ಆಂಟನ್ ಲೂವೆನ್ ಹೊಕ್
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಅಂತರವಿಕಿ ಕೊಂಡಿಗಳು ಬೇಕು. |
ಪೀಠಿಕೆ
[ಬದಲಾಯಿಸಿ]೧೬ನೇ ಶತಮಾನದಲ್ಲಿ ಅಮೇರಿಕ ದೇಶ ನಮಗೆ ಗೋಚರಿಸುವಂತೆ ಮಾಡಿದವರು ಹಾಲೆಂಡಿನ ಲೂವೆನ್ ಹೊಕ್(೧೬೩೨-೧೭೨). ಡೆಲ್ಪಫ್ಟ್ ಎಂಬ ಚಿಕ್ಕ ಪಟ್ಟಣದಲ್ಲಿನ ಮದ್ಯಸಾರ ಗಳ ತಯಾರಕನ ಮಗನಾಗಿ ಆಂಟನ್ ಲೂವೆನ್ ಹೊಕ್ ಜನಿಸಿದ (೧೬೩೨). ತಂದೆ, ಎಳೆಯ ವಯಸ್ಸಿನಲ್ಲಿಯೇ ತೀರಿಕೊಂಡರು. ಆಂಟನ್‌ಗೆ ಸರಿಯಾದ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲ ಅವನ ತಾಯಿಗೆ. ಆದರೆ ಆಂಟನ್‌ಗೆ ವಿದ್ಯೆ ಹತ್ತಲಿಲ್ಲ. ಹದಿನಾರನೆ ವಯಸ್ಸಿಗೇ ಶಾಲೆ ಬಿಟ್ಟು ದಿನಸಿ ಅಂಗಡಿಯಲ್ಲಿ ಸೇರಿಕೊಂಡ.
ಸಂಶೋಧನೆ ಬುನಾದಿ
[ಬದಲಾಯಿಸಿ]ಸಾಂಪ್ರದಾಯಿಕ ರೀತಿಯ ವಿದ್ಯೆ ಕಲಿಯುವುದರಲ್ಲಿ ಹೋಕ್ ಹಿಂದೆ ಬಿದ್ದಿದ್ದ. ಆದರೆ ಸುತ್ತ ಜರುಗುವ ವಿದ್ಯಮಾನಗಳ ಕಡೆ ಕಣ್ಣು ಮುಚ್ಚಿಕೊಂಡಿರಲಿಲ್ಲ. ದಿನಸಿ ಅಂಗಡಿಯ ಸನಿಹದಲ್ಲೇ ಕನ್ನಡಕಗಳನ್ನು ತಯಾರಿಸುವ ಅಂಗಡಿಯೊಂದಿತ್ತು. ಅಲ್ಲಿ ಗಾಜಿನ ಪಟ್ಟಿಗಳನ್ನು ವಿವಿಧ ಆಕೃತಿಗಳಲ್ಲಿ ಅರೆದು ಕನ್ನಡಕ ಗಳಲ್ಲಿ ಅಳವಡಿಸುತ್ತಿದ್ದರು. ಅವುಗಳ ಮೂಲಕ ವೀಕ್ಷಿಸಿದಾಗ ಕಿರಿದಾದ ವಸ್ತು ಅಥವಾ ಅಕ್ಷರಗಳು ಬಹಳಷ್ಟು ದೊಡ್ಡದಾಗಿ ಕಾಣಿಸುವುದನ್ನು ಅಲ್ಲಿಯ ಕೆಲಸಗಾರರು ಅವನಿಗೆ ತೋರಿಸಿದರು. ಕುತೂಹಲ ಭರಿತವಾದ ಲೂವೆನ್ ಹೊಕ್ ಕೆಲವು ಗಾಜಿನ ಪಟ್ಟಿಗಳನ್ನು ತಂದಿಟ್ಟುಕೊಂಡು ಅರೆಯುವ ಹವ್ಯಾಸ ಮಾಡಿಕೊಂಡ. ಹಾಗೆ ತಯಾರಿಸಿದ ಗಾಜಿನ ಬಿಲ್ಲೆಗಳ ಮೂಲಕ ತಲೆಕೂದಲು, ಚರ್ಮ,ಎಲೆ ಇತ್ಯಾದಿಗಳನ್ನು ವೀಕ್ಷಿಸಿದಾಗ ಅವು ನೂರಾರು ಪಟ್ಟು ಹಿರಿದಾಗಿ ಕಾಣಿಸಿದವು; ಆತನಕ ಬರಿಗಣ್ಣಿಗೆ ಗೋಚರವಾಗಿದ್ದ ವಿವರಗಳು ಹೆಚ್ಚು ಸ್ಫುಟವಾಗಿ ಕಾಣಿಸುತ್ತಿದ್ದುದು ಅವನ ಕುತೂಹಲವನ್ನು ಮತ್ತಷ್ಟು ಕೆರಳಿಸಿತು. ಲೂವೆನ್ ಹೊಕ್ ಇನ್ನೂ ಮುಂದುವರೆದು ಲೋಹದ ಕೊಳವೆಗಳ ತುದಿಗಳಲ್ಲಿ ಈ ತರಹೆಯ ಗಾಜಿನ ಬಿಲ್ಲೆಗಳನ್ನು ಅಳವಡಿಸಿ ವಸ್ತುಗಳನ್ನು ನೋಡಿದಾಗ ಇನ್ನೂ ಹೆಚ್ಚು ಸ್ಫುಟವಾಗಿ ಕಾಣಿಸಿದವು; ಲೂವೆನ್ ಹೊಕ್ ತನಗರಿವಿಲ್ಲದೆಯೇ ಈಗ ಸರ್ವ ವ್ಯಾಪಿಯಾಗಿರುವ ಸೂಕ್ಷ್ಮದರ್ಶಕ ಯಂತ್ರಕ್ಕೆ ಬುನಾದಿ ಹಾಕಿದ್ದರು. ಒಂದು ಸಾರಿ ಅಂತಹ ಕೊಳವೆಯೊಂದರ ಮೂಲಕ ಅಂಗಳದ ತೊಟ್ಟಿಯಲ್ಲಿ ಶೇಖರವಾಗಿದ್ದ ಒಂದು ಹನಿ ನೀರನ್ನು ಇನ್ನೊಂದು ಸಾದಾ ಗಾಜಿನ ಪಟ್ಟಿಯ ಮೇಲಿಟ್ಟು ಪರೀಕ್ಷಿಸಿದರು. ಹೊಸ ಜಗತ್ತಿನ ವಿರಾಟ್ ದರ್ಶನ ಅಂದು ಅವರ ಎದುದಂತಾಯಿತು! ಅದೊಂದು ತೊಟ್ಟಿ ನೀರಿನಲ್ಲಿ ಸೂಕ್ಷ್ಮ-ಕಣಗಳು, ಅವುಗಳ ಓಡಾಟವೇನು,ಚಟುವಟಿಕೆಗಳೇನು ಕಣ್ಣೇದುರಿಗೆ ವೃದ್ದಿಯಾಗುವುದೇನು, ಅವೇನೋ ಜೀವಿಗಳೋ? “ ಅನಿಷ್ಟ ಪಶುಗಳೊ” ಎಂದು ಅಚ್ಚರಿಪಟ್ಟರು. ಅಂಗಳದಲ್ಲಿ ಆಡುತ್ತಿದ್ದ ಮಗಳು ಮೇರಿಯನ್ನು ಕರೆದು ತಾವು ಕಂಡು ಹಿಡಿದಿದ್ದ ಹೊಸ ಜಗತ್ತನ್ನು ಅವಳಿಗೂ ತೋರಿಸಿ ಖುಷಿಪಟ್ಟರು. ಆದರೆ ಅವು ನೀರಿನಲ್ಲಿ ಹೇಗೆ ಸೇರಿಕೊಂಡಿರಬಹುದು ಅವರಿಗೆ ಬಿಡಿಸಲಾರದ ಒಗಟಾಯಿತು. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಸುರಿಯುತ್ತಿದ್ದಾಗ ಸ್ವಲ್ಪ ನೀರನ್ನು ಶುಚಿಯಾದ ಪಾತ್ರೇಯಲ್ಲಿ ಸಂಗ್ರಹಿಸಿದರು. ಅದರಿಂದ ಒಂದು ತೊಟ್ಟು ನೀರನ್ನು ಮೊದಲಿನಂತೆ ತನ್ನ ಸೂಕ್ಷ್ಮದಶದಲ್ಲಿ ಪರಿಕ್ಷಿಸಿದರು. ಅಲ್ಲಿ ಅನಿಷ್ಟ ಪಶುಗಳು ನಾಪತ್ತೆಯಾಗಿದ್ದವು. ಈ ವ್ಯತ್ಯಾಸದ ಕಾರಣ ತಿಳಿಯದೆ ಚಿಂತಾಕ್ರಾಂತರಾದಂತೆ ಕಾಣುತ್ತಿದ್ದರು. ಅನ್ನಾಹಾರ, ನಿದ್ರೆಗಳನ್ನು ಬಿಟ್ಟು ಲೊವೆಲ್ ಹೊಕ್ ಒಂದಲ್ಲ ಒಂದು ವಸ್ತುವನ್ನು ಸೂಕ್ಷ್ಮದರ್ಶಕದಿಂದ ನೋಡುವುದರಲ್ಲಿ ಮಗ್ನರಾಗಿರುತ್ತಿದ್ದರು, ನೆರೆಹೊರೆಯವರು ಮೊದಲೇ ಅವರನ್ನು ಮಂದ ಬುದ್ಧಿಯವರೆಂದು ಪರಿಗಣಿಸಿದ್ದರು; ಈಗ ಸಂಪೂರ್ಣ ಹುಚ್ಚರಾಗಿದ್ದಾರೆಂದುಕೊಂಡು ಪಿಸುಗುಟ್ಟಿ ಸುಮ್ಮನಾಗುತ್ತಿದ್ದರು.
ಸಂಶೋಧನೆಯ ಯಶಸ್ಸು
[ಬದಲಾಯಿಸಿ]ಡಾ.ಗ್ರಾಫ್ ಎಂಬ ಬುದ್ಧಿಜೀವಿ (ಲಂಡನ್ನಿನ ಪ್ರತಿಷ್ಠಿತ ವಿದ್ವಾಂಸರ ಕೂಟ- ರಾಯಲ್ ಸೊಸೈಟಿಯ ಪ್ರತಿನಿಧಿ), ಲೂವೆನ್ ಹೊಕ್ ರ ಹುಚ್ಚುತನದ ವೀಕ್ಷಣೆ ನೋಡಲು ಡಾ. ಗ್ರಾಫ್ ಅವರ ಮನೆಗೆ ಭೇಟಿ ಕೊಟ್ಟರು.ಲೂವೆನ್ ಹೊಕ್ ಒಂದು ಹನಿ ನೀರಿನಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳ ಗಳಿರುವುದನ್ನು ಅವರಿಗೂ ಪ್ರದರ್ಶಿಸಿದರು. ಡಾ.ಗ್ರಾಫ್ ಅಂದು ನೋಡಿದ ದೃಶ್ಯ ಅವರ ಬುದ್ಧಿಗೂ ನಿಲೂಕಲಾರದ ಸಂಗತಿಯೆನಿಸಿತು. ಲೂವೆಲ್ ಹೊಕ್ ಅವರೆಲ್ಲಾ ತಿಳಿದುಕೊಂಡ ಹಾಗೆ ಮಂದಬುದ್ಧಿ ವರೆಲ್ಲ ಎಂಬುದು ಅವರಿಗೆ ಅರಿವಾಯಿತು.