ಉಪವೇದ
ಗೋಚರ
ಉಪವೇದ ಗೌಣವೆಂದು ಪರಿಗಣಿಸಿರುವ ವೇದ. ಆಯುರ್ವೇದ, ಧನುರ್ವೇದ, ಗಾಂಧರ್ವವೇದ, ಶಸ್ತ್ರಶಾಸ್ತ್ರ ಎಂಬ ನಾಲ್ಕು ಉಪವೇದಗಳಿವೆ. ಇವು ಅನುಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂಬ ಮುಖ್ಯ ವೇದಗಳಿಗೆ ಸಂಬಂಧಪಟ್ಟಿವೆ. ಆಯುರ್ವೇದ ಅಥರ್ವವೇದಕ್ಕೆ ಸೇರಿದೆಯೆಂದು ಕೆಲವರು ಮತ. ಹಾಗೆಯೇ ಶಸ್ತ್ರಶಾಸ್ತ್ರದ ಬದಲು ಸ್ಥಾಪತ್ಯವೇದವನ್ನು (ವಾಸ್ತುಶಿಲ್ಪ) ನಾಲ್ಕನೆಯ ಉಪವೇದವೆಂದು ಹೇಳುವುದುಂಟು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |