ಎಸ್ಟೊನಿಯ
ಎಸ್ಟೊನಿಯ ಗಣರಾಜ್ಯ Eesti Vabariik ಎಸ್ಟಿ ವಬರೀಕ್ | |
---|---|
Anthem: Mu isamaa, mu õnn ja rõõm | |
Capital | ತಾಲ್ಲಿನ್ |
Largest city | ರಾಜಧಾನಿ |
Official languages | ಎಸ್ಟೊನಿಯದ ಭಾಷೆ 1 |
Demonym(s) | Estonian |
Government | ಸಂಸದೀಯ ಪ್ರಜಾತಂತ್ರ |
• ರಾಷ್ಟ್ರಪತಿ | ತೂಮಸ್ ಹೆಂಡ್ರಿಕ್ ಇಲ್ವೇಸ್ |
• ಪ್ರಧಾನ ಮಂತ್ರಿ | ಆಂಡ್ರಸ್ ಅನ್ಸಿಪ್ |
ಸ್ವಾತಂತ್ರ್ಯ ರಷ್ಯಾ ಸಾಮ್ರಾಜ್ಯ ಮತ್ತು ಜರ್ಮನಿ ಸಾಮ್ರಾಜ್ಯಗಳಿಂದ | |
• ಘೋಷಿತ | ಫೆಬ್ರುವರಿ ೨೪ ೧೯೧೮ |
• ಮನ್ನಿತ | ಫೆಬ್ರುವರಿ ೨ ೧೯೨೦ |
• ಸೋವಿಯೆಟ್ ಒಕ್ಕೂಟದ ಸ್ವಾಧೀನಕ್ಕೆ | ಜೂನ್ ೧೬ ೧೯೪೦ |
• ಪುನರ್ಘೋಷಣೆ | ಆಗಸ್ಟ್ ೨೦ ೧೯೯೧ |
• Water (%) | 4.56% |
Population | |
• ೨೦೦೭ estimate | 1,342,409 (೧೫೧ನೇ) |
• ೨೦೦೦ census | 1,376,743 |
GDP (PPP) | ೨೦೦೬ estimate |
• Total | $26.85 billion (೧೦೬ನೇ) |
• Per capita | $20,300 (೪೨ನೇ) |
GDP (nominal) | ೨೦೦೫ estimate |
• Total | $13.10 billion (೯೨ನೇ) |
• Per capita | $12,203 (೪೩ನೇ) |
Gini (೨೦೦೩) | 35.8 medium |
HDI (೨೦೦೪) | 0.858 Error: Invalid HDI value · ೪೦ನೇ |
Currency | ಯುರೋ (€) (EUR) |
Time zone | UTC+2 (EET) |
• Summer (DST) | UTC+3 (EEST) |
Calling code | 372 |
Internet TLD | .ee² |
|
ಎಸ್ಟೊನಿಯ, ಅಧಿಕೃತವಾಗಿ ಎಸ್ಟೊನಿಯ ಗಣರಾಜ್ಯ ([Eesti or Eesti Vabariik] Error: {{Lang}}: text has italic markup (help); ಜರ್ಮನ್: Estland), ಉತ್ತರ ಯುರೋಪ್ನ ಒಂದು ದೇಶ. ದಕ್ಷಿಣಕ್ಕೆ ಲಾಟ್ವಿಯ, ಪೂರ್ವಕ್ಕೆ ರಷ್ಯಾಗಳೊಂದಿಗೆ ಎಸ್ಟೊನಿಯ ಭೂಗಡಗಳನ್ನು ಹೊಂದಿದೆ. ಉತ್ತರಕ್ಕೆ ಫಿನ್‍ಲ್ಯಾಂಡ್ ಇಂದ ಫಿನ್‍ಲ್ಯಾಂಡ್ ಕೊಲ್ಲಿ ಮತ್ತು ಸ್ವೀಡನ್ ಇಂದ ಬಾಲ್ಟಿಕ್ ಸಮುದ್ರಗಳಿಂದ ಬೇರ್ಪಟ್ಟಿದೆ. ಎಸ್ಟೊನಿಯ ಯುರೋಪಿನ ಒಕ್ಕೂಟ ಮತ್ತು ನೇಟೊಗಳ ಸದಸ್ಯ ರಾಷ್ಟ್ರ.
