Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಗಣದಾಸಿ ವೀರಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣದಾಸಿ ವೀರಣ್ಣ : ಸು.1160. ಶಿವಶರಣ ಹಾಗೂ ವಚನಕಾರ.

ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ ಮೊದಲಾದ ಮಹಾಶರಣಶರಣೆಯರ ಸಮಕಾಲೀನ. ಪಾಲ್ಕುರಿಕೆ ಸೋಮನಾಥನ (ಸು.1299) ‘ಸಹಸ್ರಗಣನಾಮ’ದಲ್ಲಿ ಈತನ ಹೆಸರು ಉಲ್ಲೇಖಿತವಾಗಿರುವುದರಿಂದ ಅಮರಗಣದಲ್ಲಿ ಪೂಜ್ಯಸ್ಥಾನವನ್ನು ಪಡೆದುಕೊಂಡಿದ್ದನೆಂದು ತಿಳಿಯುತ್ತದೆ. ಈತ ಹಲವಾರು ವಚನಗಳನ್ನು ಬರೆದಿದ್ದಾನೆ. ನಮ್ಮ ಶಾಂತ ಕೂಡಲಸಂಗಮದೇವ ಎಂಬುದು ಈತನ ವಚನಗಳ ಅಂಕಿತ. ಇವನ ವಚನಗಳಲ್ಲಿ ಆಳವಾದ ಚಿಂತನೆ ಹಾಗೂ ಅನುಭವ ಘನೀಭೂತವಾಗಿದೆ. ‘ಗಾಳಿಯಿಲ್ಲದ ದೀಪದಂತೆ’ ಈತನ ವಚನಗಳು ಅರ್ಥಶ್ರೀಮಂತಿಕೆಯಿಂದ ಸದಾ ಪ್ರಜ್ವಲಿಸುತ್ತವೆ. ಭಾವದೃಢತೆ ವಚನಗಳಲ್ಲಿ ವ್ಯಕ್ತವಾಗಿ ಈತನ ವ್ಯಕ್ತಿತ್ವಕ್ಕೆ ಸ್ಪಷ್ಟವಾದ ನಿಲುವನ್ನು ಕೊಡುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: