Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ವ್ಯವಹಾರ ಮಾದರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಸಂಸ್ಥೆ ಹೇಗೆ ಆರ್ಥಿಕ, ಸಾಮಾಜಿಕ ಅಥವಾ ಇತರ ಬಗೆಯ ಮೌಲ್ಯಗಳನ್ನು[] ಸೃಷ್ಟಿಸುತ್ತದೆ, ತಲುಪಿಸುತ್ತದೆ, ಹಾಗೂ ಸೆರೆ ಹಿಡಿಯುತ್ತದೆ ಎಂಬುದನ್ನು ವ್ಯವಹಾರ ಮಾದರಿ ಸಕಾರಣವಾದ ಆಧಾರದೊಂದಿಗೆ ವಿವರಿಸುತ್ತದೆ. ವ್ಯವಹಾರ ಮಾದರಿ ವಿನ್ಯಾಸದ ಪ್ರಕ್ರಿಯೆ ವ್ಯವಹಾರ ತಂತ್ರದ ಒಂದು ಭಾಗ.

ಸಿದ್ಧಾಂತದಲ್ಲಿ ಹಾಗೂ ಬಳಕೆಯಲ್ಲಿ ವ್ಯವಾಹಾರ ಮಾದರಿ ಎಂಬ ಪದವನ್ನು ಒಂದು ವ್ಯವಹಾರದ ವಿಸ್ತಾರವಾದ ಶ್ರೇಣಿಯ ಔಪಚಾರಿಕ ಹಾಗೂ ಅನೌಪಚಾರಿಕ ಮೂಲ ಅಂಶಗಳ ವಿವರಣೆಗಳನ್ನು ಸೂಚಿಸಲು ಬಳಸಲಾಗುತ್ತದೆ, ಅದರಲ್ಲಿ ಉದ್ದೇಶ, ಕೊಡುಗೆಗಳು, ತಂತ್ರಗಳು, ಆಧಾರ ರಚನೆ, ಸಂಸ್ಥೆಯ ರಚನೆ, ವ್ಯಾಪಾರದ ವಾಡಿಕೆಗಳು, ಹಾಗೂ ಕಾರ್ಯನಿರ್ವಾಹಣೆಯ ಪ್ರಕ್ರಿಯೆಗಳು ಹಾಗೂ ಕಾರ್ಯನೀತಿಗಳು ಒಳಗೊಂಡಿರಬಹುದು. ಹೀಗೆ, ಅದು ಒಂದು ಸಂಸ್ಥೆಯ ಸಂಪೂರ್ಣ ಚಿತ್ರವನ್ನು ಉನ್ನತ ಮಟ್ಟದ ದೃಷ್ಟಿಕೋನದಿಂದ ನೀಡುತ್ತದೆ.

ಒಂದು ವ್ಯವಹಾರ ಸ್ಥಾಪಿತಗೊಂಡಾಗ, ಅದು ಪ್ರಕಟವಾಗಿ ಅಥವಾ ಸೂಚ್ಯವಾಗಿ ಒಂದು ನಿರ್ಧಿಷ್ಟ ವ್ಯವಹಾರ ಮಾದರಿಯನ್ನು ನಿಯೋಜಿಸುತ್ತದೆ. ಅದು ವ್ಯವಹಾರ ಉದ್ಯಮದಿಂದ ನಿಯೋಜಿತ ಮೌಲ್ಯ ಸೃಷ್ಟಿಯ, ತಲುಪಿಸುವಿಕೆಯ, ಹಾಗೂ ಸೆರೆಹಿಡಿಯುವ ತಂತ್ರದ ವಿನ್ಯಾಸ ಅಥವಾ ರಚನೆಯನ್ನು ವಿವರಿಸುತ್ತದೆ. ವ್ಯವಹಾರ ಉದ್ಯಮ ಗ್ರಾಹಕರಿಗೆ ತಲುಪಿಸುವ ಮೌಲ್ಯ, ಗ್ರಾಹಕರು ಮೌಲಕ್ಕೆ ಪಾವತಿ ಮಾಡಲು ಮನವೊಲಿಸುವುದು, ಹಾಗೂ ಆ ಸಂದಾಯಗಳನ್ನು ಲಾಭಕ್ಕೆ ಪರಿವರ್ತಿಸುವ ವೈಖರಿಯನ್ನು ವಿವರಿಸುವುದೇ ವ್ಯವಹಾರ ಮಾದರಿಯ ಮೂಲತತ್ವ: ಹೀಗೆ ಗ್ರಾಹಕರಿಗೆ ಏನು ಬೇಕು, ಹೇಗೆ ಬೇಕು, ಹಾಗೂ ಆ ಬೇಡಿಕೆಗಳನ್ನು ಪೂರೈಸಲು ಸಂಸ್ಥೆ ಹೇಗೆ ಉನ್ನತವಾಗಿ ನಿಯೋಜಿಸಬಹುದು, ಇದಕ್ಕಾಗಿ ವೇತನ ಪಡೆಯುವುದು, ಹಾಗೂ ಲಾಭವನ್ನು ಗಳಿಸುವುದರಗಳ ನಿರ್ವಾಹಣೆಯ ಸಿದ್ದಾಂತ ಬಗ್ಗೆ ಪ್ರತಿಬಿಂಬಿಸುತ್ತದೆ.[]

ವ್ಯವಹಾರ ಮಾದರಿಗಳು ವ್ಯವಹಾರಗಳ ವಿವರಣೆ ಹಾಗೂ ವಿಂಗಡಣೆಗಾಗಿ ಬಳಸಲಾಗುತ್ತದೆ (ವಿಶೇಷವಾಗಿ ಒಂದು ಉದ್ಯಮಾತ್ಮಕ ರಚನೆಯಲ್ಲಿ), ಆದರೆ ಇದನ್ನು ಕಂಪನಿಯೊಳಗೆ ವ್ಯವಸ್ಥಾಪಕರು ಭವಿಷ್ಯದ ಅಭಿವೃದ್ಧಿಯ ಸಾಧ್ಯತೆಗಳನ್ನು ಅನ್ವೇಷಿಸಲು ಕೂಡ ಬಳಸುತ್ತಾರೆ. ಅಂತಿಮವಾಗಿ, ಪ್ರಚಲಿತ ವ್ಯವಹಾರ ಮಾದರಿಗಳು ಸೃಜನಾತ್ಮಕ ವ್ಯವಸ್ಥಾಪಕರಿಗೆ ಪರಿಕರಗಳ ಪಟ್ಟಿಗಳಂತೆ ಕಾರ್ಯ ನಿರ್ವಹಿಸುತ್ತದೆ.[]

ಇತಿಹಾಸ

[ಬದಲಾಯಿಸಿ]

ಇಷ್ಟು ವರ್ಷಗಳಲ್ಲಿ, ವ್ಯವಹಾರ ಮಾದರಿಗಳು ಇನ್ನು ಹೆಚ್ಚು ಸಂಕೀರ್ಣಗೊಂಡಿವೆ. ಬೆಟ್ ಅಂಡ್ ಹುಕ್ ವ್ಯವಹಾರ ಮಾದರಿ ("ರೆಜರ್ ಅಂಡ್ ಬ್ಲೇಡ್ಸ್ ವ್ಯವಹಾರ ಮಾದರಿ" ಅಥವಾ "ಟೈಡ್ ಪ್ರೊಡ್ಕಟ್ಸ್ ವ್ಯವಹಾರ ಮಾದರಿ" ಎಂದು ಕೂಡ ಉಲ್ಲೇಖಿಸಲಾದ) ೨೦ನೇಯ ಶತಮಾನದ ಆರಂಭದಲ್ಲಿ ಪರಿಚಯಿಸಲಾಯಿತು. ಮೂಲಭೂತ ಉತ್ಪನ್ನವನ್ನು ಬಹಳ ಕಡಿಮೆ ದರದಲ್ಲಿ ನೀಡುವುದು ಇದರಲ್ಲಿ ಒಳಗೊಂಡಿದೆ, ಹಲವು ಬಾರಿ ನಷ್ಟದೊಂದಿಗೆ ("ಬೆಟ್"), ಆನಂತರ ಪುನಃ ಭರ್ತಿಮಾಡಲು ಅಥವಾ ಸಂಬಂಧಿತ ಉತ್ಪನ್ನಗಳ ಅಥವಾ ಸೇವೆಗಳ ("ಹುಕ್") ನಷ್ಟ ತುಂಬಲು ಮರುಕಳಿಸುವ ಮೊತ್ತದ ಶುಲ್ಕ ವಿಧಿಸಲಾಗುವುದು. ಒಳಗೊಂಡ ಉದಾಹರಣೆ: ರೆಜರ್ (ಬೆಟ್) ಅಂಡ್ ಬ್ಲೇಡ್ಸ್ (ಹುಕ್); ಸೆಲ್ ಫೋನುಗಳು (ಬೆಟ್) ಅಂಡ್ ವಾಯು ವೇಳೆ (ಹುಕ್); ಕಂಪ್ಯುಟರ್ ಪ್ರಿಂಟರ್‌ ಗಳು (ಬೆಟ್) ಹಾಗೂ ಶಾಯಿ ಕಾರ್ಟ್ರಿಡ್ಜ್ ರಿಫಿಲ್‌ಗಳು (ಹುಕ್); ಮತ್ತು ಕ್ಯಾಮೆರಗಳು (ಬೆಟ್) ಹಾಗೂ ಪ್ರಿಂಟ್‌ಗಳು) (ಹುಕ್). ಈ ಮಾದರಿಗೆ ಒಂದು ಕೂತೂಹಲ ವೈವಿಧ್ಯ ಉಳ್ಳದ್ದು ಅಡೋಬ್, ಇದು ತನ್ನ ಡಾಕ್ಯುಮೆಂಟ್ ರೀಡರ್ ಅನ್ನು ಮುಕ್ತವಾಗಿ ನೀಡುವ ಆದರೆ ತನ್ನ ಡಾಕ್ಯುಮೆಂಟ್ ರೈಟರ್‌ ಗೆ ಹಲವು ನೂರು ಡಾಲರ್‌ ಗಳ ಶುಲ್ಕ ವಿಧಿಸುವ ಒಂದು ಸಾಫ್ಟ್‌ವೇರ್ ಡೆವೆಲಪರ್.

೧೯೫೦ರಲ್ಲಿ, ಮ್ಯಾಕ್ ಡೊನಾಲ್ಡ್ಸ್ ಉಪಾಹಾರ ಗೃಹಗಳು ಹಾಗೂ ಟೊಯೊಟಾದಿಂದ ಹೊಸ ವ್ಯವಹಾರ ಮಾದರಿಗಳು ಬಂದವು. ೧೯೬೦ರಲ್ಲಿ, ವಾಲ್-ಮಾರ್ಟ್ ಹಾಗೂ ಹೈಪರ್‌ ಮಾರುಕಟ್ಟೆಗಳು ನವನಿರ್ಮಿತಿಕಾರರಾಗಿದ್ದರು. ೧೯೭೦ರ ದಶಕ ಹೊಸ ವ್ಯವಹಾರ ಮಾದರಿಗಳನ್ನು ಫೆಡ್‌ಎಕ್ಸ್ ಹಾಗೂ ಟೊಯಿಸ್ R Us ಗಳ ಮೂಲಕ; ೧೯೮೦ರ ದಶಕ ಬ್ಲಾಕ್‌ಬಸ್ಟರ್, ಹೊಂ ಡಿಪೋಟ್, ಇಂಟೆಲ್, ಹಾಗೂ ಡೆಲ್ ಕಂಪ್ಯೂಟರ್‌ ಗಳ ಮೂಲಕ; ೧೯೯೦ರ ದಶಕ ದಕ್ಷಿಣಪಶ್ಚಿಮ ವಿಮಾನಯಾನ ಸಂಸ್ಥೆ, ನೆಟ್‌ಫ್ಲಿಕ್ಸ್, eBay, Amazon.com, ಹಾಗೂ ಸ್ಟಾರ್ ಬಕ್ಸ್ ಗಳ ಮೂಲಕ ಕಂಡಿತು.

ಇಂದು, ವ್ಯವಹಾರ ಮಾದರಿಯ ಬಗೆ ತಂತ್ರಜ್ಞಾನವನ್ನು ಹೇಗೆ ಬಳಸಲಾಗಿದೆ ಎಂಬುದರ ಮೇಲೆ ಆಧಾರಿತವಾಗಬಹುದು. ಉದಾಹರಣೆಗೆ, ಅಂತರ್ಜಾಲದಲ್ಲಿ ಉದ್ಯಮಿಗಳು ಸಂಪೂರ್ಣವಾಗಿ ಅಸ್ಥಿತ್ವದಲ್ಲಿರುವ ಅಥವಾ ಉದ್ಭವಿಸುತ್ತಿರುವ ತಂತಜ್ಞಾನದ ಮೇಲೆ ಅವಲಂಭಿತಗೊಂಡು ಕೂಡ ಹೊಸ ಮಾದರಿಗಳನ್ನು ಸೃಷ್ಟಿಸಿದ್ದಾರೆ. ತಂತ್ರಜ್ಞಾನವನ್ನು ಬಳಸಿ, ಕಡಿಮೆ ಖರ್ಚಿನಲ್ಲಿ ವ್ಯವಹಾರ ಹೆಚ್ಚು ಸಂಖ್ಯೆಯ ಗ್ರಾಹಕರಿಗೆ ತಲುಪಬಹುದು.

ಆದಾಯ ಮಾದರಿಯ ಉದಾಹರಣೆಗಳು

[ಬದಲಾಯಿಸಿ]
  • ಬ್ರಿಕ್ಸ್ ಆಂಡ್ ಕ್ಲಿಕ್ಸ್ ವ್ಯವಹಾರ ಮಾದರಿ :
ಆಫ್‌ಲೈನ್ (ಬ್ರಿಕ್ಸ್ ) ಹಾಗೂ ಆನ್‌ಲೈನ್ (ಕ್ಲಿಕ್ಸ್ ) ಎರಡೂ ಇರುವಿಕೆಗಳನ್ನು ಒಂದು ಕಂಪನಿ ಸಂಯೋಜಿಸುವ ವ್ಯವಹಾರ ಮಾದರಿ. ಬ್ರಿಕ್ಸ್ ಆಂಡ್ ಕ್ಲಿಕ್ಸ್ ಮಾದರಿಯ ಒಂದು ಉದಾಹರಣೆ, ಅಂಗಡಿಗಳ ಸರಣಿಯೊಂದು ಉತ್ಪನ್ನಗಳ ಆನ್‌ಲೈನ್ ವ್ಯಾಪಾರಾದೇಶಕ್ಕೆ ಅನುಮತಿಸುತ್ತದೆ, ಆದರೆ ತಮ್ಮ ಸರಕುಗಳನ್ನು ಸ್ಥಳೀಯ ಅಂಗಡಿಯಿಂದ ತೆಗೆದು ಕೊಳ್ಳಲು ಅವಕಾಶ ನೀಡುತ್ತದೆ.
  • ಸಂಘಟಿತ ವ್ಯವಹಾರ ಮಾದರಿಗಳು
ಒಂದೇ ಅಥವಾ ಪ್ರಯತ್ನಪಟ್ಟ ಸಂಬಂಧಿತ ವ್ಯಾಪ್ತಿಯ ತುಲನಾತ್ಮಕವಾಗಿ ಹೆಚ್ಚು ಸಂಖ್ಯೆಯ ವ್ಯವಹಾರಗಳು, ವ್ಯಾಪಾರೋದ್ಯಮಿಗಳು ಅಥವಾ ವೃತ್ತಿನಿರತರ ವಿಶಿಷ್ಟ ಸಂಯೋಜನೆಯ ವ್ಯವಹಾರ ಸಂಸ್ಥೆ ಅಥವಾ ಸಂಘಟನೆ, ಇದು ತನ್ನ ಸದಸ್ಯರಿಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತದೆ, ಮಾಹಿತಿಯನ್ನು ಹಂಚುತ್ತದೆ ಅಥವಾ ಇತರ ಲಾಬವನ್ನು ನೀಡುತ್ತದೆ.
  • ಘಟಕ ವ್ಯವಹಾರ ಮಾದರಿ
ಒಂದು ಉದ್ಯಮವನ್ನು ಮಾದರಿಗೊಳಿಸಲು ಹಾಗೂ ವಿಶ್ಲೇಷಿಸಲು IBM ಮೂಲಕ ಅಭಿವೃದ್ಧಿಗೊಳಿಸಿದ ತಂತ್ರಜ್ಞ. ಇದು ಒಂದು ತಾರ್ಕಿಕ ನಿರೂಪಣೆ ಅಥವಾ ವ್ಯವಹಾರ ಘಟಕಗಳ ನಕ್ಷೆ ಅಥವಾ "ಬಿಲ್ಡಿಂಗ್ ಬ್ಲಾಕ್ಸ್" ಹಾಗೂ ಒಂದೇ ಪುಟದಲ್ಲಿ ಇದನ್ನು ವರ್ಣಿಸಬಹುದು. ಇದನ್ನು ವ್ಯವಹಾರ ತಂತ್ರಗಳನ್ನು ಸಂಸ್ಥೆಯೊಂದರ ಶಕ್ತಿಗೆ ತಕ್ಕುದಾಗಿ ಮತ್ತು ಬಂಡವಾಳ ಹೂಡಿಕೆಗೆ ತಕ್ಕಂತೆ ವ್ಯವಹಾರದಲ್ಲಿ ಉಂಟಾಗುತ್ತಿರುವ ಸೋರಿಕೆ ಮತ್ತು ಅದರ ಪೈಪೋಟಿಯ ಸಾಮರ್ಥ್ಯವನ್ನು ಗುರುತಿಸಲು ಬಳಸಲಾಗುತ್ತದೆ.
ಉತ್ತರ ಅಮೆರಿಕಾದ ದೊಡ್ಡ ಮಳಿಗೆಯ ಉದ್ಯಮವನ್ನು ಮಧ್ಯಸ್ಥಿಕೆಯಿಂದ ಮುಕ್ತಗೊಳಿಸುವ ಗುರಿಯಲ್ಲಿ ವೆಬ್‌ವ್ಯಾನ್‌ ವಿಫಲವಾದರೂ ಸಹ, ಹಲವು ದೊಡ್ಡ ಮಳಿಗೆಗಳ ಸರಣಿ (ಸೇಫ್‌ವೇ Inc. ಅಂತಹದ್ದು) ವೆಬ್‌ವ್ಯಾನ್‌ ಒದಗಿಸಿದ ಗಣ್ಯಸ್ಥಾನದ ಮಾರುಕಟ್ಟೆಗೆ ತನ್ನದೇ ಆದ ಡೆಲಿವರಿ ಸರ್ವಿಸ್ ಅನ್ನು ಪ್ರಾರಂಭಿಸಿದೆ.
  • ಮದ್ಯವರ್ತಿಗಳನ್ನು ತೆಗೆದುಹಾಕುವ ಮಾದರಿ
ಸರಬರಾಜು ಮಾಡುವ ಸರಣಿಯಲ್ಲಿ ಮಧ್ಯಸ್ಥಿಕೆಯನ್ನು ತೆಗೆದುಹಾಕುವುದು: "ಮಧ್ಯವರ್ತಿಗಳನ್ನು ತೆಗೆದುಹಾಕುವುದು" ಕೆಲವು ತರಹದ ಮಧ್ಯಸ್ಥಿಕೆಯ (ವಿತರಕ, ಸಗಟು ವ್ಯಾಪಾರಿ, ದಳ್ಳಾಳಿ, ಅಥವಾ ಪ್ರತಿನಿಧಿಗಳಂತಹ) ಉಳ್ಳ ಕೆಲವು ಸಾಂಪ್ರದಾಯಿಕ ವಿತರಣೆ ಮಾರ್ಗಗಳ ಮೂಲಕ ಹೋಗುವ ಬದಲು, ಕಂಪನಿಗಳು ಈಗ ತಮ್ಮ ಪ್ರತಿ ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸಬಹುದು, ಉದಾಹರಣೆಗೆ ಅಂತರ್ಜಾಲದ ಮೂಲಕ.
  • ನೇರ ಮಾರಾಟದ ಮಾದರಿ
ನಿಗದಿತ ಚಿಲ್ಲರೆ ವ್ಯಾಪಾರದ ಸ್ಥಳದಿಂದ ದೂರ, ನೇರವಾಗಿ ಗ್ರಾಹಕರಿಗೆ, ಉತ್ಪನ್ನಗಳ ಮಾರಾಟ ಹಾಗೂ ವ್ಯಾಪಾರ ಒದಗಿಸುವುದು ನೇರ ಮಾರಾಟ. ಗುಂಪಿನ ಯೋಜನೆಯ ಮೂಲಕ ಮಾರಾಟವನ್ನು ವಿಶಿಷ್ಟವಾಗಿ ಮಾಡಲಾಗುತ್ತದೆ, ಒಬ್ಬರಿಂದ ಒಬ್ಬರಿಗೆ ನಿದರ್ಶನಗಳು, ಹಾಗೂ ಇತರ ವೈಯಕ್ತಿಕ ಸಂಪರ್ಕ ವ್ಯವಸ್ಥೆಗಳು. ಒಂದು ಪಠ್ಯ ಪುಸ್ತಕದ ವ್ಯಾಖ್ಯಾನ: "ನೇರ ವೈಯುಕ್ತಿಕ ನಿರೂಪಣೆ, ನಿದರ್ಶನ, ಮತ್ತು ಗ್ರಾಹಕರಿಗೆ ಉತ್ಪನ್ನಗಳ ಹಾಗೂ ಸೇವೆಗಳ ಮಾರಾಟ, ಸಾಮಾನ್ಯವಾಗಿ ಅವರ ಮನೆಗಳಲ್ಲಿ ಅಥವಾ ಅವರ ಉದ್ಯೋಗದಲ್ಲಿ."[]
  • ವಿತರಣೆ ವ್ಯವಹಾರ ಮಾದರಿಗಳು. ಹಲವು
  • ಶುಲ್ಕ ಒಳಗೆ, ಮುಕ್ತ ಹೊರಗೆ
ಒಂದು ಸೇವೆಗೆ ಮೊದಲ ಗಿರಾಕಿ ಒಂದು ಶುಲ್ಕವನ್ನು ವಿಧಿಸಿ, ಅದೇ ಸೇವೆಯನ್ನು ಆನಂತರದ ಗಿರಾಕಿಗಳಿಗೆ ಮುಕ್ತವಾಗಿ ನೀಡಿ ಕಾರ್ಯ ನಿರ್ವಹಿಸುವ ವ್ಯವಹಾರ ಮಾದರಿ.
  • ವಿಶೇಷ ಹಕ್ಕು
ಫ್ರ್ಯಾಂಚೈಸಿಂಗ್ ಅಧಿಕಾರದ ಪ್ರತಿನಿಧಿತ್ವ ವಹಿಸಿ ಕೊಡುವುದೆಂದರೆ ಮತ್ತೊಂದು ಸಂಸ್ಥೆಯ ಯಶಸ್ವಿ ವಹಿವಾಟಿನ ಮಾದರಿಯನ್ನು ಅನುಸರಿಸುವುದು. ಫ್ರ್ಯಾಂಚೈಸರ್ ಗೆ ಇದು 'ಸರಣಿ ದಾಸ್ತಾನುಗಳ'ಮೂಲಕ ಪರ್ಯಾಯ ಕಟ್ಟಡದಲ್ಲಿ ವಸ್ತುಗಳ ವಿತರಣೆ ಮತ್ತು ವಿಶೇಷ ಬಂಡವಾಳ ಹೂಡಿಕೆ ಮತ್ತು ವ್ಯಾಪಾರಿ ತೊಂದರೆಗಳಿಂದ ದೂರವಾಗಲು ಈ ವ್ಯವಸ್ಥೆ ನೆರವಾಗುತ್ತದೆ. ಫ್ರ್ಯಾಂಚೈಸರ್ ನ ಯಶಸ್ಸು ಫ್ರಾಂಚೈಸೀಯ ಯಶಸ್ಸಾಗುತ್ತದೆ. ಫ್ರ್ಯಾಂಚೈಸೀಯು ನೇರ ನೌಕರನಿಗಿಂತ ಹೆಚ್ಚು ಆದಾಯದ ಪ್ರ್ತೊತ್ಸಾಹಕರ ಅವಕಾಶ ಪಡೆಯುತ್ತಾನೆ,ಯಾಕೆಂದರೆ ಈತ ಅಥವಾ ಆಕೆ ವ್ಯವಹಾರದಲ್ಲಿ ನೇರ ಬಂದವಾಳ ಹೂಡಿರುತ್ತಾನೆ.
  • ಫ್ರಿಮಿಯಂ ವ್ಯವಹಾರ ಮಾದರಿ
ಮೂಲಭೂತ ಅಂತರ್ಜಾಲದ ಸೇವೆಗಳನ್ನು, ಅಥವಾ ಒಂದು ಮೂಲಭೂತ ಡೌನ್‌ಲೋಡ್‌ ಆಗಬಲ್ಲ ಡಿಜಿಟಲ್ ಉತ್ಪನ್ನವನ್ನು ಮುಕ್ತವಾಗಿ ನೀಡಿ, ಮುಂದುವರೆದ ಅಥವಾ ವಿಶೇಷ ರೂಪವೈಶಿಷ್ಟ್ಯ ಗಳಿಗೆ ಹೆಚ್ಚಿನ ಬೆಲೆಯನ್ನು ವಿಧಿಸಿ ಕಾರ್ಯ ನಿರ್ವಹಿಸುವ ವ್ಯವಹಾರ ಮಾದರಿ.[]
  • ಸೇವೆಗಳ ಔದ್ಯೋಗಿಕರಣದ ವ್ಯವಹಾರ ಮಾದರಿ
ತಂತ್ರಕುಶಲತೆಯ ನಿರ್ವಹಣೆ ಹಾಗೂ ಸೇವೆಗಳ ವ್ಯಾಪಾರದಲ್ಲಿ ಬಳಕೆಯಾಗುವ ವ್ಯವಹಾರ ಮಾದರಿ, ಇದು ಸೇವೆಗಳ ಒದಗುಸುವಿಕೆಯನ್ನು ಔದ್ಯೋಗಿಕ ಅತ್ಯುತ್ತಮವಾಗಿಸುವ ಕಾರ್ಯವಿಧಾನದ ಒಳಪಟ್ಟು ಒಂದು ಔದ್ಯೋಗಿಕ ಪ್ರಕ್ರಿಯೆಯಾಗಿ ಸತ್ಕರಿಸುತ್ತದೆ.

ಇತರ ವ್ಯವಹಾರ ಮಾದರಿಗಳು:

  • ಹರಾಜು ವ್ಯವಹಾರ ಮಾದರಿ
  • ಆಲ್-ಇನ್-ಒನ್ ವ್ಯವಹಾರ ಮಾದರಿ
  • ಎಬೊಕ್ಯುಬ್ ವ್ಯವಹಾರ ಮಾದರಿ
  • ಕಡಿಮೆ-ಖರ್ಚಿನ ವಾಹಕ ವ್ಯವಹಾರ ಮಾದರಿ
  • ನಿಷ್ಠೆಯ ವ್ಯವಹಾರ ಮಾದರಿಗಳು
  • ಏಕಸ್ವಾಮ್ಯತೆಯ ವ್ಯವಹಾರ ಮಾದರಿ
  • ಹಲವು-ಮಟ್ಟಗಳ ವ್ಯಾಪಾರ ವ್ಯವಹಾರ ಮಾದರಿ
  • ಜಾಲಬಂಧ ಪ್ರಭಾವಗಳ ವ್ಯವಹಾರ ಮಾದರಿ
  • ಆನ್‌ಲೈನ್ ಹರಾಜು ವ್ಯವಹಾರ ಮಾದರಿ
  • ಆನ್‌ಲೈನ್ ವಿಷಯ ವ್ಯವಹಾರ ಮಾದರಿ
  • ಹೆಚ್ಚು ಶುಲ್ಕ ವ್ಯವಹಾರ ಮಾದರಿ
  • ವೃತ್ತಿನಿರತ, ತೆರೆದ-ಮೂಲ ಮಾದರಿ
  • ಪಿರಾಮಿಡ್ ಕಾರ್ಯಯೋಜನೆ ವ್ಯವಹಾರ ಮಾದರಿ
  • ರೆಜರ್ ಅಂಡ್ ಬ್ಲೇಡ್ಸ್ ವ್ಯವಹಾರ ಮಾದರಿ
  • ಉತ್ಪನ್ನಗಳ ಸೇವಾಸಹಾಯ ವ್ಯವಹಾರ ಮಾದರಿ
  • ವಂತಿಗೆ ವ್ಯವಹಾರ ಮಾದರಿ

ವ್ಯವಹಾರ ಮಾದರಿ ವಿಷಯಗಳು

[ಬದಲಾಯಿಸಿ]
ವ್ಯವಹಾರ ಮಾದರಿ ಪ್ರಚಾರ: ಒಂಬತ್ತು ವ್ಯವಹಾರ ಮಾದರಿ ಬಿಲ್ಡಿಂಗ್ ಬ್ಲಾಕ್ಸ, ಒಸ್ಟರ್‌ ವಾಲ್ಡರ್, ಪಿಗ್ನಿರ್, & al. 2010[]

ವ್ಯವಹಾರ ಮಾದರಿ ವಿನ್ಯಾಸ ಪ್ರಮಾಣ ಫಲಕ

[ಬದಲಾಯಿಸಿ]

ವ್ಯವಹಾರದ ಔಪಚಾರಿಕ ವಿವರಣೆಗಳು ಅದರ ಚಟುವಟಿಕೆಗಳಿಗೆ ನಿರ್ಮಾಣದ ಇಟ್ಟಿಗೆಗಳಾಗುತ್ತವೆ. ಹಲವು ವಿಭಿನ್ನ ಪರಿಕಲ್ಪನೆಯಾಕಾರಗಳು ಅಸ್ಥಿತ್ವದಲ್ಲಿದೆ.

ವ್ಯವಹಾರ ಮಾದರಿ ಪ್ರಚಾರ ಎಂದು ಕರೆಯಲಾದ ಒಸ್ಟರ್‌ ವಾಲ್ಡರ್ ಅವರ ಕೃತಿ [][] ಒಂದು ಏಕ ಉಲ್ಲೇಖ ಮಾದರಿಯನ್ನು ಪ್ರಸ್ತಾಪಿಸುತ್ತದೆ, ಇದು ವ್ಯಾಪಕ ಶ್ರ‍ೇಣಿಯ ವ್ಯವಹಾರ ಮಾದರಿ ಪರಿಕಲ್ಪನೆಯಾಕಾರಗಳ ಸದೃಶತೆಯ ಮೇಲೆ ಆಧಾರಿತವಾಗಿದೆ.

ಈ ವ್ಯವಹಾರ ಮಾದರಿ ವಿನ್ಯಾಸ ಪ್ರಮಾಣ ಫಲಕದ ಮೂಲಕ, ಒಂದು ಉದ್ಯಮ ಸುಲಭವಾಗಿ ತನ್ನ ವ್ಯವಹಾರ ಮಾದರಿಯನ್ನು ವಿವರಿಸಬಹುದು. ಪ್ರಮಾಣ ಫಲಕದ ವಿಷಯಗಳು ಆಧಾರ ರಚನೆ, ಕೊಡುಗೆಗಳು, ಗ್ರಾಹಕರು, ಆಯವ್ಯಯ ಶಾಸ್ತ್ರ, ಇತರೆ.

ಪಾಲುದಾರ ವ್ಯಾಪಾರ ಸಂಸ್ಥೆಗಳ ನಡುವೆ ವ್ಯವಹಾರ ಮಾದರಿಯ ಪೂರಕತೆಗಳು

[ಬದಲಾಯಿಸಿ]

ಸಹವರ್ತಿಸುವ ಸಂಶೋಧನೆಯ ಅಧ್ಯಯನ ಹಾಗೂ ತಂತ್ರಜ್ಞಾನದ ಬಾಹ್ಯಾ ಸಂಪನ್ಮೂಲಗಳ ಬಳಕೆ, ಹಮೆಲ್ et al. (೨೦೧೦) ವ್ಯವಹಾರ ಮಾದರಿಯ ಪಾಲುದಾರರ ನಿರ್ಧಾರ ಮಾಡುವಾಗ, ಎರಡೂ ಪಕ್ಷದವರ ವ್ಯವಹಾರ ಮಾದರಿಗಳು ಪೂರಕವಾಗಿವೆ ಎಂದು ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ, ತನ್ನ ವ್ಯವಹಾರ ಮಾದರಿಯನ್ನು ವಿಶ್ಲೇಷಿಸುವುದರಿಂದ ಸಮರ್ಥ ಪಾಲುದಾರರ ಮೌಲ್ಯ ಚಾಲಕರನ್ನು ಗುರುತು ಹಿಡಿಯುವುದು ಮುಖ್ಯ ಎಂದು ಕಂಡುಹಿಡಿದರು, ಹಾಗೂ ನಮ್ಮ ಸ್ವಂತ ವ್ಯಾಪಾರ ಸಂಸ್ಥೆಯ ವ್ಯವಹಾರ ಮಾದರಿಯ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವಂತಹ ಪಾಲುದಾರ ವ್ಯಾಪಾರ ಸಂಸ್ಥೆಯನ್ನು ಕಂಡು ಹಿಡಿಯುವುದು ಲಾಭದಾಯಕ.[]

ವ್ಯವಹಾರ ಮಾದರಿ ೨.೦

[ಬದಲಾಯಿಸಿ]

