Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಪಿಯರೆ ಸೈಮನ್ ಲ್ಯಾಪ್ಲೇಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಯರೆ ಸೈಮನ್ ಲ್ಯಾಪ್ಲೇಸ್
ಜನನ೨೩ ಮಾರ್ಚ್ ೧೭೪೯
ನಾರ್ಮಂಡಿ, ಬ್ಯೂಮಾಂಟ್-ಎನ್-ಆಗೆ
ಮರಣ೧೮೨೭
ಪ್ಯಾರಿಸ್
ವೃತ್ತಿವಿಜ್ಞಾನಿ
ರಾಷ್ಟ್ರೀಯತೆಫ್ರಾನ್ಸ್
ವಿಷಯಗಣಿತಶಾಸ್ತ್ರ
ಲ್ಯಾಪ್ಲೇಸ್ ಅವರ ಸಹಿ


ಪಿಯರೆ ಸೈಮನ್ ಲ್ಯಾಪ್ಲೇಸ್ ರವರು ಪ್ರಭಾವಿತ ಫ್ರೆಂಚ್ ವಿದ್ವಾಂಸ. ಗಣಿತ, ಸಂಖ್ಯಾಶಾಸ್ತ್ರ , ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರಗಳಿಗೆ ಇವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ.ಲ್ಯಾಪ್ಲೇಸ್ ರವರು "ಲ್ಯಾಪ್ಲೇಸ್ ಸಮೀಕರಣವನ್ನು" [] ರೂಪಿಸಿದರು ಹಾಗು "ಲ್ಯಾಪ್ಲೇಸ್ ಗಣಿತಶಾಸ್ತ್ರೀಯ ಭೌತವಿಜ್ಞಾನದ" ಅನೇಕ ಶಾಖೆಗಳನ್ನು ರೂಪಿಸುವುದರಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.[] ಲ್ಯಾಪ್ಲೇಸ್ ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವರನ್ನು, ಫ್ರಾನ್ಸ್ ನ "ಫ್ರೆಂಚ್ ನ್ಯೂಟನ್" ಅಥವಾ "ನ್ಯೂಟನ್" ಎಂದು ಕರೆಯಲಾಗುತ್ತದೆ. ಲ್ಯಾಪ್ಲೇಸ್ ೧೮೦೬ ರಲ್ಲಿ ಮೊದಲ ಫ್ರೆಂಚ್ ಸಾಮ್ರಾಜ್ಯದ ಪ್ರಜೆಯಾಗಿದ್ದರು ಮತ್ತು ಬೌರ್ಬನ್ ಜೀರ್ಣೋದ್ಧಾರ ನಂತರ ೧೮೧೭ ರಲ್ಲಿ ಇವರನ್ನು "ಮಾರ್ಕ್ವಿಸ್" ಎಂದು ಹೆಸರಿಸಲಾಯಿತು.

ಆರಂಭಿಕ ಜೀವನ

[ಬದಲಾಯಿಸಿ]

ಲ್ಯಾಪ್ಲೇಸ್ ಅವರ ಜೀವನಕ್ಕೆ ಸಂಬಂಧಿಸಿದ ಮೂಲ ದಾಖಲೆಗಳೆಲ್ಲವು, ಅವರ ಮೊಮ್ಮಗ ಕಾಮ್ಟೆಡೆ ಕೊಲ್ಬರ್ಟ್-ಲ್ಯಾಪ್ಲೇಸ್ ರವರ ಮನೆ ಸುಟ್ಟುಹೋದ ಮೇಲೆ ಎಲ್ಲ ದಾಖಲೆಗಳು ಕಳೆದುಹೋದವು. ಲ್ಯಾಪ್ಲೇಸ್ ರವರು ೨೩ ಮಾರ್ಚ್ ೧೭೪೯ ರಂದು ನಾರ್ಮಂಡಿಯ ಬ್ಯೂಮಾಂಟ್-ಎನ್-ಆಗೆಯಲ್ಲಿ ಜನಿಸಿದರು. ಬ್ಯೂಮಾಂಟ್ ಹಳ್ಳಿಯು ನಾರ್ಮಂಡಿಯಿಂದ ನಾಲ್ಕು ಮೈಲಿ ದೂರದಲ್ಲಿದೆ. ಪಿಯರೆ ಸೈಮನ್ ಲ್ಯಾಪ್ಲೇಸ್ ರವರ ತಂದೆಯ ಹೆಸರು ಪಿಯರೆ ಡೆ ಲ್ಯಾಪ್ಲೇಸ್ ಮತ್ತು ಅವರ ತಾಯಿಯ ಹೆಸರು ಮೇರಿ ಅನ್ನಿ ಸೋಚೋನ್. ಅವರ ತಂದೆ ಮಾರ್ಕ಼ುಇಸ್ ಎಂಬ ಸಣ್ಣ ಎಸ್ಟೇಟ್ ಹೊಂದ್ದಿದ್ದರು.ಅವರ ದೊಡ್ಡ-ಮಾವ ಆಲಿವರ್ ಡಿ ಲ್ಯಾಪ್ಲೇಸ್, "ಛಿರುರ್ಗಿಎನ್ ರಾಯಲ್" ಎಂಬ ಶೀರ್ಷಿಕೆಯನ್ನು ಹೊಂದ್ದಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬ್ಯೂಮಾಂಟ್ ನಲ್ಲಿ ಮುಗಿಸಿ ತಮ್ಮ ಮುಂದಿನ ಓದಿಗಾಗಿ ಪ್ಯಾರಿಸ್ ಗೆ ತೆರಳಿದರು.ಅವರ ಪೋಷಕರು ಆರಾಮದಾಯಕ ಕುಟುಂಬಗಳಿಗೆ ಸೇರಿದವರಾದರು, ಲ್ಯಾಪ್ಲೇಸ್ ಕುಟುಂಬ ೧೭೫೦ರವರೆಗೆ ಕೃಷಿ ಒಳಗೊಂಡಿರುವ ಕೆಲಸಗಳನ್ನು ಮಾಡಿದರು. ಹಾಗು ಪಿಯರೆ ಲ್ಯಾಪ್ಲೇಸ್ ಹಿರಿಯ ಮಗನಾಗಿದ್ದರಿಂದ ಬ್ಯೂಮಾಂಟ್ ಪಟ್ಟಣದಲ್ಲಿ ಒಂದು ಸೈಡರ್ ವ್ಯಾಪಾರವನ್ನು ಮಾಡುತ್ತಿದ್ದರು. ಹದಿನಾರನೆ ವಯಸಿನಲ್ಲಿ, ಅವರ ತಂದೆಯು ಆಸೆಯನ್ನು ಈಡೇರಿಸಲು,ಇವರು ದೇವತಾಶಾಸ್ತ್ರವನ್ನು ಓದಲು ಕೇನ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಯೂನಿವರ್ಸಿಟಿಯಲ್ಲಿ ಎರಡು ಉತ್ಸಾಹ ಗುರುಗಳ ಸಹಾಯದಿಂದ ಗಣಿತವನ್ನು ಕಲಿತರು. ಗಣಿತಜ್ಞ ಎಂದು ಲ್ಯಾಪ್ಲೇಸ್ ರನ್ನು ಕಾಂತಿ ತ್ವರಿತವಾಗಿ ಗುರುತಿಸಿದರು ಮತ್ತು ಇನ್ನೂ ಕೇನ್[] ನಲ್ಲಿ ಅಭ್ಯಾಸ ಮಾಡುತ್ತಿದ್ದಂತೆಯೆ ಅವರು ಗಣಿತಶಾಸ್ತ್ರದ ಬಗ್ಗೆ ಒಂದು ಪುಸ್ತಕ ಬರೆದರು. ಪುಸ್ತಕದ ಹೆಸರು "ಸುರ್ ಲೆ ಕ್ಯಾಲ್ಕಲ್ ಇನ್ತೆಗ್ರಲ್ ಔಕ್ಷ್ ದಿಫ್ಫೆರೆನ್ಸೆಸ್ ಇನ್ಫಿನ್ತ್ಮೆಂತ್ ಪೆತಿತಿಎಸ್ ಎಟ್ ಔಕ್ಷ್ ದಿಫ್ಫೆರೆನ್ಸೆಸ್ ಫ಼ಿನಿಎಸ್". ಲ್ಯಾಪ್ಲೇಸ್ ರವರಿಗೆ ಗಣಿತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಅವರು ದೇವತಾಶಾಸ್ತ್ರದ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಲ್ಲಿಲ.ಒಮ್ಮೆ ಲ್ಯಾಪ್ಲೇಸ್ ರವರ ಗುರುಗಳಾದ ಅಲೆಮ್ಬೇರ್ತ್ ರವರು ತಮ್ಮ ಶಿಷ್ಯನಿಗೆ ಒಂದು ಗಣಿತದ ಸೂತ್ರವನ್ನು ಬಿಡಿಸಲು ಹೇಳಿದರು, ಆಗ ಲ್ಯಾಪ್ಲೇಸ್ ರವರು ಇಡೀ ರಾತ್ರಿ ಕೂತು ಆ ಸೂತ್ರವನ್ನು ಬಿಡಿಸಿ ಮರುದಿನ ತಮ್ಮ ಉತ್ತರವನ್ನು ಗುರುಗಳಿಗೆ ತೋರಿದರು.ಅಲೆಮ್ಬೇರ್ತ್ ರವರು ತಮ್ಮ ಶಿಷ್ಯನ ಶ್ರಧ್ದೆಯನ್ನು ಮೆಚ್ಚಿದರು ಹಾಗು ಅವನ ಉತ್ತರವನ್ನು ನೋಡಿ ಖುಷಿ ಪಟ್ಟರು.ಹಾಗು ಎಕೊಲೆ ಮಿಲಿಟರಿ ಶಾಲೆಯಲ್ಲಿ ಗಣಿತ ಬೋಧನೆ ಮಾಡಲು ಶಿಫಾರಸು ಮಾಡಿದರು.ಹೀಗೆ ಲ್ಯಾಪ್ಲೇಸ್ ಅವರು ಗಣಿತವನ್ನು ಇನ್ನು ಹೆಚ್ಚು ಅಭ್ಯಾಸ ಮಾಡಿದರು ಮತ್ತು ಅನೇಕ ಗಣಿತ ಸೂತ್ರವನ್ನು ಕಂಡುಹಿಡಿದರು. ಗಣಿತ ಓದುವ ಮೂಲಕ ಭೌತಶಾಸ್ತ್ರ ಮತ್ತು ಅಂಕಿಅಂಶ ವಿಷಯಗಳನ್ನು ಒದಿಕೊಂಡು ಅದರಲ್ಲು ಕೆಲವು ಮುಖ್ಯವಾದ ಸೂತ್ರವನ್ನು ಕಂಡುಹಿಡಿದರು.ಹೀಗೆ ಲ್ಯಾಪ್ಲೇಸ್ ಅವರು ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಭೌತಶಾಸ್ತ್ರಕ್ಕೆ ಲ್ಯಾಪ್ಲೇಸ್ ಅವರ ಕೊಡುಗೆಗಳು