ಎಸ್ಟೋನಿಯವು ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲೊಂದಾಗಿತ್ತು. 1991ರಲ್ಲಿ ಎಸ್ಟೋನಿಯನ್ ಸೋವಿಯತ್ ಸಮಾಜವಾದೀ ಗಣರಾಜ್ಯದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಸುಮಾರು 57° 50' ಉತ್ತರ ಅಕ್ಷಾಂಶದಿಂದ 59° 75' ಉತ್ತರ ಅಕ್ಷಾಂಶದ ವರೆಗೂ 22° ಪೂರ್ವ ರೇಖಾಂಶದಿಂದ 28° 10' ಪೂರ್ವ ರೇಖಾಂಶದ ವರೆಗೂ ಹರಡಿದೆ. ಉತ್ತರದಲ್ಲಿ ಫಿನ್ಲೆಂಡ್ ಖಾರಿ, ಪಶ್ಚಿಮದಲ್ಲಿ ಬಾಲ್ಟಿಕ್ ಸಮುದ್ರ, ಪುರ್ವದಲ್ಲಿ ಪೈಪುಸ್ ಸರೋವರ, ಪ್ಸಾಫ್ಕ್ ಮತ್ತು ರಷ್ಯನ್ ಸೋವಿಯತ್ ಗಣರಾಜ್ಯ, ದಕ್ಷಿಣದಲ್ಲಿ ಲ್ಯಾಟ್ವಿಯ ಇವುಗಳ ನಡುವೆ ಇರುವ ಈ ರಾಜ್ಯ ಬಾಲ್ಟಿಕ್ ಪ್ರದೇಶದ ಮೂರು ಗಣರಾಜ್ಯಗಳ ಪೈಕಿ ಅತ್ಯಂತ ಚಿಕ್ಕದು. (ಉಳಿದೆರಡು ಲಿಥುವೇನಿಯ ಮತ್ತು ಲ್ಯಾಟ್ವಿಯ.) ಪ್ರಧಾನ ಭೂ ಭಾಗದೊಂದಿಗೆ ಪಶ್ಚಿಮದಲ್ಲಿನ 818 ದ್ವೀಪಗಳೂ ಈ ದೇಶಕ್ಕೆ ಸೇರಿವೆ. ಇವುಗಳಲ್ಲಿ ಮುಖ್ಯವಾದವು ಸೆರ್ಯಿಮ (ಅಸೆóಲ್) (163 ಚ.ಕಿಮೀ) ಹೀಯೂಮಾ (ಡೇಗೋ) (600 ಚ.ಕಿಮೀ), ಮುಹುಮಾ ಮತ್ತು ಮೊಮೊರ್ಸ್. ರಾಜ್ಯದ ವಿಸ್ತೀರ್ಣ 29,555 ಚ.ಕಿಮೀ ಗಳಿದ್ದುದು 1946ರ ಅನಂತರ 45,100 ಚ.ಕಿಮೀ ಆಯಿತು. ವಿಸ್ತೀರ್ಣದ ದೃಷ್ಟಿಯಿಂದ ಈ ರಾಜ್ಯದ ಸಮುದ್ರ ತೀರ ಅಧಿಕ ಉದ್ದವೆಂದೇ ಹೇಳಬೇಕು.
ಈ ರಾಜ್ಯದ ಉತ್ತರಾರ್ಧದಲ್ಲೂ ದ್ವೀಪಗಳಲ್ಲೂ ಸಿಲ್ಯೂರಿಯನ್ ಕಾಲದ ಡೊಲೊಮೈಟ್ ಮತ್ತು ಸುಣ್ಣಕಲ್ಲು ಶಿಲೆಗಳೂ ದಕ್ಷಿಣದಲ್ಲಿ ಡಿವೊನಿಯನ್ ಕಾಲದ ಮರಳುಕಲ್ಲುಗಳೂ ಇವೆ. ದೇಶದಾದ್ಯಂತ ಹೇರಳವಾಗಿ ಹಿಮಚಲನೆಗಳಿಂದ ಸಂಭವಿಸಿದ ಸಂಚಯನಗಳುಂಟು. ಇವು ದಕ್ಷಿಣದಲ್ಲಿ ಹೆಚ್ಚು ಒತ್ತಾಗಿವೆ. ಹಿಮಚಲನೆಯಿಂದಾದ ಸರೋವರಗಳು ಸುಮಾರು 1,500ಕ್ಕೂ ಅಧಿಕವಾಗಿವೆ. ಮಧ್ಯ ಮತ್ತು ದಕ್ಷಿಣಗಳಲ್ಲಿ ಇವನ್ನು ಹೆಚ್ಚಾಗಿ ಕಾಣಬಹುದು. ಇವುಗಳಲ್ಲಿ ವೋಟ್ರ್ಸ್-ಜಾರು ಅತ್ಯಂತ ದೊಡ್ಡದು.