ಉಚಿತ ಮತ್ತು ಮುಕ್ತ-ಆಕರ ತಂತ್ರಾಂಶ
ಉಚಿತ ಮತ್ತು ಮುಕ್ತ-ಮೂಲ ಸಾಫ್ಟ್‌ವೇರ್ (Free and open-source software (FOSS)) ಎನ್ನುವುದು ಉಚಿತ ತಂತ್ರಾಂಶ ಮತ್ತು ಮುಕ್ತ-ಆಕರ ತಂತ್ರಾಂಶ ಎರಡನ್ನೂ ಒಳಗೊಂಡಿರುವ ತಂತ್ರಾಂಶ ಗುಂಪುಗಳನ್ನು ಉಲ್ಲೇಖಿಸಲು ಬಳಸುವ ಪದವಾಗಿದೆ. ಇಲ್ಲಿ ಯಾರಾದರೂ ಯಾವುದೇ ತಂತ್ರಾಂಶವನ್ನು ಬಳಸಲು, ನಕಲು ಮಾಡಲು, ಅಧ್ಯಯನ ಮಾಡಲು ಮತ್ತು ಬದಲಾಯಿಸಲು ಮುಕ್ತವಾಗಿ ಪರವಾನಗಿ ಪಡೆದಿದ್ದಾರೆ ಹಾಗೂ ಆಕರ ಸಂಕೇತ(ಸೋರ್ಸ್ ಕೋಡ್) ಅನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗುತ್ತದೆ. ಇದರಿಂದ ಜನರು ತಂತ್ರಾಂಶದ ವಿನ್ಯಾಸವನ್ನು ಸ್ವಯಂಪ್ರೇರಣೆಯಿಂದ ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ.[೧] ಇದು ಸ್ವಾಮ್ಯದ ತಂತ್ರಾಂಶಕ್ಕೆ ವ್ಯತಿರಿಕ್ತವಾಗಿದೆ. ಸ್ವಾಮ್ಯದ ತಂತ್ರಾಂಶದಲ್ಲಿ ಸ್ವಾಮ್ಯದ ತಂತ್ರಾಂಶ ನಿರ್ಬಂಧಿತ ಹಕ್ಕುಸ್ವಾಮ್ಯ ಪರವಾನಗಿ ಅಡಿಯಲ್ಲಿದೆ ಮತ್ತು ಆಕರ ಸಂಕೇತ(ಸೋರ್ಸ್ ಕೋಡ್) ಅನ್ನು ಸಾಮಾನ್ಯವಾಗಿ ಬಳಕೆದಾರರಿಂದ ಮರೆಮಾಡಲಾಗುತ್ತದೆ.
ಉಚಿತ ಮತ್ತು ಮುಕ್ತ-ಆಕರ ತಂತ್ರಾಂಶವು ಬಳಕೆದಾರರ ನಾಗರಿಕ ಸ್ವಾತಂತ್ರ್ಯ ಹಕ್ಕುಗಳನ್ನು ಕಾಪಾಡುತ್ತದೆ. ಉಚಿತ ಮತ್ತು ಮುಕ್ತ-ಆಕರ ತಂತ್ರಾಂಶವನ್ನು ಬಳಸುವ ಇತರ ಪ್ರಯೋಜನಗಳೆಂದರೆ ಕಡಿಮೆಯಾದ ತಂತ್ರಾಂಶ ವೆಚ್ಚಗಳು, ಹೆಚ್ಚಿದ ಭದ್ರತೆ ಮತ್ತು ಸ್ಥಿರತೆ. ಗೌಪ್ಯತೆ ಮತ್ತು ಶಿಕ್ಷಣವನ್ನು ರಕ್ಷಿಸುವುದು ಮತ್ತು ಬಳಕೆದಾರರಿಗೆ ತಮ್ಮದೇ ಆದ ಯಂತ್ರಾಂಶದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುವುದು. ಉಚಿತ ಮತ್ತು ಮುಕ್ತ-ಆಕರ ಕಾರ್ಯಾಚರಣಾ ವ್ಯವಸ್ಥೆಗಳಾದ ಲೀನಕ್ಸ್(Linux) ಮತ್ತು ಬಿಎಸ್ಡಿ(BSD)ಯ ವಂಶಸ್ಥರು ಲಕ್ಷಾಂತರ ಸರ್ವರ್‌ಗಳು, ಡೆಸ್ಕ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳಿಗೆ ಶಕ್ತಿ ನೀಡುತ್ತಾ ಇಂದು ವ್ಯಾಪಕವಾಗಿ ಬಳಸಲ್ಪಡುತ್ತದೆ. ಉಚಿತ ತಂತ್ರಾಂಶ ಪರವಾನಗಿಗಳು ಮತ್ತು ಮುಕ್ತ-ಆಕರ ಪರವಾನಗಿಗಳನ್ನು ಅನೇಕ ತಂತ್ರಾಂಶ ಪ್ಯಾಕೇಜ್‌ಗಳು ಬಳಸುತ್ತವೆ. ಉಚಿತ ತಂತ್ರಾಂಶ ಚಳುವಳಿ ಮತ್ತು ಮುಕ್ತ-ಆಕರ ತಂತ್ರಾಂಶ ಚಳುವಳಿಗಳು, ಉಚಿತ ಮತ್ತು ಮುಕ್ತ-ಆಕರ ತಂತ್ರಾಂಶದ ವ್ಯಾಪಕ ಉತ್ಪಾದನೆ ಮತ್ತು ಅಳವಡಿಕೆಯ ಹಿಂದಿನ ಆನ್‌ಲೈನ್ ಸಾಮಾಜಿಕ ಚಳುವಳಿಗಳಾಗಿವೆ. ಮುಕ್ತ-ಆಕರ ತಂತ್ರಾಂಶ ಚಳುವಳಿಗಳು ಉಚಿತ/ಮುಕ್ತ ಮತ್ತು ಮುಕ್ತ-ಆಕರ (free/libre and open-source software(FLOSS)) ಅಥವಾ ಉಚಿತ/ಮುಕ್ತ(free/libre) ಪದಗಳನ್ನು ಬಳಸಲು ಬಯಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "What is free software? The Free Software Definition". The GNU Project -- GNU.org. 2018-06-12. Archived from the original on 2013-10-14. Retrieved 2018-09-15.