Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಗಿರವಿದಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಬೆಲೆಬಾಳುವ ಪದಾರ್ಥಗಳ ಮೇಲೆ, ಆಧಾರದ ಮೇಲೆ ಹಣವನ್ನು ಸಾಲವಾಗಿ ಕೊಡುವ ವ್ಯಕ್ತಿ (ಅಥವಾ ಸಂಸ್ಥೆ) (ಪಾನ್ ಬ್ರೋಕರ್) ಹೀಗೆ ಸಾಲವಾಗಿಕೊಟ್ಟ ಹಣದ ಮೇಲೆ ಋಣಿಯಿಂದ ಆತ ನಿಗದಿಯಾದ ದರದಲ್ಲಿ ಬಡ್ಡಿಯನ್ನು ತೆಗೆದು ಕೊಳ್ಳುತ್ತಾನೆ. ಗಿರವಿಗಾಗಿ ಬಂದ ಪದಾರ್ಥಗಳನ್ನು ಗಿರವಿದಾರ ಕೂಲಂಕುಷವಾಗಿ ಪರೀಕ್ಷಿಸಿ, ಅದರ ಮಾರುಕಟ್ಟೆಯ ಬೆಲೆಯನ್ನು ನಿರ್ಣಯಿಸಿ ಅದರ ಆಧಾರದ ಮೇಲೆ ಸಾಲ ಕೊಡುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳತ್ತಾನೆ. ಕೊಟ್ಟ ಸಾಲಕ್ಕೆ ಪ್ರತಿಯಾಗಿ ಆ ಪದಾರ್ಥವನ್ನು ತನ್ನ ಅಧೀನದಲ್ಲಿಟ್ಟುಕೊಳ್ಳತ್ತಾನೆ. ಈ ವ್ಯವಹಾರಕ್ಕೆ ಅಡವು ಇಡುವುದೆಂದೂ ಹೆಸರು. ಸಾಲವನ್ನು ಪಡೆಯುವ ವ್ಯಕ್ತಿ ಗಿರವಿದಾರನಿಗೆ, ತಾನು ಗಿರವಿ ಇಡುತ್ತಿರುವ ಪದಾರ್ಥಧ ಪೂರ್ಣ ವಿವರಗಳೊಡನೆ, ಅದು ತನ್ನ ಸ್ವಂತ ಸ್ವತ್ತೆಂದು ಬರವಣಿಗೆಯಲ್ಲಿ ಕೊಡಬೇಕು. ಗಿರವಿದಾರ ತಾನು ಅಡವು ಇಟ್ಟುಕೊಂಡಿರುವ ಪದಾರ್ಥದ ಪುರ್ಣ ವಿವರ, ಅದರ ಅಂದಾಜು ಬೆಲೆ ಇತ್ಯಾದಿ ವಿವರಗಳನ್ನು ನಮೂದಿಸಿರುವ ಪತ್ರವನ್ನು ಸಾಲಗಾರನಿಗೆ ಕೊಡಬೇಕು. ಯಾವ ಕಾರಣದಿಂದಲಾದರೂ ಸಾಲಗಾರ ಅಡವಿಟ್ಟು ಪದಾರ್ಥವನ್ನು ಒಪ್ಪಲಾದ ವಾಯಿದೆಯೊಳಗೆ, ಒಪ್ಪಂದಕ್ಕೆ ಅನುಗುಣವಾಗಿ ಬಿಡಿಸಿಕೊಳ್ಳದಿದ್ದಲ್ಲಿ ಗಿರವಿದಾರ ಸೂಕ್ತ ತಿಳಿವಳಿಕೆಯಿತ್ತು ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅದನ್ನು ಸೂಕ್ತರೀತಿಯಲ್ಲಿ ವಿಲೆ ಮಾಡಲು ಹಕ್ಕು ಪಡೆದಿರುತ್ತಾನೆ.


ಭಾರತದಲ್ಲಿ ಗಿರವಿದಾರರು ಕಾನೂನಿನ ಪ್ರಕಾರ ಪರವಾನೆ ಪಡೆದು, ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಗಿರವಿದಾರರು ತಾವು ಮಾಡುವ ಪ್ರತಿಯೊಂದು ವ್ಯವಹಾರಕ್ಕೂ ಸೂಕ್ತ ದಾಖಲೆಗಳನ್ನಿಟ್ಟರಬೇಕು. ಗಿರವಿದಾರ ಕಾನೂನು ರೀತಿ ಇಡಬೇಕಾದ ದಾಖಲೆಯಲ್ಲಿ ಯಾವ ರೀತಿಯಲ್ಲಾದರೂ ನ್ಯೂನತೆಗಳಿಗೆ ಅವಕಾಶ ನೀಡಿದರೆ, ತನಿಖೆಗೆ ಬರುವ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ದಾಖಲೆ ತೋರಿಸಿದಿದ್ದರೆ ಅಥವಾ ತನಿಖೆಗೆ ಒದಗಿಸದಿದ್ದರೆ, ಗಿರವಿದಾರನ ವ್ಯವಹಾರ ಕಾನೂನು ರೀತಿಯಾಗಿಲ್ಲವೆಂದು ಯಾವುದಾದರೂ ಕಾರಣಗಳಿಂದ ನಿರ್ಧರಿಸಲ್ಪಟ್ಟರೆ ಗಿರವಿದಾರನ ಪರವಾನೆಯನ್ನು ವಾಪಾಸು ಪಡೆದು, ಕಾನೂನು ರೀತ್ಯ ಅವನ ಮೇಲೆ ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.


ಗಿರವಿದಾರನ ಆಧಾರದಲ್ಲಿರುವ, ಗಿರವಿಗಾಗಿ ಬಂದಿರುವ, ಪದಾರ್ಥ ಕಳವು ಮಾಲೆಂದು ಸ್ಥಿರಪಟ್ಟರೆ, ಆ ಪದಾರ್ಥಗಳನ್ನು ಮುಟ್ಟಗೋಲು ಹಾಕಿಕೊಂಡು ಗಿರವಿದಾರನಿಗೆ ಯಾವ ರೀತಿಯ ಪರಿಹಾರವನ್ನೂ ಕೊಡದೆ ಇರುವ, ಗಿರವಿದಾರ ಕಳ್ಳತನಕ್ಕೆ ಪರೋಕ್ಷವಾಗಿ ಸಹಾಯಕನಾಗಿರುವನೆಂದು ನಿರ್ಧರಿಸಿ ಅವನ ಮೇಲೆ ಕ್ರಮ ಕೈಗೊಂಡು ಗಿರವಿದಾರನನ್ನು ಶಿಕ್ಷಾರ್ಹನನ್ನಾಗಿ ಮಾಡುವ ಹಕ್ಕು ಸರ್ಕಾರಕ್ಕೆ ಇರುತ್ತದೆ.