ಪ್ರಥಮ ಚಿಕಿತ್ಸಾ ಕಿಟ್
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(February 2008) |
ಗಾಯಾಳುಗಳಿಗೆ ತತ್ಕ್ಷಣ ಚಿಕಿತ್ಸೆ ನೀಡಲು ಬಳಸುವ ಔಷಧಗಳು ಮತ್ತು ಸಲಕರಣೆಗಳನ್ನು ಒಳಗೊಂಡಿರುವ ಪೆಟ್ಟಿಗೆಗೆ 'ಪ್ರಥಮ ಚಿಕಿತ್ಸಾ ಕಿಟ್ 'ಎನ್ನಲಾಗುತ್ತದೆ.ಯಾವ ಉದ್ಧೇಶಕ್ಕಾಗಿ ಯಾರು ಅದನ್ನು ರೂಪಿಸುತ್ತಾರೆ ಎನ್ನುವುದರ ಮೇಲೆ ಇವುಗಳು ಒಳಗೊಳ್ಳುವ ವಸ್ತು/ಔಷಧಗಳಲ್ಲಿ ವ್ಯತ್ಯಾಸವಿರುತ್ತದೆ.ಸರ್ಕಾರ ಮತ್ತು ಪ್ರಥಮ ಚಿಕಿತ್ಸೆ ನೀಡುವ ಸಂಸ್ಥೆಗಳ ನಿಯಮ ಮತ್ತು ಪ್ರದೇಶವಾರು ಬದಲಾವಣೆಯನ್ನು ಅನುಸರಿಸಿ ಪ್ರಥಮ ಚಿಕಿತ್ಸಾ ಕಿಟ್ ಏನೇನನ್ನು ಒಳಗೊಂಡಿರಬೇಕೆಂದು ನಿರ್ಧರಿಸಲಾಗುತ್ತದೆ. ನಿಮ್ಮ ಉದ್ಯೋಗ ಸ್ಥಳದಲ್ಲಿ ಅಗತ್ಯವಾದ ಪ್ರಥಮ ಚಿಕಿತ್ಸಾ ಸೌಲಭ್ಯಗಳು ಯಾವ ರೀತಿ ಇರಬೇಕು ಎನ್ನುವುದನ್ನು ಈ ಕೆಳಗಿನ ಅಂಶಗಳು ನಿರ್ಧರಿಸುತ್ತವೆ:
- ನೀವು ವಾಸಿಸುಸ ರಾಜ್ಯ ಅಥವಾ ಪ್ರದೇಶದ ಕಾನೂನು-ಕಾಯಿದೆಗಳು;
- ನೀವು ಕೆಲಸ ಮಾಡುವ ಉದ್ಯಮದ ಸ್ವರೂಪ (ಗಣಿ ಉದ್ಯಮದಂಥ ಕೆಲವು ಉದ್ಯಮಗಳು ಪ್ರತ್ಯೇಕವಾಗಿ, ತಮಗೇ ನಿರ್ದಿಷ್ಟವಾದ ಕಾನೂನುಗಳನ್ನು ಮತ್ತು ವಿವರವಾದ ತಜ್ಞರ ಸೂಚನೆಗಳನ್ನು ಒಳಗೊಂಡಿರುತ್ತವೆ);
- ನಿಮ್ಮ ಉದ್ಯೋಗ ಸ್ಥಳದಲ್ಲಿ ಎದುರಾಗಬಹುದಾದ ಅಪಾಯದ ಸ್ವರೂಪಗಳು;
- ನಿಮ್ಮ ಉದ್ಯೋಗ ಸ್ಥಳದಲ್ಲಿರುವ ಉದ್ಯೋಗಸ್ಥರ ಸಂಖ್ಯೆ;
- ನಿಮ್ಮ ಸಂಸ್ಥೆ ಪ್ರತ್ಯೇಕ ಭಾಗಗಳಲ್ಲಿ ಹೊಂದಿರುವ ವಿಭಿನ್ನ ಶಾಖೆಗಳ ಸಂಖ್ಯೆ;
- ಸೇವೆ ದೊರೆಯಲಿರುವ ಸ್ಥಳೀಯ ಜಾಗಕ್ಕಿರುವ ದೂರ (ವೈದ್ಯರು, ಆಸ್ಪತ್ರೆಗಳು, ಆಂಬುಲೆನ್ಸ್)
ಪ್ರಥಮ ಚಿಕಿತ್ಸಾ ಸೌಲಭ್ಯವು ನಿಮ್ಮ ಉದ್ಯೋಗ ಸ್ಥಳದ ಅಗತ್ಯಗಳನ್ನು ಪೂರೈಸುವಂತಿರಬೇಕು. ಪ್ರಥಮ ಚಿಕಿತ್ಸಾ ಕಿಟ್ ಅಥವಾ ಚಿಕಿತ್ಸಾ ಕೊಠಡಿಗಳನ್ನು ಈ ಸೌಲಭ್ಯ ಒಳಗೊಂಡಿರಬಹುದು.ಬೇರೆ ಬೇರೆ ಪಾಳಿಗಳಲ್ಲಿ ಕೆಲಸ ನಿರ್ವಹಿಸುವಂಥ ಉದ್ಯೋಗ ಸ್ಥಳ ನಿಮ್ಮದಾಗಿದ್ದರೆ ಆಯಾ ಪಾಳಿಗೆ ನೇಮಿಸಲ್ಪಟ್ಟ ಪ್ರಥಮ ಚಿಕಿತ್ಸಾ ತಜ್ಞರನ್ನು ಹೊಂದಿರ ಬೇಕು. ಎಲ್ಲ ಉದ್ಯೋಗಿಗಳಿಗೂ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಮಾಡಲು ನಿಮ್ಮ ಉದ್ಯೋಗ ಸ್ಥಳದಲ್ಲಿ ಎಲ್ಲ ಪಾಳಿಗಳಲ್ಲೂ ಒಬ್ಬರಿಗಿಂತ ಹೆಚ್ಚಿನ ಚಿಕಿತ್ಸಾ ಅಧಿಕಾರಿಗಳನ್ನು ನೇಮಿಸುವುದು ಬಹಳ ಉತ್ತಮ.ರಕ್ತಸ್ರಾವವನ್ನು ತಡೆಗಟ್ಟುವ ಸಲುವಾಗಿ ಬ್ಯಾಂಡೇಜ್ ಉಸಿರಾಟದ ತೊಂದರೆಯನ್ನು ನೀಗಿಸುವ ವಸ್ತುಗಳಾದ CPR (ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಪ್ರಚೋದಕ ಚಿಕಿತ್ಸೆ) ಚಿಕಿತ್ಸಕ ಉಪಕರಣಗಳು ಮತ್ತು ಕೆಲವು ಔಷಧಗಳು ಕಿಟ್‌ನಲ್ಲಿರುವ ಸಾಮಾನ್ಯ ವಸ್ತುಗಳು.
ಕಿಟ್ ಹೇಗಿರಬೇಕು
[ಬದಲಾಯಿಸಿ]ಪ್ರಥಮ ಚಿಕಿತ್ಸಾ ಕಿಟ್‌ಗಳ ಅಡಕಗಳನ್ನು ಯಾವುದೇ ರೀತಿಯ ಪೆಟ್ಟಿಗೆಯಲ್ಲಿ ಶೇಖರಿಸಬಹುದು. ಆದರೆ ಇದನ್ನು ವಾಣಿಜ್ಯೋದ್ದೇಶಕ್ಕಾಗಿ ರೂಪಿಸಲಾಗಿದೆಯೇ ಅಥವಾ ವೈಯಕ್ತಿಕ ಬಳಕೆಗೆ ರೂಪಿಸಲಾಗಿದೆಯೇ ಎನ್ನುವುದನ್ನು ಇದು ಆಧರಿಸಿರುತ್ತದೆ. ಗುಣಮಟ್ಟದ ಕಿಟ್‌ಗಳು ಸಾಮಾನ್ಯವಾಗಿ ಹೆಚ್ಚು ಬಾಳಿಕೆ ಬರುವ ಪ್ಲಾಸ್ಟಿಕ್ ಡಬ್ಬಿಗಳು, ಬಟ್ಟೆಯ ಚೀಲಗಳು ಅಥವಾ ಗೋಡೆಯಲ್ಲಿ ನೇತುಹಾಕುವ ಕ್ಯಾಬಿನೆಟ್‌ಗಳಲ್ಲಿ ಸಿಗುತ್ತವೆ. ಉದ್ದೇಶವನ್ನು ಆಧರಿಸಿ ಕಿಟ್ ಸ್ವರೂಪ ಬದಲಾಗುತ್ತದೆ .ಸಣ್ಣ ಕೈಚೀಲದಿಂದ ಹಿಡಿದು ಬೆನ್ನ ಮೇಲೆ ಹೊತ್ತೊಯ್ಯಬಹುದಾದ ದೊಡ್ಡ ಗಾತ್ರದ ಚೀಲದವರೆಗೆ ಇವುಗಳಲ್ಲಿ ಗಾತ್ರ ವೈವಿಧ್ಯತೆ ಇದೆ.ಎಲ್ಲ ಪ್ರಥಮ ಚಿಕಿತ್ಸಾ ಕಿಟ್‌ಗಳು ಸ್ವಚ್ಛವಾಗಿರಬೇಕು ಮತ್ತು ಕಿಟ್‌ನಲ್ಲಿರುವ ವಸ್ತುಗಳು ಸೋಂಕಾಗದ ಹಾಗೆ ತಡೆಯಲು ಹಾಗೂ ಸುರಕ್ಷಿತವಾಗಿಡಲು ಕಿಟ್ ಜಲನಿರೊಧಕ ಗುಣ ಹೊಂದಿರಬೇಕು ಎಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ.[೧] ಕಿಟ್‌ಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಬೇಕು. ಅದರಲ್ಲಿ ಯಾವುದೇ ವಸ್ತುಗಳು ಹಾಳಾಗಿದ್ದರೆ ಅಥವಾ ಬಳಸುವ ಅವಧಿ ಮೀರಿದ್ದರೆ ಅಂಥವುಗಳನ್ನು ಬದಲಾಯಿಸಬೇಕು.
ಹೀಗೆ ತೋರಬೇಕು
[ಬದಲಾಯಿಸಿ]ಪ್ರಥಮ ಚಿಕಿತ್ಸೆ ಅಗತ್ಯವಾದವರು ಇದನ್ನು ಸುಲಭವಾಗಿ ಗುರ್ತಿಸಲು ಸಹಾಯಕವಾಗಲಿ ಎಂಬ ಕಾರಣಕ್ಕೆ , ಹಸಿರು ಬಣ್ಣದ ಹಿನ್ನೆಲೆಯಿರುವ ಮತ್ತು ಮಧ್ಯೆ ಬಿಳಿ ಬಣ್ಣದ ಪ್ಲಸ್ ಚಿಹ್ನೆಯನ್ನುಳ್ಳ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ISO) ನಿಗದಿಗೊಳಿಸಿದೆ.
-
ಸ್ಟಾರ್ ಅಫ್ ಲೈಫ್
ಹಸಿರು ಬಣ್ಣದ ಹಿನ್ನೆಲೆ ಮತ್ತು ಬಿಳಿ ಬಣ್ಣದ ಪ್ಲಸ್ ಚಿಹ್ನೆಗಳನ್ನು ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಬಳಸಬೇಕೆಂದು ISO ಶಿಫಾರಸ್ಸು ಮಾಡಿದ್ದರೂ, ಕೆಲವರು ಅಥವಾ ಕೆಲವು ಸಂಸ್ಥೆಗಳು ಬಿಳಿ ಬಣ್ಣದ ಹಿನ್ನೆಲೆಯ ಕೆಂಪು ಬಣ್ಣದ ಪ್ಲಸ್ ಚಿಹ್ನೆಯನ್ನು ಹೊಂದಿರುವ ಕಿಟ್‌ಗಳಲ್ಲಿ ಬಳಸುತ್ತಾರೆ. ಆದರೆ ಜಿನೀವಾ ಸಮಾವೇಶ ಕೆಂಪು ಬಣ್ಣದ ಪ್ಲಸ್ ಚಿಹ್ನೆ (ರೆಡ್‌ಕ್ರಾಸ್ ಲಾಂಛನ)ಯನ್ನು ಎಲ್ಲ ದೇಶಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧಿಕೃತ ಸಂರಕ್ಷಿತ ಲಾಂಛನವೆಂದು ಘೋಷಿಸಿರುವುದರಿಂದ, ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ICRC) ಮತ್ತು ಇದರ ಅಂಗ ಸಂಸ್ಥೆಗಳು ಹಾಗೂ ಇದರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳನ್ನು ಬಿಟ್ಟು ಬೇರೆ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ರೆಡ್ ಕ್ರಾಸ್ ಲಾಂಛನವನ್ನು ಬಳಸಿದರೆ ಅದು ಅಕ್ರಮವಾಗುತ್ತದೆ. ಆದರೆ ಉತ್ತರ ಅಮೆರಿಕದಲ್ಲಿ ಇದಕ್ಕೊಂದು ಅಪವಾದವಿದೆ. ಜಾನ್ಸನ್ & ಜಾನ್ಸನ್ ಸಂಸ್ಥೆ ತನ್ನ ಎಲ್ಲ ಉತ್ಪನ್ನಗಳಲ್ಲಿ ರೆಡ್‌ಕ್ರಾಸ್ ಲಾಂಛನವನ್ನು ತನ್ನ ವ್ಯಾಪಾರೀ ಚಿಹ್ನೆಯಾಗಿ ಮತ್ತು ನೋಂದಾಯಿತ ಲಾಂಛನವಾಗಿ ಬಳಸಲು 1887ರಲ್ಲಿ ಅನುಮತಿ ಪಡೆದಿದೆ.ಕೆಲವು ಪ್ರಥಮ ಚಿಕಿತ್ಸಾ ಕಿಟ್‌ಗಳು ಸಾಮಾನ್ಯವಾಗಿ ತುರ್ತು ವೈದ್ಯಕೀಯ ಸೇವೆಗಳೊಂದಿಗೆ ಜೊತೆಗೂಡಿರುವ ಸ್ಟಾರ್ ಆಫ್ ಲೈಫ್ ಸೌಲಭ್ಯವನ್ನೂ ನೀಡಬಹುದು. ಜೊತೆಗೆ ಈ ಸೌಲಭ್ಯವನ್ನು ಬಳಸಿಕೊಂಡು ನೀಡುವ ಚಿಕಿತ್ಸೆ ಸೂಕ್ತವಾಗಿರುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ.
ಕಿಟ್ ಒಳಗೆ ಏನೇನಿದೆ
[ಬದಲಾಯಿಸಿ]ಸಾಮಾನ್ಯ ಚಿಲ್ಲರೆ ವ್ಯಾಪಾರಿ ಮಾರ್ಗಗಳ ಮೂಲಕ ಲಭ್ಯವಾಗುವ ವಾಣಿಜ್ಯ ಬಳಕೆಯ ಪ್ರಥಮ ಚಿಕಿತ್ಸಾ ಕಿಟ್‌ಗಳು ಸಣ್ಣಪುಟ್ಟ ಗಾಯಗಳ ಚಿಕಿತ್ಸೆಗೆಂದೇ ಉದ್ದೇಶಿತವಾಗಿರುತ್ತವೆ.ಈ ಬಗೆಯ ಕಿಟ್‌ಗಳು ಅಂಟು ಇರುವಂಥ ಬ್ಯಾಂಡೇಜ್‌ಗಳು, ನೋವು ನಿವಾರಕ ಔಷಧಗಳು, ತೆಳುವಾದ ಮತ್ತು ಅಲ್ಪ ಗುಣಮಟ್ಟದ ಸೋಂಕು ನಿವಾರಕಗಳನ್ನು ಒಳಗೊಂಡಿರುತ್ತವೆ. ವಿವಿಧ ಪ್ರದೇಶಗಳಿಗೆ, ವಿವಿಧ ವಾಹನಗಳಿಗೆ ಆಥವಾ ಚಟುವಟಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಅಪಾಯ ಅಥವಾ ಕಾಳಜಿಗಳಿಗೆ ಗಮನ ಕೇಂದ್ರೀಕರಿಸಬಹುದಾದ ವಿವಿಧ ಚಟುವಟಿಕೆಗಳಿಗೆ ವಿಶೇಷವಾದ ಪ್ರಥಮ ಚಿಕಿತ್ಸಾ ಕಿಟ್‌ಗಳು ಲಭ್ಯವಿವೆ. ಉದಾಹರಣೆಗೆ, ಕಡಲ ವಸ್ತುಗಳ ಮಾರಾಟ ಮಳಿಗೆಗಳ ಮೂಲಕ ದೊರೆಯುವ ಕಿಟ್‌ಗಳಲ್ಲಿ, ದೋಣಿಗಳಲ್ಲಿ ಬಳಸುವ ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಕಡಲುಬೇನೆಯ ರೋಗ ನಿವಾರಕಗಳು ಇರಬಹುದು.
ವಾಯುಮಾರ್ಗ, ಉಸಿರಾಟ ಮತ್ತು ರಕ್ತ ಪರಿಚಲನೆ
[ಬದಲಾಯಿಸಿ]ಪ್ರಥಮ ಚಿಕಿತ್ಸೆಯು ABCಗಳನ್ನು ಉತ್ತಮ ಚಿಕಿತ್ಸೆಗೆ ಬುನಾದಿ ಎಂದು ಪರಿಗಣಿಸುತ್ತವೆ.ಈ ಕಾರಣಕ್ಕಾಗಿ, ಬಹುತೇಕ ವಾಣಿಜ್ಯ ಉದ್ದೇಶದ ಆಧುನಿಕ ಪ್ರಥಮ ಚಿಕಿತ್ಸಾ ಕಿಟ್‌ಗಳು (ಮನೆಯಲ್ಲಿ ರೂಪುಗೊಂಡ ಕಿಟ್‌ಗಳಾಗಿರದಿದ್ದರೂ) ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಚಿಕಿತ್ಸೆಯ ಭಾಗವಾಗಿ ಕೃತಕ ಉಸಿರಾಟವನ್ನು ಒದಗಿಸಲು ಬಳಸುವ ಸೂಕ್ತ ಸೋಂಕು ನಿರೋಧಕಗಳನ್ನು ಒಳಗೊಂಡಿರುತ್ತವೆ. ಉದಾಹರೆಗೆ:
ಅತ್ಯಾಧುನಿಕ ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಈ ಕೆಳಗಿನ ವಸ್ತುಗಳೂ ಇರಬಹುದು:
ತುರ್ತು ಚಿಕಿತ್ಸೆ ಬೇಡುವಂಥ ಗಾಯಗಳು
[ಬದಲಾಯಿಸಿ]ತುರ್ತು ಚಿಕಿತ್ಸೆ ಬೇಡುವಂಥ ಗಾಯಗಳೆಂದರೆ, ರಕ್ತಸ್ರಾವ, ಮೂಳೆ ಮುರಿತ ಅಥವಾ ಸುಟ್ಟ ಗಾಯಗಳು - ಸಾಮಾನ್ಯವಾಗಿ ಬಹುತೇಕ ಪ್ರಥಮ ಚಿಕಿತ್ಸಾ ಕಿಟ್‌ಗಳು ಇದರತ್ತ ಗಮನ ಹರಿಸುತ್ತವೆ. ಬ್ಯಾಂಡೇಜ್‌ಗಳು, ಮತ್ತು ಔಷಧೋಪಚಾರಗಳು ಮುಂತಾದ ವಸ್ತುಗಳು ಬಹುತೇಕ ಎಲ್ಲ ಕಿಟ್‌ಗಳಲ್ಲೂ ಕಂಡುಬರುತ್ತವೆ.
- ಅಂಟುವ ಬ್ಯಾಂಡೇಜ್‌ಗಳು, (ಬ್ಯಾಂಡ್-ಏಡ್‌ಗಳು, ಅಂಟಿಸುವ ಪ್ಲಾಸ್ಟರ್‌ಗಳು)- ಮೊಣಕಾಲಿನ ಗೆಣ್ಣುಗಳಂತಹ ದೇಹದ ಅಂಗಗಳ ಆಕಾರಕ್ಕೆ ಅನುಗುಣವಾಗಿ ಒಮ್ಮೆ ರೂಪಿಸಿದಂಥವು.
- ಮೋಲ್ಸ್ಕಿನ್- ಸುಟ್ಟಗಾಯಗಳ ಚಿಕಿತ್ಸೆಕ ಮತ್ತು ನಿರೋಧಕ
- ಗಾಯಾಳುವಿಗೆ ಉಪಚಾರ ( ಸೋಂಕುನಿವಾರಣೆ, ಇದನ್ನು ಗಾಯಕ್ಕೆ ನೇರವಾಗಿ ಲೇಪಿಸುವಂಥವು,ಕೀಟಾಣು ಮುಕ್ತ ಮುಲಾಮು )
- ಕೀಟಾಣು ಮುಕ್ತ ಕಣ್ಣಿನ ಪ್ಯಾಡ್‌ಗಳು
- ಕೀಟಾಣು ಮುಕ್ತ ತೆಳುವಾದ ಕವಚಗಳು
- ಅಂಟದ ಟೆಫ್ಲಾನ್‌ನ ತೆಳು ಪದರವನ್ನು ಒಳಗೊಂಡಿರುವ ಅಂಟು ಗುಣವಿಲ್ಲದ ಕೀಟಾಣು ಮುಕ್ತ ಪ್ಯಾಡ್‌ಗಳು
- ಪೆಟ್ರೋಲಾಟಂ ತೆಳು ಪ್ಯಾಡ್‌ಗಳು, ಎದೆಯ ಗಾಯಗಳಲ್ಲಿನ ಬೇಡವಾದ ಅಂಶ ಹೀರಲು ಜೊತೆಗೆ ಅಂಟುಗುಣವಿಲ್ಲದ ಔಷಧೋಪಚಾರಗಳಲ್ಲಿ ಮುಚ್ಳಳಿಕೆ(ಏರ್-ಟೈಟ್) ಔಷದೋಪಚಾರವಾಗಿ ಬಳಕೆಯಾಗುತ್ತವೆ.
- ಬ್ಯಾಂಡೇಜ್ (ಗಾಯಕ್ಕೆ ಕಟ್ಟಲು ಬಟ್ಟೆ-ಕೀಟಾಣು ಮುಕ್ತವಿರಲಿ ಇಲ್ಲದಿರಲಿ)
- ಸುತ್ತುವ ತೆಳು ಬ್ಯಾಂಡೇಜ್‌ಗಳು- ಹೀರಿಕೊಳ್ಳುವ , ಗಾಳಿಯಾಡಬಲ್ಲ ಮತ್ತು ಕೆಲವೊಮ್ಮೆ ಹಿಗ್ಗು-ಕುಗ್ಗುವ ಗುಣವಿರುವ ತೆಳುವಾದ ಬಟ್ಟೆ
- ಹಿಗ್ಗಬಲ್ಲ ಬ್ಯಾಂಡೇಜ್‌ಗಳು- ಉಳುಕಿದ ನೋವಿಗೆ ಬಳಸುವ ಮತ್ತು ಒತ್ತಡ ನೀಡಬಲ್ಲ ಬ್ಯಾಂಡೇಜ್‌ಗಳು
- ಅಂಟುಗುಣವಿರುವ, ಹಿಗ್ಗಬಲ್ಲ ಸುತ್ತು ಬ್ಯಾಂಡೇಜ್‌ಗಳು - ತುಂಬ ಪರಿಣಾಮಕಾರಿಯಾದ ಒತ್ತಡ ಬ್ಯಾಡೇಂಜ್‌ಗಳು ಅಥವಾ ದೀರ್ಘ ಬಾಳಿಕೆಯ ವಸ್ತುಗಳು, ಜಲನಿರೋಧಕ ಬ್ಯಾಂಡೇಜ್
- ತ್ರಿಕೋನಾಕೃತಿಯ ಬ್ಯಾಂಡೇಜ್‌ಗಳು- ಗಾಯಾಂಗವನ್ನು ನೇತು ಹಾಕಿ ಆಧರಿಸಲು , ರಕ್ತಬಂಧಕ ಪಟ್ಟಿಗಳಂತೆ, ಪಟ್ಟುಗಳನ್ನು ಕಟ್ಟಲು ಮತ್ತು ಇನ್ನೂ ಇತರ ಬಳಕೆಗೆಗಾಗಿ.
- ಬಟರ್‌ಫ್ಲೈ ಕ್ಸೋಷರ್ ಸ್ಟ್ರಿಪ್ಸ್ - ಗಾಯಗಳನ್ನು ಮುಚ್ಚುವ ಹೊಲಿಗೆಗೆ ಬಳಸುವಂಥವು, ಸಾಮಾನ್ಯವಾಗಿ ಸ್ವಚ್ಛಗೊಳಿಸದ ಗಾಯಗಳ ಸೋಂಕುಗಳಲ್ಲಿ ಪೂರ್ತಿ ಮುಚ್ಚಿಬಿಡುವಂತೆ ಉನ್ನತ ಮಟ್ಟದ ಪ್ರತಿಕ್ರಿಯೆಳಿಗೆ ಮಾತ್ರ ಸೇರಿಸಲಾಗುತ್ತದೆ.
- ಗಾಯಗಳನ್ನು ಸ್ವಚ್ಚಗೊಳಿಸಲು ಅಥವಾ ಕಣ್ಣಿಗೆ ಬಿದ್ದ ವಸ್ತುವನ್ನು ಹೊರತೆಗೆಯಲು ಬೇಕಾಗುವ ಕ್ಷಾರಜಲ
- ಸಾಬೂನು- ರಕ್ತಸ್ರಾವ ನಿಂತೊಡನೆ ಗಾಯಗಳ ಮೇಲ್ಪದರದ ನೀರು ಹಾಗೂ ಸಾಬೂನು ಹಾಕಿ ಸ್ವಚ್ಛಗೊಳಿಸಲು.
- ಗಾಯದ ಸುತ್ತ ಅಥವಾ ತರಚುಗಾಯಗಳಲ್ಲಿ ಕೀವುಗಟ್ಟುವುದನ್ನು ಕಡಿಮೆ ಮಾಡಲು ಬಳಸುವ ಸೋಂಕು ನಿರೋಧಕ ಬಟ್ಟೆಗಳು ಅಥವಾ ಚಿಮುಕಿಸುವ ಸಾಧನಗಳು.ಸೋಂಕು ನಿರೋಧಕಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಗಾಯಗಳಲ್ಲಿರುವ ಕೊಳಕನ್ನು ಅಗತ್ಯವಾಗಿ ಸ್ವಚ್ಚಗೊಳಿಸಬೇಕು.
- ಸುಟ್ಟಗಾಯದ ಔಷಧೋಪಚಾರ, ಸಾಮಾನ್ಯವಾಗಿ ತಂಪಾದ ಜೆಲ್‌ನಲ್ಲಿ ನೆನೆಸಿದ ಕೀಟಾಣು ಮುಕ್ತ ಪ್ಯಾಡ್
- ಹೈಪೋಅಲೆರ್ಜನಿಕ್ ಅಂಟುವ ಪಟ್ಟಿ
- ಹೆಮೋಸ್ಟ್ಯಾಟಿಕ್ ಏಜೆಂಟ್‌ಗಳನ್ನು ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಸೇರಿಸಿರಬಹುದು, ವಿಶೇಷವಾಗಿ ಮಿಲಿಟರಿ ಅಥವಾ ಯುದ್ಧತಂತ್ರದ
ಕಿಟ್‌ಗಳಲ್ಲಿ ಅತಿಯಾದ ರಕ್ತಸ್ರಾವ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಉತ್ತೇಜಿಸಲು ಇದು ನೆರವಾಗುವುದು.
ವೈಯಕ್ತಿಕ ಸುರಕ್ಷಾ ಸಲಕರಣೆ
[ಬದಲಾಯಿಸಿ]PPE ಅಥವಾ ವೈಯಕ್ತಿಕ ಸುರಕ್ಷಾ ಸಲಕರಣೆಯ ಉಪಯೋಗ ಕಿಟ್‌ನಿಂದ ಕಿಟ್‌ಗೆ ಬದಲಾಗುತ್ತದೆ. ಇದರ ಬಳಕೆ ಮತ್ತು ಸೋಂಕಿನ ನಿರೀಕ್ಷಿತ ಅಪಾಯವನ್ನು ಆಧರಿಸಿರುತ್ತದೆ. ಕೃತಕ ಉಸಿರಾಟದ ಸಣ್ಣ ವಿಷಯಗಳನ್ನು ಮೇಲೆ ವಿವಿರಿಸಲಾಗಿದೆ, ಇತರೆ ಸಾಮಾನ್ಯ ಸೋಂಕು ನಿಯಂತ್ರಣದ PPEಗಳು ಈ ರೀತಿ ಇವೆ:
- ಕೈಗವಸುಗಳು - ಅಡ್ಡ ಸೋಂಕುಗಳನ್ನು ತಡೆಯಲು ಒಬ್ಬರು ಮಾತ್ರ ಬಳಸಿ ಎಸೆಯುವಂಥವು.
- ಕನ್ನಡಕ ಅಥವಾ ಇತರೆ ಯಾವುದೇ ನೇತ್ರ ರಕ್ಷಕಗಳು
- ಶಸ್ತ್ರಚಿಕಿತ್ಸಾ ಮುಖ ಗವಸು ಅಥವಾ ಗಾಳಿಯ ಮೂಲಕ ಸೋಂಕುವುದರಿಂದ ರಕ್ಷಣೆ ಪಡೆಯಲು N95 ಮುಖ ಗವಸು (ಕೆಲವು ವೇಳೆ ಶುಶ್ರೂಕರಿಗೆ ಬದಲಾಗಿ ರೋಗಿಗೆ ಹಾಕಲಾಗುತ್ತದೆ
ಈ ಉದ್ದೇಶಕ್ಕೆ ಬಳಸುವ ಮುಖ ಗವಸು ರೇಚಕ ರಂಧ್ರವನ್ನು (=ಉಸಿರನ್ನು ಹೊರಬಿಡುವ ರಂಧ್ರ) ಹೊಂದಿರಬಾರದು.
- ಎದೆ ಹೊದಿಕೆ
ಪರಿಕರಗಳು ಮತ್ತು ಸಾಮಗ್ರಿ
[ಬದಲಾಯಿಸಿ]- ತುರ್ತು ಬಳಕೆಗಾಗಿ ಕತ್ತರಿಗಳು ಬಟ್ಟೆಗಳನ್ನು ಕತ್ತರಿಸಲು ಮತ್ತು ಸಾಮಾನ್ಯ ಬಳಕೆಗೆ
- ಕತ್ತರಿಗಳು- ಇದರ ಬಳಕೆ ಕಡಿಮೆ ಆದರೂ ಕೆಲವೊಮ್ಮೆ ಇದನ್ನೂ ಸೇರಿಸಲಾಗಿರುತ್ತದೆ.
- ಚಿಮುಟಗಳು
- ಲೈಟರ್, ಚಿಮುಟಗಳು ಅಥವಾ ಇಕ್ಕಳಗಳನ್ನು ಕ್ರಿಮಿನಾಶಕಗೊಳಿಸಲು
- ಆಲ್ಕೋಹಾಲ್ ಪ್ಯಾಡ್‌ಗಳು- ಸಲಕರಣೆಗಳನ್ನು ಅಥವಾ ಸೀಳಿರದ ಚರ್ಮವನ್ನು ಕ್ರಿಮಿ ಮುಕ್ತಗೊಳಿಸಲು. ಕೆಲವೊಮ್ಮೆ ಗಾಯಗಳಿಂದ ಮೃತ ಅಂಗಾಂಶಗಳನ್ನು ಹೊರತೆಗೆಯಲು ಇದನ್ನು ಬಳಸಲಾಗುತ್ತದೆ; ಆದರೂ ಇವು ಜೀವಂತ ಕೋಶಗಳನ್ನು ಕೊಲ್ಲುವ ಮೂಲಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಎಂದು ಕೆಲವು ತರಬೇತಿ ಪ್ರಾಧಿಕಾರಗಳು ಇದರ ವಿರುದ್ದ ಎಚ್ಚರಿಕೆ ನೀಡಿವೆ.
- ನೀರು ಹಾಯಿಸುವ ಸಿರಿಂಜ್ - ತೂರುನಳಿಕೆಯ ತುದಿಯೊಂದಿಗೆ ಶುದ್ಧ ನೀರಿನಿಂದ,ಕ್ಷಾರಜಲದಿಂದ ಅಥವಾ ದುರ್ಬಲ ಅಯೋಡಿನ್ ದ್ರಾವಣದಿಂದ ಗಾಯಗಳನ್ನು ತೊಳೆಯಲು ಬಳಸುತ್ತಾರೆ.
ದ್ರವದ ತೀವ್ರ ಹರಿವು ಕೊಳೆ ಮತ್ತು ಉಳಿಕೆಯ ಕಣಗಳನ್ನು ತೊಳೆದುಹಾಕುತ್ತದೆ.
- ಟಾರ್ಚ್ (ಫ್ಲ್ಯಾಷ್ಲೈಟ್ ಎಂದೂ ಹೇಳಲಾಗಿದೆ)
- ತಕ್ಷಣ-ಪ್ರತಿಕ್ರಿಯಿಸುವ ರಾಸಾಯನಿಕ ತಂಪು ಪ್ಯಾಕ್ಗಳು
- ಆಲ್ಕೋಹಾಲ್ ರಬ್ (ಕೈ ಸ್ವಚ್ಚಗೊಳಿಸುವ ಜೆಲ್) ಅಥವಾ ಸೋಂಕುನಿರೋಧಕ ಕೈ ಒರೆಸುವ ಬಟ್ಟೆಗಳು
- ಥರ್ಮಾಮೀಟರ್(=ಉಷ್ಣತಾಮಾಪಕ)
- ಉಷ್ಣತಾ ಹೊದಿಕೆ (ರೋಗಿಯ ಮೈಯಲ್ಲಿನ ಉಷ್ಣತೆಯನ್ನು ಕಾಪಾಡಲು, ತೀರ ಹಗುರಾದ ವಿಶೇಷವಾದ ಪ್ಲಾಸ್ಟಿಕ್ ಮತ್ತು ಲೋಹಮಿಶ್ರಿತ ಹೊದಿಕೆ. ಇದನ್ನು "ತುರ್ತು ಹೊದಿಕೆ" ಎನ್ನಲಾಗಿದೆ.)
- ಪೆನ್ಲೈಟ್
ಔಷಧಗಳು
[ಬದಲಾಯಿಸಿ]ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಔಷಧಗಳ ಸೇರ್ಪಡೆ ವಿವಾದಾತ್ಮಕ. ವಿಶೇಷವಾಗಿ ಸಾರ್ವಜನಿಕ ಉಪಯೋಗಕ್ಕೆಂದಾಗ ವಿವಾದ ಇನ್ನೂ ಹೆಚ್ಚು.ಆದೇನೇ ಆದರೂ ವೈಯಕ್ತಿಕ ಅಥವಾ ಕೌಟುಂಬಿಕ ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಕೆಲವು ಅಗತ್ಯ ಔಷಧಗಳು ಇರುವುದು ಸರ್ವೇಸಾಮಾನ್ಯ. ಆಧ್ಯಯನಗಳ ವ್ಯಾಪ್ತಿಯನ್ನು ಆಧರಿಸಿ ಔಷಧಗಳ ಮುಖ್ಯ ವಿಧಗಳೆಂದರೆ, ಸಾರ್ವಜನಿಕರಿಗೆ ಅಥವಾ ಕಂಪನಿಯ ಉದ್ಯೋಗಿಗಳಿಗೆ ಕೊಂಡು ಬಳಸುವ ಅಥವಾ ಪ್ರಥಮ ಚಿಕಿತ್ಸಕರು ಉಪಯೋಗಿಸುವ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಜೀವರಕ್ಷಕ ಔಷಧಗಳು, ವೈಯಕ್ತಿಕ ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ಕಂಡುಬರುವ ನೋವು ನಿವಾರಕಗಳು, ಇವು ಸಾರ್ವಜನಿಕ ಬಳಕೆಯ ಕಿಟ್‌ಗಳಲ್ಲೂ ಕಂಡುಬರಬಹುದು ರೋಗ ಲಕ್ಷಣಗಳಿಂದ ಶಮನ ನೀಡುವ ಔಷಧಗಳು ಕೇವಲ ವೈಯಕ್ತಿಕ ಕಿಟ್‌ಗಳಲ್ಲಿ ಮಾತ್ರ ಕಾಣಬರುತ್ತದೆ. ಜೀವರಕ್ಷಕ ಔಷಧಗಳು
- ಆಸ್ಪಿರಿನ್,[೧] ಮುಖ್ಯಾವಾಗಿ ಎದೆನೋವು ಚಿಕಿತ್ಸೆಯಲ್ಲಿ ಹೆಪ್ಪುಗಟ್ಟುವುದನ್ನು ತಡೆಯುವ ಸಾಧನವಾಗಿ ಬಳಕೆಯಾಗುತ್ತದೆ.
- ಎಪಿನೆಫ್ರಿನ್ ಆಟೋ-ಇಂಜೆಕ್ಟರ್ (ಸ್ವಯಂ ಇಜೆಂಕ್ಟ್ ಮಾಡುವ ಸಾಧನ) (ಬ್ರಾಂಡ್ ಹೆಸರು ಎಪಿಪೆನ್)- ದೂರದ ಕಾಡು ಪ್ರದೇಶಗಳಲ್ಲಿ ಬಳಸುವ ಮತ್ತು ಬೇಸಿಗೆ ಶಿಬಿರಗಳಲ್ಲಿ ಅತಿ ಸಂವೇದನೆಯಿಂದ ಉಂಟಾಗುವ ಆಘಾತಗಳಿಗೆ ನೀಡುವ ಚಿಕಿತ್ಸೆಗಳಲ್ಲಿ ಬಳಸುವ ಕಿಟ್‌ಗಳಲ್ಲಿ ಕೆಲವೊಮ್ಮೆ ಇದನ್ನು ಸೇರಿಸಿರುತ್ತಾರೆ.
ನೋವು ನಿವಾರಕಗಳು
- ಪ್ಯಾರಸೆಟಾಮೋಲ್ (ಅಸಿಟಾಮಿನೋಪೆನ್ ಎಂದು ಪರಿಚಿತವಾಗಿದೆ) ಅತ್ಯಂತ ಸಹಜವಾಗಿ ಬಳಕೆಯಾಗುವ ನೋವು ನಿವಾರಕ ಔಷಧ. ಇದು ಮಾತ್ರೆ ಅಥವಾ ಸಿರಪ್ ರೂಪದಲ್ಲಿ ದೊರೆಯುತ್ತದೆ.
- ಮೈ ಉರಿಯನ್ನು ಕಡಿಮೆಮಾಡುವ ನೋವುನಿವಾರಕಗಳು ಎಂದರೆ, ಐಬುಪ್ರೋಫೆನ್, ನಾಪ್ರೋಕ್ಸೆನ್ ಅಥವಾ ಇತರೆ NSAIDಗಳು ಉಳುಕು ಮತ್ತು ಒತ್ತಡದಿಂದುಂಟಾಗುವ ಸುಸ್ತುಗಳಿಗೆ ನೀಡುವ ಚಿಕಿತ್ಸೆಗಳಲ್ಲಿ ಇದನ್ನು ಬಳಸುತ್ತಾರೆ.
- ಕೋಡೆಯಿನ್, ಅತಿಸಾರ ನಿರೋಧಕ ಮತ್ತು ನೋವು ನಿವಾರಕವಾಗಿ ಬಳಸಲ್ಪಡುತ್ತದೆ.
ರೋಗ ಲಕ್ಷಣದ ಶಮನ
- ಲೋಪೆರಾಮೈಡ್ ರೀತಿಯ ಅತಿಸಾರ ನಿರೋಧಕ ಔಷಧಗಳು- ವಿಶೇಷವಾಗಿ ದೂರದ ಅಥವಾ ತೃತೀಯ ಜಗತ್ತಿನ ಪ್ರದೇಶಗಳಲ್ಲಿ ಇದು ಬಳಕೆಯಾಗುತ್ತದೆ. ಏಕೆಂದರೆ ಮಕ್ಕಳಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುವ ಅತಿಸಾರ ಹೆಚ್ಚಿನ ಶಶು ಮರಣಕ್ಕೆ ಕಾರಣವಾಗಿದೆ.
- ಬಾಯಿಂದ ಸೇವಿಸುವ ಪುನರ್ಜಲೀಕರಣ ಲವಣಗಳು
- ಆಂಟಿಹಿಸ್ಟಾಮೈನ್ (ಅಲರ್ಜಿಯನ್ನು ತಡೆಯಲು ಬಳುಸುವ ಔಷಧ) ಅದೆಂದರೆ ಡಿಫೆನ್ಹೈಡ್ರಾಮೈನ್
- ವಿಷ ನಿರೋಧಕ ಚಿಕಿತ್ಸೆಗಳು
- ಹೀರಿಕೆಗಾಗಿ, ಅಂದರೆ ಸಕ್ರಿಯಗೊಳಿಸಿದ ಇದ್ದಲು(ಚಾರ್ಕೋಲ್)
- ಎಮೆಟಿಕ್ಗಳು ವಾಂತಿ ಪ್ರಚೋದನೆಗಾಗಿ ಬಳಸುವ, ಅದೆಂದರೆ ಸಿರಪ್ ಆಫ್ ಐಪೆಕ್ಯಾಕ್. ಆದರೂ ಪ್ರಥಮ ಚಿಕಿತ್ಸಾ ಕೈಪಿಡಿಗಳು ವಾಂತಿ ಪ್ರಚೋದನೆ ಬೇಡ ಎಂದು ಸಲಹೆ ಮಾಡುತ್ತವೆ.
- ವಾಸನೆಯುಕ್ತ ಲವಣಗಳು (ಅಮೋನಿಯಂ ಕಾರ್ಬೋನೇಟ್ )
ಅಂಗ ಸಂಬಂಧೀ ಔಷಧಗಳು
- ಸೋಂಕುನಿವಾರಕ ಮುಲಾಮು, ದ್ರವ ಪದಾರ್ಥ, ತೇವಭರಿತ ಒರೆಸುವ ಬಟ್ಟೆ ಅಥವಾ ಸ್ಪ್ರೇ, ಬೆಂಜಾಲ್ಕೋನಿಯಂ ಕ್ಲೋರೈಡ್, ನಿಯೊಮೈಸಿನ್, ಪೋಲಿಮೈಕ್ಸಿನ್ B, ಸಲ್ಫೇಟ್ ಅಥವಾ ಬೇಸಿಟ್ರೇಸಿನ್ ಜಿಂಕ್.
- ಪೋವಿಡೋನ್ ಅಯೋಡಿನ್ ಇದೊಂದು ದ್ರವರೂಪದಲ್ಲಿರುವ ಸೋಂಕು ನಿರೋಧಕ, ಸ್ವಾಬ್‌ಸ್ಟಿಕ್ ಅಥವಾ ಟೋಲೆಟ್
- ಆಲೋ ವೆರಾ ಜೆಲ್- ಸುಟ್ಟಗಾಯಗಳು, ಬಿಸಿಲ ಶಾಖಕ್ಕೆ ಉಂಟಾದ ಚರ್ಮದ ಉರಿ, ತುರಿಕೆ, ಆರ್ಧ್ರ ಚರ್ಮವನ್ನೂ ಒಳಗೊಂಡಂತೆ ವಿವಿಧ ರೀತಿಯ ಚರ್ಮ ಸಂಬಂಧೀ ವ್ಯಾಧಿಗಳಿಗೆ ಇದನ್ನು ಬಳಸಲಾಗುತ್ತದೆ; ಹಾಗೂ ಟ್ರಿಪಲ್-ಆಂಟಿಬಯೋಟಿಕ್ ಜೆಲ್‌ಗೆ ಪರ್ಯಾಯವಾಗಿ ಗಾಯದಲ್ಲಿ ತೇವಾಂಶವನ್ನು ಕಾಪಾಡಲು ಮತ್ತು ಬ್ಯಾಂಡೇಜ್‌ಗಳು ಗಾಯಕ್ಕೆ ಅಂಟುವುದನ್ನು ತಪ್ಪಿಸಲು ಬಳಕೆಯಾಗುತ್ತದೆ.
- ಸುಟ್ಟ ಗಾಯದ ಜೆಲ್ - ಜಲಾಧಾರಿತವಾದ ಈ ಜೆಲ್ ತಂಪೆರೆವ ಕಾರ್ಯ ನಿರ್ವಹಿಸುತ್ತದೆ. ಹಾಗೂ ಕೆಲವು ವೇಳೆ ಸೌಮ್ಯ ಅರಿವಳಿಕೆ ಮದ್ದುಗಳನ್ನು ಒಳಗೊಂಡಿರುತ್ತದೆ. ಲಿಡೊಕೆಯಿನ್ ಕೆಲವುವೇಳೆ ಸೋಂಕು ನಿರೋಧಕವಾಗಿ ಲಿಡೋಕೇಯಿನ್ ,ಮತ್ತು ಕೆಲವೊಮ್ಮೆ ಚಹಾ ಗಿಡದ ತೈಲವನ್ನು ಬಳಸಲಾಗುತ್ತದೆ.
- ತುರಿಕೆ ತಡೆಯುವ ಮುಲಾಮು
- ಹೈಡ್ರೋಕಾರ್ಟಿಸೋನ್ ಕ್ರೀಮ್
- ಡಿಫೆನ್ಹೈಡ್ರಾಮೈನ್ ಅನ್ನು ಹೊಂದಿರುವ ಆಂಟಿಹಿಸ್ಟಾಮೈನ್ಕ್ರೀಮ್
- ಕ್ಯಾಲಮೈನ್ ಲೋಷನ್
- ಬೂಷ್ಟು ತಡೆಯುವ ಕ್ರೀಮ್
- ಬೆಂಜೋಯಿನ್ ಟಿಂಚರ್ - ಪ್ರತ್ಯೇಕವಾಗಿ ಸೀಲ್ ಆಗಿರುವ ಸ್ವಾಬ್‌ಸ್ಟಿಕ್ ರೂಪದಲ್ಲಿರುವ ಇದು ಚರ್ಮವನ್ನು ರಕ್ಷಿಸುತ್ತದೆ ಮತ್ತು ಬಟರ್‌ಫ್ಲೈ ಪಟ್ಟಿಗಳ ಅಥವಾ ಅಂಟುವ ಬ್ಯಾಂಡೇಜ್‌ಗಳ ಅಂಟು ಗುಣವನ್ನು ಹೆಚ್ಚಿಸುತ್ತದೆ.
ಸುಧಾರಿತ ಬಳಕೆ
[ಬದಲಾಯಿಸಿ]ಪ್ರಥಮ ಚಿಕಿತ್ಸೆಯಲ್ಲಿ ಮೇಲೆ ಹೇಳಿರುವ ನಿರ್ದಿಷ್ಟ ಬಳಕೆಯನ್ನು ಹೊರತುಪಡಿಸಿ, ಇನ್ನೂ ಹಲವಾರು ಚಿಕಿತ್ಸಾ ವಸ್ತುಗಳು ಕೂಡ ಅಳಿವು-ಉಳಿವಿನ ಸಂದರ್ಭದಲ್ಲಿ ಬಳಕೆಗೆ ಬರುವುದುಂಟು. ಉದಾಹರಣೆಗೆ, ಆಲ್ಕೋಹಾಲ್ ಪ್ಯಾಡ್‌ಗಳು ಮತ್ತು ಪೆಟ್ರೋಲಿಯಂ ಜೆಲ್ಲಿಯನ್ನು ಆಧರಿಸಿ ರೂಪುಗೊಂಡ ಮುಲಾಮಗಳನ್ನು, ತುರ್ತು ಸಂದರ್ಭದಲ್ಲಿ ಸುಟ್ಟಗಾಯಗಳಿಗೆ ಆರಂಭಿಕ ಚಿಕಿತ್ಸೆಯ ಹಾಗೆ ಬಳಸಬಹುದು. ತದನಂತರ ಇದನ್ನು ಕೆಲವು ನಿರ್ದಿಷ್ಟ ಯಾಂತ್ರಿಕ ಸಲಕರಣೆಗಳಿಗೆ ಸುಧಾರಿತ ಜಾರೆಣ್ಣೆಯಾಗಿ ಬಳಸಬಹುದು. ಅಂಟು ಪಟ್ಟಿಗಳು ಮತ್ತು ಬ್ಯಾಂಡೇಜ್ ಸರಿಪಡಿಸುವಲ್ಲೂ ಇದನ್ನು ಬಳಸಬಹುದು. ದೂರದ ಕಾಡು ಪ್ರದೇಶದಲ್ಲಿ ಅಥವಾ ಅಳಿವು-ಉಳಿವಿನ ಸಂದರ್ಭಗಳಲ್ಲಿ ಬಳಸಲು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಜೋಡಿಸುವಾಗ ಆಯ್ದುಕೊಳ್ಳುವ ವಿವಿಧ ಸಾಮಗ್ರಿಯ ಕಡೆ ಗಮನ ಹರಿಸುವುದು ಬಹುಮುಖ್ಯ ಅಂಶವಾಗುತ್ತವೆ. ಸರ್ವೈವಲ್ ಕಿಟ್ ಮತ್ತು ಸಣ್ಣ ಸರ್ವೈವಲ್ ಕಿಟ್‌ಗಳ ಉಪಕರಣಗಳೊಂದಿಗೆ ಹೆಚ್ಚುವರಿ ಕಿಟ್‌ಗಳೂ ಪರ್ಯಾಯ ಉಪಯೋಗಕ್ಕೆ ಒದಗಿಬರಬಹುದು.
ಟ್ರೌಮಾ ಬ್ಯಾಗ್/ಪ್ರಥಮ ಸ್ಪಂದಕರ ಚೀಲ
[ಬದಲಾಯಿಸಿ]ಟ್ರೌಮಾ ಬ್ಯಾಗ್ ಅಥವಾ ಪ್ರಥಮ ಸ್ಪಂದಕರ ಚೀಲ ಎಂದು ಕರೆಯಲ್ಪಡುವ ಅತ್ಯಾಧುನಿಕ ವೈದ್ಯಕೀಯ ಕಿಟ್‌ಗಳನ್ನು ತುರ್ತು ಸ್ಪಂದಕರು ಬಳಸುತ್ತಾರೆ. ವಾಣಿಜ್ಯೋದ್ದೇಶದ ಪ್ರಥಮ ಚಿಕಿತ್ಸಾ ಕಿಟ್‌ಗಳಲ್ಲಿ ದೊರೆಯುವುದಕ್ಕಿಂತ ಉತ್ತಮ ಗುಣಮಟ್ಟದ ಮತ್ತು ಅಧಿಕ ಪ್ರಮಾಣದ ಸಾಮಗ್ರಿಗಳು ಈ ಕಿಟ್‌ಗಳಲ್ಲಿ ಇರುತ್ತವೆ.
ಉದ್ಯೋಗ ಸ್ಥಳದ ಪ್ರಥಮ ಚಿಕಿತ್ಸಾ ಕಿಟ್
[ಬದಲಾಯಿಸಿ]ಎಲ್ಲ ಉದ್ಯೋಗ ಸ್ಥಳಗಳು ಮತ್ತು ಕಾರ್ಯ ಕ್ಷೇತ್ರಗಳಲ್ಲಿ ಅವರ ಗಾಯಗೊಂಡ ಉದ್ಯೋಗಿಗಳನ್ನು ಉಪಚರಿಸುವುದಕ್ಕಾಗಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಇಡಬೇಕಾದುದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಔದ್ಯೋಗಿಕ ರಕ್ಷಣೆ ಮತ್ತು ಆರೋಗ್ಯ ಆಡಳಿತ (OSHA), ಕಡ್ಡಾಯಗೊಳಿಸಿದೆ. [೨].ಅರಣ್ಯಾಧಾರಿತ ಕೈಗಾರಿಕೆಗಳಂತಹ ಉದ್ಯಮಗಳಿಗೆ ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ [೩] ಪ್ರಥಮ ಚಿಕಿತ್ಸಾ ಕಿಟ್ ನಲ್ಲಿ ಏನೇನಿರಬೇಕು ಎಂಬ ವಿಚಾರದಲ್ಲಿ ಸ್ಪಷ್ಟತೆಯ ಕೊರತೆ ಇದೆ. ಬೇರೆ ಬೇರೆ ಕೆಲಸಗಳಲ್ಲಿ ಬೇರೆ ಬೇರೆ ರೀತಿಯ ಗಾಯಗಳು ಸಂಭವಿಸುವುದರಿಂದ ಬೇರೆ ಬೇರೆ ರೀತಿಯ ಪ್ರಥಮ ಚಿಕಿತ್ಸಾ ಕಿಟ್‌ಗಳ ಅಗತ್ಯವಿರುತ್ತದೆ ಎಂಬುದು ಸುಲಭವಾಗಿ ಗ್ರಹಿಸಬಲ್ಲ ವಿಚಾರ.ಆದರೆ ವಿಧಧ ಕೆಲಸ-ಕಾರ್ಯಗಳಲ್ಲಿ ತೊಡಗಿರುವಂಥ ಉದ್ಯೋಗಿಗಳು ಇದ್ದಲ್ಲೂ ಏಕರೂಪದ ನಿಯಮ ಅನ್ವಯಿಸಲಾಗಿದೆ. ಆದರೂ, ಕಡ್ಡಾಯವಲ್ಲದ ವಿಭಾಗದಲ್ಲಿ [೪] OSHA ಕಾನೂನುಗಳು ANSI/ISEA ನಿಬಂಧನೆಗಳು Z308.1 ಅನ್ನು ಉಲ್ಲೇಖಿಸುತ್ತವೆ.[೫] ಪ್ರಥಮ ಚಿಕಿತ್ಸಾ ಕಿಟ್‌ನ ಸೂಚಿಸಲಾದ ಕನಿಷ್ಟ ಸಾಮಗ್ರಿಗಳಿಗೆ ಆಧಾರವೆಂಬಂತೆ ಆಧುನಿಕ ಪ್ರಥಮ ಚಿಕಿತ್ಸಾ ಕಿಟ್ ಬಗೆಗಿನ ಮಾಹಿತಿಯ ಮತ್ತೊಂದು ಮೂಲವೆಂದರೆ ಯುನೈಟೆಡ್ ಸ್ಟೇಟ್ಸ್ ಅರಣ್ಯ ಸೇವಾನಿಬಂಧನೆಗಳು 6170-6[೬] ಇದು ವಿಭಿನ್ನ ಗಾತ್ರದ ಗುಂಪನ್ನು ಶುಶ್ರೂಷೆ ಮಾಡುವ ವಿಭಿನ್ನ ಗಾತ್ರದ ಕಿಟ್‌ಗಳಲ್ಲಿ ಇರಬೇಕಾದ ಸಾಮಗ್ರಿಗಳನ್ನು ಸ್ಪಷ್ಟಪಡಿಸುತ್ತದೆ. ಇದೇ ಅದು ಇರಬೇಕಾದ ರೀತಿ....
ಐತಿಹಾಸಿಕ ಪ್ರಥಮ ಚಿಕಿತ್ಸಾ ಕಿಟ್‌ಗಳು
[ಬದಲಾಯಿಸಿ]ಪ್ರಥಮ ಚಿಕಿತ್ಸೆ ಮತ್ತು ಜೀವರಕ್ಷಕ ಪರಿಮಾಣಗಳು ಅತ್ಯಾಧುನಿಕವಾಗಿವೆ ಎಂಬುದನ್ನು ಅರ್ಥಮಾಡಿಕೊಂಡು, ಹಾಗೂ ಸಾರ್ವಜನಿಕ ಆರೊಗ್ಯದ ಅಪಾಯಗಳ ಸ್ವರೂಪ ಬದಲಾಗಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು, ಪ್ರಸ್ತುತ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವಂತೆ ಪ್ರಥಮ ಚಿಕಿತ್ಸಾ ಕಿಟ್‌ಗಳ ಸಾಮಗ್ರಿಗಳಲ್ಲೂ ಬದಲಾವಣೆ ಉಂಟಾಗಿದೆ. ಉದಾಹರಣಗೆ, ಆರಂಭಿಕ US ಫೆಡರಲ್ ನಿಬಂಧನೆಗಳು [೭][೮] ಪ್ರಥಮ ಚಿಕಿತ್ಸಾ ಕಿಟ್‌ಗಳು ಕೊಯ್ಯುವ/ಹೀರಿವ- ರೀತಿಯ ಹಾವು ಕಡಿತದ ಕಿಟ್‌ಗಳು ಮತ್ತು ಮರ್ಕ್ಯುರಾಕ್ರೊಮ್ ಸೋಂಕು ನಿರೋಧಕಗಳನ್ನು ಒಳಗೊಂಡಿರುತ್ತಿದ್ದವು. ಹಾವು ಕಡಿತಎಂಬ ವಿಷಯಾಧಾರಿತ ಲೇಖನದಲ್ಲಿ ವಿವರಿಸಿರುವಂತೆ ಈ ರೀತಿಯ ಹಾವು ಕಡಿತದ ಕಿಟ್‌ಗೆ ಇನ್ನು ಶಿಫಾರಸ್ಸು ಮಾಡಲಾಗದು.ಮರ್ಕ್ಯುರಿ ವಿಷಪೂರಣ ಉಂಟಾದೀತು ಎಂಬ ಅಂಜಿಕೆಯಿಂದ ಮರ್ಕ್ಯುರಾಕ್ರೊಮ್ US FDAಯಿಂದ ಅನುಮೋದನೆಗೊಂಡಿಲ್ಲ. CPRನಲ್ಲಿ ಸಹಕರಿಸಲು ಮತ್ತು HIV ಯಂತಹ ರಕ್ತದ ಮೂಲಕ ರೋಗಾಣು ಹರಡುವುದನ್ನು ತಡೆಯಲು CPR ಮುಖಗವಚಗಳು, ನಿರ್ದಿಷ್ಟ ದೈಹಿಕ-ದ್ರವಪದಾರ್ಥ ನಿರೋಧಕಗಳನ್ನು ಆಧುನಿಕ ಕಿಟ್‌ಗಳಲ್ಲಿ ಸೇರಿಸಲಾಗಿರುತ್ತದೆ. CPR 1960ರ ನಂತರದವರೆಗೆ ಜನಪ್ರಿಯವಾಗಿರಲಿಲ್ಲ ಹಾಗೆಯೇ HIV 1983ರವರೆಗೂ ಪತ್ತೆಯಾಗಿರಲಿಲ್ಲ.
ಇದನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ First Aid Manual 8th Edition. St John Ambulance, St Andrews First Aid, British Red Cross. 2002. ISBN 0-7513-3704-8.
- ↑ 29 CFR 1910.151 (1998-06-10). "Occupational Safety and Health Standards: Medical services and first aid". Retrieved 2006-08-28.
{{cite web}}
: CS1 maint: numeric names: authors list (link) - ↑ 29 CFR 1910.266 App A (1995-09-08). "Occupational Safety and Health Standards: First-aid Kits (Mandatory)". Retrieved 2006-08-28.
{{cite web}}
: CS1 maint: numeric names: authors list (link) - ↑ 29 CFR 1910.151 App A (2005-01-05). "Occupational Safety and Health Standards: Appendix A to § 1910.151 -- First aid kits (Non-Mandatory)". Retrieved 2006-08-28.
{{cite web}}
: CS1 maint: numeric names: authors list (link) - ↑ ANSI/ISEA (2009-05-12). "ANSI/ISEA Z308.1-2009, American National Standard - Minimum Requirements for Workplace First Aid Kits and Supplies". Archived from the original on 2009-09-18. Retrieved 2009-08-25.
- ↑ U.S. Department of Agriculture Forest Serivce (2006-01-25). "6170-6H, Kits, First Aid" (PDF). Retrieved 2009-08-25.
- ↑ GG-K-391A (1954-10-19). "Kit (Empty) First-Aid, Burn-Treatment and Snake Bite, and Kit Contents (Unit-Type)". Archived from the original on 2011-07-22. Retrieved 2009-08-24.
{{cite web}}
: CS1 maint: numeric names: authors list (link) - ↑ GG-K-392 (1957-04-25). "Kit, First Aid (Commercial Types), and Kit Contents". Archived from the original on 2011-07-22. Retrieved 2009-08-24.
{{cite web}}
: CS1 maint: numeric names: authors list (link)
ಹೊರಗಿನ ಕೊಂಡಿಗಳು
[ಬದಲಾಯಿಸಿ]- ನಿಮ್ಮ ಸ್ವಂತ ಪ್ರಥಮ ಚಿಕಿತ್ಸಾ ಕಿಟ್ ಅನ್ನು ನೀವೇ ರೂಪಿಸುವುದು ಹೇಗೆ Archived 2009-05-05 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರಥಮ ಚಿಕಿತ್ಸಾ ಅನುಸರಣೆಯ ಬೇಕು ಬೇಡಗಳು Archived 2008-08-23 ವೇಬ್ಯಾಕ್ ಮೆಷಿನ್ ನಲ್ಲಿ.
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- CS1 maint: numeric names: authors list
- Articles with hatnote templates targeting a nonexistent page
- Articles lacking sources from February 2008
- All articles lacking sources
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಪ್ರಥಮ ಚಿಕಿತ್ಸೆ
- ಬಿಡಾರ ಹೂಡುವ ಪರಿಕರಗಳು
- ಬ್ಯಾಕ್ಪ್ಯಾಕಿಂಗ್
- ಆರೋಗ್ಯ
- ವೈದ್ಯಕೀಯ