[ಬದಲಾಯಿಸಿ]

ಅಂಕಿಅಂಶಗಳಿಗೆ ಲ್ಯಾಪ್ಲೇಸ್ ಅವರ ಕೊಡುಗೆಗಳು

[ಬದಲಾಯಿಸಿ]
  • ಸಂಭವನೀಯತೆಗಳ ವಿಶ್ಲೇಷಣಾತ್ಮಕ ಸಿದ್ಧಾಂತ
  • ಇಂಡಕ್ಟಿವ್ ಸಂಭವನೀಯತೆ
  • ಸಂಭವನೀಯತೆ ಉತ್ಪಾದನಾ ಕಾರ್ಯ
  • ಕನಿಷ್ಠ ಚೌಕಗಳನ್ನು ಮತ್ತು ಕೇಂದ್ರೀಯ ಮಿತಿಯ ಸಿದ್ಧಾಂತದಲ್ಲಿ

ಶುದ್ಧ ಮತ್ತು ಅನ್ವಯಿಕ ಗಣಿತಶಾಸ್ತ್ರದಲ್ಲಿ ಲ್ಯಾಪ್ಲೇಸ್ ರ ಸಂಶೋಧನೆಗಳು

[ಬದಲಾಯಿಸಿ]
  • ಅನುಕಲನಗಳ ಅಂದಾಜಿಸುವುದಕ್ಕೆ ಲ್ಯಾಪ್ಲೇಸ್ ರ ವಿಧಾನ
  • ದಿ ಜನರಲ್ ಥಿಯರಿ ಆಫ್ ಡಿಟರ್ಮಿನೆಂಟ್ಸ್
  • ಪ್ರತಿ ಸಮೀಕರಣದಲ್ಲು ಕನಿಷ್ಠ ಒಂದು ನಿಜವಾದ ವರ್ಗ ಸಮೀಕರಣ ಹೊಂದಿರಬೇಕು
  • ರೇಖೀಯ ಭಾಗಶಃ ವಿಕಲ ಸಮೀಕರಣದ (ಎರಡನೇ ಕ್ರಮದಲ್ಲಿ) ಪರಿಹಾರ

ರಾಜಕೀಯ ಜೀವನ

[ಬದಲಾಯಿಸಿ]