ಈ ಸಂಶೋಧನೆಯ ಫಲಿತಾಂಶಗಳನ್ನು ರಾಯಲ್ ಸೊಸೈಟಿಯವರ ಗಮನಕ್ಕೆ ತರುವುದು ಸೂಕ್ತವೆಂಬುದು ಡಾ. ಗ್ರಾಫ್‌ನ ಅಭಿಪ್ರಾಯಪಟ್ಟರು. ಇದರ ಬಗ್ಗೆ ಒಂದು ವರದಿಯನ್ನು ತಯಾರು ಮಾಡಿ, ಲಂಡನ್ ಗೆ ಕಳುಹಿಸಲು ಲೂವರ್ ಹೊಕ್‌ರನ್ನು ಒಪ್ಪಸಲು ಪ್ರಯತ್ನ ಪಟ್ಟರು. ಅಷ್ಟೊಂದು ಅನುಭವಸ್ಥರಲ್ಲದ ಲೂವೆನ್ ಹೊಕ್ ಮೊದಲ ಅಂಜಿದರೂ, ಮುಂದೆ ವರದಿಯನ್ನು ತನ್ನದೇ ಆದ ವರಟು ಭಾಷೆಯಲ್ಲಿ ತಯಾರಿಸಿದರು.ಲೂವೆಲ್ ಹೊಕ್ ರ ವರದಿಯನ್ನು ಪರಿಶೀಲಿಸಿದ ರಾಯಲ್ ಸೊಸೈಟಿಯವರು ಹಾಲೆಂಡಿನ ಯ:ಕ್ಷಿತ್ ದಿನಸಿ ಅಂಗಡಿ ಸಹಾಯಕ ಬರಹವನ್ನು ಮೊದಲು ನಂಬದಾದರು. ಒಂದು ತೊಟ್ಟು ನೀರಿನಲ್ಲಿ ಲಕ್ಷಾಂತರ ಜೀವಿಗಳ ಇರುವುದೆಂದರೆ ಏನು? ಹಳ್ಳಿಯ ಒಬ್ಬ ವರದಿ ಮಾಡಿದ ಈ ಸಂಶೋಧನೆ ನಂಬಲರ್ಹವೇ ಎಂದು ತರ್ಕಿಸಿದರು. ಆದರೂ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಅವರು ತಯಾರಿಸಿದ ಒಂದು ಸೂಕ್ಷ್ಮದರ್ಶಕವನ್ನು ತಮಗೆ ಕಳುಹಿಸಿಕೊಡಲು ಲೂವೆನ್ ಹೊಕ್ ರನ್ನು ಕೇಳಿಕೊಂಡರು.ತನ್ನಲ್ಲಿ ಹಲವಾರು ಸೂಕ್ಷ್ಮ ದರ್ಶಕಗಳಿದ್ದರೂ ಸ್ವಭಾವದ ಲೊವೆನ್ ಹೊಕ್ ಅದೇಕೋ ಕಳುಹಿಸಲು ನಿರಾಕರಿಸಿದರು. ಅನುಮಾನವಿದ್ದರೆ, ಅವರೇ ಯಾರಾದರೂ ನಮ್ಮ ಊರಿಗೆ ಬಂದು ನೋಡಬಹುದೆಂದು ಪಟ್ಟುಹಿಡಿದರು. ಅವಕ್ಕಾದ ರಾಯಲ್ ಸೊಸೈಟಿಯವರು ತಂತ್ರಜ್ಞರ ನೆರವಿನಿಂದ ಸೂಕ್ಷ್ಮದರ್ಶಕವನ್ನು ತಯಾರಿಸಿಕೊಂಡು ಲೂವೆನ್ ಹೊಕ್ ವಿವರಿಸಿದಂತೆ ಒಂದು ತೊಟ್ಟು ನೀರನ್ನೂ ಅದರ ಮೂಲಕ ವೀಕ್ಷಿಸಿದರು.ಹಳಸಿದ ಬೆಣ್ಣೆಯಲ್ಲಿ ಆಗುತ್ತಿದ್ದ ಚಿಕ್ಕ ಕ್ರಿಮಿಯೇ ದೈವ ಸೃಷ್ಟಿಯ ಅತಿ ಚಿಕ್ಕ ಪ್ರಾಣಿಗಳೆಂದು ಆತನಕ ನಂಬಿಕೊಂಡಿದ್ದ ಆ ಪಂಡಿತೋತ್ತಮರು ಚಕಿತಗೊಳ್ಳುವ ದೃಶ್ಯ ಅಂದು ಅವರಿಗೆ ಎದುರಾಯಿತು. ದಿನಸಿ ಅಂಗಡಿಯ ಸಹಾಯಕ ತಮಗಿಂತಲೂ ಬುದ್ಧಿವಂತ ನಿರಬೇಕೆಂಬ ಸಂಶಯ ಅವರದಾಯಿತು. ಅವರ ಸಂಶೋಧನಾ ಸಾಮರ್ಥ್ಯಕ್ಕೆ ತಲೆದೂಗಿ ಸೊಸೈಟಿಯ ಗೌರವ ಸದಸ್ಯತ್ವದ ಸನ್ನದನ್ನು ಮರುದಿನವೇ ಆಂಟನ್ ಲೂವೆನ್ ಹೊಕ್ ಗೆ ಕಳುಹಿಸಿಕೊಟ್ಟರು.ಆಕಸ್ಮಿಕವಾಗಿ ದೊರೆತ ಗೌರವ ಲೂವೆನ್ ಹೊಕ್ರನ್ನು ಸಂತೋಷದ ಕಡಲಿನಲ್ಲಿ ಈಜಾಡುಂತೆ ಮಾಡಿತು. ಊರಿನವರು ಸಹ ಹೆಮ್ಮೆಯಿಂದ ಬೀಗಿದರು. ಮುಂದೆ ತನ್ನ ಜೀವನ ಮಾನವನ್ನೆಲ್ಲ ಲೂವೆನ್ ಹೊಕ್. ಹಲವು ತೆರನ ಗಿಡ ,ಮರ, ಬಳ್ಳಿ ,ಎಲೆ, ತೊಗಟೆ, ಪ್ರಾಣಿ-ಪಕ್ಷಿ ಮೀನುಗಳು ಅವಯವಗಳ ತುಣುಕುಗಳನ್ನು ಪರೀಕ್ಷಿಸಿ ಅಲ್ಲಿಯೂ ಅನಿಷ್ಟ ಪಶು ಗಳಿರುವುದನ್ನು ಗುರುತಿಸಿದರು. ಆದರೆ ಅಂತಹ ಸೂಕ್ಷ್ಮಜೀವಿಗಳ ಸೋಂಕುರೋಗಗಳು ಕಾರಣವಾಗಬಹುದೆಂದು ಅವರು ಊಹೆಗೆ ನಿಲುಕಲಾರದಾಯಿತು. ಅದನ್ನು ದೃಢಪಡಿಸಲು ಮುಂದೆ ಎರಡು ಶತಮಾನಗಳೇ ಉರುಳಿದವು.ಅನಾದಿಯಿಂದಲೂ ಮನುಕುಲಕ್ಕೆ ಕಂಟಕಕಾರಿಗಳಾದ ಅಗೋಚರ ಶತ್ರುಗಳ ಪಾಳಯಕ್ಕೆ ಯಶಸ್ವಿ ಲಗ್ಗೆ ಹಾಕಲು ಸಾಧ್ಯವಾಯಿತು.
ನಿಧನ
[ಬದಲಾಯಿಸಿ]೯೧ ವರ್ಷಗಳ ತುಂಬು ಜೀವನ ನಡೆಸಿದ ಆಂಟನ್ ಲೂವೆನ್ ಹೊಕ್ ೧೭೨೩ ರಲ್ಲಿ ನಿಧನರಾದರು. ಅವರ ಸರಳ ಸಂಶೋಧನೆ ಈ ಜಗತ್ತಿನ ಅಳಿವು ಉಳಿವುಗಳ ಪ್ರತೀಕಾರವಾಗಿ ಉಳಿದುಕೊಂಡಿದೆ.
ಉಲ್ಲೇಖಗಳು
[ಬದಲಾಯಿಸಿ]- ಡಾ.ಎಚ್.ಡಿ ಚಂದ್ರಪ್ಪ ಗೌಡ, ವಿಶ್ವ ವಿಖ್ಯಾತ ವೈದ್ಯ ವಿಜ್ಞಾನಿಗಳು, ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ೧೯೯೭.
- ಎನ್ ಶಂಕರಪ್ಪ ತೋರಣಗಲ್ಲು, ವಿಜ್ಞಾನಿಗಳ(ಜೀವನ ಸಾಧನೆ), ಮೆ. ಕಾವ್ಯಕಲಾ ಪ್ರಕಾಶನ, ಬೆಂಗಳೂರು, ೨೦೦೮.