟ್ ಡಿ ಐಸಿನ್ಹೋವರ್ ಅಂತರರಾಷ್ಟ್ರೀಯ ವಿಷಯದ ಪ್ರಾಧ್ಯಾಪಕರಾಗಿ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ವುಡ್ರೋ ವಿಲ್ಸನ್ ಶಾಲೆಯ ಸಾರ್ವಜನಿಕ ಮತ್ತು ಅಂತರರಾಷ್ಟ್ರೀಯ ವಿಷಯದ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುತ್ತಾರೆ. ಅವರು ಬ್ರಿಟನ್ ಮತ್ತು ಅಮೇರಿಕದ ಪೌರತ್ವವನ್ನು ಹೊಂದಿದ್ದಾರೆ.[೬] ಅಕ್ಟೋಬರ್ 2015ರಲ್ಲಿ ಡೀಟನ್ ಅವರು ಆ ವರ್ಷದ ಅರ್ಥಶಾಸ್ತ್ರ ವಿಜಾನದ ನೋಬೆಲ್ ಮೆಮೋರಿಯಲ್ ಬಹುಮಾನವನ್ನು ಗೆದ್ದಿದ್ದಾರೆಂದು ಘೋಷಿಸಲಾಯಿತು. ಡೀಟನ್ ಅವರು ಬಹಳ ಸಂತೋಷಪಟ್ಟರು ಮತ್ತು "ಯಾರಿಗೆ ಪ್ರಪಂಚದ ಬಡವರ ಬಗ್ಗೆ ಕಳಕಳಿಯಿದೆಯೋ ಅವರು ಮತ್ತು ಜನರು ಹೇಗೆ ವರ್ತಿಸುತ್ತಾರೋ ಅವರಿಗೆ ಒಳ್ಳೆಯ ಜೀವನ ಅದು ಕೊಡುತ್ತದೆ" ಅವರನ್ನು ಕುರಿತು ಅವರೇ ವಿವರಿಸಿಕೊಂಡರು ಎಂದು ಬಿಬಿಸಿ ವರದಿ ಮಾಡಿತು. ದಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ (Royal Swedish Academy of Sciences) "ವಿವರವಾದ ವ್ಯಕ್ತಿಯ ಆಯ್ಕೆಗಳು ಮತ್ತು ಸಮಗ್ರ ಫಲಿತಾಂಶಗಳನ್ನು ಜೋಡಿಸುವ ಮೂಲಕ ಅವರ ಸಂಶೋಧನೆಯು ಸೂಕ್ಶ್ಮ ಅರ್ಥಶಾಸ್ತ್ರ, ಸಮಗ್ರ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ಕ್ಷೇತ್ರಗಳಿಗೆ ವರ್ಗಾವಣೆಯಾಗಲು ಸಹಾಯವಾಯಿತು, ಯಾರೊಬ್ಬರಿಗಿಂತಲೂ ಹೆಚ್ಚಿನದಾಗಿ ಆಂಗಸ್ ಡೀಟನ್ ಅವರು ಈ ತಿಳುವಳಿಕೆಯನ್ನು ಎತ್ತಿ ಹಿಡಿದಿದ್ದಾರೆ" ಎಂದು ಹೇಳುತ್ತಾ, ಒಮ್ಮೆ ಅನುಭೋಗಿಯ ಆಯ್ಕೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬಡತನವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರ್ಥಿಕ ನೀತಿಯನ್ನು ರೂಪಿಸಲು ಸಾದ್ಯ ಎಂದು ಹೇಳಿತು.[೭] ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ವಿಲಿಯಮ್ ಈಸ್ಠರ್ಲೀ "ವಿವಿಧ ಕ್ಷೇತ್ರಗಳಲ್ಲಿ ಆಂಗಸ್ ಅವರ ಕೊಡುಗೆ ಎಷ್ಟು ಎಂಬುದು ಈ ನೋಬೆಲ್ ಮನತಟ್ಟುವುದು" ಎಂದು ಹೇಳುತ್ತಾರೆ. ಈಸ್ಠರ್ಲೀ ಅವರು ಡೀಟನ್ರ ಸಂಶೋಧನಾ ಕ್ಷೇತ್ರದಲ್ಲಿ ರಾಜಕೀಯ ಅಂಶಗಳ ಬಗ್ಗೆ ಮತ್ತು ಅವರ ಕೃತಿಯಲ್ಲಿ "ಸುತ್ತು ಬಳಸಿನ ವಿವರಗಳು " ಒಳಗೊಂಡಿರುವುದರಲ್ಲಿ ಇರುವ ಧೈರ್ಯವನ್ನು ಗಮನಿಸಿದ್ದಾರೆ ಮತ್ತು " ಈ ಕ್ಷೇತ್ರದಲ್ಲಿ ಕಾರ್ಯಸೂಚಿ ಹೊಂದಿರುವವರು ಸಾಕಷ್ಟು ಜನರಿದ್ದರೂ ಯಾರೊಬ್ಬರೂ ಕೂಡ ಈ ಪ್ರಶ್ನೆಗಳ ವಿಷಯದಲ್ಲಿ ಅವರು ಕಾರ್ಯಸೂಚಿ ಹೊಂದಿರುವುದರೆಂದು ಅವರನ್ನು ದೂಷಿಸಲಾರರು" ಎಂದು ಸೇರಿಸುತ್ತಾರೆ.[೮]
ಉಲ್ಲೇಖಗಳು
[ಬದಲಾಯಿಸಿ]- ↑ Instruments of Development - website British Academy
- ↑ ೨.೦ ೨.೧ "Cambridge alumnus awarded Nobel economics prize". University of Cambridge. 2015-10-12. Retrieved 2015-10-17.
- ↑ Wearden, Graeme. "Nobel prize in economics won by Angus Deaton – live". The Guardian. Retrieved 12 October 2015.
- ↑ "Former Bristol Economics professor wins Nobel Prize". University of Bristol. Retrieved 15 October 2015.
- ↑ "NBER Profile: Angus Deaton". National Bureau of Economic Research. Retrieved 13 October 2015.
- ↑ Rising, Malin (12 October 2015). "Scottish economist Angus Deaton wins Nobel economics prize". Yahoo! News. Associated Press. Retrieved 12 October 2015.
- ↑ "British academic awarded Nobel economics prize". BBC News Online. 12 October 2015. Retrieved 12 October 2015.
- ↑ Timiraos, Nick; Duxbury, Charles (12 October 2015). "Angus Deaton Awarded Nobel Prize in Economic Sciences". The Wall Street Journal. New York City. Retrieved 13 October 2015.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Angus Deaton's website
- Angus Deaton Quotes With Pictures Archived 2016-11-28 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Pages with authority control identifiers needing attention
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with KBR identifiers
- Articles with LCCN identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLK identifiers
- Articles with NSK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with CINII identifiers
- Articles with Google Scholar identifiers
- Articles with MATHSN identifiers
- Articles with MGP identifiers
- Articles with ORCID identifiers
- Articles with ZBMATH identifiers
- Articles with Trove identifiers
- Articles with SUDOC identifiers
- ಜನ-ಜೀವನ
- ನೋಬೆಲ್ ಪ್ರಶಸ್ತಿ ಪುರಸ್ಕೃತರು
- ವಿಜ್ಞಾನಿಗಳು