Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಪ್ರೊಮೆಥಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೊಮೆಥಿಯಮ್ ಲ್ಯಾಂಥನೈಡ್ ಸರಣಿಗೆ ಸೇರಿರುವ ಒಂದು ಮೂಲಧಾತು. ಇದು ಆವರ್ತ ಕೋಷ್ಟಕದಲ್ಲಿ ವಿಕಿರಣಶೀಲವಲ್ಲದ ಸಮಸ್ಥಾನಿಗಳನ್ನು ಹೊಂದಿರುವ ಧಾತುಗಳ ಹಿಂದೆ ಬರುವ ಎರಡು ವಿಕಿರಣಶೀಲ ಧಾತುಗಳಲ್ಲಿ ಒಂದು (ಇನ್ನೊಂದು ಟೆಕ್ನೀಶಿಯಮ್).

ನೈಸರ್ಗಿಕವಾಗಿ ಇದು ಅತ್ಯಂತ ವಿರಳವಾಗಿದ್ದು ಕೇವಲ ಯುರೇನಿಯಮ್ ಮತ್ತು ಯುರೋಪಿಯಮ್ಗಳು ಸ್ವಾಭಾವಿಕವಾಗಿ ನಶಿಸಿದಾಗ ಉಂಟಾಗುತ್ತದೆ. ಇಡೀ ಭೂಮಿಯಲ್ಲಿ ಕೇವಲ ಸುಮಾರು ೫೬೦ ಗ್ರಾಂಗಳಷ್ಟು ಈ ಧಾತು ಇದೆಯೆಂದು ಅಂದಾಜಿಸಲಾಗಿದೆ. ಇದನ್ನು ೧೯೪೫ರಲ್ಲಿ ಅಮೇರಿಕ ದೇಶಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಮೊದಲು ಸಂಯೋಜಿಸಲಾಯಿತು. ಇದರ ಹೆಸರು ಗ್ರೀಕ್ ಪುರಾಣದಲ್ಲಿ ದೇವರುಗಳಿಂದ ಬೆಂಕಿಯನ್ನು ಕದ್ದು ಮಾನವರಿಗೆ ನೀಡಿದ "ಪ್ರೊಮೆಥಿಯಸ್" ಎಂಬ ಟೈಟನ್ ಇಂದ ಬಂದಿದೆ.