ಸಂಗ್ರಹಿತ ಬುದ್ಧಿವಂತಿಕೆ, ಸಂಪರ್ಕ ಜಾಲ ಪ್ರಭಾವಗಳು, ಬಳಕೆದಾರರು ಉತ್ಪತ್ತಿಸಿದ ಅಂಶಗಳು, ಹಾಗೂ ಸ್ವ-ಅಭಿವೃದ್ಧಿ ವ್ಯವಸ್ಥೆಗಳ ಸಾಧ್ಯತೆಗಳಂತಹ Web ೨.೦ ಯಿನ ಸಾಮರ್ಥ್ಯೆಗಳನ್ನು ಇಪ್ಪತೊಂದನೇಯ ಶತಮಾನದಲ್ಲಿನ ವ್ಯವಹಾರ ಮಾದರಿ ಗಣನೆಗೆ ತೆಗೆದುಕೊಳ್ಳ ಬೇಕು ಎಂದು ಚೆನ್ (೨೦೦೯) ಸೂಚಿಸಿದರು. ವಿಮಾನಯಾನ, ಟ್ರ್ಯಾಫಿಕ್, ಸಾಗಾಣಿಕೆ, ಹೊಟೆಲ್, ಉಪಹಾರಗೃಹ, ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನ ಹಾಗೂ ಆನ್‌ಲೈನ ಆಟದ ಉದ್ಯಮಗಳಂತಹ ಸೇವಾ ಉದ್ಯಮಿಗಳು Web ೨.೦ ಯಿನ ಗುಣಲಕ್ಷಣಗಳನ್ನು ಹೊಂದ ವ್ಯವಹಾರ ಮಾದರಿಯನ್ನು ಗಣನೆಗೆ ತೆಗೆದುಕೊಂಡು ಲಾಭವನ್ನು ಪಡೆದುಕೊಳ್ಳುತ್ತದೆ ಎಂದು ಅವರು ಸಲಹೆ ನೀಡಿದರು. ವ್ಯವಹಾರ ಮಾದರಿ ೨.೦ ಬರಿ Web ೨.೦ ತಂತ್ರಜ್ಞದ ಪ್ರಭಾವ ಮಾತ್ರ ಗಣನೆಗೆ ತೆಗೆದುಕೊಳ್ಳದೆ ಸಂಪರ್ಕ ಜಾಲದ ಪ್ರಭಾವ ಕೂಡ ಗಣನೆಗೆ ತೆಗೆದುಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದರು. ಅವರು ಅಮೆಜೊನ್‌ನ ಸಫಲತೆಯ ಕಥೆಯ ಉದಾಹರಣೆಯನ್ನು ಕೊಟ್ಟರು, ಅಮೆಜೊನ್‌ನ ಆನ್ ಡಿಮಾಂಡ್ ಕಾಮರ್ಸ್ ಸೇವೆಗಳನ್ನು ಪುನಃ-ಬಳಸಸುವ ಕಂಪನಿಗಳ ಒಂದು ದೊಡ್ಡ ಹಾಗೂ ಏಳಿಗೆಹೊಂದುತ್ತಿರುವ ಸಮುದಾಯ ಬೆಂಬಲಿಸುವ ಒಂದು ಸಂಪೂರ್ಣವಾಗಿ ಹಿಗ್ಗುತ್ತಿರುವ ತೆರೆದ ವೇದಿಕೆ ಅಭಿವೃದ್ಧಿಗೊಂಡು ಪ್ರತಿ ವರ್ಷ ಭಾರಿ ಲಾಭಗಳನ್ನು ಮಾಡುತ್ತುರುವುದು ಇದರ ಕಥೆ.[]

ಬಳಕೆಗಳು

[ಬದಲಾಯಿಸಿ]

ಮೆಲೊನ್ et al.[] at MIT ಕೆಲವು ವ್ಯವಹಾರ ಮಾದರಿಗಳನ್ನು ಕಂಡುಹಿಡಿದವು, ೧೯೯೮ ರಿಂದ ೨೦೦೨ವರೆಗಿನ ಸಮಯದಲ್ಲಿ, ಅವರ ವಿವರಣೆಯ ಅನುಸಾರ ಇತರರಲ್ಲಿನ ಅತಿ ದೊಡ್ಡ U.S. ವ್ಯಾಪಾರಿ ಸಂಸ್ಥೆಗಳಲ್ಲಿ ಇದ್ದ ಡೆಟಾಸೆಟ್‍ಗಿಂತ ಉನ್ನತವಾಗಿ ಕಾರ್ಯನಿರ್ವಹಿಸಿದವು ಆದರೆ ವ್ಯವಹಾರ ಮಾದರಿಯ ಅಸ್ಥಿತ್ವ ಪ್ರಾಮುಖ್ಯ ಹೊಂದಿದೆ ಎಂಬುದನ್ನು ರುಜುವಾತು ಮಾಡಲಿಲ್ಲ.

ಸಂಬಂಧಿಸಿದ ಪರಿಕಲ್ಪನೆಗಳು

[ಬದಲಾಯಿಸಿ]

ವ್ಯವಹಾರ ಮಾದರಿಯ ಪ್ರಕ್ರಿಯೆಯ ವಿನ್ಯಾಸ ವ್ಯವಹಾರ ತಂತ್ರದ ಒಂದು ಭಾಗ. ಒಂದು ಕಂಪನಿಯ ವ್ಯವಹಾರ ಮಾದರಿಯನ್ನು ಸಂಸ್ಥಾತ್ಮಕ ರಚನೆಯಲ್ಲಿ ಕಾರ್ಯಗತ ಮಾಡುವುದು (ಉದಾ. ಒರ್ಗ್ಯಾನಿಗ್ರಾಮ್ಸ್, ವರ್ಕ್‌ಫ್ಲೋಸ್, ಮಾನವ ಸಂಪನ್ಮೂಲಗಳು) ಹಾಗೂ ಪದ್ಧತಿಗಳು (ಉದಾ. ಮಾಹಿತಿ ತಂತ್ರಜ್ಞಾನ ವಾಸ್ತುಶಾಸ್ತ್ರ, ಉತ್ಪಾದನೆಯ ರೇಖೆಗಳು) ಕಂಅಪನಿಯ ವ್ಯವಹಾರ ಕಾರ್ಯಾಚರಣೆಗಳ ಒಂದು ಭಾಗ.

ಕಾರ್ಯಚರಣೆಯ ಮಟ್ಟದಲ್ಲಿ ವ್ಯವಹಾರ ಮಾದರಿಯಾಗಿಸುವಿಕೆಯನ್ನು ಸಾಮಾನ್ಯವಾಗಿ ವ್ಯವಹಾರ ಪ್ರಕ್ರಿಯೆ ವಿನ್ಯಾಸಕ್ಕೆ ಉಲ್ಲೇಖಿಸಲಾಗುತ್ತದೆ ಎಂದು ಅರಿತುಕೊಳ್ಳುವುದು ಬಹಳ ಮುಖ್ಯ, ಆದರೆ ತಂತ್ರದ ಮಟ್ಟದಲ್ಲಿ ವ್ಯವಹಾರ ಮಾದರಿ ಹಾಗೂ ವ್ಯವಹಾರ ಮಾದರಿ ವಿನ್ಯಾಸ ಎರಡೂ ಒಂದು ಕಂಪನಿಯ ವ್ಯವಹಾರ ತರ್ಕಶಾಸ್ತ್ರದ ವಿವರಣೆಯನ್ನು ಉಲ್ಲೇಖಿಸುತ್ತದೆ.

ವ್ಯವಹಾರ ಮಾದರಿ ಮುದ್ರೆಯ ವಾಯಿದೆಯನ್ನು ಗುರುತಿಸುತ್ತದೆ ಹಾಗೂ ಮುದ್ರೆ ನೀತಿ ಮಾದರಿಯ ಒಂದು ಗುಣಲಕ್ಷಣ ಆಗುತ್ತದೆ, ಆದ್ದರಿಂದ ಮುದ್ರೆ ವ್ಯವಹಾರ ಮಾದರಿಯ ಒಂದು ಪರಿಣಾಮ ಹಾಗೂ ಅದರೊಂದಿಗಿನ ಒಂದು ಸಹಕಾರಿತ್ವದ ಸಂಬಂಧ. ಇದನ್ನು ನಿರ್ವಹಿಸುವುದು ಸಂಘಟಿತ ವ್ಯಾಪಾರಿಕರಣದ ಕೆಲಸ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ವ್ಯವಹಾರ ಮಾದರಿ ವಿನ್ಯಾಸ
  • ವ್ಯವಹಾರ ಯೋಜನೆ
  • ವ್ಯವಹಾರ ಪ್ರಕ್ರಿಯೆ ಮಾದರಿ ತಯಾರಿಕೆ
  • ವ್ಯವಹಾರ ಉಲ್ಲೇಖಿಸುವ ಮಾದರಿ
  • ವ್ಯವಹಾರ ನಿಯಮ
  • ಸ್ಪರ್ಧಾತ್ಮಕ ಅನುಕೂಲ
  • ಮುಖ್ಯ ಸ್ಪರ್ಧಾತ್ಮಕತೆ
  • ಬೆಳೆವಣಿಗೆಗಳ ವೇದಿಕೆ
  • ಮಾರುಕಟ್ಟೆಯ ರೂಪಗಳು
  • ವ್ಯಪಾರ
  • ವ್ಯಾಪಾರೋದ್ಯಮ ಯೋಜನೆ
  • ಯೋಜಿತ ನಿರ್ವಹಣೆ
  • ತಂತ್ರಕುಶಲತೆಯ ಯೋಜನೆ
  • ಯೋಜಿತ ಚಲನ ಕ್ರಿಯಾ-ಶಾಸ್ತ್ರ
  • ಮೌಲ್ಯದ ಸ್ಥಳಾಂತರಿಕೆ
  • ವ್ಯವಹಾರದ ವಿನ್ಯಾಸ

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ’ದಿ ಬಿಸಿನೆಸ್ ಮಾಡೆಲ್: ಥಿಯೋರೆಟಿಕಲ್ ರೂಟ್ಸ್, ರೀಸೆಂಟ್ ಡೆವೆಲಪ್ಮೆಂಟ್ಸ್, ಆಂಡ್ ಫ್ಯೂಚರ್ ರೀಸರ್ಚ್’, C. ಜೊಟ್, R. ಅಮಿತ್, & L. ಮಸ್ಸ., WP-೮೬೨, IESE, ಜೂನ್, ೨೦೧೦ - ಸೆಪ್ಟೆಂಬರ್ ೨೦೧೦ರಲ್ಲಿ ಪರಿಷ್ಕರಿಸಿದ [http://www.iese.edu/research/pdfs/DI-0862-E.pdf]
  • "ವ್ಯವಹಾರ ಮಾದರಿಗಳ ಮೇಲೆ ವಿಶೇಷ ಅಂಕ" ಲೊಂಗ್ ರೆಂಜ್ ಪ್ಲ್ಯಾನಿಂಗ್, ಭಾಗ ೪೩ ಏಪ್ರಿಲ್ ೨೦೧೦, ಇದರಲ್ಲಿ ವ್ಯವಹಾರ ಮಾದರಿಗಳ ಸ್ವಭಾವದ ಮೇಲೆ ನಾಯಕತ್ವವುಳ್ಳ ವಿದ್ವಾಂಸರಿಂದ ೧೯ ತುಣುಕುಗಳಿವೆ.
  • ದಿ ರೋಲ್ ಒಫ್ ದಿ ಬಿಸಿನೆಸ್ ಮಾಡೆಲ್ ಇನ್ ಕ್ಯಾಪ್ಚರಿಂಗ್ ವ್ಯಾಲ್ಯು ಫ್ರೊಂ ಇನ್ನೋವೇಶನ್: XEROX ಕಾರ್ಪೋರೆಷನ್‌ನ ಟೆಕ್ನಾಲಜಿ ಸ್ಪಿನ್‌ಒಫ್ ಕಂಪನಿಗಳು. ಅವರಿಂದ ಸಾಕ್ಷ್ಯ, H. ಚೆಸ್‌ಬ್ರೊಗ್ ಹಾಗೂ R. S. ರೊಸೆನ್‌ಬ್ಲೂಮ್, ಬೊಸ್ಟನ್, ಮ್ಯಾಸಚ್ಯೂಸೆಟ್ಸ್, ಹಾವರ್ಡ್ ಬಿಸಿನೆಸ್ ಸ್ಖೂಲ್, ೨೦೦೨.
  • ಲೀಡಿಂಗ್ ದಿ ರೆವೊಲ್ಯುಷನ್. , G. ಹಮೆಲ್, ಬೊಸ್ಟನ್, ಹಾವರ್ಡ್ ಬಿಸಿನೆಸ್ ಸ್ಖೂಲ್ ಮುದ್ರಣಾಲಯ, ೨೦೦೦.
  • ಚೆಂಜಿಂಗ್ ಬಿಸಿನೆಸ್ ಮಾಡೆಲ್ಸ್: ಸರ್ವೆಯಿಂಗ್ ದಿ ಲ್ಯಾಂಡ್‌ಸ್ಕೇಪ್ , J. ಲಿಂಡರ್ ಹಾಗೂ S. ಕ್ಯಾಂಟ್ರೆಲ್, ಆಕ್ಸೆಂರ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಚೆಂಜ್, ೨೦೦೦.
  • ಡೆವೆಲಪಿಂಗ್ ಬಿಸಿನೆಸ್ ಮಾಡೆಲ್ಸ್ ಫಾರ್ eಬಿಸಿನೆಸ್. , O. ಪೆಟೆರೊವಿಕ್ ಹಾಗೂ C. ಕಿಟಲ್ et al., ಇಂಟರ್‌ನ್ಯಾಷನಲ್ ಕಾಂಫರೆನ್ಸ್ ಆನ್ ಎಲೆಕ್ಟ್ರಾನಿಕ್ ಕಾಮರ್ಸ್ ೨೦೦೧, ೨೦೦೧.
  • ಪ್ಲೇಸ್ ಟು ಸ್ಪೇಸ್ ಮೈಗ್ರೇಟಿಂಗ್ ಟು eಬಿಸಿನೆಸ್ ಮಾಡೆಲ್ಸ್. , P. ವೆಯಿಲ್ ಹಾಗೂ M. R. ವಿಟಲೆ, ಬೊಸ್ಟನ್, ಹಾವರ್ಡ್ ಬಿಸಿನೆಸ್ ಸ್ಖೂಲ್ ಪ್ರೆಸ್, ೨೦೦೧.
  • ವ್ಯಾಲ್ಯು-ಬೇಸ್ಡ್ ರಿಕ್ವೈರ್‌ ಮೆಂಟ್ಸ್ ಇಂಜಿನಿಯರಿಂಗ್ - ಎಕ್ಸ್‌ಪ್ಲೋರಿಂಗ್ ಇನ್ನೊವೇಟಿವ್ e-ಕಾಮರ್ಸ್ ಐಡಿಯಾಸ್ , J. ಗಾರ್ಡ್‌ಜಿನ್, ಆಂಸ್ಟರ್‌ಡ್ಯಾಂ, ವ್ರಿಜ್ ಯುನಿವೆರ್‌ ಸಿಟಿಇಟ್, ೨೦೦೨.
  • ಇಂಟರ್ನೆಟ್ ಬಿಸಿನೆಸ್ ಮಾಡೆಲ್ಸ್ ಆಂಡ್ ಸ್ಟ್ರಾಟೆಜಿಸ್ , A. ಅಫೂ ಹಾಗೂ C. ಟುಸಿ, ಬಾಸ್ಟನ್, ಮ್ಯಾಕ್‌ಗ್ರೌ ಹಿಲ್, ೨೦೦೩.
  • Focus Theme Articles: ವ್ಯವಹಾರ ಮಾದರಿs for Content Delivery: An Empirical Analysis of the Newspaper and Magazine Industry , ಮಾರ್ಕ್ ಫೆಟ್ಸ್‌ಚೆರಿನ್ ಹಾಗೂ ಗರ್ಹಾರ್ಡ್ ನೊಲ್ಮೆಯರ್, ಮಾಧ್ಯಮ ನಿರ್ವಾಹಣೆಯ ಮೇಲೆ ಅಂತರ್‌ ರಾಷ್ಟ್ರೀಯ ಪತ್ರಿಕೆ, ಭಾಗ ೬, ಅಂಕ ೧ ಹಾಗೂ ೨ ಸೆಪ್ಟೆಂಬರ್ ೨೦೦೪, ಪುಟಗಳು ೪-೧೧, ಸೆಪ್ಟೆಂಬರ್ ೨೦೦೪.
  • ಬಿಸಿನೆಸ್ ಮಾಡೆಲ್ ಜೆನೆರೆಷನ್ , A. ಒಸ್ಟರ್ವಾಲ್ಡರ್, Yves ಪಿಗ್ನೆರ್, ಆಲೆನ್ ಸ್ಮಿಥ್, ಹಾಗೂ ೪೫ ದೇಶಗಳಿಂದ ೪೭೦ ವೃತ್ತಿಗಾರರು, ಸ್ವಯಂ ಪ್ರಕಟಿಸಿದ, ೨೦೦೯
  • Sustaining Digital Resources: An on-the-ground view of projects today Archived 2011-05-12 ವೇಬ್ಯಾಕ್ ಮೆಷಿನ್ ನಲ್ಲಿ. , ಇಟಾಕ, ನವೆಂಬರ್ ೨೦೦೯. ನಿಯೋಗಿಸಲಾದ ಮಾದರಿಗಳ ಪಕ್ಷಿನೋಟ ಮತ್ತು ಆಯದ ಪೀಳಿಗೆ ಹಾಗೂ ದರದ ನಿರ್ವಾಹಣೆಯ ಪರಿಣಾಮಗಳ ಬಗ್ಗೆ ವಿಶ್ಲೇಷಣ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ಬ್ಯೂಸ್‌ನೆಸ್‌ ಜನರೇಷನ್ , ಎ.ಒಸ್ಟರ್‌ವಾಲ್ಡರ್‌, ವ್ಯೆಸ್‌ ಪಿಗ್ನ್ಯೂರ್, ಆಲನ್‌ ಸ್ಮಿತ್‌, ಮತ್ತು ೪೫ ದೇಶಗಳಿಂದ ಬಂದ ಸುಮಾರು ೪೭೦ಕ್ಕಿಂತ ಹೆಚ್ಚು ವೃತ್ತಿನಿರತರು, ಸ್ವಪ್ರಕಟಣೆ, ೨೦೧೦
  2. (ಡೆವಿಡ್‌ ಟೀಸ್ ೨೦೧೦)
  3. (ಚಾರ್ಲ್ಸ್‌ ಬೇಡನ್‌-ಫುಲ್ಲರ್‌ ಆಂಡ್ ಮೇರಿ ಮಾರ್ಗನ್, ೨೦೧೦)
  4. ಮೈಕಲ್ ಎ.ಬೆಲ್ಚ್‌ ಜಾರ್ಜ್‌ ಇ.ಬೆಲ್ಚ್‌ ಅಡ್ವರ್ಟೈಸಿಂಗ್‌ ಆಂಡ್‌ ಪ್ರೊಮೊಷನ್: ಆನ್‌ ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ಸ್ ಪರ್‌ಸ್ಪೆಕ್ಟಿವ್ , ೭/e., ಮ್ಯಾಕ್‌ಗ್ರಾವ್‌-ಹಿಲ್‌/ಇರ್ವಿನ್, ೨೦೦೬
  5. ಜೆ‌ಎಲ್‌ಎಮ್‌ ಡೆ ಲಾ ಇಗ್ಲೆಸಿಯಾ, JEL ಗಯೊ, "ಡುಯಿಂಗ್‍ ಬ್ಯುಸಿನೆಸ್‌ ಬೈ ಸೆಲ್ಲಿಂಗ್‌ ಫ್ರೀ ಸರ್ವಿಸಸ್‍ " ವೆಬ್‌ ೨.೦: The ವ್ಯವಹಾರ ಮಾದರಿ, ೨೦೦೮. ಸ್ಪ್ರಿಂಗರ್.
  6. ದಿ ಬ್ಯುಸಿನೆಸ್ ಮಾಡಲ್ ಒಂಟಾಲಜಿ -ಎ ಪ್ರೊಪೊಸಿಷನ್ ಇನ್ ಎ ಡಿಸೈನ್ ಸೈನ್ಸ್ ಅಪ್ರೋಚ್‌ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.
  7. ಹಮ್ಮೆಲ್, ಇ, ಜಿ.ಸ್ಲೊವಿನ್‌ಸ್ಕಿ, ಎಸ್‌.ಮ್ಯಾಥ್ಯೂಸ್, ಮತ್ತು ಇ.ಗಿಲ್ಮೊಂಟ್‌ ೨೦೧೦. ಜಂಟಿ ಸಂಶೋಧನೆಗಾಗಿ ವ್ಯವಹಾರ ಮಾದರಿ. ರಿಸರ್ಚ್‌ ಟೆಕ್ನಾಲಜಿ ಮ್ಯಾನೆಜ್‌ಮೆಂಟ್‌ ೫೩ (೬) ೫೧-೫೪.
  8. ಚೆನ್‌ ಟಿ.ಎಫ್‌. ೨೦೦೯. ವ್ಯವಹಾರ ಮಾದರಿ ೨.೦ರ ಒಂದು ವೇದಿಕೆಯನ್ನು ಒಂದು ನೈಜ ವ್ಯವಹಾರ ಮೌಲ್ಯವನ್ನು ವೆಬ್‌ ೨.೦ ಮೂಲಕ ಮಾಹಿತಿ ಸೇವಾ ಕೈಗಾರಿಕೆಗಾಗಿ ನಿರ್ಮಿಸುವುದು. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಎಲೆಕ್ಟ್ರಾನಿಕ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ ೭ (೩) ೧೬೮-೧೮೦.
  9. ಡು ಸಮ್ ಬ್ಯುಸಿನೆಸ್ ಮೊಡಲ್ಸ್ ಪರ್ಪಾಮ್ ಬೆಟರ್‌ ದ್ಯಾನ್‌ ಅದರ್ಸ್‌?, ಮೆಲೊನ್ , ಮೇ 2006