ತನ್ನ ರಾಜಕೀಯ ಜೀವನದ ಆರಂಭಿಕ ವರ್ಷಗಳಲ್ಲಿ ಲ್ಯಾಪ್ಲೇಸ್ ಅವರು ವಿವೇಕದಿಂದ ಹಿಂಸಾತ್ಮಕ ಕ್ರಾಂತಿ ನಡೆಯುತ್ತಿದ್ದ ಪ್ಯಾರಿಸ್ ನಿಂದ ನಿರ್ಗಮಿಸಿದರು. ನವೆಂಬರ್ ೧೭೯೯ರಲ್ಲಿ ಲಾಪ್ಲೇಸ್ ಅವರನ್ನು ಆಂತರಿಕ ಸಚಿವರನ್ನಾಗಿ ನೆಪೋಲಿಯನ್ ನೇಮಕಗೊಳಿಸಿದನು. ಆ ಒಪ್ಪಂದ ಆರು ವಾರಗಳದ್ದಾಗಿತ್ತು. ನಂತರ ನೆಪೋಲಿಯನ್ ನ ಸಹೋದರನಿಗೆ ಆ ಸ್ಥಾನವನ್ನು ನೀಡಲಾಯಿತು. ನೆಪೋಲಿಯನ್ ನಂತರ ಲ್ಯಾಪ್ಲೇಸ್ ನಿರ್ಗಮನದ ಬಗ್ಗೆ ಈ ರೀತಿ ಹೇಳುತ್ತಾರೆ.ನಿಸ್ಸಂದೇಹವಾಗಿ ಲ್ಯಾಪ್ಲೇಸ್ ಅಲ್ಪಾವಧಿಗೆ ನೇಮಕಗೊಂಡ ಸಚಿವ.ಲ್ಯಾಪ್ಲೇಸ್ ರಾಜಕೀಯ ಮತ್ತು ಆಡಳಿತದಲ್ಲಿ ಕೆಲವು ಕಾಮೆಂಟ್ಗಳನ್ನು ಸೇರಿಸಿದರು.ಲ್ಯಾಪ್ಲೇಸ್ ಕ್ರಾಂತಿಕಾರಿ ಮತ್ತು ವಿಕಾಸಾತ್ಮಕ ಬದಲಾವಣೆ ತರಲು ಭೌತಶಾಸ್ತ್ರದಿಂದ ಕೆಲವು ತತ್ವಗಳನ್ನು ರೂಪಿಸಿ ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡರು.ಅವರು ಕೆಲವು ಕಾಲ ಮಾತ್ರ ರಾಜಕೀಯದಲ್ಲಿ ಸೇವೆ ಸಲ್ಲಿಸಿದರು.

೧೮೨೭ ರಲ್ಲಿ ಪ್ಯಾರಿಸ್ ನಲ್ಲಿ ನಿಧನರಾದರು. ಲ್ಯಾಪ್ಲೇಸ್ ಅವರ ಮೆದುಳನ್ನು ವ್ಯೆದ್ಯ ಫ್ರಾಂಕೋಯಿಸ್ ಮ್ಯಾಗೆಂಡೀ ರವರು ಸೂಕ್ಷ್ಮವಾಗಿ ತೆಗೆದು ಅದನ್ನು ಅನೇಕ ವರ್ಷಗಳ ಕಾಲ ಇಟ್ಟುಕೊಂಡಿದ್ದರು.ಅಂತಿಮವಾಗಿ ಬ್ರಿಟನ್ ಸಂಚಾರಿ ಅಂಗರಚನಾ ವಸ್ತುಸಂಗ್ರಹಾಲಯದಲ್ಲಿ ಪ್ರರ್ದಶಿಸಲಾಯಿತು. ವರದಿಯ ಪ್ರಕಾರ ಸರಾಸರಿ ಮೆದುಳಿಗಿಂತ ಚಿಕ್ಕದಾಗಿತ್ತು. ಲ್ಯಾಪ್ಲೇಸ್ ಅವರ ದೇಹವನ್ನು ಪ್ಯಾರಿಸ್ನಲ್ಲಿ ಪೇರಿ ಲೆಚಾಯಿಸ್ ಆವರಣದಲ್ಲಿ ಸಮಾಧಿ ಮಾಡಲಾಯಿತು ಆದರೆ ೧೮೮೮ ರಲ್ಲಿ ಅವರ ಅವಶೇಷಗಳನ್ನು Orbec ಕ್ಯಾಂಟನ್ ಸೇಂಟ್ ಜೂಲಿಯನ್ ಡಿ Maillocಗೆ ಸ್ಥಳಾಂತರಿಸಲಾಯಿತು. ಇವರ ಸಮಾಧಿಯು ಸೇಂಟ್ ಜೂಲಿಯನ್ ಡಿ Mailloc , ನಾರ್ಮಂಡಿ, ಫ್ರಾನ್ಸ್ ಗ್ರಾಮದಲ್ಲಿರುವ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ.

ಲ್ಯಾಪ್ಲೇಸ್ ಅವರ ಸಮಾಧಿ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಲ್ಯಾಪ್ಲೇಸ್ ಸಮೀಕರಣ".
  2. "ಲ್ಯಾಪ್ಲೇಸ್ ಆಪರೇಟರ್".
  3. "ಕೇನ್ ವಿಶ್ವವಿದ್ಯಾಲಯ".