ಝ
ಗೋಚರ
|
ಝ, ಕನ್ನಡ ವರ್ಣಮಾಲೆಯ ಚ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: