Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ನ್ಯಾಯಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಯಶಾಸ್ತ್ರದ ತತ್ವಜ್ಞಾನಿಗಳು "ಕಾನೂನು/ನ್ಯಾಯವೆಂದರೇನು?"ಮತ್ತು "ಅದು ಏನಾಗಿರಬೇಕು/ಹೇಗಿರಬೇಕು?"ಎಂದು ಕೇಳುತ್ತಾರೆ

ನ್ಯಾಯಶಾಸ್ತ್ರ ಎಂಬುದು ಕಾನೂನಿನ ತತ್ವ ಹಾಗೂ ಸಿದ್ಧಾಂತವಾಗಿರುತ್ತದೆ. ನ್ಯಾಯಶಾಸ್ತ್ರದ ಪಂಡಿತರು ಅಥವಾ ಕಾನೂನು ಜಿಜ್ಞಾಸುಗಳು, ಕಾನೂನಿನ ಲಕ್ಷಣಗಳು, ಕಾನೂನು ತರ್ಕಗಳು, ಕಾನೂನು ವ್ಯವಸ್ಥೆಗಳು ಮತ್ತು ಕಾನೂನು ಸಂಸ್ಥೆಗಳ ಬಗ್ಗೆ ಆಳವಾದ ಅರ್ಥೈಸುವಿಕೆಯು ಸಾಧ್ಯವೆಂದು ಭಾವಿಸುತ್ತಾರೆ. ಆಧುನಿಕ ನ್ಯಾಯಶಾಸ್ತ್ರವು ೧೮ನೆಯ ಶತಮಾನದಲ್ಲಿ ಆರಂಭಗೊಂಡಿದ್ದು, ಪ್ರಕೃತಿ ನಿಯಮ/ನ್ಯಾಯ, ನಾಗರಿಕ ಕಾನೂನು ಹಾಗೂ ರಾಷ್ಟ್ರಗಳ ಕಾನೂನುಗಳ ಪ್ರಾಥಮಿಕ ತತ್ವಗಳ ಮೇಲೆ ಕೇಂದ್ರೀಕೃತವಾಗಿತ್ತು.[] ಪ್ರಧಾನ ನ್ಯಾಯಶಾಸ್ತ್ರವನ್ನು ಪರಿಣಿತರು ಉತ್ತರಿಸಲೆತ್ನಿಸುವ ಪ್ರಶ್ನೆಗಳ ವಿಧಗಳು ಮತ್ತು ನ್ಯಾಯಶಾಸ್ತ್ರದ ತತ್ವಸಿದ್ಧಾಂತಗಳು ಅಥವಾ ಆ ಪ್ರಶ್ನೆಗಳನ್ನು ಹೇಗೆ ಅತ್ಯುತ್ತಮವಾಗಿ ಉತ್ತರಿಸಬಹುದು ಎಂಬುದರ ಮಾರ್ಗಸಿದ್ಧಾಂತಗಳು ಇವೆರಡರ ಮೇಲೂ ಆಧಾರಿತವಾಗಿ ವಿಂಗಡಿಸಬಹುದಾಗಿದೆ. ಸಂಬಂಧಪಟ್ಟ ಸಮಕಾಲೀನ ನ್ಯಾಯಸಿದ್ಧಾಂತವು ಸ್ಥೂಲವಾಗಿ ಎರಡು ಗುಂಪುಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ:[]

೧) ಕಾನೂನು ಹಾಗೂ ಕಾನೂನು ವ್ಯವಸ್ಥೆಗಳ ಆಂತರಿಕ ಸಮಸ್ಯೆಗಳು
೨) ತಾನಿರುವ ರಾಜಕೀಯ ಹಾಗೂ ಸಾಮಾಜಿಕ ವ್ಯಾಪಕ ಪರಿಸ್ಥಿತಿಗೆ ಸಂಬಂಧಪಟ್ಟ ಹಾಗೆ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯ ಕಾನೂನು ಸಮಸ್ಯೆಗಳು.

ಈ ಮೇಲ್ಕಂಡ ವಿಧಗಳ ಪ್ರಶ್ನೆಗಳಿಗೆ ಪ್ರಧಾನ ನ್ಯಾಯಶಾಸ್ತ್ರದ ನಾಲ್ಕು ಪ್ರಾಥಮಿಕ ವಿಚಾರಪಂಥಗಳಲ್ಲಿ ಉತ್ತರ ಸಿಗುತ್ತವೆ:[]

  • ನೈಸರ್ಗಿಕ ನಿಯಮ/ನ್ಯಾಯ ವೆಂದರೆ ಶಾಸನಾತ್ಮಕ ಪ್ರಭುತ್ವಗಳ ಅಧಿಕಾರಗಳಿಗೆ ತರ್ಕಬದ್ಧ ವಾಸ್ತವಿಕ ಮಿತಿಗಳಿರುತ್ತವೆ ಎಂಬ ಕಲ್ಪನೆಯಾಗಿದೆ. ಈ ಮಾದರಿಯ ಕಾನೂನುಗಳಿಗೆ ಮಾನವ ತರ್ಕಗಳ ಮೂಲಕ ಆಧಾರವನ್ನು ಕಂಡುಕೊಳ್ಳಬಹುದಾಗಿದ್ದು, ಇಂಇಂತಹಕಾನೂನು/ನಿಯಮಗಳಿಂದಲೇ ಮಾನವ ರೂಪಿತ ಕಾನೂನುಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಪಡೆದುಕೊಳ್ಳುವುದು.[]
  • ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಪದ್ಧತಿ ಯು ನೈಸರ್ಗಿಕ ನಿಯಮಕ್ಕೆ ಪ್ರತಿಯಾಗಿ ಕಾನೂನು ಮತ್ತು ನೈತಿಕತೆಗಳ ನಡುವೆ ಯಾವುದೇ ಸಂಬಂಧವಿರಬೇಕೆಂದಿಲ್ಲ, ಹಾಗಾಗಿ ಕಾನೂನಿಗೆ ಬಲವು ಕೆಲ ಮೂಲಭೂತ ಸಾಮಾಜಿಕ ವಸ್ತುಸ್ಥಿತಿಗಳ ಮೂಲಕ ಸಿಗುತ್ತದೆ ಎನ್ನುತ್ತದಾದರೂ ಪ್ರತ್ಯಕ್ಷೈಕ ಪ್ರಮಾಣವಾದಿಗಳಲ್ಲಿ ಆ ವಸ್ತುಸ್ಥಿತಿಗಳು ಯಾವುವು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ.[]
  • ಯಥಾರ್ಥ ಕಾನೂನು ಪದ್ಧತಿ ಯು ವಾಸ್ತವ ವಿಶ್ವದ ಕಾನೂನು ಆಚರಣೆಯು ಕಾನೂನು ಏನೆಂಬುದನ್ನು ನಿರ್ಧರಿಸುತ್ತದೆ ಎಂದು ಪ್ರತಿಪಾದಿಸುವ ನ್ಯಾಯಶಾಸ್ತ್ರದ ಮೂರನೇ ಸಿದ್ದಾಂತವಾಗಿದ್ದು; ಶಾಸನಕಾರರು, ನ್ಯಾಯಾಧೀಶರು ಹಾಗೂ ಕಾರ್ಯನಿರ್ವಾಹಕರು ತನ್ನನ್ನು ಹೇಗೆ ಬಳಸುತ್ತಾರೋ ಅದರ ಮೇಲೆ ತನ್ನ ಅಧಿಕಾರ ವ್ಯಾಪ್ತಿಯನ್ನು ಈ ತರಹದ ಕಾನೂನು ಹೊಂದಿರುತ್ತದೆ.
  • ಕ್ಲಿಷ್ಟಕರ ಕಾನೂನು ಅಧ್ಯಯನವೆಂಬುದು ೧೯೭೦ರ ದಶಕದಿಂದ ಅಭಿವೃದ್ಧಿಯಾದ ನ್ಯಾಯಶಾಸ್ತ್ರದ ನವೀನ ಸಿದ್ಧಾಂತವಾಗಿದ್ದು ಅಗ್ರ ಸಾಮಾಜಿಕ ಗುಂಪಿನ ನೀತಿನಿರೂಪಣಾ ಗುರಿಗಳ ವ್ಯಾಖ್ಯಾನವೆಂದು ಭಾವಿಸಬಹುದಾದ ಪ್ರಾಥಮಿಕವಾಗಿ ನಿಷೇಧಾರ್ಥಕ ನಿಲುವಾಗಿರುತ್ತದಲ್ಲದೇ ಬಹುಮಟ್ಟಿಗೆ ಈ ಕಾನೂನುಗಳು ವಿರೋಧಾತ್ಮಕವಾಗಿರುತ್ತವೆ.[]

ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಪ್ರಧಾನ ನ್ಯಾಯಶಾಸ್ತ್ರದ ನೈಸರ್ಗಿಕ ನಿಯಮ ಸಿದ್ಧಾಂತಗಳು ಹಾಗೂ ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಸಿದ್ಧಾಂತಗಳ ನಡುವಿನ ಪಥದ ಸಿದ್ಧಾಂತವೆನ್ನಬಹುದಾದ ರಾಚನಿಕವಾದಿ ನ್ಯಾಯಶಾಸ್ತ್ರ ಸಿದ್ಧಾಂತವನ್ನು ಪ್ರತಿಪಾದಿಸಿದ ಸಮಕಾಲೀನ ಕಾನೂನು ಜಿಜ್ಞಾಸು/ಪಂಡಿತ ರೊನಾಲ್ಡ್‌ ಡ್ವಾರ್ಕಿನ್‌ರ ಕೃತಿಗಳು.[]

ಈ ಆಂಗ್ಲ ಪದವು ಲ್ಯಾಟಿನ್‌ ಪದ ಜ್ಯೂರಿಸ್‌ಪ್ರುಡೆನ್ಷಿಯಾ ದ ಮೇಲೆ ಆಧಾರಿತವಾಗಿದೆ : ಜ್ಯೂರಿಸ್‌ ಎಂಬುದು "ಕಾನೂನು/ನಿಯಮ" ಎಂಬ ಅರ್ಥದ ಜಸ್‌/ಜುಸ್‌‌ಸ್ವತಂತ್ರ ಪಂಚಮಿ ವಿಭಕ್ತಿ ರೂಪವಾಗಿದ್ದರೆ, ಪ್ರುಡೆನ್ಷಿಯಾ ಎಂಬುದರ ಅರ್ಥ "ಜ್ಞಾನ". ಪ್ರೂಡೆನ್ಸ್/‌ವಿವೇಕ ಎಂಬ ಪದವು ಈಗ ಬಳಕೆಯಲ್ಲಿಲ್ಲದ "ವಸ್ತುವೊಂದರ ಬಗ್ಗೆ ಜ್ಞಾನ ಅಥವಾ ಪರಿಣತಿ" ಎಂಬರ್ಥವನ್ನು ಹೊಂದಿದ್ದ ಸಮಯವಾದ ೧೬೨೮[]ರಲ್ಲಿ ಈ ಪದವನ್ನು ಪ್ರಥಮ ಬಾರಿ ದೃಢೀಕೃತಗೊಳಿಸಲಾಯಿತು. ಈ ಪದವು ಇದಕ್ಕೂ ಮುನ್ನವೇ ದೃಢೀಕೃತಗೊಂಡಿದ್ದ ಫ್ರೆಂಚ್‌ ಪದ ನ್ಯಾಯಶಾಸ್ತ್ರ/ಜ್ಯೂರಿಸ್‌ಪ್ರುಡೆನ್ಸ್‌‌ ದ ಮೂಲಕ ಬಂದಿರಬಹುದಾಗಿದೆ.

ನ್ಯಾಯಶಾಸ್ತ್ರದ ಇತಿಹಾಸ

[ಬದಲಾಯಿಸಿ]
ಓಲ್ಡ್‌ ಬೈಲಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ಗಳ ಪ್ರಧಾನ ಅಪರಾಧ ನ್ಯಾಯಾಲಯ

ನ್ಯಾಯಶಾಸ್ತ್ರವು ಪ್ರಾಚೀನ ರೋಮ್‌ ಅವಧಿಯಲ್ಲೇ ಈ ಅರ್ಥವನ್ನು ಹೊಂದಿತ್ತು, ಆದರೆ ಅದರ ಮೂಲ ಅಧ್ಯಯನ ಶಾಖೆಯು (ಪೆರಿಟಿ ) ಜಸ್‌ ಆಫ್‌ ಮಾಸ್‌ ಮೈಯೋರಮ್‌ (ಸಾಂಪ್ರದಾಯಿಕ ಕಾನೂನು) ಎಂಬ ವಾಚ್ಯರೂಪದಲ್ಲಿ "ತಂದೆಯಿಂದ ಮಗನಿಗೆ" ಸಂವಹನಗೊಂಡ ಮೌಖಿಕ ಕಾನೂನು ಹಾಗೂ ಕಟ್ಟಳೆಗಳ ಸಂಸ್ಥೆಯಾಗಿತ್ತು. ಪ್ರೀಟರ್‌/ಮ್ಯಾಜಿಸ್ಟ್ರೇಟರು/ನ್ಯಾಯಾಧಿಪತಿಗಳು ವಿಲಕ್ಷಣ ಮೊಕದ್ದಮೆಗಳನ್ನು ವಾರ್ಷಿಕವಾಗಿ ಕಾನೂನುಕ್ರಮ ಜರುಗಿಸಬಲ್ಲ ಅಪರಾಧಗಳನ್ನು ಘೋಷಿಸಲಾಗುವ ಆದೇಶ/ರಾಜಲೇಖದ ಮೂಲಕ ಅಥವಾ ವಿಶೇಷ ಸಂದರ್ಭಗಳಲ್ಲಿ, ಆದೇಶ/ರಾಜಲೇಖಕ್ಕೆ ಮಾಡಿದ ತಿದ್ದುಪಡಿ/ಸೇರ್ಪಡೆಗಳ ಮೂಲಕ ಇತ್ಯರ್ಥಪಡಿಸಬಹುದೇ ಎಂದು ತೀರ್ಮಾನಿಸಿ ಸ್ಥಾಪಿಸಿದ ಕಾರ್ಯರೂಪಕ್ಕೆ ತರಬಹುದಾದ ಕಾನೂನು ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಆಗ ಮೊಕದ್ದಮೆಗಳ ವಸ್ತುಸ್ಥಿತಿಗಳ ಮೇಲೆ ಆಧಾರಿತವಾಗಿ ಪರಿಹಾರವೊಂದನ್ನು ಅಯುಡೆಕ್ಸ್‌/ನ್ಯಾಯಾಧೀಶರು ತೀರ್ಮಾನಿಸುತ್ತಿದ್ದರು.

ಅವರ ತೀರ್ಪುಗಳು ಸಾಂಪ್ರದಾಯಿಕ ಕಟ್ಟಳೆಗಳ ಸರಳ ಅರ್ಥೈಸುವಿಕೆಗಳೇ ಆಗಿರುತ್ತಿದ್ದರೂ, ವಿಧಿಯುಕ್ತವಾಗಿ ಪ್ರತಿ ಮೊಕದ್ದಮೆಗೆ ಸಾಂಪ್ರದಾಯಿಕವಾಗಿ ಕಾನೂನು ಕಟ್ಟಳೆಯ ಸೂಕ್ತತೆಯನ್ನು ನಿರ್ಧರಿಸುವ ಚಟುವಟಿಕೆಯೇ ಆಗಿದ್ದರೂ, ಅಲ್ಪಕಾಲದಲ್ಲೇ ಸುಸಂಗತವಾಗಿ ನವೀನ ಸಾಮಾಜಿಕ ಸಂದರ್ಭಗಳಿಗೆ ಹೊಂದುವಂತೆ ಅಳವಡಿಕೆಯಾಗುವಂತೆ ಹೆಚ್ಚು ಸಮಂಜಸವಾದ ಅರ್ಥೈಸುವಿಕೆಗಳಿಗೆ ಒಳಪಟ್ಟಿತು. ಆಗ ಕಾನೂನನ್ನು ಸಾಂಪ್ರದಾಯಿಕ ಅನುಸಂಧಾನದಲ್ಲಿಯೇ ಉಳಿದುಕೊಂಡಿದ್ದು ನವೀನ ವಿಕಸನಾತ್ಮಕ ಸ್ಥಾಪಿತ ಪದ್ಧತಿ ಗಳ (ನ್ಯಾಯಿಕ ಅಂಶಗಳು) ಮೂಲಕ ಕಾರ್ಯರೂಪಕ್ಕಿಳಿಸಲಾಯಿತು. ಪ್ರೀಟರ್‌/ಮ್ಯಾಜಿಸ್ಟ್ರೇಟರು/ನ್ಯಾಯಾಧಿಪತಿಗಳ ಬದಲಿಗೆ ೩ನೇ ಶತಮಾನ BCಯಲ್ಲಿ ಲೌಕಿಕ ವ್ಯಕ್ತಿಗಳಿಂದ ಕೂಡಿದ ದೂರದರ್ಶಿಗಳ ಮಂಡಳಿಯನ್ನು ನೇಮಿಸಲಾಯಿತು. ಈ ಮಂಡಳಿಗೆ ಪ್ರವೇಶವು ಸಾಮರ್ಥ್ಯ ಅಥವಾ ಅನುಭವದ ಆಧಾರದ ಮೇಲೆ ದೊರಕುತ್ತಿತ್ತು.

ಪ್ರಾಚೀನ ಭಾರತದ ವೈದಿಕ ಸಮಾಜದಲ್ಲಿ, ಹಿಂದೂಗಳು ಪಾಲಿಸುವ ನ್ಯಾಯ ಅಥವಾ ಧರ್ಮವನ್ನು ಪಾಪಗಳು ಹಾಗೂ ಪರಿಹಾರಗಳನ್ನು ಕವಿತೆ/ಪದ್ಯಗಳ ಸಂಗ್ರಹದಲ್ಲಿ ಪ್ರಸ್ತುತಪಡಿಸಿದ್ದ "ಮನು ಸ್ಮೃತಿ"ಯ ಮೂಲಕ ಅರ್ಥೈಸಲಾಗುತ್ತಿತ್ತು.ಅವುಗಳನ್ನು ೨೦೦ BCಇಂದಾ - ೨೦೦ AD ನಡುವಿನ ಅವಧಿಯಲ್ಲಿ ಬರೆಯಲಾಗಿತ್ತೆನ್ನಲಾಗುತ್ತಿದೆ. ವಸ್ತುತಃ ಇವು, ಕಾನೂನಿನ ಸೂತ್ರಗಳಾಗಿರದೆ ಆ ಯುಗದ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಧಾರ್ಮಿಕ ಕಟ್ಟಳೆಗಳಿಗೆ ಸಂಬಂಧಿಸಿದ ರೂಢಿಗಳಾಗಿದ್ದವು.

ರೋಮನ್‌ ಸಾಮ್ರಾಜ್ಯದ ಅಡಿಯಲ್ಲಿ, ಕಾನೂನಿನ ವಿದ್ಯಾಲಯಗಳು ತೆರೆಯಲ್ಪಟ್ಟವು, ನಂತರ ಈ ಚಟುವಟಿಕೆಯು ಹೆಚ್ಚು ಶೈಕ್ಷಣಿಕ ರೂಪಕ್ಕೆ ಹೊರಳತೊಡಗಿತು. ಆದಿ ರೋಮನ್‌ ಸಾಮ್ರಾಜ್ಯದಿಂದ ೩ನೇ ಶತಮಾನದವರೆಗಿನ ಅವಧಿಯಲ್ಲಿ, ಪ್ರಾಸ್ತಾವಿಕ ಕೃತಿಗಳನ್ನು ಪ್ರೊಕ್ಯೂಲಿಯನ್ನರು ಮತ್ತು ಸಬೀನಿಯನ್ನರುಗಳು ಸೇರಿದಂತೆ ಕೆಲ ಪ್ರಮುಖ ಗುಂಪುಗಳು ರಚಿಸಿದವು. ಇಂತಹಾ ಅಧ್ಯಯನಗಳ ವೈಜ್ಞಾನಿಕ ಗಹನತೆಗಳ ಮಟ್ಟವು ಪ್ರಾಚೀನ ಕಾಲದಲ್ಲಿ ಅಭೂತಪೂರ್ವವೆನಿಸಿತ್ತಲ್ಲದೇ ಈಗಲೂ ಮುಟ್ಟಲಾಗಿರದ ಪರಿಣತಿಯ ಉತ್ತುಂಗಗಳಿಗೆ ತಲುಪಿತ್ತು.

೩ನೇ ಶತಮಾನದ ನಂತರ, ಜ್ಯೂರಿಸ್‌ ಪ್ರುಡೆನ್ಷಿಯಾ ಕೆಲ ಗಮನಾರ್ಹ ಲೇಖಕರುಗಳಿದ್ದರೂ ಹೆಚ್ಚು ಅಧಿಕಾರಶಾಹಿ ಚಟುವಟಿಕೆಯಾಗುತ್ತಾ ಹೋಯಿತು. ಗಹನ ಕಾನೂನು ಅಧ್ಯಯನಗಳಲ್ಲಿ ಮತ್ತೆ ತೊಡಗಿಕೊಂಡ ಅವಧಿಯೆಂದರೆ ಬೈಝಂಟೀನ್‌ ಸಾಮ್ರಾಜ್ಯದ ಅವಧಿಯಾಗಿದ್ದು (೫ನೇ ಶತಮಾನ), ಇದೇ ಸಾಂಸ್ಕೃತಿಕ ಚಳುವಳಿಯಿಂದಲೇ ಜಸ್ಟಿನಿಯನ್‌ರ ಕಾರ್ಪಸ್‌ ಜ್ಯೂರಿಸ್‌ ಸಿವಿಲ್ಲಿಸ್‌ ರಚನೆಯಾಯಿತು.

ನೈಸರ್ಗಿಕ ನಿಯಮ/ನ್ಯಾಯ

[ಬದಲಾಯಿಸಿ]

ನೈಸರ್ಗಿಕ ನಿಯಮ/ನ್ಯಾಯ ಸಿದ್ಧಾಂತವು ನಿಸರ್ಗವು ತನ್ನಲ್ಲೇ ಅನೇಕ ಅಂತರ್ಗತ ನಿಯಮ/ಕಾನೂನುಗಳನ್ನು ಹೊಂದಿದ್ದು, ಜಾರಿಯಾಗುವ ಕಾನೂನುಗಳು ಇದಕ್ಕೆ ಸಾಧ್ಯವಾದಷ್ಟು ಸಾಮೀಪ್ಯವನ್ನು ಕಾಯ್ದುಕೊಂಡಿರಬೇಕು ಎಂದು ಪ್ರತಿಪಾದಿಸುತ್ತದೆ. ಈ ದೃಷ್ಟಿಕೋನವನ್ನು ಅನೇಕವೇಳೆ ಸಾರಾಂಶ ರೂಪದಲ್ಲಿ ಈ ರೀತಿಯ ಸುಭಾಷಿತದ ಮೂಲಕ ಹೇಳಲಾಗುತ್ತದೆ, ಸರಿಯಲ್ಲದ ಕಾನೂನು ನಿಜವಾದ ಕಾನೂನಲ್ಲ , ಲೆಕ್ಸ್‌ ಇನಿಯಸ್ಟಾ ನಾನ್‌‌ ಎಸ್ಟ್‌ ಲೆಕ್ಸ್‌ , ಇದರಲ್ಲಿ 'ಸರಿಯಲ್ಲದ್ದು' ಎಂದರೆ ನೈಸರ್ಗಿಕ ನಿಯಮ/ನ್ಯಾಯಕ್ಕೆ ವಿರುದ್ಧವಾದುದು ಎಂಬ ಅರ್ಥ. ನೈಸರ್ಗಿಕ ನಿಯಮ/ನ್ಯಾಯವು ಧಾರ್ಮಿಕತನಕ್ಕೆ ಹೆಚ್ಚು ಸಂಬಂಧಿಸಿದ್ದು ಐತಿಹಾಸಿಕವಾಗಿ ಪರಿಣಾಮಕಾರಿಯಾದ ರೂಪಾಂತರಗಳಲ್ಲಿ ದೈವೀ ಉದ್ದೇಶಗಳನ್ನು ಹೊಂದಿರುವಂತಹುದು. ಅದರ ಕಲ್ಪನೆಗಳನ್ನು ಲಘುವಾಗಿಸಿ ಹೇಳುವುದಾದರೆ ನೈಸರ್ಗಿಕ ನಿಯಮ/ನ್ಯಾಯ ಸಿದ್ಧಾಂತವು ರಾಜ್ಯದ ಕಾನೂನು ರೂಪಿಸುವ ಶಕ್ತಿಗಳಿಗೆ ಮಾರ್ಗದರ್ಶನ ನೀಡುವ ನೈತಿಕ ದಿಕ್ಸೂಚಿಯನ್ನು ಕಂಡುಕೊಳ್ಳಲು ಹಾಗೂ 'ಒಳ್ಳೆಯದನ್ನು' ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ. ಮಾನವ ಕಾನೂನು ವ್ಯವಸ್ಥೆಗೆ ಬಾಹ್ಯವೆನಿಸಿದ ವಸ್ತುನಿಷ್ಠ/ವಾಸ್ತವಿಕ ನೈತಿಕ ಸ್ಥಿತಿಗಳಿಗೆ ನೈಸರ್ಗಿಕ ನಿಯಮ/ನ್ಯಾಯವು ಮೂಲಾಧಾರವಾಗಿದೆ. ಯಾವುದು ಸರಿ ಅಥವಾ ತಪ್ಪು ಎನ್ನುವುದು ವ್ಯಕ್ತಿಯ ಆಸಕ್ತಿಯು ಯಾವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂಬುದರ ಮೇಲೆ ವ್ಯತ್ಯಾಸಗೊಳ್ಳುತ್ತದೆ. "ಸರಿಯಲ್ಲದ ಕಾನೂನು ಕಾನೂನೇ ಅಲ್ಲ" ಎಂಬ ಸೂಕ್ತಿಯ ಮೂಲಕ ಕೆಲವೊಮ್ಮೆ ನೈಸರ್ಗಿಕ ನಿಯಮ/ನ್ಯಾಯವನ್ನು ಪ್ರತಿನಿಧಿಸಲಾದರೂ, ಆಧುನಿಕ ನೈಸರ್ಗಿಕ ನಿಯಮ/ನ್ಯಾಯಪರಿಣತರಲ್ಲಿ ಪ್ರಮುಖರಾದ ಜಾನ್‌ ಫಿನ್ನಿಸ್‌‌ರು, ಶ್ರೇಷ್ಠ ಥಾಮಿಸಮ್‌ನ/ಥಾಮಿಸ್ಟ್‌‌ ಪ್ರವೃತ್ತಿಗೆ ಈ ಸೂಕ್ತಿಯು ಸರಿಯಾದ ಮಾರ್ಗದರ್ಶಕವಲ್ಲ ಎಂದು ಪ್ರತಿಪಾದಿಸುತ್ತಾರೆ.

ಅರಿಸ್ಟಾಟಲ್‌‌

[ಬದಲಾಯಿಸಿ]
ಫ್ರಾನ್ಸೆಸ್ಕೋ ಹೇಯಜ್‌ರಿಂದ ಅರಿಸ್ಟಾಟಲ್‌‌

ಅರಿಸ್ಟಾಟಲ್‌‌ರನ್ನು ಅನೇಕ ವೇಳೆ ನೈಸರ್ಗಿಕ ನಿಯಮ/ನ್ಯಾಯದ ಪಿತಾಮಹರೆಂದು ಕರೆಯಲಾಗುತ್ತದೆ.[] ಸಾಕ್ರಟೀಸ್‌ ಮತ್ತು ಪ್ಲಾಟೋರಂತಹಾ ತಮ್ಮ ತಾತ್ವಿಕ ಪೂರ್ವಜರಂತೆಯೇ ಅರಿಸ್ಟಾಟಲ್‌‌ರು ನೈಸರ್ಗಿಕ ನಿಯಮ/ನ್ಯಾಯ ಅಥವಾ ನೈಸರ್ಗಿಕ ಹಕ್ಕು (ಡಿಕಾಯೊನ್‌ ಫಿಸಿಕಾನ್‌‌ , δικαίον φυσικόν , ಲ್ಯಾಟಿನ್‌ ಪದ ಇಯುಸ್‌ ನ್ಯಾಚುರಲೆ )ಗಳ ಅಸ್ತಿತ್ವವನ್ನು ಆಧಾರವೆಂದು ಭಾವಿಸುತ್ತಾರೆ. ಥಾಮಸ್‌ ಆಕ್ವಿನಾಸ್‌‌ರು ತಮಗೆ ಅದರ ಬಗ್ಗೆ ನೀಡಿದ ವ್ಯಾಖ್ಯಾನವೇ ಅವರು ಬಹುಪಾಲು ನೈಸರ್ಗಿಕ ನಿಯಮ/ನ್ಯಾಯದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಕಾರಣ.[] ಇದು ಆಕ್ವಿನಾಸ್‌ರ ನೈಸರ್ಗಿಕ ನಿಯಮ/ನ್ಯಾಯ ಮತ್ತು ನೈಸರ್ಗಿಕ ಹಕ್ಕುಗಳ ಸಂಯೋಜನೆಯ ಮೇಲೆ ಆಧಾರಿತವಾಗಿದ್ದು, ಅರಿಸ್ಟಾಟಲ್‌‌ರು ನಿಕೋಮಾಕಿಯಾನ್‌ ಎಥಿಕ್ಸ್‌ ನ ಬುಕ್‌/ಸಂಪುಟ V (= ಯೂಡೆಮಿಯನ್‌ ಎಥಿಕ್ಸ್‌ ನ ಬುಕ್‌/ಸಂಪುಟ IV)ರಲ್ಲಿ ನೈಸರ್ಗಿಕ ಹಕ್ಕುಗಳ ಬಗ್ಗೆ ಆಧಾರಗ್ರಹಿಕೆಯನ್ನು ಪ್ರತಿಪಾದಿಸಿದ್ದಾರೆ. ಆಕ್ವಿನಾಸ್‌ರ ಪ್ರಭಾವವು ಎಷ್ಟಿತ್ತೆಂದರೆ ಈ ವಾಕ್ಯವೃಂದಗಳ,[] ಅನೇಕ ಪ್ರಾಚೀನ/ಹಿಂದಿನ ವ್ಯಾಖ್ಯಾನ/ಭಾಷಾಂತರಗಳ ಭಾಷ್ಯವನ್ನೇ ಬದಲಾಯಿಸಿತ್ತು, ಆದರೆ ತೀರ ಇತ್ತೀಚಿನ ವ್ಯಾಖ್ಯಾನ/ಭಾಷಾಂತರಗಳು ಅವುಗಳನ್ನು ಹೆಚ್ಚು ವಾಚ್ಯಾರ್ಥದಿಂದ ವ್ಯಾಖ್ಯಾನಿಸುತ್ತಿವೆ.[೧೦]

ಅರಿಸ್ಟಾಟಲ್‌‌'ರ ನ್ಯಾಯಿಕ ಸಿದ್ಧಾಂತವು ತಮ್ಮ ಸ್ವರ್ಣ ಮಧ್ಯಸ್ಥ ಕಲ್ಪನೆಗೆ ಹೊಂದಿಕೊಂಡಂತಿದೆ. ವಾಸ್ತವವಾಗಿ ಅವರು "ರಾಜತಾಂತ್ರಿಕ ನ್ಯಾಯ" ಎಂದು ಕರೆಯುತ್ತಿದ್ದ ಪ್ರತಿಪಾದನೆಯು ಅವರು ವಿವರಿಸಿದ ಇತರ ಯಾವುದೇ ಋಜುತ್ವಗಳಂತೆಯೇ ವೈರುಧ್ಯಮಯ ಪಾಪಗಳ ನಡುವಿನ ಮಧ್ಯಸ್ಥವಾದ ನೈತಿಕ ಋಜುತ್ವ ಎಂದು ಪ್ರತಿಪಾದಿತವಾದ ಅವರ "ದ ಜಸ್ಟ್‌‌" ಎಂಬ ಚರ್ಚೆಯಿಂದ ರೂಪುಗೊಂಡಿರುವಂತಹುದಾಗಿತ್ತು.[೧೧] ನ್ಯಾಯಯುತ ಚಟುವಟಿಕೆಯೆಂದರೆ ಎಂತಹುದು ಎಂಬ ಪ್ರಶ್ನೆ ಕೇಳುವುದರೊಂದಿಗೆ ಆರಂಭವಾಗುವ ನ್ಯಾಯಿಕ ಸಿದ್ಧಾಂತದ ಅವರ ದೀರ್ಘ ವ್ಯಾಖ್ಯಾನವು ನಿಕೋಮಾಕಿಯಾನ್‌ ಎಥಿಕ್ಸ್ ‌ನಲ್ಲಿ ಕಂಡುಬರುತ್ತದೆ. ಅವರ ಪ್ರತಿಪಾದನೆಯ ಪ್ರಕಾರ "ನ್ಯಾಯ" ಎಂಬ ಪದವು ವಸ್ತುತಃ ಎರಡು ಪ್ರತ್ಯೇಕ ಆದರೆ ಸಂಬಂಧಿತ ಕಲ್ಪನೆಗಳಾದ ಪ್ರಧಾನ ನ್ಯಾಯ ಮತ್ತು ನಿರ್ದಿಷ್ಟ ನ್ಯಾಯಗಳಿಗೆ ಅನ್ವಯಿಸುತ್ತದೆ.[೧೨][೧೩] ಪರರಿಗೆ ಸಂಬಂಧಪಟ್ಟ ಎಲ್ಲ ವಿಷಯಗಳಲ್ಲಿ ಓರ್ವ ವ್ಯಕ್ತಿಯ ಚಟುವಟಿಕೆಗಳು ಸಂಪೂರ್ಣ ಸತ್‌ನಡವಳಿಕೆಯದಾಗಿದ್ದರೆ, ಈ ನ್ಯಾಯದ ಪರಿಕಲ್ಪನೆಯು ಹೆಚ್ಚುಕಡಿಮೆ ಸದ್ವರ್ತನೆಯೊಂದಿಗೆ ಸಮವ್ಯಾಪಕವಾಗಿರುತ್ತದೆ ಎಂಬಂತೆ ಅರಿಸ್ಟಾಟಲ್‌‌ರು “ಪ್ರಧಾನ ನ್ಯಾಯ;”ದ ಪರಿಕಲ್ಪನೆಯಲ್ಲಿ ಅದನ್ನು "ಜಸ್ಟ್‌‌/ನ್ಯಾಯ" ಎನ್ನುತ್ತಾರೆ.[೧೪] "ನಿರ್ದಿಷ್ಟ" ಅಥವಾ "ಭಾಗಶಃ ನ್ಯಾಯ", ಎಂಬುದು ಇದಕ್ಕೆ ವಿರುದ್ಧವಾಗಿ, ಉಳಿದವರನ್ನೂ ಕೂಡಾ ತಮ್ಮಂತೆಯೇ ಎಂದು ಪರಿಭಾವಿಸುವ "ಪ್ರಧಾನ ನ್ಯಾಯ" ಅಥವಾ ವೈಯಕ್ತಿಕ ಋಜುತ್ವದ ಭಾಗವಾಗಿದೆ.[೧೫] ಆಧುನಿಕ ನ್ಯಾಯಶಾಸ್ತ್ರದ ವಿಷಯವಸ್ತುವಿಗೆ ಸಮೀಪವಾದಂತಹ ವಿಷಯವಸ್ತುವೆಂಬ ರೀತಿಯಲ್ಲಿ ಅರಿಸ್ಟಾಟಲ್‌‌ರು ನಿರುಪಾಧಿಕ ನ್ಯಾಯದ ಚರ್ಚೆಯಿಂದ ರಾಜತಾಂತ್ರಿಕ ನ್ಯಾಯದ ಅಧಿಕೃತ ದೃಷ್ಟಿಕೋನಕ್ಕೆ ಮುಂದೆ ಸಾಗಿದರು. ರಾಜತಾಂತ್ರಿಕ ನ್ಯಾಯದ ಬಗ್ಗೆ, ಅರಿಸ್ಟಾಟಲ್‌‌ ಇದು ಭಾಗಶಃ ಪರಿಸರದಿಂದ ಹಾಗೂ ಭಾಗಶಃ ರೂಢಿಆಚರಣೆಗಳಿಂದ ವ್ಯುತ್ಪನ್ನವಾಗಿದೆ ಎಂದು ಪ್ರತಿಪಾದಿಸಿದ್ದರು.[೧೬] ಇದನ್ನು ಆಧುನಿಕ ನೈಸರ್ಗಿಕ ನಿಯಮ/ನ್ಯಾಯ ಸಿದ್ಧಾಂತಿಗಳ ದೃಷ್ಟಿಕೋನಕ್ಕೆ ಸಮಾನವಾದ ಹೇಳಿಕೆಯೆಂದು ಭಾವಿಸಬಹುದಾಗಿದೆ. ಇಲ್ಲಿ ನೆನಪಿಡಬೇಕಾದ ಮತ್ತೊಂದು ವಿಷಯವೇನೆಂದರೆ ಅರಿಸ್ಟಾಟಲ್‌‌ರು ನೈತಿಕತ್ವದ ದೃಷ್ಟಿಕೋನವನ್ನು ವಿವರಿಸುತ್ತಿದ್ದಾರೆಯೇ ಹೊರತು ನ್ಯಾಯಿಕ ವ್ಯವಸ್ಥೆಯನ್ನಲ್ಲ ಎಂಬುದು, ಹಾಗಾಗಿ ಇದರಲ್ಲಿನ ನಿಸರ್ಗದ ಬಗೆಗಿನ ಆತನ ಅಭಿಪ್ರಾಯಗಳನ್ನು ನ್ಯಾಯವಾಗಿ ಪ್ರತಿಪಾದಿಸಲ್ಪಟ್ಟ ನೈತಿಕತೆಯ ತಳಹದಿಯಾಗಿ ತಿಳಿದುಕೊಳ್ಳಬೇಕೇ ಹೊರತು ಕಾನೂನುಗಳಾಗಿಯೇ ಅಲ್ಲ. ಇಲ್ಲಿನ ವಾಕ್ಯವೃಂದ ಆ ಪ್ರಶ್ನೆಯ ಬಗ್ಗೆ ಮೌನವಾಗಿದೆ.

ಅರಿಸ್ಟಾಟಲ್‌‌'ರು ನೈಸರ್ಗಿಕ ನಿಯಮ/ನ್ಯಾಯವೆಂಬುದೊಂದು ಇದೆ ಎಂದು ಭಾವಿಸಿದ್ದರೆಂಬುದಕ್ಕೆ ಉತ್ತಮ ನಿದರ್ಶನವೆಂದರೆ ಪ್ರತಿಯೋರ್ವರೂ ನಿರ್ದಿಷ್ಟ ವಿಷಯಗಳಿಗೆ ಸಂಬಂಧಪಟ್ಟಂತೆ ರಚಿಸಿಕೊಂಡ "ನಿರ್ದಿಷ್ಟ" ಕಾನೂನುಗಳು ಅಲ್ಲದೇ, ಬೇರೆಯದೇ ಆದ "ಸಾರ್ವತ್ರಿಕ" ಎಂಬ ಪರಿಸರಕ್ಕೆ ಅನುಗುಣವಾದ ಕಾನೂನುಗಳಿವೆ ಎಂದು ಅರಿಸ್ಟಾಟಲ್‌‌ರು ವ್ಯಕ್ತಪಡಿಸಿರುವ ಅಲಂಕಾರಿಕ ಸಾಹಿತ್ಯ ವಾಗಿದೆ.[೧೭] ಈ ಅಭಿಪ್ರಾಯದ ಸನ್ನಿವೇಶವು, ಅರಿಸ್ಟಾಟಲ್‌‌ ಅಲಂಕಾರಿಕವಾಗಿ ಅಂತಹಾ ಕಾನೂನಿಗೆ ಮೊರೆಯಿಡುವುದು ಅನುಕೂಲಕರ ಎಂದು ಸಲಹೆ ನೀಡಿರಬಹುದು ಎಂದು ಸೂಚಿಸಿತ್ತಲ್ಲದೆ ವಿಶೇಷವಾಗಿ, ಒಂದು ನಗರದ "ನಿರ್ದಿಷ್ಟ" ಕಾನೂನು ಚರ್ಚೆಯಲ್ಲಿರುವ ಪ್ರಕರಣಕ್ಕೆ ಸೂಕ್ತವಲ್ಲದಿದ್ದಾಗ, ಅದರಲ್ಲಿ ವಾಸ್ತವವಾಗಿ ಅಂತಹಾ ಕಾನೂನು ಇರಲೇಬೇಕೆಂದೇನಿಲ್ಲ ;[೧೮] ಮೇಲಾಗಿ ಅರಿಸ್ಟಾಟಲ್‌‌ರು, ಸಾರ್ವತ್ರಿಕವಾಗಿ ಮಾನ್ಯತೆಯುಳ್ಳ ನೈಸರ್ಗಿಕ ನಿಯಮ/ನ್ಯಾಯದ ಮೂರರಲ್ಲಿ ಎರಡು ವಾಕ್ಯಪುಂಜಗಳನ್ನು ತಪ್ಪೆಂದು ಪರಿಗಣಿಸಿದ್ದರು.[೧೯] ಇದರ ಪರಿಣಾಮವಾಗಿ ಅರಿಸ್ಟಾಟಲ್‌‌ರು ನೈಸರ್ಗಿಕ ನಿಯಮ/ನ್ಯಾಯ ಪದ್ಧತಿಯ ಸೈದ್ಧಾಂತಿಕ ಪಿತಾಮಹರು ಎಂಬುದು ಚರ್ಚಾಸ್ಪದವೆನಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಇಸ್ಲಾಮ್‌ ಧರ್ಮದಲ್ಲಿ ಷರಿಯಾ ಮತ್ತು ಫಿಕ್ಹ್‌‌‌

[ಬದಲಾಯಿಸಿ]
ಹಟ್ಟಟ್‌ ಅಜೀಜ್‌ ಎಫೆಂಡಿಯವರಿಂದ ಲಿಖಿತ ಕುರಾನಿನ ಹಸ್ತಲಿಪಿಯಲ್ಲಿ ಪ್ರಥಮ ಸುರಾ.

ಷರಿಯಾ (شَرِيعَةٌ ) ಎಂಬುದು ಇಸ್ಲಾಮಿಕ್‌/ಮಹಮ್ಮದೀಯ ಕಾನೂನು ವ್ಯವಸ್ಥೆ/ಸಂಸ್ಥೆಯಾಗಿದೆ. ಈ ಪದದ ಅರ್ಥ "ದಾರಿ" ಅಥವಾ "ಪಥ"; ಇದೊಂದು ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯಶಾಸ್ತ್ರಕ್ಕೆ ಬದ್ಧವಾಗಿ ನಡೆಯುವವರ ಜೀವನಶೈಲಿಯ ಸಾರ್ವಜನಿಕ ಮತ್ತು ಬಹುತೇಕ ಖಾಸಗಿ ಅಂಶಗಳನ್ನು ನಿಯಂತ್ರಿಸುವ ನ್ಯಾಯಿಕ ಚೌಕಟ್ಟಾಗಿದೆ. ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯವೇತ್ತರುಗಳು ವಿಧಿಸಿದ ನಿಯಮಗಳಿಂದ ಕೂಡಿದ ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯಶಾಸ್ತ್ರಕ್ಕೆ ಫಿಕ್ಹ್‌‌ ಎಂಬ ಹೆಸರಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಮೂಲಗಳಿಂದ ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯ/ಕಾನೂನನ್ನು ವ್ಯುತ್ಪತ್ತಿಸಿದ ವಿಧಾನಶಾಸ್ತ್ರವನ್ನು ಮಹಮ್ಮದೀಯ/ಇಸ್ಲಾಮಿಕ್‌ ಅಧ್ಯಯನಗಳ ಒಂದು ಘಟಕವಾದ ಫಿಕ್ಹ್‌‌‌ ಮಂಡಿಸುತ್ತದೆ.

ಮುಖ್ಯವಾಹಿನಿಯ ಇಸ್ಲಾಮ್‌ ಧರ್ಮವು ಫಿಕ್ಹ್‌‌ನ ಮೂಲತತ್ವಗಳ ಹಿಂದಿನ ನಿಯಮಗಳನ್ನು ವಿಧಿಸುವ ಷರಿಯಾ ದಿಂದ ನ್ಯಾಯವೇತ್ತರು ಅರ್ಥೈಸಿದ ವಿವರಗಳು ಮತ್ತು ನಿಷ್ಪತ್ತಿಗಳ ಸಂಗ್ರಹವಾದ ಫಿಕ್ಹ್‌ ನಿಂದ ಪ್ರತ್ಯೇಕಿಸುತ್ತದೆ. ನ್ಯಾಯವೇತ್ತರು ಫಿಕ್ಹ್‌‌ ಮತ್ತು ಷರಿಯಾ ಗಳು ಯಾವುದೇ ನಿರ್ದಿಷ್ಟ ಸಂದರ್ಭಕ್ಕೆ ಅನ್ವಯಿಸಿದಾಗಲೂ ಸಾಮರಸ್ಯತೆಯನ್ನು ಕಾಯ್ದುಕೊಂಡಿರಬಲ್ಲವು ಎಂದು ಆಶಿಸುವರಾದರೂ, ಇದನ್ನು ಖಾತ್ರಿಪಡಿಸಲಾಗುವುದಿಲ್ಲ.[೨೦]

ಮಹಮ್ಮದೀಯ/ಇಸ್ಲಾಮಿಕ್‌ ಸಿದ್ಧಾಂತಗಳಲ್ಲಿನ ತರ್ಕದ ಮುಂಚಿನ ರೂಪಗಳನ್ನು ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯಶಾಸ್ತ್ರದಲ್ಲಿ ೭ನೇ ಶತಮಾನದಿಂದಲೇ ಖಿಯಾಸ್‌‌ ಪ್ರಕ್ರಿಯೆಯ ಮೂಲಕ ಪರಿಚಯಿಸಲಾಯಿತು. ಮಹಮ್ಮದೀಯ/ಇಸ್ಲಾಮಿಕ್‌ ಸುವರ್ಣ ಯುಗದ ಅವಧಿಯಲ್ಲಿ, ಮಹಮ್ಮದೀಯ/ಇಸ್ಲಾಮಿಕ್‌ ತತ್ವಶಾಸ್ತ್ರಜ್ಞರು ಮತ್ತು ನ್ಯಾಯವೇತ್ತರುಗಳ ನಡುವೆ ಖಿಯಾಸ್‌‌ ಎಂಬ ಪದವು ಸದೃಶ ತರ್ಕ, ಅನುಗಮನ ತರ್ಕ ಅಥವಾ ನಿರುಪಾಧಿಕಕ ನಿಗಮನ ತರ್ಕಗಳಿಗೆ ಸಂಬಂಧಿಸಿದುದೇ ಅಲ್ಲವೇ ಎಂಬುದರ ಬಗ್ಗೆ ತಾರ್ಕಿಕ ಭಿನ್ನಾಭಿಪ್ರಾಯಗಳಿದ್ದವು. ಕೆಲ ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯವೇತ್ತರು ಖಿಯಾಸ್‌‌ ತರ್ಕಕ್ಕೆ ಸಂಬಂಧಪಟ್ಟಿದ್ದು ಎಂದು ಪ್ರತಿಪಾದಿಸಿದರು ಖಿಯಾಸ್‌‌ ಅನುಗಮನ ತರ್ಕಕ್ಕೆ ಸಂಬಂಧಪಟ್ಟಿದ್ದಲ್ಲ ಆದರೆ ವಾಸ್ತವ ಅರ್ಥದಲ್ಲಿ ನಿರುಪಾಧಿಕ ನಿಗಮನ ತರ್ಕಕ್ಕೆ ಸಂಬಂಧಪಟ್ಟಿದ್ದು ಹಾಗೂ ಸದೃಶ ತರ್ಕಕ್ಕೆ ರೂಪಕಾರ್ಥದಲ್ಲಿ ಸಂಬಂಧಪಟ್ಟಿದ್ದು ಎಂದು ಪ್ರತಿಪಾದಿಸಿದ ಇಬ್ನ್‌‌ ಹಜ್ಮ್‌‌‌ರು (೯೯೪-೧೦೬೪) ಇದನ್ನು ನಿರಾಕರಿಸಿದರು. ಮತ್ತೊಂದೆಡೆ, ಅಲ್‌-ಘಝಲಿಯವರು (೧೦೫೮-೧೧೧೧) (ಹಾಗೂ ಆಧುನಿಕ ಕಾಲದಲ್ಲಿ, ಅಬು ಮಹಮ್ಮದ್‌ ಅಸೆಮ್‌‌ ಅಲ್‌‌-ಮಕ್‌ದಿಸಿ) ಖಿಯಾಸ್‌ ವಾಸ್ತವ ಅರ್ಥದಲ್ಲಿ ಸದೃಶ ತರ್ಕಕ್ಕೆ ಸಂಬಂಧಪಟ್ಟಿದ್ದು ಮತ್ತು ರೂಪಕಾರ್ಥದಲ್ಲಿ ನಿರುಪಾಧಿಕ ನಿಗಮನ ತರ್ಕಕ್ಕೆ ಸಂಬಂಧಪಟ್ಟಿದ್ದು ಎಂದು ಪ್ರತಿಪಾದಿಸಿದರು. ಆದಾಗ್ಯೂ ಆ ಸಮಯದಲ್ಲಿನ ಇತರೆ ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯವೇತ್ತರು ಖಿಯಾಸ್‌ ವಾಸ್ತವಾರ್ಥದಲ್ಲಿ ಸದೃಶ ತರ್ಕ ಮತ್ತು ನಿರುಪಾಧಿಕ ನಿಗಮನ ತರ್ಕಗಳೆರಡಕ್ಕೂ ಸಂಬಂಧಪಟ್ಟಿದೆ ಎಂದು ಪ್ರತಿಪಾದಿಸಿದರು.[೨೧]

ಥಾಮಸ್‌ ಆಕ್ವಿನಾಸ್‌‌

[ಬದಲಾಯಿಸಿ]
ಥಾಮಸ್‌ ಆಕ್ವಿನಾಸ್‌‌ರು ಅತ್ಯಂತ ಪ್ರಮುಖರಾದ ಪಾಶ್ಚಿಮಾತ್ಯ ಮಧ್ಯಯುಗದ ನ್ಯಾಯವೇತ್ತರಾಗಿದ್ದರು

ಸಂತ ಥಾಮಸ್‌ ಆಕ್ವಿನಾಸ್‌‌ [ಆಕ್ವಿನ್‌, ಅಥವಾ ಆಕ್ವಿನೊ'ನ ಥಾಮಸ್‌‌‌]ರವರು (c. "ಡಾಕ್ಟರ್‌ ಆಂಗೆಲಿಕಸ್‌‌, ಡಾಕ್ಟರ್‌‌ ಯೂನಿವರ್ಸಲಿಸ್‌‌" ಎಂಬ ಹೆಸರುಗಳಿಂದ ಪ್ರಸಿದ್ಧರಾಗಿದ್ದ ವಿದ್ವತ್ಪೂರ್ಣ ಸಂಪ್ರದಾಯದ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞರಾಗಿದ್ದರು. ಅವರು ಪ್ರಾಕೃತ ದೇವತಾಶಾಸ್ತ್ರದ ಅಗ್ರಗಣ್ಯ ಶ್ರೇಷ್ಠ ಪ್ರತಿಪಾದಕರಲ್ಲದೇ, ದೀರ್ಘಕಾಲದವರೆಗೆ ರೋಮನ್‌ ಕ್ಯಾಥೊಲಿಕ್‌‌ ಕ್ರೈಸ್ತಪಂಥ/ಇಗರ್ಜಿ/ಚರ್ಚ್‌ನ ಪ್ರಾಥಮಿಕ ತತ್ವದರ್ಶನವಾಗಿ ಪ್ರಚಲಿತದಲ್ಲಿದ್ದ ಥಾಮಿಸ್ಟಿಕ್‌ ಪಂಥದ ಪಿತಾಮಹರೂ ಆಗಿದ್ದರು. ಅವರ ಬಹು ಪ್ರಸಿದ್ಧ ಕೃತಿಯೆಂದರೆ ಸುಮ್ಮಾ ಥಿಯೊಲಜಿಕಾ . ಮೂವತ್ತಮೂರು ಪ್ರಸಿದ್ಧ ಪಾದ್ರಿಗಳಲ್ಲಿ ಒಬ್ಬರಾದ ಅವರು ಅನೇಕ ಕ್ಯಾಥೊಲಿಕರಿಂದ ಕ್ರೈಸ್ತವರ್ಗದ ಶ್ರೇಷ್ಠ ದೇವತಾಶಾಸ್ತ್ರಜ್ಞ ಎಂದು ಪರಿಗಣಿಸಲ್ಪಡುತ್ತಾರೆ. ಪರಿಣಾಮವಾಗಿ, ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಅವರ ಹೆಸರನ್ನು ಇಡಲಾಗಿದೆ.

ಆಕ್ವಿನಾಸ್‌‌ ಕಾನೂನುಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿದರು. ಅವುಗಳೆಂದರೆ ಸನಾತನ, ನೈಸರ್ಗಿಕ, ಮಾನವಿಕ ಹಾಗೂ ದೈವಿಕ ಕಾನೂನುಗಳು. ಸನಾತನ ಕಾನೂನೆಂದರೆ ಇಡೀ ಜಗತ್ತನ್ನು ಆಳುವ ದೇವರ ತೀರ್ಪು/ಡಿಕ್ರಿ. ನೈಸರ್ಗಿಕ ನಿಯಮ/ನ್ಯಾಯವು ತರ್ಕಬದ್ಧವಾಗಿ ನಿರ್ಧರಿಸಲ್ಪಡುವ ಸನಾತನ ಕಾನೂನಿನಲ್ಲಿ ಮಾನವನ "ಸಹಯೋಗ"ವಾಗಿರುತ್ತದೆ.[೨೨] ನೈಸರ್ಗಿಕ ನಿಯಮ/ನ್ಯಾಯವು, ಸಹಜವಾಗಿಯೇ "ಪ್ರಾಥಮಿಕ ಮೂಲತತ್ವಗಳ" ಮೇಲೆ ಆಧಾರಿತವಾಗಿದೆ:

. . . ಇದು ನ್ಯಾಯದ ಪ್ರಥಮ ಆಚಾರಸೂತ್ರ, ಒಳ್ಳೆಯದನ್ನು ಮಾಡಬೇಕು ಹಾಗೂ ಅದನ್ನೇ ಪ್ರೋತ್ಸಾಹಿಸಬೇಕು ಹಾಗೂ ಕೆಟ್ಟದನ್ನು ತ್ಯಜಿಸಬೇಕು. ನೈಸರ್ಗಿಕ ನಿಯಮ/ನ್ಯಾಯದ ಇತರ ಎಲ್ಲಾ ಆಚಾರಸೂತ್ರಗಳು ಇದರ ಮೇಲೆ ಆಧಾರಿತವಾಗಿದೆ . . . [೨೩]

ಜೀವಿಸುವಿಕೆ ಹಾಗೂ ಜನ್ಮನೀಡಿಕೆಯ ಬಯಕೆಗಳನ್ನು ಆಕ್ವಿನಾಸ್‌‌ ಎಲ್ಲಾ ಮಾನವ ಮೌಲ್ಯಗಳು ಆಧರಿಸಿರುವ ಮೂಲಭೂತ (ನೈಸರ್ಗಿಕ) ಮಾನವ ಮೌಲ್ಯಗಳೆಂದು ಪರಿಗಣಿಸುತ್ತಿದ್ದರು. ಮಾನವಿಕ ಕಾನೂನು ಒಂದು ಧನಾತ್ಮಕ ಕಾನೂನಾಗಿದೆ: ಹಾಗೂ ಸರ್ಕಾರಗಳು ಸಮಾಜಗಳಿಗೆ ವಿಧಿಸುವ ನೈಸರ್ಗಿಕ ನಿಯಮ/ನ್ಯಾಯಗಳಾಗಿವೆ. ದೈವಿಕ ಕಾನೂನು ಧರ್ಮಗ್ರಂಥಗಳು ಹಾಗೂ ಆದ್ಯಪ್ರವರ್ತಕರುಗಳ ಬೋಧನೆಗಳಲ್ಲಿ ವಿಶೇಷವಾಗಿ ವ್ಯಕ್ತವಾಗಿರುವ ನ್ಯಾಯವಾಗಿದೆ.

ಥಾಮಸ್‌‌ ಹಾಬ್ಬೆಸ್‌‌

[ಬದಲಾಯಿಸಿ]
ಥಾಮಸ್‌‌ ಹಾಬ್ಬೆಸ್‌‌ ಆಂಗ್ಲ ಜ್ಞಾನೋದಯ ಪಂಥದ ಪಂಡಿತರು

ತಮ್ಮ ಪ್ರಕರಣ ಗ್ರಂಥ ಲೆವಿಯಾಥನ್‌‌ನಲ್ಲಿ, (1651) , ಹಾಬ್ಬೆಸ್‌‌ರು ನೈಸರ್ಗಿಕ ನಿಯಮ/ನ್ಯಾಯವನ್ನು ಓರ್ವ ವ್ಯಕ್ತಿಯು ತನ್ನ ಜೀವನಕ್ಕೆ ವಿನಾಶಕರವಾದುದನ್ನು ಅಥವಾ ಜೀವನವನ್ನು ಉಳಿಸಿಕೊಳ್ಳಲು ಬೇಕಾದುದನ್ನು ಕಳೆಯುವುದನ್ನು ಮಾಡದಿರುವಂತೆ ; ಹಾಗೂ ಉತ್ತಮ ರೀತಿಯಲ್ಲಿ ಅದನ್ನು ಹೇಗೆ ಕಾದಿಟ್ಟುಕೊಳ್ಳಬಹುದು ಎಂದು ತಾನು ಭಾವಿಸಿದ್ದುದನ್ನು ಮಾಡುವುದನ್ನು ನಿಲ್ಲಿಸದಿರುವಂತೆ ನಿರ್ಬಂಧಿಸಲ್ಪಟ್ಟ ತರ್ಕದಿಂದ ವ್ಯಕ್ತವಾದ ಆಚಾರಸೂತ್ರ ಅಥವಾ ಸಾರ್ವತ್ರಿಕ ನಿಯಮವೆಂಬಂತೆ ಪ್ರತಿಪಾದಿಸಿದ್ದರು. ಹಾಬ್ಬೆಸ್‌‌ರು ಓರ್ವ ಸಾಮಾಜಿಕ ಸಂಕುಚಿತವಾದಿಯಾ[೨೪]ಗಿದ್ದರಲ್ಲದೇ ಕಾನೂನು ಜನರ ಸೂಚ್ಯ ಸಮ್ಮತಿಯನ್ನು ಪಡೆದಿರುತ್ತದೆ ಎಂದು ಭಾವಿಸಿದ್ದರು. ಮಾನವಕುಲದ ನಡುವೆ ಉಂಟಾಗಬಹುದಾಗಿದ್ದ ಯುದ್ಧದ ಪರಿಸ್ಥಿತಿಯಿಂದ ರಕ್ಷಿಸಿ ನೈಸರ್ಗಿಕ/ಪರಿಸರದ ಸ್ಥಿತಿಗೆ ಕರೆತರುವ ಮೂಲಕ ರೂಪುಗೊಂಡಿರುವ ಸ್ಥಿತಿಯೇ ಸಮಾಜ ಎಂದು ಭಾವಿಸಿದ್ದರು. ವ್ಯವಸ್ಥಿತವಲ್ಲದ ಸಮಾಜದಲ್ಲಿನ ಜೀವನವು, "ಏಕಾಂಗಿ, ನ್ಯೂನತೆಯುಳ್ಳ, ಅಸಹ್ಯವಾದ, ಪಶುಸ್ವರೂಪಿ ಮತ್ತು ಅಲ್ಪಕಾಲೀನ"ವಾಗಿರುತ್ತದೆ. ಮಾನವ ಪ್ರವೃತ್ತಿಯ ಬಗೆಗಿನ ಹಾಬ್ಬೆಸ್‌‌'ರ ದೃಷ್ಟಿಕೋನಗಳು ಆತನ ಕಾಲಾವಧಿಯಿಂದ ಪ್ರೇರಿತವಾಗಿದ್ದವು ಎಂದು ಸಾಧಾರಣವಾಗಿ ವ್ಯಾಖ್ಯಾನಿಸಲಾಗುತ್ತದೆ. ಆ ಸಮಯದಲ್ಲಿ ಆಂಗ್ಲ ಅಂತರ್ಯುದ್ಧ ಸಂಭವಿಸಿ ಕ್ರೋಮ್‌ವೆಲ್‌ರ ಸರ್ವಾಧಿಕಾರತ್ವವು ಚಾಲ್ತಿಯಲ್ಲಿದ್ದುದರಿಂದ ಸರ್ವೋಚ್ಚ ಅಧಿಕಾರವು ಅಧಿಪತ್ಯಕ್ಕೆ ಸೇರಿದ್ದು ಆದ್ದರಿಂದ ಪ್ರಜೆಗಳೆಲ್ಲಾ ಅಧಿಪತ್ಯವು ನಿಗದಿಪಡಿಸಿದ್ದ ಕಾನೂನನ್ನು ಪಾಲಿಸುತ್ತಿದ್ದುದು ನಾಗರಿಕ ಸಮಾಜದ ಮೂಲಾಧಾರವಾಗಿತ್ತು ಎಂದು ಅವರು ಭಾವಿಸಿದ್ದರು.

ಲಾನ್‌ ಫುಲ್ಲರ್‌‌

[ಬದಲಾಯಿಸಿ]

ವಿಶ್ವ ಸಮರ IIರ ನಂತರ ಗ್ರಂಥ ರಚಿಸಿದ ಲಾನ್‌ L. ಫುಲ್ಲರ್‌ರು ಗಮನಾರ್ಹವಾಗಿ ಕಾನೂನು ಕೆಲವೊಂದು ನಿರ್ದಿಷ್ಟ ಔಪಚಾರಿಕ ಅಗತ್ಯತೆಗಳನ್ನು (ಪಕ್ಷಪಾತರಹಿತವಾಗಿರುವುದು ಹಾಗೂ ಸಾರ್ವಜನಿಕಗೊಳಿಸಬಲ್ಲದಾಗಿರುವಿಕೆಯಂತಹಾ) ಪೂರೈಸಬೇಕಾಗಿರುತ್ತದೆ ಎಂದು ಗಮನ ಸೆಳೆದರು. ಇದು ಎಷ್ಟರಮಟ್ಟಿಗೆಂದರೆ ಸಾಮಾಜಿಕ ನಿಯಂತ್ರಣದ ಸಾಂಸ್ಥಿಕ ವ್ಯವಸ್ಥೆಯು ಇವುಗಳನ್ನು ಪೂರೈಸದಿದ್ದರೆ, ಫುಲ್ಲರ್‌ರು ನಾವು ಅದನ್ನು ಕಾನೂನಿನ ವ್ಯವಸ್ಥೆ ಎಂಬುದಾಗಿ ಅದನ್ನು ಗುರುತಿಸಲಿಚ್ಛಿಸುತ್ತಿಲ್ಲ ಅಥವಾ ಅದಕ್ಕೆ ನೀಡಬೇಕಾದ ಮನ್ನಣೆಯನ್ನು ನಾವು ನೀಡುತ್ತಿಲ್ಲ ಎಂದರ್ಥವೆಂದಿದ್ದರು. ಆದ್ದರಿಂದ, ನ್ಯಾಯವು ಸಾಮಾಜಿಕ ನಿಯಮಗಳನ್ನು ಮೀರಿದ ತನ್ನದೇ ಆದ ಆಂತರಿಕ ನೈತಿಕತೆಯನ್ನು ಹೊಂದಿದ್ದು ಅದರಿಂದಲೇ ನ್ಯಾಯಸಮ್ಮತ ಕಾನೂನುಗಳನ್ನು ರಚಿಸಲಾಗುತ್ತದೆ. ಫುಲ್ಲರ್‌ ಮತ್ತು ಪಂಡಿತರಾದ H.L.A. ಹಾರ್ಟ್‌‌ರವರು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಸಹೋದ್ಯೋಗಿಗಳಾಗಿದ್ದರು. ನಾಝೀ ಕಾನೂನು ಅದನ್ನು ಕಾನೂನೆಂಬುದನ್ನು ಭಾವಿಸುವುದನ್ನು ತೊರೆಯುವಷ್ಟು ಕೆಟ್ಟದೇ ಎಂಬುದು ನೈಸರ್ಗಿಕ ನಿಯಮ/ನ್ಯಾಯಪರಿಣತರಾದ ಫುಲ್ಲರ್‌ರು ಮತ್ತು ಪ್ರತ್ಯಕ್ಷೈಕ ಪ್ರಮಾಣವಾದಿಗಳಾದ ಹಾರ್ಟ್‌‌ರ ನಡುವಿನ ಕೆಲ ಭಿನ್ನಾಭಿಪ್ರಾಯಗಳಲ್ಲಿ ಒಂದಾಗಿದೆ.

ಜಾನ್‌ ಫಿನ್ನಿಸ್‌‌

[ಬದಲಾಯಿಸಿ]

ಸಂಕೀರ್ಣವಾದ ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಪದ್ಧತಿ ಮತ್ತು ನೈಸರ್ಗಿಕ ನಿಯಮ/ನ್ಯಾಯ ಸಿದ್ಧಾಂತಗಳು ಕೆಲವೊಮ್ಮೆ ಮೇಲಿನ ಅವುಗಳ ವಿವರಣೆಗಳಿಂದಾಗಿ ಭಾವಿಸಬಹುದಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಂದನ್ನೊಂದು ಹೋಲುತ್ತವೆ ಮಾತ್ರವಲ್ಲದೇ ಕೆಲವೊಂದು ನಿರ್ದಿಷ್ಟ ವಿಚಾರಗಳಿಗೆ ಸಂಬಂಧಪಟ್ಟಂತೆ ಮತ್ತೊಂದು "ಬದಿ"ಯ ಅಭಿಪ್ರಾಯವನ್ನು ಅನುಮೋದಿಸುತ್ತವೆ. ನಿರ್ದಿಷ್ಟ ಸಿದ್ಧಾಂತಿಯನ್ನು ಪ್ರತ್ಯಕ್ಷೈಕ ಪ್ರಮಾಣವಾದಿ ಅಥವಾ ಓರ್ವ ನೈಸರ್ಗಿಕ ನಿಯಮ/ನ್ಯಾಯ ಸಿದ್ಧಾಂತಿ ಎಂದು ಗುರುತಿಸುವುದರಲ್ಲಿ ಕೆಲವೊಮ್ಮೆ ಪ್ರಾಧಾನ್ಯತೆ ಮತ್ತು ಮಜಲು/ದರ್ಜೆಗಳನ್ನು, ನಿರ್ದಿಷ್ಟ ಸಿದ್ಧಾಂತಿ'ಯ ಕೃತಿಗಳ ಮೇಲಿನ ಪ್ರಭಾವಗಳನ್ನು ಒಳಗೊಂಡಿರುತ್ತದೆ. ನಿರ್ದಿಷ್ಟವಾಗಿ, ಪ್ರಾಚೀನ ನೈಸರ್ಗಿಕ ನಿಯಮ/ನ್ಯಾಯಪರಿಣತರುಗಳಾದ ಆಕ್ವಿನಾಸ್‌‌ ಹಾಗೂ ಜಾನ್‌ ಲಾಕೆ ವಿಶ್ಲೇಷಣಾತ್ಮಕ ಮತ್ತು ಪ್ರಮಾಣಕ ನ್ಯಾಯಶಾಸ್ತ್ರಗಳ ನಡುವೆ ಯಾವ ಭೇದವನ್ನೂ ತೋರುವುದಿಲ್ಲ. ಆದರೆ ಆಧುನಿಕ ನೈಸರ್ಗಿಕ ನಿಯಮ/ನ್ಯಾಯಪರಿಣತರುಗಳಾದ ಜಾನ್‌ ಫಿನ್ನಿಸ್‌‌ನಂತಹವರು ಪ್ರತ್ಯಕ್ಷೈಕ ಪ್ರಮಾಣವಾದಿಗಳೆಂದು ಹೇಳಿಕೊಂಡರೂ ನ್ಯಾಯವು ಮೂಲತಃ ನೈತಿಕ ವಸ್ತುವಾಗಿದೆ ಎಂದು ಪ್ರತಿಪಾದಿಸುತ್ತಾರೆ.

ವಿಶ್ಲೇಷಣಾತ್ಮಕ ನ್ಯಾಯಶಾಸ್ತ್ರ

[ಬದಲಾಯಿಸಿ]
ಹ್ಯೂಮ್‌‌ರವರು ಪ್ರಖ್ಯಾತವಾದ ಇರಬೇಕು-ಮಾಡಬೇಕು/ಈಸ್‌/ಆಟ್‌‌ ಪ್ರತ್ಯೇಕತೆಯನ್ನು ಮಂಡಿಸಿದರು

ವಿಶ್ಲೇಷಣಾತ್ಮಕ ಅಥವಾ 'ಸ್ಪಷ್ಟೀಕರಣೀಯ' ನ್ಯಾಯಶಾಸ್ತ್ರವು ನ್ಯಾಯಿಕ ವ್ಯವಸ್ಥೆಗಳ ಮಗ್ಗಲುಗಳನ್ನು ಉಲ್ಲೇಖಿಸುವಾಗ ತಟಸ್ಥ ದೃಷ್ಟಿಕೋನ ಮತ್ತು ವಿವರಣಾತ್ಮಕ ಭಾಷೆಯನ್ನು ಬಳಸುತ್ತದೆ. ಇದೊಂದು ನೈಸರ್ಗಿಕ ನಿಯಮ/ನ್ಯಾಯ'ದಲ್ಲಿ ಮಾಡಲಾಗುವ ನ್ಯಾಯವೆಂದರೇನು ಮತ್ತು ಅದು ಏನಾಗಿರಬೇಕು ಎಂಬುದನ್ನು ಜೋಡಿಸುವಿಕೆಯನ್ನು ತಿರಸ್ಕರಿಸುವ ತಾತ್ವಿಕ ಬೆಳವಣಿಗೆಯಾಗಿತ್ತು.[೨೫] ಡೇವಿಡ್‌ ಹ್ಯೂಮ್‌‌ರವರು A ಟ್ರೀಟೈಸ್‌‌ ಆಫ್‌‌ ಹ್ಯೂಮನ್‌ ನೇಚರ್‌‌ [೨೬] ಕೃತಿಯಲ್ಲಿ ಪ್ರಸಿದ್ಧವಾಗಿ ಪ್ರತಿಪಾದಿಸಿರುವ ಹಾಗೆ ಲೌಕಿಕ ಬದುಕಿನಲ್ಲಿ ನಿರ್ದಿಷ್ಟ ರೀತಿಯಲ್ಲಿ ಬದುಕಬೇಕು ಎಂಬುದನ್ನು ವಿವರಿಸುವಲ್ಲಿ ಜನರು ಯಾವಾಗಲೂ ತಪ್ಪುತ್ತಿರುವುದು ನಿರ್ದಿಷ್ಟ ರೀತಿಯ ಚಟುವಟಿಕೆಯಲ್ಲಿ ತೀರ್ಮಾನಿಸುವಿಕೆಯಿಂದಾಗಿಯೇ ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ ಶುದ್ಧ ತರ್ಕದ ಅಂಶವಾಗಿ ಗಮನಿಸಿದಾಗ, ನಿರ್ದಿಷ್ಟ ಸಂದರ್ಭವಿದೆ ಎಂಬ ಕಾರಣಕ್ಕಾಗಿಯೇ ನಾವು ಏನನ್ನೋ ಮಾಡಬೇಕು ಎಂದು ತೀರ್ಮಾನಿಸಲಾಗುವುದಿಲ್ಲ. ಹಾಗಾಗಿ ವಿಶ್ವದ ರೀತಿಯು ಹೇಗಿದೆ ಎಂಬುದನ್ನು ವಿಶ್ಲೇಷಿಸುವಿಕೆ ಹಾಗೂ ಸ್ಪಷ್ಟಪಡಿಸುವಿಕೆಗಳನ್ನು ಕಟ್ಟುನಿಟ್ಟಾಗಿ ಪ್ರಮಾಣಕ ಹಾಗೂ ಮೌಲ್ಯನಿರ್ಧಾರಕ ಉತ್ತರಿಸಲೇಬೇಕಾದ ಪ್ರತ್ಯೇಕ ಪ್ರಶ್ನೆಗಳಂತೆ ಪರಿಭಾವಿಸುವುದು ಅಗತ್ಯವಾಗಿರುತ್ತದೆ.

ವಿಶ್ಲೇಷಣಾತ್ಮಕ ನ್ಯಾಯಶಾಸ್ತ್ರದ ಅತ್ಯಂತ ಪ್ರಮುಖ ಪ್ರಶ್ನೆಗಳು : "ಕಾನೂನುಗಳೆಂದರೇನು?"; "ನ್ಯಾಯ ವೆಂದರೇನು?"; "ಕಾನೂನು ಮತ್ತು ಅಧಿಕಾರ/ಸಮಾಜಶಾಸ್ತ್ರಗಳ ನಡುವಿನ ಸಂಬಂಧವೇನು?"; ಹಾಗೂ, " ನ್ಯಾಯ ಮತ್ತು ನೈತಿಕತೆಗಳ ನಡುವಿನ ಸಂಬಂಧವೇನು?" ಎಂಬವು. ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುವ ವಿಮರ್ಶಕ/ಟೀಕಾಕಾರರ ಸಂಖ್ಯೆಯು ಹೆಚ್ಚುತ್ತಿದ್ದರೂ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತವು ಪ್ರಧಾನ ಸಿದ್ಧಾಂತವಾಗಿದೆ.

ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳು

[ಬದಲಾಯಿಸಿ]

ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತವು ಸರಳವಾಗಿ ಹೇಳುವುದೇನೆಂದರೆ ನ್ಯಾಯವೆಂಬುದು ಒಂದು "ಪ್ರತಿಪಾದಿತವಾದ" ಪದ್ಧತಿ: ಕಾನೂನು/ನಿಯಮಗಳು ಸಾಮಾಜಿಕವಾಗಿ ಒಪ್ಪಿತವಾದ ನಿಯಮಗಳಿಗೆ ಬದ್ಧವಾಗಿ ರಚಿಸಲಾದ ನ್ಯಾಯ/ತರ್ಕಸಮ್ಮತವಾದ ನಿಯಮಗಳಾಗಿರುತ್ತವೆ. ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಪದ್ಧತಿಯಲ್ಲಿ ಕಾನೂನು/ನ್ಯಾಯದ ಬಗೆಗಿನ ದೃಷ್ಟಿಕೋನವು ಎರಡು ವಿಸ್ತೃತ ಮೂಲತತ್ವಗಳನ್ನು ಹೊಂದಿರುವುದು ಸ್ಪಷ್ಟವಿರುತ್ತದೆ: ಮೊದಲಿಗೆ ಕಾನೂನು/ನಿಯಮಗಳು ನ್ಯಾಯ, ನೈತಿಕತೆ, ಅಥವಾ ಇನ್ಯಾವುದೇ ಪ್ರಮಾಣಕ ಅಂಶವನ್ನು ವಿಧಿಸಲು ಪ್ರಯತ್ನಿಸಬಹುದು, ಆದರೆ ಹಾಗೆ ಮಾಡುವುದರಲ್ಲಿನ ಅವುಗಳ ಯಶಸ್ಸು ಅಥವಾ ಸೋಲು ಅವುಗಳ ನ್ಯಾಯ/ತರ್ಕಸಮ್ಮತತೆಯನ್ನು ನಿರ್ಧರಿಸುವುದಿಲ್ಲ. ಸಂಬಂಧಪಟ್ಟ ಸಮಾಜದಲ್ಲಿ ಮನ್ನಣೆ ಪಡೆದ ನಿಯಮಗಳಿಗೆ ಅನುಗುಣವಾಗಿ ಕಾನೂನೊಂದನ್ನು ಸರಿಯಾಗಿ ರೂಪಿಸಿದರೆ ಅದು ಮತ್ತೊಂದು ಮಾನಕಕ್ಕೆ ಸರಿಹೊಂದುವುದೋ ಇಲ್ಲವೋ ಎಂಬುದನ್ನು ಮೀರಿ ಅದುವೆ ತರ್ಕಸಮ್ಮತ ಕಾನೂನು. ಎರಡನೆಯದಾಗಿ, ಕಾನೂನು ಎಂದರೆ ಸಮಾಜದ ಶಿಸ್ತು ಮತ್ತು ಆಡಳಿತವನ್ನು ಸುಸೂತ್ರಗೊಳಿಸಲು ಅನುಕೂಲವಾಗುವಂತಹಾ ನಿಯಮಗಳ ಸಂಗ್ರಹವಾಗಿದೆಯಷ್ಟೆ. ಯಾವುದೇ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಪದ್ಧತಿಯು, ತಾನೇನು ಹೇಳುತ್ತೇನೆ ಅದೇ ನ್ಯಾಯ ಎಂತಹ ಪರಿಸ್ಥಿತಿಯೇ ಇರಲಿ ಅದನ್ನೇ ಪಾಲಿಸಬೇಕು ಎಂದು ಹೇಳುವುದಿಲ್ಲ. ಅದನ್ನು ಸಂಪೂರ್ಣವಾಗಿ ಪ್ರತ್ಯೇಕ ಪ್ರಶ್ನೆಯಾಗಿಯೇ ನೋಡಲಾಗುತ್ತದೆ.

  • ಕಾನೂನು/ನ್ಯಾಯ ಎಂದರೇನು - ಎಂಬುದನ್ನು ಸಾಮಾಜಿಕ ವಸ್ತುಸ್ಥಿತಿಗಳು (ಅಥವಾ "ಮೂಲಗಳು') ನಿರ್ಧರಿಸುತ್ತವೆ
  • ಕಾನೂನಿಗೆ ಎಷ್ಟರಮಟ್ಟಿನ ವಿಧೇಯತೆ ತೋರಿಸಬೇಕು - ಎಂಬುದನ್ನು ನೈತಿಕ ಪರಿಗಣನೆಗಳ ಮೇಲೆ ನಿರ್ಧರಿಸಲಾಗುತ್ತದೆ.

ಬೆಂಥಮ್‌‌ ಮತ್ತು ಆಸ್ಟಿನ್‌‌

[ಬದಲಾಯಿಸಿ]
ಬೆಂಥಮ್‌‌'ರ ಪ್ರಯೋಜನವಾದಿ ಸಿದ್ಧಾಂತಗಳು ಇಪ್ಪತ್ತನೆಯ ಶತಮಾನದವರೆಗೆ ನ್ಯಾಯ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದ್ದವು

ಅತಿ ಹಳೆಯ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳಲ್ಲಿ ಒಬ್ಬರೆಂದರೆ ಜೆರೆಮಿ ಬೆಂಥಮ್‌‌. ಬೆಂಥಮ್‌‌ರು ಪ್ರಯೋಜನವಾದಿ ಕಲ್ಪನೆಯ (ಹ್ಯೂಮ್‌‌ರೊಡನೆ) ಮುಂಚಿನ ಹಾಗೂ ದೃಢ ಬೆಂಬಲಿಗರಲ್ಲಿ ಒಬ್ಬರಾಗಿದ್ದರಲ್ಲದೇ ಸೆರೆಮನೆವಾಸಿಗಳ ಹುರುಪಿನ ಸುಧಾರಕ, ಪ್ರಜಾಪ್ರಭುತ್ವದ ಪ್ರತಿಪಾದಕ ಮತ್ತು ಕಟ್ಟಾ ನಾಸ್ತಿಕರಾಗಿದ್ದರು. ಕಾನೂನು ಮತ್ತು ನ್ಯಾಯಶಾಸ್ತ್ರಗಳ ಬಗೆಗಿನ ಬೆಂಥಮ್‌‌'ರ ದೃಷ್ಟಿಕೋನಗಳನ್ನು ಅವರ ವಿದ್ಯಾರ್ಥಿಯಾಗಿದ್ದ ಜಾನ್‌‌ ಆಸ್ಟಿನ್‌‌ರು ಜನಪ್ರಿಯಗೊಳಿಸಿದ್ದರು. ಆಸ್ಟಿನ್‌‌ರು ೧೮೨೯ರಿಂದ ನವೀನ ಲಂಡನ್‌ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಪ್ರಥಮ ಅಧ್ಯಕ್ಷರಾಗಿದ್ದರು. "ನ್ಯಾಯವೆಂದರೇನು?" ಎಂಬ ಪ್ರಶ್ನೆಗೆ ಆಸ್ಟಿನ್‌‌'ರ ಪ್ರಯೋಜನವಾದಿ ಉತ್ತರವೆಂದರೆ ಕಾನೂನು/ನ್ಯಾಯವು "ಜನರು ವಿಧೇಯತೆಯನ್ನು ಹೊಂದಿರುವ ಸಾರ್ವಭೌಮ ಪೀಠದಿಂದ ಹೊರಡಿಸಲ್ಪಟ್ಟ ದಂಡನೆಯ ಎಚ್ಚರಿಕೆಯ ಹಿನ್ನೆಲೆಯ ಆದೇಶಗಳು" ಎಂಬುದಾಗಿತ್ತು.[೨೭] ಸಮಕಾಲೀನ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳು ಇದನ್ನು ಸಾಕಷ್ಟು ಹಿಂದೆಯೇ ಈ ದೃಷ್ಟಿಕೋನವನ್ನು ತ್ಯಜಿಸಿದ್ದಾರಲ್ಲದೇ, ಅದರ ಅತಿಸರಳೀಕರಣವನ್ನು ನಿರ್ದಿಷ್ಟವಾಗಿ H.L.A. ಹಾರ್ಟ್‌‌ರ ಸರಳೀಕರಣವನ್ನು ಟೀಕಿಸಿದ್ದಾರೆ.

ಹ್ಯಾನ್ಸ್‌‌ ಕೆಲ್ಸೆನ್‌

[ಬದಲಾಯಿಸಿ]

ಹ್ಯಾನ್ಸ್‌‌ ಕೆಲ್ಸೆನ್‌‌ರನ್ನು ೨೦ನೇ ಶತಮಾನದ ಸರ್ವೋತ್ಕೃಷ್ಟ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದಲ್ಲದೇ ಅವರು ಸಂಪ್ರದಾಯ-ನ್ಯಾಯ ರಾಷ್ಟ್ರಗಳಲ್ಲಿ ಕಡಿಮೆಯಾದರೂ ಯೂರೋಪ್‌ ಮತ್ತು ಲ್ಯಾಟಿನ್‌ ಅಮೇರಿಕಾಗಳಲ್ಲಿ ಬಹಳ ಪ್ರಭಾವ ಬೀರಿದ್ದರು. ಅವರ ನ್ಯಾಯದ ಶುದ್ಧ ಸಿದ್ಧಾಂತವು ಮಾನಕ ಪದ್ಧತಿಗಳನ್ನು ತಾನೇ ಮೌಲ್ಯೀಕರಿಸಲು ನಿರಾಕರಿಸಿದ್ದರೂ ಅವುಗಳಿಗೆ ಬದ್ಧವಾಗಿರುವಿಕೆಯನ್ನು ನ್ಯಾಯವೆಂದು ಪ್ರತಿಪಾದಿಸುತ್ತದೆ. ಅಂದರೆ ಇದು 'ನ್ಯಾಯಿಕ ರಾಜತಂತ್ರ'ದಿಂದ 'ನ್ಯಾಯಿಕ ವಿಜ್ಞಾನವ'ನ್ನು ಪ್ರತ್ಯೇಕಿಸುವ ಕಲ್ಪನೆಯಾಗಿದೆ. ನ್ಯಾಯದ ಶುದ್ಧ ಸಿದ್ಧಾಂತದ ಪ್ರಧಾನ ಅಂಶವೆಂದರೆ 'ಮೂಲಭೂತ ಮಾನಕ (ಗ್ರಂಡ್‌ನಾರ್ಮ್‌‌)'ದ ಪರಿಕಲ್ಪನೆ - ನ್ಯಾಯವೇತ್ತರಿಂದ ಮೊದಲೇ ಭಾವಿಸಲಾದ ಒಂದು ಆಧಾರಕಲ್ಪನೆಯ ಮಾನಕವಾಗಿದ್ದು, ಇದರಿಂದಲೇ ಕ್ರಮಾನುಗತ ವ್ಯವಸ್ಥೆಯಲ್ಲಿ ಸಾಂವಿಧಾನಿಕ ನ್ಯಾಯದಿಂದ ಆರಂಭಗೊಂಡು ನ್ಯಾಯಿಕ ವ್ಯವಸ್ಥೆಯ ಎಲ್ಲಾ 'ಕೆಳಮಟ್ಟದ' ಮಾನಕಗಳು ತಮ್ಮ ಅಧಿಕಾರ ಅಥವಾ ನಿರ್ಬಂಧಕತ್ವವನ್ನು ಪಡೆಯುತ್ತವೆ ಎಂದು ಅರ್ಥೈಸಲಾಗಿತ್ತು. ಈ ರೀತಿಯಲ್ಲಿ, ಕೆಲ್ಸೆನ್‌ರು ನ್ಯಾಯಿಕ ಮಾನಕಗಳ ನಿರ್ಬಂಧಕತ್ವವನ್ನು, ಅವುಗಳ ನಿಷ್ಕೃಷ್ಟ 'ನ್ಯಾಯಿಕ' ಲಕ್ಷಣವನ್ನು ಸ್ಪಷ್ಟೀಕರಿಸಲು ಅದನ್ನು ದೇವರಂತಹಾ ಯಾವುದಾದರೂ ಮಾನವಾತೀತ ಶಕ್ತಿ, ವ್ಯಕ್ತೀಕರಿಸಿದ ಪ್ರಕೃತಿ ಅಥವಾ - ಅವರ ಕಾಲದಲ್ಲಿ ಇನ್ನೂ ಪ್ರಾಮುಖ್ಯತೆ ಹೊಂದಿದ್ದ ವ್ಯಕ್ತೀಕರಿಸಿದ ರಾಜ್ಯ/ಸರ್ಕಾರ ಅಥವಾ ರಾಷ್ಟ್ರಗಳ ಜಾಡು ಹಿಡಿದು ಹೋಗಬೇಕಿಲ್ಲ ಎಂದು ಪ್ರತಿಪಾದಿಸುತ್ತಾರೆ.

H. L. A. ಹಾರ್ಟ್‌‌

[ಬದಲಾಯಿಸಿ]

ಆಂಗ್ಲಭಾಷಿಕ ವಿಶ್ವದಲ್ಲಿ, H. L. A. ಹಾರ್ಟ್‌ರು ಪ್ರಧಾನ ಲೇಖಕರಾಗಿದ್ದರು‌, ಇವರು ಕಾನೂನನ್ನು ಸಾಮಾಜಿಕ ನಿಯಮಗಳ ವ್ಯವಸ್ಥೆ ಎಂದು ಭಾವಿಸಬೇಕೆಂದು ಪ್ರತಿಪಾದಿಸಿದ್ದರು. ಹಾರ್ಟ್‌‌ರು ಕೆಲ್ಸೆನ್‌‌'ರ ನ್ಯಾಯಕ್ಕೆ ಬದ್ಧತೆ ಒದಗಿಸಲು ಶಿಕ್ಷೆಗಳನ್ನು ವಿಧಿಸುವುದು ಅನಿವಾರ್ಯ ಎಂಬ ಮತ್ತು ನ್ಯಾಯದಂತಹಾ ಪ್ರಮಾಣಕ ಸಾಮಾಜಿಕ ಸಂಗತಿಯನ್ನು, ಪ್ರಮಾಣಕವಲ್ಲದ ಸಾಮಾಜಿಕ ವಸ್ತುಸ್ಥಿತಿಗಳಿಂದ ನೆಲೆಗೊಳಿಸಲು ಸಾಧ್ಯವಿಲ್ಲ ಎಂಬ ದೃಷ್ಟಿಕೋನವನ್ನು ತಿರಸ್ಕರಿಸಿದ್ದರು. ಹಾರ್ಟ್‌‌ರು ಇಪ್ಪತ್ತನೆಯ ಶತಮಾನದಲ್ಲಿ ದ ಕಾನ್ಸೆಪ್ಟ್‌ ಆಫ್‌‌ ಲಾ ಎಂಬ ತಮ್ಮ ಪುಸ್ತಕದ ಮೂಲಕ ವಿಶ್ಲೇಷಣಾತ್ಮಕ ನ್ಯಾಯಶಾಸ್ತ್ರವನ್ನು ಪ್ರಮುಖ ಸೈದ್ಧಾಂತಿಕ ಚರ್ಚೆಯ ವಿಷಯವನ್ನಾಗಿ ಸುಧಾರಣೆಗೊಳಪಡಿಸಿದರು.[೨೮] ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ ಹಾರ್ಟ್‌‌ರು ಕಾನೂನು ಎಂಬುದು 'ನಿಯಮಗಳ ವ್ಯವಸ್ಥೆ' ಎಂದು ಪ್ರತಿಪಾದಿಸಿದರು.

ಹಾರ್ಟ್‌‌ರು ನಿಯಮಗಳನ್ನು ಪ್ರಾಥಮಿಕ ನಿಯಮಗಳು (ನಡತೆಯ ನಿಯಮಗಳು) ಮತ್ತು ಮಾಧ್ಯಮಿಕ ನಿಯಮಗಳೆಂದು (ಪ್ರಾಥಮಿಕ ನಿಯಮಗಳನ್ನು ನಿರ್ವಹಿಸಲು ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳು) ಎಂಬುದಾಗಿ ವಿಂಗಡಿಸಲಾಗಿದೆ ಎಂದಿದ್ದರು. ದ್ವಿತೀಯ ನಿಯಮಗಳನ್ನು ಶಾಸನರೀತ್ಯಾ ತೀರ್ಮಾನದ ನಿಯಮಗಳು (ನ್ಯಾಯಿಕ ವಿವಾದಗಳನ್ನು ಪರಿಹರಿಸಲು), ಬದಲಾವಣೆಯ ನಿಯಮಗಳು (ಕಾನೂನು/ನಿಯಮಗಳನ್ನು ಬದಲಾಯಿಸಲು ಅನುವು ಮಾಡುವುದು) ಮತ್ತು ಅಂಗೀಕಾರದ ನಿಯಮ (ಕಾನೂನು/ನಿಯಮಗಳನ್ನು ನ್ಯಾಯಸಮ್ಮತ ಎಂದು ಮನ್ನಣೆ ನೀಡುವುದಕ್ಕೆ ಅವಕಾಶ ನೀಡುವುದು) ಎಂಬುದಾಗಿ ವಿಂಗಡಿಸಲಾಗಿದೆ. "ಅಂಗೀಕಾರದ ನಿಯಮ"ವು, ಅಧಿಕಾರಿಗಳ (ವಿಶೇಷವಾಗಿ ನ್ಯಾಯಾಧೀಶರು) ನಿರ್ದಿಷ್ಟ ಚಟುವಟಿಕೆ ಹಾಗೂ ನಿರ್ಧಾರಗಳನ್ನು ನ್ಯಾಯದ ಮೂಲ ಎಂದು ಮನ್ನಣೆ ನೀಡುವಂತಹಾ ರೂಢಿಗತ ಪದ್ಧತಿಯಾಗಿದೆ. ಹಾರ್ಟ್‌ರ ಬಗೆಗಿನ ಉತ್ಕೃಷ್ಟ ‌ಪುಸ್ತಕವೆಂದರೆ ನೀಲ್‌ ಮೆಕ್‌ಕಾರ್ಮಿಕ್[೨೯]ರು ೧೯೮೧ರಲ್ಲಿ ರಚಿಸಿದ್ದ ಪುಸ್ತಕ, ಇದರಲ್ಲಿ (ಎರಡನೇ ಆವೃತ್ತಿಯು ೨೦೦೭ರಲ್ಲಿ ಬಿಡುಗಡೆಯಾಗಲಿದೆ), ಅವರು ಮತ್ತಷ್ಟು ಪರಿಷ್ಕರಿಸಿ ಕೆಲ ಪ್ರಮುಖ ಟೀಕೆಗಳನ್ನು ಕೂಡ ಪ್ರಸ್ತಾಪಿಸಿದ್ದಾರೆ, ಇವುಗಳಿಂದಾಗಿ ಮೆಕ್‌ಕಾರ್ಮಿಕ್‌ರು ತಮ್ಮದೇ ಆದ ಸಿದ್ಧಾಂತವನ್ನು ಹುಟ್ಟುಹಾಕಲು (ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅವರ ಇತ್ತೀಚಿನ ಪ್ರಕಟಿತ ಕೃತಿ ಇನ್‌ಸ್ಟಿಟ್ಯೂಷನ್ಸ್‌ ಆಫ್‌ ಲಾ , ೨೦೦೭) ಕಾರಣವಾಯಿತು. ಇತರ ಪ್ರಮುಖ ಟೀಕಾಕಾರರುಗಳಲ್ಲಿ ರೊನಾಲ್ಡ್‌ ಡ್ವಾರ್ಕಿನ್‌, ಜಾನ್‌ ಫಿನ್ನಿಸ್‌‌, ಮತ್ತು ಜೋಸೆಫ್‌‌ ರಾಜ್‌‌ ಸೇರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಕಾನೂನಿನ ಲಕ್ಷಣದ ಬಗೆಗಿನ ಚರ್ಚೆಗಳು ಹೆಚ್ಚು ಹೆಚ್ಚು ಸೂಕ್ಷ್ಮವಿವರಗಳನ್ನು ಒಳಗೊಳ್ಳುತ್ತಿದೆ. ಅವುಗಳಲ್ಲಿ ಒಂದು ಪ್ರಮುಖ ಚರ್ಚೆಯೆಂದರೆ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತದ ಒಳಗಿನದು. ಇವುಗಳಲ್ಲಿ ಒಂದು ಸಿದ್ಧಾಂತವನ್ನು ಅನನ್ಯಸಾಧಾರಣ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತ ವೆನ್ನಲಾಗುತ್ತದಲ್ಲದೇ, ಮಾನಕ ಪದ್ಧತಿಯೊಂದರ ನ್ಯಾಯಿಕ ನ್ಯಾಯಸಮ್ಮತತೆಯು ಅದರ ನೈತಿಕ ಸರಿಯಾಗಿರುವಿಕೆಯ ಮೇಲೆ ಆಧಾರಿತವಾಗಿರುವುದಿಲ್ಲ ಎಂಬ ದೃಷ್ಟಿಕೋನವನ್ನು ಹೊಂದಿದೆ. ದ್ವಿತೀಯ ಸಿದ್ಧಾಂತವನ್ನು ಸಮಗ್ರ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತ ವೆನ್ನಲಾಗುತ್ತದೆ, ಇದರ ಪ್ರಮುಖ ಪ್ರತಿಪಾದಕರು ವಿಲ್‌ ವಾಲುಚೌ, ಮಾನಕ ಪದ್ಧತಿಯೊಂದರ ನ್ಯಾಯಿಕ ನ್ಯಾಯ/ತರ್ಕಸಮ್ಮತತೆಯನ್ನು ನೈತಿಕ ಪರಿಗಣನೆಗಳು ನಿರ್ಧರಿಸಬಹುದು ಆದರೆ ಇದೇ ಯಾವಾಗಲೂ ನಡೆಯಬೇಕೆಂದಿಲ್ಲ ಎಂಬ ದೃಷ್ಟಿಕೋನವನ್ನು ಇದು ಹೊಂದಿದೆ.

ಜೋಸೆಫ್‌‌ ರಾಜ್‌‌

[ಬದಲಾಯಿಸಿ]

ಕೆಲ ತತ್ವಜ್ಞಾನಿಗಳು ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತವು ನ್ಯಾಯ ಮತ್ತು ನೈತಿಕತೆಗಳ ನಡುವೆ "ಯಾವುದೇ ಸಂಬಂಧವಿರಲೇಬೇಕೆಂದಿಲ್ಲ" ಎಂದು ಪ್ರತಿಪಾದಿಸುವ ಸಿದ್ಧಾಂತವಾಗಿದೆ ಎಂದು ಪ್ರತಿಪಾದಿಸುತ್ತಿದ್ದರೂ ; ಜೋಸೆಫ್‌‌ ರಾಜ್‌‌, ಜಾನ್‌‌ ಗಾರ್ಡ್‌‌ನರ್‌‌, ಮತ್ತು ಲೆಸ್ಲೀ ಗ್ರೀನ್‌‌ರವರು ಒಳಗೊಂಡಂತೆ ಕೆಲ ಪ್ರಭಾವೀ ಸಮಕಾಲೀನ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳು ಆ ದೃಷ್ಟಿಕೋನವನ್ನು ತಿರಸ್ಕರಿಸಿದ್ದರು. ರಾಜ್‌ರು ಎತ್ತಿ ತೋರಿಸುವ ಹಾಗೆ, ನ್ಯಾಯಿಕ ವ್ಯವಸ್ಥೆಯು ತನ್ನ ವ್ಯಾಪ್ತಿಯಲ್ಲಿ ಹೊಂದಿರದೇ ಇರುವಂತಹಾ ದುಷ್ಕೃತ್ಯಗಳಿಗೆ ಎಂಬುದು ಒಪ್ಪಲೇಬೇಕಾದ ಸತ್ಯ (ಉದಾಹರಣೆಗೆ, ಇದರಲ್ಲಿ ಅತ್ಯಾಚಾರ ಅಥವಾ ಕೊಲೆ ನಡೆಯಲು ಸಾಧ್ಯವಿರೋದಿಲ್ಲ).

ಜೋಸೆಫ್‌‌ ರಾಜ್‌‌ರು ಪ್ರತ್ಯಕ್ಷೈಕ ಪ್ರಮಾಣವಾದದ ದೃಷ್ಟಿಕೋನವನ್ನು ಸಮರ್ಥಿಸುತ್ತಾರಾದರೂ, ಆದರೆ ದ ಅಥಾರಿಟಿ ಆಫ್‌ ಲಾ ದಲ್ಲಿ ಪ್ರಸ್ತಾಪಿಸಿರುವ ಹಾರ್ಟ್‌‌'ರ "ಮೆದು ಸಾಮಾಜಿಕ ಸಿದ್ಧಾಂತ" ವಿಚಾರಸರಣಿಯನ್ನು ಟೀಕಿಸುತ್ತಾರೆ.[೩೦] ರಾಜ್‌ರು ನೈತಿಕ ತರ್ಕಗಳಿಗೆ ಒಳಪಡದ ಸ್ಪಷ್ಟವಾಗಿ ಸಾಮಾಜಿಕ ಸ್ರೋತಗಳಿಂದಲೇ ಮನ್ನಣೆ ಪಡೆಯಲ್ಪಡುವ ಕಾನೂನು ಎಂಬುದೊಂದು ಅಧಿಕಾರ ಎಂದು ಪ್ರತಿಪಾದಿಸುತ್ತಾರೆ. ಸಪ್ರಮಾಣಬದ್ಧತೆಗೆ ಹೊರತಾಗಿ ಮಾಡಲಾದ ನಿಯಮಗಳ ಯಾವುದೇ ವಿಂಗಡಣೆಯು ನ್ಯಾಯಶಾಸ್ತ್ರಕ್ಕಿಂತಲೂ ಸಮಾಜಶಾಸ್ತ್ರಕ್ಕೆ ಸಂಬಂಧಪಟ್ಟಿದುದಾಗಿದೆ.[೩೧]

ರೊನಾಲ್ಡ್‌ ಡ್ವಾರ್ಕಿನ್‌

[ಬದಲಾಯಿಸಿ]
ರೊನಾಲ್ಡ್‌ ಡ್ವಾರ್ಕಿನ್‌ರು ಪ್ರಜಾಪ್ರಭುತ್ವವಾಗಿ ನಿರ್ಧಾರಿತವಾದ ಕಾನೂನು/ನಿಯಮಗಳನ್ನು ತೆಗೆದುಹಾಕುವಂತಹಾ ನ್ಯಾಯಾಧೀಶರ' ಸಾಮರ್ಥ್ಯವನ್ನು ಸಮರ್ಥಿಸುವ ಕಾನೂನು/ನ್ಯಾಯ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಲಾ'ಸ್‌‌ ಎಂಪೈರ್‌ [೩೨] ಎಂಬ ತಮ್ಮ ಕೃತಿಯಲ್ಲಿ ಡ್ವಾರ್ಕಿನ್‌ರು ಹಾರ್ಟ್‌ರನ್ನು ಮತ್ತು ಕಾನೂನನ್ನು ನೈತಿಕ ವಿಷಯವನ್ನಾಗಿ ಪರಿಗ್ರಹಿಸಲಿಕ್ಕೆ ನಿರಾಕರಿಸಿದ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳನ್ನು ಖಂಡಿಸಿದ್ದಾರೆ. ಡ್ವಾರ್ಕಿನ್‌ರು ಕಾನೂನು/ನ್ಯಾಯವೆಂಬುದು 'ವಿವರಣಾತ್ಮಕ ' ಕಲ್ಪನೆಯಾಗಿದ್ದು, ಇದರಲ್ಲಿ ನ್ಯಾಯಾಧೀಶರು ನ್ಯಾಯಿಕ ಸಮಸ್ಯೆಗೆ ಸಾಂವಿಧಾನಿಕ ಸಂಪ್ರದಾಯಗಳಿಗೆ ಬದ್ಧವಾದ ಸೂಕ್ತವಾದ ಮತ್ತು ಉತ್ತಮ ನ್ಯಾಯಯುತ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುತ್ತದೆ ಎನ್ನುತ್ತಾರೆ. ಅವರ ಪ್ರಕಾರ, ನ್ಯಾಯವೆಂಬುದು ಸಂಪೂರ್ಣವಾಗಿ ಸಾಮಾಜಿಕ ವಸ್ತುಸ್ಥಿತಿಗಳ ಮೇಲೆ ಆಧಾರಿತವಾಗಿರುವುದಿಲ್ಲ, ಬದಲಿಗೆ ನಾವು ಅಂತರ್ಬೋಧೆಯಿಂದ ನ್ಯಾಯಿಕವೆಂದು ಪರಿಗಣಿಸುವ ಸಾಂಸ್ಥಿಕ ವಸ್ತುಸ್ಥಿತಿಗಳು ಹಾಗೂ ಪದ್ಧತಿಗಳಿಗೆ ನೈತಿಕವಾಗಿ ಸೂಕ್ತ ಸಮರ್ಥನೆಯನ್ನು ಒಳಗೊಂಡಿರುತ್ತದೆ. ಇದು ಆಯಾ ಸಮಾಜದ ಪದ್ಧತಿಗಳ ಸಮರ್ಥನೆಯ ಬಗ್ಗೆ ಕೆಲ ನೈತಿಕ ಸತ್ಯಗಳನ್ನು ಅರಿವಾಗದ ಹೊರತು ಸಮಾಜವೊಂದು ನ್ಯಾಯಿಕ ವ್ಯವಸ್ಥೆಗೆ ಬದ್ಧವಾಗಿದೆಯೇ ಅಥವಾ ಅದರ ಕಾನೂನು/ನಿಯಮಗಳು ಯಾವುದಾದರೂ ಇದ್ದರೆ ಅವು ಏನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂಬ ಡ್ವಾರ್ಕಿನ್‌'ರ ದೃಷ್ಟಿಕೋನವನ್ನು ತೋರಿಸುತ್ತದೆ. ಇದು ಸಮಾಜದ *ಯಾವೊಬ್ಬ ವ್ಯಕ್ತಿಯೂ* ಅದರ ಕಾನೂನುಗಳು ಏನು ಎಂಬುದನ್ನು ತಿಳಿಯಲು ಸಾಧ್ಯವಿಲ್ಲ (ಯಾಕೆಂದರೆ ಅದರ ಪದ್ಧತಿಗಳ ಬಗ್ಗೆ ಸೂಕ್ತವಾದ ಸಮರ್ಥನೆಗಳು ಯಾವೊಬ್ಬ ವ್ಯಕ್ತಿಗೂ ತಿಳಿದಿರುವುದಿಲ್ಲ) ಎಂಬ ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತಿಗಳು ಅಥವಾ ನ್ಯಾಯಿಕ ಭಾವಸತ್ತಾವಾದಿಗಳ ದೃಷ್ಟಿಕೋನಕ್ಕೆ ಪ್ರತಿಯಾದ ಡ್ವಾರ್ಕಿನ್‌'ರ ದೃಷ್ಟಿಕೋನಕ್ಕೆ ಹೊಂದುತ್ತದೆ.

ಡ್ವಾರ್ಕಿನ್‌'ರ ಸಮಗ್ರತೆಯಾಗಿ ನ್ಯಾಯ ಸಿದ್ಧಾಂತದ ಪ್ರಕಾರ ವ್ಯಾಖ್ಯಾನವು ಎರಡು ಆಯಾಮಗಳನ್ನು ಹೊಂದಿರುತ್ತದೆ. ಪಠ್ಯವೊಂದನ್ನು ವ್ಯಾಖ್ಯಾನವೆಂದು ಪರಿಗಣಿಸಬೇಕೆಂದರೆ, ಅದರಲ್ಲಿನ ವಾಚ್ಯಾರ್ಥವು ಸೂಕ್ತ ವಾದ ಮಾನದಂಡಕ್ಕೆ ಒಳಪಟ್ಟಿರಬೇಕು. ಆದರೆ ಅಂತಹಾ ಸೂಕ್ತವೆನಿಸಿದ ವ್ಯಾಖ್ಯಾನಗಳಲ್ಲಿ, ಡ್ವಾರ್ಕಿನ್‌ರು ಸಮುದಾಯದ ರಾಜನೈತಿಕ ಪದ್ಧತಿಗಳನ್ನು ಉತ್ತಮರೀತಿಯಲ್ಲಿ ಬೆಳಕಿಗೆ ತರುವ ಅಥವಾ ಅವುಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸುವುದೇ ಸರಿಯಾದ ವ್ಯಾಖ್ಯಾನವೆಂದು ಅಭಿಪ್ರಾಯಪಡುತ್ತಾರೆ. ಆದರೆ ಅನೇಕ ಲೇಖಕರು ಯಾವುದೇ ನಿರ್ದಿಷ್ಟ ಸಮುದಾಯದ ಸಂಕೀರ್ಣ ಪದ್ಧತಿಗಳಿಗೆ ಏಕಮಾತ್ರ ಅತ್ಯುತ್ತಮ ಸಮರ್ಥನೆಯು ಇದೆ ಯೇ ಎಂದು ಅನುಮಾನ ವ್ಯಕ್ತಪಡಿಸಿದರೆ, ಇತರರು ಒಂದು ವೇಳೆ ಹಾಗಿದ್ದರೂ ಅವುಗಳನ್ನು ಆಯಾ ಸಮುದಾಯದ ಕಾನೂನು/ನ್ಯಾಯದ ಭಾಗವಾಗಿ ಪರಿಗಣಿಸಬೇಕಾಗುತ್ತದೆಯೇ ಎಂಬ ಸಂದಿಗ್ಧತೆಯನ್ನು ತೋರಿದರು.

ನ್ಯಾಯಿಕ ವಾಸ್ತವವಾದ

[ಬದಲಾಯಿಸಿ]
ಆಲಿವರ್‌ ವೆಂಡೆಲ್‌ ಹೋಮ್ಸ್‌‌ರು ಸ್ವಘೋಷಿತ ನ್ಯಾಯಿಕ ವಾಸ್ತವತಾವಾದಿಯಾಗಿದ್ದರು

ನ್ಯಾಯಿಕ ವಾಸ್ತವವಾದವೆಂಬುದು ಕೆಲ ಸ್ಕಾಂಡಿನೇವಿಯಾದ ಮತ್ತು ಅಮೇರಿಕನ್‌ ಲೇಖಕರುಗಳಲ್ಲಿ ಜನಪ್ರಿಯವಾದ ದೃಷ್ಟಿಕೋನವಾಗಿತ್ತು. ಸಂಶಯವಾದಿ ಪ್ರಕೃತಿಯ ಈ ದೃಷ್ಟಿಕೋನವು ಕಾನೂನು/ನ್ಯಾಯವನ್ನು ನ್ಯಾಯಾಲಯಗಳು, ಕಾನೂನು ಕಚೇರಿಗಳು ಮತ್ತು ಆರಕ್ಷಕ ಠಾಣೆಗಳಲ್ಲಿನ ವಾಸ್ತವಿಕ ಪದ್ಧತಿಗಳಿಂದ ನಿರ್ಧರಿಸಿ ಅರ್ಥೈಸಿಕೊಳ್ಳಬೇಕೇ ವಿನಃ ಶಾಸನಗಳು ಅಥವಾ ವಿದ್ವತ್ಪೂರ್ಣ ಗ್ರಂಥಗಳಲ್ಲಿ ಲಿಖಿತವಾದ ನಿಯಮಗಳು ಮತ್ತು ಬೋಧನೆ/ಸಿದ್ಧಾಂತಗಳ ಮೂಲಕ ಅಲ್ಲ ಎನ್ನುತ್ತದೆ. ಕಾನೂನಿಗೆ ಸಂಬಂಧಪಟ್ಟ ಸಮಾಜಶಾಸ್ತ್ರದೊಂದಿಗೆ ಇದು ಕೆಲ ಸಾಮ್ಯತೆಗಳನ್ನು ಹೊಂದಿದೆ. ನ್ಯಾಯಿಕ ವಾಸ್ತವವಾದದ ಸಾರಭೂತ ಸಿದ್ಧಾಂತದ ಪ್ರಕಾರ ಎಲ್ಲಾ ನ್ಯಾಯವ್ಯವಸ್ಥೆಗಳೂ ಮಾನವನಿರ್ಮಿತವಾದವು, ಹಾಗಾಗಿ ಮಾನವಸಹಜ ದೌರ್ಬಲ್ಯಗಳು, ಅಸ್ಥಿರತೆಗಳು ಹಾಗೂ ದೋಷಗಳಿಗೆ ಪಕ್ಕಾಗಿರುವ ಸಾಧ್ಯತೆಯನ್ನು ಹೊಂದಿರುತ್ತವೆ ಎಂದು ಪ್ರತಿಪಾದಿಸುತ್ತದೆ.

ಇಂದು ನ್ಯಾಯಾಧೀಶ ಆಲಿವರ್‌ ವೆಂಡೆಲ್‌ ಹೋಮ್ಸ್‌‌, Jr.ರನ್ನು ಪ್ರಮುಖ, ಅಮೇರಿಕನ್‌‌ ನ್ಯಾಯಿಕ ವಾಸ್ತವವಾದದ ಆದ್ಯಪ್ರವರ್ತಕರೆಂದು ಗುರುತಿಸುವುದು ಸಾಮಾನ್ಯವಾಗಿದೆ (ಇತರೆ ಪ್ರಭಾವಿಗಳಲ್ಲಿ ರಾಸ್ಕೋ ಪೌಂಡ್‌‌, ಕಾರ್ಲ್‌ ಲೆವೆಲ್ಲಿನ್‌‌‌ ಮತ್ತು ನ್ಯಾಯಾಧೀಶ ಬೆಂಜಮಿನ್‌‌ ಕಾರ್ಡೋಜೋ ಸೇರಿದ್ದಾರೆ). U.S. ನ್ಯಾಯಿಕ ವಾಸ್ತವವಾದ ಚಳುವಳಿಯ ಮತ್ತೋರ್ವ ಸ್ಥಾಪಕರಾದ ಕಾರ್ಲ್‌ ಲೆವೆಲ್ಲಿನ್‌‌‌ರು ಇದೇ ರೀತಿ ನ್ಯಾಯವೆಂಬುದು ಖಾಸಗಿ ಪೂರ್ವಾಗ್ರಹಗಳ ಮೇಲೆ ಆಧಾರಿತವಾಗಿ ಪ್ರಕರಣವೊಂದರ ತೀರ್ಮಾನವನ್ನು ಕೈಗೊಳ್ಳುವ ನ್ಯಾಯಾಧೀಶರ ಕೈಗೊಂಬೆಯಾಗುವುದಕ್ಕಿಂತ ಸ್ವಲ್ಪ ಹೆಚ್ಚಿನದಾದುದು ಎಂಬ ಭಾವನೆ ಹೊಂದಿದ್ದರು.[೩೩] ಏಕ್ಸೆಲ್‌ ಹೇಗರ್‌ಸ್ಟಾರ್ಮ್‌ರ ಕೃತಿಗಳನ್ನು ಅನೇಕರು ಸ್ಕಾಂಡಿನೇವಿಯನ್‌ ನ್ಯಾಯಿಕ ವಾಸ್ತವವಾದದ ಪ್ರಮುಖ ಪ್ರೇರಣೆ ಎಂದು ಪರಿಗಣಿಸುತ್ತಾರೆ. ಹೊರಮುಖೇನ/ಪ್ರಮುಖ/ಸಾಧಾರಣ ಜನಪ್ರಿಯತೆಯು ಕುಗ್ಗಿದ್ದರೂ, ವಾಸ್ತವತಾವಾದಿಗಳು ಸ್ತ್ರೀಸ್ವಾತಂತ್ಯ್ರ ನ್ಯಾಯಿಕ ಸಿದ್ಧಾಂತ, ಪ್ರಮುಖ ಜನಾಂಗೀಯ ಸಿದ್ಧಾಂತ, ಕಾನೂನು/ನ್ಯಾಯ ಮತ್ತು ಆರ್ಥಿಕತೆ ಹಾಗೂ ಕಾನೂನು ಮತ್ತು ಸಮಾಜದಂತಹಾ ನಿರ್ಧಾರಕ ನ್ಯಾಯಿಕ ಅಧ್ಯಯನಗಳು (ಡಂಕನ್‌ ಕೆನಡಿ ಮತ್ತು ರಾಬರ್ಟೋ ಅಂ/ಉಂಗರ್‌‌ರಂತಹಾ ಪಂಡಿತೋತ್ತಮರು) ಸೇರಿದಂತೆ ಇಂದು ವ್ಯಾಪಕ ವಿಸ್ತಾರದ ನ್ಯಾಯಶಾಸ್ತ್ರೀಯ ಶಾಲೆಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ.

ಐತಿಹಾಸಿಕ ಪಂಥ

[ಬದಲಾಯಿಸಿ]

ಜರ್ಮನ್‌‌ ಐತಿಹಾಸಿಕ ನ್ಯಾಯಶಾಸ್ತ್ರವು ಜರ್ಮನ್‌‌ ಕಾನೂನಿನ ಪ್ರಸ್ತಾಪಿತ ಸಂಹಿತೀಕರಣದ ಮೇಲಿನ ಚರ್ಚೆಯ ಸಮಯದಲ್ಲಿ ಚರ್ಚೆಗೆ ಬಂದಿತು. ಫ್ರೆಡ್‌ರಿಕ್‌ ಕಾರ್ಲ್‌ ವಾನ್‌ ಸೇವಿಗ್ನಿರವರು ತಮ್ಮ ಆನ್‌‌ ದ ವೊಕೇಷನ್‌ ಆಫ್‌ ಅವರ್‌ ಏಜ್‌‌ ಫಾರ್‌ ಲೆಜಿಸ್ಲೇಷನ್‌ ಅಂಡ್‌ ಜ್ಯೂರಿಸ್‌ಪ್ರೂಡೆನ್ಸ್[೩೪] ತಮ್ಮ ಗ್ರಂಥದಲ್ಲಿ ಜರ್ಮನ್ನರ ಸಂಪ್ರದಾಯಗಳು, ಪದ್ಧತಿಗಳು ಹಾಗೂ ನಂಬಿಕೆಗಳಲ್ಲಿ ಸಂಹಿತೆಗಳ ಬಗ್ಗೆ ನಂಬಿಕೆಯು ಇರದಿದ್ದುದರಿಂದ ಜರ್ಮನಿಯು ಸಂಹಿತೀಕರಣವನ್ನು ಬೆಂಬಲಿಸುವ ನ್ಯಾಯಿಕ ಭಾಷೆಯನ್ನು ಹೊಂದಿರಲಿಲ್ಲ ಎಂದು ಪ್ರತಿಪಾದಿಸಿದರು. ಐತಿಹಾಸಿಕ ಸಿದ್ಧಾಂತವಾದಿಗಳು ನ್ಯಾಯವು ಸಮಾಜದೊಂದಿಗೆ ಉದ್ಭವಿಸುತ್ತದೆ ಎಂಬ ನಂಬಿಕೆಯನ್ನು ಹೊಂದಿರುತ್ತಿದ್ದರು.

ಪ್ರಮಾಣಕ ನ್ಯಾಯಶಾಸ್ತ್ರ

[ಬದಲಾಯಿಸಿ]

"ನ್ಯಾಯವೆಂದರೇನು?" ಎಂಬ ಪ್ರಶ್ನೆಯೊಂದಿಗೆ, ನ್ಯಾಯಿಕ ಸಿದ್ಧಾಂತವು ಕಾನೂನು/ನ್ಯಾಯದ ಪ್ರಮಾಣಕ ಅಥವಾ "ಮೌಲ್ಯನಿರ್ಧಾರಕ" ಸಿದ್ಧಾಂತಗಳಿಗೂ ಸಂಬಂಧಿಸಿದುದಾಗಿದೆ. ಕಾನೂನು/ನ್ಯಾಯದ ಗುರಿ ಅಥವಾ ಉದ್ದೇಶವೇನು? ಯಾವ ನೈತಿಕ ಅಥವಾ ರಾಜನೈತಿಕ ಸಿದ್ಧಾಂತಗಳು ಕಾನೂನು/ನ್ಯಾಯಕ್ಕೆ ಸೂಕ್ತ ತಳಹದಿ ಹಾಕಿಕೊಡುತ್ತವೆ? ಕಾನೂನು/ನ್ಯಾಯದ ವಾಸ್ತವ ಕಾರ್ಯವಿಧಾನವೇನು? ಯಾವ ತರಹದ ಚಟುವಟಿಕೆಗಳಿಗೆ ದಂಡನೆ ವಿಧಿಸಬೇಕು, ಹಾಗೂ ಯಾವ ತರಹದ ದಂಡನೆಗಳನ್ನು ವಿಧಿಸಲಿಕ್ಕೆ ಅನುಮತಿಸಬಹುದು? ನ್ಯಾಯವೆಂದರೇನು? ನಾವು ಹೊಂದಿರುವ ಹಕ್ಕುಗಳೇನು? ಕಾನೂನನ್ನು ಪಾಲಿಸಬೇಕೆಂಬುದು ಕರ್ತವ್ಯವೇನು? ಕಾನೂನಿನ ನಿಯಮಗಳು ಯಾವ ರೀತಿಯ/ಮಟ್ಟದ ಮೌಲ್ಯಗಳನ್ನು ಹೊಂದಿರುತ್ತವೆ? ಇವುಗಳಿಗೆ ಸಂಬಂಧಿಸಿದಂತೆ ವಿವಿಧ ಪಂಥ/ಸಿದ್ಧಾಂತಗಳು ಹಾಗೂ ಮುಂಚೂಣಿಯ ಚಿಂತಕರು ಕೆಳಕಂಡಂತಿದ್ದಾರೆ.

ಋಜುತ್ವ ನ್ಯಾಯಶಾಸ್ತ್ರ

[ಬದಲಾಯಿಸಿ]
ಪ್ಲಾಟೋ (ಎಡ) ಮತ್ತು ಅರಿಸ್ಟಾಟಲ್‌‌ (ಬಲ), ದ ಸ್ಕೂಲ್‌ ಆಫ್‌ ಅಥೆನ್ಸ್‌ ನ ವರದಿ

ಸಮಕಾಲೀನ ಋಜುತ್ವ ಆಚಾರಸೂತ್ರಗಳಂತಹಾ ಅರೆಟಾಯಿಕ್‌‌ ನೈತಿಕ ಸಿದ್ಧಾಂತಗಳು ನೈತಿಕತೆಯ ವಿಚಾರದಲ್ಲಿ ಗುಣ/ಶೀಲದ ಮಹತ್ವವನ್ನು ಸಾರುತ್ತವೆ. ಋಜುತ್ವ ನ್ಯಾಯಶಾಸ್ತ್ರವು ಕಾನೂನು/ನಿಯಮಗಳು ನಾಗರೀಕರಲ್ಲಿ ಉನ್ನತ ಶೀಲವಂತಿಕೆ ರೂಪುಗೊಳ್ಳುವಂತೆ ಪ್ರೋತ್ಸಾಹಿಸುವಂತಿರಬೇಕು ಎಂಬ ದೃಷ್ಟಿಕೋನವನ್ನು ಹೊಂದಿದೆ. ಐತಿಹಾಸಿಕವಾಗಿ, ಈ ವಿಚಾರಸರಣಿಯನ್ನು ಪ್ರಮುಖವಾಗಿ ಅರಿಸ್ಟಾಟಲ್‌‌ರೊಂದಿಗೆ ಅಥವಾ ನಂತರ ಥಾಮಸ್‌ ಆಕ್ವಿನಾಸ್‌‌ರೊಂದಿಗೆ ತಳಕುಹಾಕಲಾಗುತ್ತದೆ. ಸಮಕಾಲೀನ ಋಜುತ್ವ ನ್ಯಾಯಶಾಸ್ತ್ರವು ಋಜುತ್ವ ಆಚಾರಸೂತ್ರಗಳ ಮೇಲಿನ ತಾತ್ವಿಕ ಗ್ರಂಥಗಳಿಂದ ಸ್ಫೂರ್ತಿ ಪಡೆದುದಾಗಿದೆ.

ಕರ್ತವ್ಯಶಾಸ್ತ್ರ

[ಬದಲಾಯಿಸಿ]
ಕಾಂಟ್‌ರು ಸರ್ವೋತ್ಕೃಷ್ಟ ಜ್ಞಾನೋದಯ ಚಿಂತಕರಾಗಿದ್ದರು

ಕರ್ತವ್ಯಶಾಸ್ತ್ರ ಎಂದರೆ "ಕರ್ತವ್ಯದ ಸಿದ್ಧಾಂತ ಅಥವಾ ನೈತಿಕ ಕಟ್ಟುಪಾಡುಗಳು."[೩೫] ತತ್ವಜ್ಞಾನಿಗಳಾದ ಇಮ್ಯಾನ್ಯುಯೆಲ್‌ ಕಾಂಟ್‌ರು ‌ಪ್ರಭಾವಿ ಕರ್ತವ್ಯಶಾಸ್ತ್ರೀಯ ಕಾನೂನು ಸಿದ್ಧಾಂತವೊಂದನ್ನು ಸೂತ್ರೀಕರಿಸಿದ್ದರು. ಅವರು ಯಾವುದೇ ನಿಯಮವು ಸಾರ್ವತ್ರೀಕರಿಸಲ್ಪಡುವಂತಿರಬೇಕು : ನಾವು ಉಳಿದವರೆಲ್ಲರೂ ಅದನ್ನು ಪಾಲಿಸುವಂತೆ ಮಾಡಲು ನಾವು ಸಿದ್ಧರಿರಬೇಕು ಎಂದು ಪ್ರತಿಪಾದಿಸುತ್ತಿದ್ದರು. ಓರ್ವ ಸಮಕಾಲೀನ ಕರ್ತವ್ಯಶಾಸ್ತ್ರೀಯ ವಿಚಾರಸರಣಿಯನ್ನು ನ್ಯಾಯಿಕ ತತ್ವಜ್ಞಾನಿ ರೊನಾಲ್ಡ್‌ ಡ್ವಾರ್ಕಿನ್‌ರ ಕೃತಿಗಳಲ್ಲಿ ನೋಡಬಹುದಾಗಿದೆ.

ಪ್ರಯೋಜನವಾದಿ ಸಿದ್ಧಾಂತ/ಪ್ರಯೋಜನವಾದಿತ್ವ

[ಬದಲಾಯಿಸಿ]
ಮಿಲ್‌ರು ಕಾನೂನು/ನ್ಯಾಯವು ಸಂತೋಷವನ್ನುಂಟು ಮಾಡುವಂತಿರಬೇಕೆಂದು ನಂಬಿದ್ದರು

ಪ್ರಯೋಜನವಾದಿ ಸಿದ್ಧಾಂತ/ಪ್ರಯೋಜನವಾದಿತ್ವವು ಕಾನೂನು/ನಿಯಮಗಳನ್ನು ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಾಧ್ಯವಾದಷ್ಟೂ ಉತ್ತಮ ರೀತಿಯ ನ್ಯಾಯ ಒದಗಿಸಲು ಸಾಧ್ಯವಾಗುವಂತೆ ರೂಪಿಸಬೇಕೆಂಬ ದೃಷ್ಟಿಕೋನವನ್ನು ಹೊಂದಿದೆ. ಐತಿಹಾಸಿಕವಾಗಿ, ಕಾನೂನು/ನ್ಯಾಯದ ಬಗೆಗಿನ ಪ್ರಯೋಜನವಾದಿ ವಿಚಾರಶೀಲತೆಯನ್ನು ಶ್ರೇಷ್ಠ ತತ್ವಜ್ಞಾನಿ, ಜೆರೆಮಿ ಬೆಂಥಮ್‌‌ರೊಡನೆ ತಳಕು ಹಾಕಲಾಗುತ್ತದೆ. ಜಾನ್‌‌ ಸ್ಟುವರ್ಟ್‌‌ ಮಿಲ್‌‌ರು ಬೆಂಥಮ್‌‌'ರ ಶಿಷ್ಯರಾಗಿದ್ದರಲ್ಲದೇ ಹತ್ತೊಂಬತ್ತನೇ ಶತಮಾನ ಉತ್ತರಾರ್ಧದುದ್ದಕ್ಕೂ ಪ್ರಯೋಜನವಾದಿ ಸಿದ್ಧಾಂತದ ದೀವಿಗೆಯ ಬೆಳಕನ್ನು ಪಸರಿಸಿದ್ದರು.[೩೬] ಸಮಕಾಲೀನ ನ್ಯಾಯಿಕ ಸಿದ್ಧಾಂತದಲ್ಲಿ, ಪ್ರಯೋಜನವಾದಿ ವಿಚಾರಸರಣಿಯು ಕಾನೂನು ಮತ್ತು ಆರ್ಥಿಕತೆ ಸಂಪ್ರದಾಯಗಳ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿರುವ ಪ್ರಾಜ್ಞರುಗಳಿಂದ ಬೆಂಬಲವನ್ನು ಪಡೆದಿತ್ತು. ಇದನ್ನೂ ನೋಡಿ ಲಿಸಾಂಡರ್‌‌‌ ಸ್ಪೂನರ್‌

ಜಾನ್‌‌ ರಾಲ್ಸ್‌‌

[ಬದಲಾಯಿಸಿ]

ಜಾನ್‌‌ ರಾಲ್ಸ್‌‌ರು ಓರ್ವ ಅಮೇರಿಕನ್‌‌ ತತ್ವಜ್ಞಾನಿ ಮಾತ್ರವಲ್ಲದೇ ಹಾರ್ವರ್ಡ್‌‌ ವಿಶ್ವವಿದ್ಯಾಲಯದಲ್ಲಿ ರಾಜತಾಂತ್ರಿಕ ಸಿದ್ಧಾಂತದ ಪ್ರಾಧ್ಯಾಪಕರಾಗಿದ್ದರು, ಇವರು A ಥಿಯರಿ ಆಫ್‌‌ ಜಸ್ಟೀಸ್‌ ‌‌ (೧೯೭೧), ಪೊಲಿಟಿಕಲ್‌ ಲಿಬರಲಿಸಮ್‌ , Justice as Fairness: A Restatement , ಮತ್ತು ದ ಲಾ ಆಫ್‌ ಪೀಪಲ್ಸ್‌‌ ಕೃತಿಗಳ ಲೇಖಕರೂ ಆಗಿದ್ದಾರೆ. ಇವರಿಗೆ ೨೦ನೇ ಶತಮಾನದ ಪ್ರಮುಖ ಆಂಗ್ಲ-ಭಾಷಿಕ ರಾಜತಾಂತ್ರಿಕ ತತ್ವಜ್ಞಾನಿಗಳಲ್ಲಿ ಒಬ್ಬರಾಗಿ ವ್ಯಾಪಕ ಮನ್ನಣೆ ದೊರೆತಿದೆ. ಅವರ ಥಿಯರಿ ಆಫ್‌ ಜಸ್ಟೀಸ್‌ ಕೃತಿಯು `ಅಜ್ಞಾನದ ಮುಸುಕಿನ 'ಹಿಂದಿದ್ದರೆ ನಾವು ನಮ್ಮ ಸಮಾಜದ ಯಾವ ಮೂಲಭೂತ ಸಂಸ್ಥೆಗಳನ್ನು ನಿಯಂತ್ರಿಸಲು ನ್ಯಾಯದ ಯಾವ ಮೂಲತತ್ವಗಳನ್ನು ನಾವು ಆಯ್ದುಕೊಳ್ಳುತ್ತೇವೆಂಬುದನ್ನು ಪ್ರಶ್ನಿಸಲು ಮೂಲಸ್ಥಾನವೆಂಬ ಸಾಧನವನ್ನು ಬಳಸುತ್ತದೆ. ನಮಗೆ ನಾವು ಯಾರು - ನಮ್ಮ ಜನಾಂಗ, ಲಿಂಗ, ಹಣಕಾಸು ಸ್ಥಿತಿ, ವರ್ಗ, ಅಥವಾ ಇನ್ಯಾವುದೇ ವೈಶಿಷ್ಟ್ಯಗಳ ವಿವರ ತಿಳಿದಿಲ್ಲವೆಂದಿಟ್ಟುಕೊಳ್ಳಿ - ಆಗ ನಾವು ನಮಗೆ ಅನುಕೂಲವಾಗಿರುವಂತೆ ಯಾವುದೇ ಪೂರ್ವಾಗ್ರಹವನ್ನು ಹೊಂದಿರುವುದಿಲ್ಲ. ಈ 'ಮೂಲ ಸ್ಥಾನ'ದಿಂದ ನಾವು ಪ್ರತಿಯೊಬ್ಬರಿಗೂ ಸರ್ವಸಮಾನವಾದ ಒಂದೇ ರೀತಿಯ ವಾಕ್‌ ಸ್ವಾತಂತ್ರ್ಯ, ಮತ ಚಲಾಯಿಸುವ ಹಕ್ಕು ಹಾಗೂ ಇನ್ನಿತರ ರಾಜತಾಂತ್ರಿಕ ಸ್ವಾತಂತ್ರ್ಯಗಳನ್ನು ಆಯ್ಕೆ ಮಾಡುತ್ತೇವೆ ಎಂದು ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೇ, ವಿಶೇಷವಾಗಿ ಅತಿಬಡವರನ್ನೂ ಸೇರಿಸಿ ಸಂಪೂರ್ಣ ಸಮಾಜದ ಆರ್ಥಿಕ ಯೋಗಕ್ಷೇಮಕ್ಕೆ ಸಾಕಾಗುವಂತಹಾ ಪ್ರಚೋದನೆಯನ್ನು ಮೂಡಿಸುವ ಕಾರಣಕ್ಕಾಗಿ ಮಾತ್ರವೇ ಅಸಮಾನತೆ ಇರುವಂತಹಾ ವ್ಯವಸ್ಥೆಯನ್ನು ಆಯ್ಕೆ ಮಾಡುತ್ತೇವೆ. ಇದೇ ರಾಲ್ಸ್‌‌'ರ ಪ್ರಸಿದ್ಧ 'ಪ್ರತ್ಯೇಕತಾ ಸೂತ್ರ'. ನ್ಯಾಯವು ಯುಕ್ತವಾದುದು ಎಂದರೆ ಆಯ್ಕೆಯ ಮೂಲಸ್ಥಾನದ ಯುಕ್ತತೆಯು ಆ ಸ್ಥಾನದಲ್ಲಿ ಆಯ್ಕೆಯಾದ ಮೂಲತತ್ವಗಳ ಯುಕ್ತತೆಯನ್ನು ಖಾತರಿಪಡಿಸುತ್ತದೆ.

ಕಾನೂನು/ನ್ಯಾಯದ ಸಂಕಲ್ಪಸ್ವಾತಂತ್ರ್ಯವಾದಿ ಸಿದ್ಧಾಂತಗಳು ಸೇರಿದಂತೆ ನಿರ್ಧಾರಕ ನ್ಯಾಯಿಕ ಅಧ್ಯಯನಗಳು ಮತ್ತು ಕಾನೂನು/ನ್ಯಾಯದ ಸಿದ್ಧಾಂತಗಳನ್ನು ಅರ್ಥೈಸಲು ಇತರೆ ಅನೇಕ ಪ್ರಮಾಣಕ ವಿಚಾರಸರಣಿಗಳಿವೆ.

ಇದನ್ನೂ ನೋಡಿ

[ಬದಲಾಯಿಸಿ]

ಪ್ರಧಾನ/ಸಾಧಾರಣ

[ಬದಲಾಯಿಸಿ]
  • ವಿಶ್ಲೇಷಣಾತ್ಮಕ ನ್ಯಾಯಶಾಸ್ತ್ರ
  • ಕೃತಕ ಬುದ್ಧಿಮತ್ತೆ ಮತ್ತು ಕಾನೂನು/ನ್ಯಾಯ
  • ಪ್ರಾಥಮಿಕ ನಿಯಮ/ತತ್ವ
  • ಕಾಟೆಲರಿ ನ್ಯಾಯಶಾಸ್ತ್ರ
  • ನಿರ್ಧಾರಕ ನ್ಯಾಯಿಕ ಅಧ್ಯಯನಗಳು
  • ಅನೂರ್ಜಿತಗೊಳಿಸಬಹುದಾದ ತರ್ಕಗಳು
  • ಫಿಕ್ಹ್‌‌‌‌
  • ಅಂತರರಾಷ್ಟ್ರೀಯ ನ್ಯಾಯಿಕ ಸಿದ್ಧಾಂತ
  • ನ್ಯಾಯಾಸ್ಥಾನದ ಕ್ರಿಯಾವಾದ
  • ನ್ಯಾಯಾಧೀಶ
  • ಕಾನೂನು/ನ್ಯಾಯ ಮತ್ತು ಆರ್ಥಿಕತೆ
  • ನ್ಯಾಯಿಕ ಅತಿಸಾಂಪ್ರದಾಯಿಕತೆ
  • ನ್ಯಾಯಿಕ ಪ್ರತ್ಯಕ್ಷೈಕ ಪ್ರಮಾಣ ಸಿದ್ಧಾಂತ
  • ನ್ಯಾಯಿಕ ವಾಸ್ತವವಾದ
  • ಕಾನೂನು/ನ್ಯಾಯದ ಸಂಕಲ್ಪಸ್ವಾತಂತ್ರ್ಯವಾದಿ ಸಿದ್ಧಾಂತಗಳು
  • ಜೀವನ ಸಂವಿಧಾನ
  • ಒರಿಜಿನಲಿಸಮ್‌‌/ಮೂಲತತ್ವಬದ್ಧತೆ
  • ನೈಸರ್ಗಿಕ ನಿಯಮ/ನ್ಯಾಯ
  • ರಾಜನೈತಿಕ ನ್ಯಾಯಶಾಸ್ತ್ರ
  • ಪಬ್ಲಿಯಸ್‌‌ ಇಯುವೆಂಟಿಯಸ್‌‌ ಸೆಲ್ಸಸ್‌‌‌
  • ಕಾನೂನು/ನ್ಯಾಯದ ಸಮಾಜಶಾಸ್ತ್ರ
  • ಕಟ್ಟುನಿಟ್ಟಿನ ವ್ಯಾಖ್ಯಾನ
  • ಋಜುತ್ವ ನ್ಯಾಯಶಾಸ್ತ್ರ

ತತ್ವಜ್ಞಾನಿಗಳ ಪಟ್ಟಿ A-Z

[ಬದಲಾಯಿಸಿ]
  • ರಾಬರ್ಟ್‌‌ ಅಲೆಕ್ಸಿ
  • ಥಾಮಸ್‌ ಆಕ್ವಿನಾಸ್‌‌
  • ಜಾನ್‌‌ ಆಸ್ಟಿನ್‌‌ (ನ್ಯಾಯಿಕ ಸಿದ್ಧಾಂತ)
  • ಜೆರೆಮಿ ಬೆಂಥಮ್‌‌
  • ಎಮಿಲಿಯೋ ಬೆಟ್ಟಿ
  • ನಾರ್ಬರ್ಟೋ ಬಾಬ್ಬಿಯೋ
  • ಆಂಟೊನಿಯೋ ಕ್ಯಾಸ್ಟಾನ್ಹಿಯೇರಾ ನೆವೆಸ್‌‌
  • ಜಿಯೋರ್ಜಿಯೋ ಡೆಲ್‌ ವೆಚ್ಚಿಯೋ
  • ರೊನಾಲ್ಡ್‌ ಡ್ವಾರ್ಕಿನ್‌
  • ಜೋಯೆಲ್‌‌ ಫೇನ್‌ಬರ್ಗ್‌
  • ಜಾನ್‌ ಫಿನ್ನಿಸ್‌
  • ಲಾ L. ಫುಲ್ಲರ್‌
  • ಲೆಸ್ಲೀ ಗ್ರೀನ್‌‌ (ತತ್ವಜ್ಞಾನಿ)
  • ರಾಬರ್ಟ್‌‌ P. ಜಾರ್ಜ್‌‌
  • ಜರ್ಮೇನ್‌‌ ಗ್ರಿಸೆಜ್‌‌
  • H.L.A. ಹಾರ್ಟ್‌
  • ಸ್ಟರ್ಲಿಂಗ್‌ ಹಾರ್ವುಡ್‌‌
  • ಜಾರ್ಜ್‌ ವಿಲ್‌ಹೆಲ್ಮ್‌ ಫ್ರೆಡ್‌ರಿಕ್‌ ಹೇಗೆಲ್‌
  • ವೆಸ್ಲೆ ಹಾಹ್‌ಫೆಲ್ಡ್‌‌
  • ಆಲಿವರ್‌ ವೆಂಡೆಲ್‌ ಹೋಮ್ಸ್‌‌, Jr.
  • ಇಮ್ಯಾನ್ಯುಯೆಲ್‌ ಕಾಂಟ್‌‌‌
  • ಹ್ಯಾನ್ಸ್‌‌ ಕೆಲ್ಸೆನ್‌‌
  • ಹ್ಯಾನ್ಸ್‌ ಕಾಚ್ಲೆರ್‌
  • ಬ್ರೂನೋ ಲಿಯೊನಿ
  • ಡೇವಿಡ್‌ ಲೈಯಾನ್ಸ್‌‌
  • ನೀಲ್‌ ಮೆಕ್‌ಕಾರ್ಮಿಕ್‌
  • ಕಾರ್ಲ್‌‌ ಮಾರ್ಕ್ಸ್‌‌
  • ಕಾರ್ಲ್‌‌ ಆಲಿವ್‌‌ಕ್ರೋನಾ
  • ರಿಚರ್ಡ್‌ ಪೋಸ್ನರ್‌‌
  • ಗುಸ್ಟಾವ್‌‌ ರಾಡ್‌ಬ್ರಚ್‌‌
  • ಜಾನ್‌‌ ರಾಲ್ಸ್‌‌
  • ಜೋಸೆಫ್‌‌ ರಾಜ್‌‌
  • ಅಡಾಲ್ಫ್‌‌ ರೇನಾಚ್‌‌
  • ಕಾರ್ಲ್‌ ರೆನ್ನರ್‌‌
  • ಫ್ರೆಡ್‌ರಿಕ್‌‌ ಕಾರ್ಲ್‌‌ ವಾನ್‌‌ ಸೇವಿಗ್ನಿ
  • ಕ್ವಿಂಟಸ್‌‌ ಮ್ಯೂಸಿಯಸ್‌‌ ಸ್ಕೇವೊಲಾ ಪಾಂಟಿಫೆಕ್ಸ್‌‌
  • ರಾಬರ್ಟೋ ಅಂ/ಉಂಗರ್‌
  • ಜೆರೆಮಿ ವಾಲ್ಡ್ರನ್‌‌
  • ಲುಡ್‌ವಿಗ್‌ ವಿಟ್‌ಜೆನ್‌ಸ್ಟೇನ್‌‌

ಆಕರಗಳು

[ಬದಲಾಯಿಸಿ]
  1. “ಜ್ಯೂರಿಸ್‌ಪ್ರುಡೆನ್ಸ್/ನ್ಯಾಯಶಾಸ್ತ್ರ”, ಬ್ಲಾಕ್ಸ್‌ ಲಾ ಡಿಕ್ಷನರಿ
  2. ೨.೦ ೨.೧ ೨.೨ ಷೈನರ್, “ಫಿಲಾಸಫಿ ಆಫ್‌ ಲಾ”, ಕೇಂಬ್ರಿಡ್ಜ್‌ ಡಿಕ್ಷನರಿ ಆಫ್‌ ಫಿಲಾಸಫಿ
  3. ಸೋಪರ್‌, "ಲೀಗಲ್‌ ಪಾಸಿಟಿವಿಸಮ್‌", ಕೇಂಬ್ರಿಡ್ಜ್‌ ಡಿಕ್ಷನರಿ ಆಫ್‌ ಫಿಲಾಸಫಿ
  4. ಮೂರ್‌‌, “ಕ್ರಿಟಿಕಲ್‌ ಲೀಗಲ್‌ ಸ್ಟಡೀಸ್‌", ಕೇಂಬ್ರಿಡ್ಜ್‌ ಡಿಕ್ಷನರಿ ಆಫ್‌ ಫಿಲಾಸಫಿ
  5. ಬ್ರೂಕ್ಸ್‌‌, “ರಿವ್ಯೂ ಆಫ್‌ ಡ್ವಾರ್ಕಿನ್‌ ಅಂಡ್‌‌ ಹಿಸ್‌ ಕ್ರಿಟಿಕ್ಸ್‌ ವಿತ್‌ ರಿಪ್ಲೈಸ್‌ ಬೈ ಡ್ವಾರ್ಕಿನ್‌”, ಮಾಡರ್ನ್ ಲಾ ರಿವ್ಯೂ , Vol. ೬೯ No. ೬
  6. ಆಕ್ಸ್‌ಫರ್ಡ್‌ ಆಂಗ್ಲ ನಿಘಂಟು, ೨ನೇ ಆವೃತ್ತಿ ೧೯೮೯
  7. ಷೆಲ್ಲೆನ್ಸ್‌, "ಅರಿಸ್ಟಾಟಲ್‌‌ ಆನ್‌ ನ್ಯಾಚುರಲ್‌ ಲಾ."
  8. ಜಾಫ್ಫಾ, ಥಾಮಿಸಮ್‌ ಅಂಡ್‌‌ ಅರಿಸ್ಟಾಟೆಲಿಯಾನಿಸಮ್‌‌ .
  9. H. ರಕ್ಹಾಮ್‌‌, trans., ನಿಕೋಮಾಕಿಯಾನ್‌ ಎಥಿಕ್ಸ್‌ , ಲೋಯೆಬ್‌ ಕ್ಲಾಸಿಕಲ್‌ ಲೈಬ್ರರಿ; J. A. K. ಥಾಮ್ಸನ್‌‌, trans. (ಹಘ್‌‌ ಟೆಡೆನ್ನಿಕ್‌‌), ನಿಕೋಮಾಕಿಯಾನ್‌ ಎಥಿಕ್ಸ್‌ , ಪೆಂಗ್ವಿನ್‌ ಕ್ಲಾಸಿಕ್ಸ್‌‌.
  10. ಜೋ ಷ್ಯಾಷ್ಸ್‌‌, trans., ನಿಕೋಮಾಕಿಯಾನ್‌ ಎಥಿಕ್ಸ್ , ಫೋಕಸ್‌ ಪಬ್ಲಿಷಿಂಗ್‌‌
  11. "ನಿಕೋಮಾಕಿಯಾನ್‌ ಎಥಿಕ್ಸ್‌" Bk. II ch. ೬
  12. ಟೆರ್ರೆನ್ಸ್‌ ಇರ್ವಿನ್, trans. ನಿಕೋಮಾಕಿಯಾನ್‌ ಎಥಿಕ್ಸ್‌, ೨nd Ed. , ಹ್ಯಾಕೆಟ್‌ ಪಬ್ಲಿಷಿಂಗ್‌
  13. ನಿಕೋಮಾಕಿಯಾನ್‌ ಎಥಿಕ್ಸ್‌ , Bk. V, ch. ೩
  14. "ನಿಕೋಮಾಕಿಯಾನ್‌ ಎಥಿಕ್ಸ್‌", Bk. V, ch. ೧
  15. ನಿಕೋಮಾಕಿಯಾನ್‌ ಎಥಿಕ್ಸ್‌ , Bk. V, ch. ೩
  16. ನಿಕೋಮಾಕಿಯಾನ್‌ ಎಥಿಕ್ಸ್‌ , Bk. V, ch. ೭.
  17. ರ್ಹಿಟೋರಿಕ್‌ ೧೩೭೩b೨–೮.
  18. ಷೆಲ್ಲೆನ್ಸ್‌‌, "ಅರಿಸ್ಟಾಟಲ್‌‌ ಆನ್‌ ನ್ಯಾಚುರಲ್‌ ಲಾ," ೭೫–೮೧
  19. "ನ್ಯಾಚುರಲ್‌ ಲಾ," ಸಾಮಾಜಿಕ ವಿಜ್ಞಾನಗಳ ಅಂತರರಾಷ್ಟ್ರೀಯ ವಿಶ್ವಕೋಶ .
  20. ಆನ್‌ ದ ಸೋರ್ಸಸ್‌‌ ಆಫ್‌ ಇಸ್ಲಾಮಿಕ್‌ ಲಾ ಅಂಡ್‌ ಪ್ರಾಕ್ಟೀಸಸ್‌‌, ದ ಜರ್ನಲ್‌ ಆಫ್‌ ಲಾ ಅಂಡ್‌ ರಿಲಿಜನ್‌‌ [0748-0814] ಸೌವಾಯಿಯಾ yr: ೨೦೦೫ vol: ೨೦ iss: ೧ pg: ೧೨೩
  21. ವೇಲ್‌‌ B. ಹಲ್ಲಕ್‌‌ (೧೯೯೩), ಇಬ್ನ್‌ ಟೇಮಿಯ್ಯಾ ಎಗೇನ್ಸ್‌ಟ್‌ ದ ಗ್ರೀಕ್‌ ಲಾಗಿಷಿಯನ್ಸ್ , p. ೪೮. ‌ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ, ISBN ೦-೧೯-೮೨೪೦೪೩-೦.
  22. ಲೂಯಿಸ್‌ ಪೊಜ್‌ಮನ್, ಎಥಿಕ್ಸ್‌‌ (ಬೆಲ್‌ಮಾಂಟ್‌‌, CA: ವಾಡ್ಸ್‌ವರ್ತ್‌ ಪಬ್ಲಿಷಿಂಗ್‌ ಕಂಪೆನಿ, ೧೯೯೫).
  23. ಸುಮ್ಮಾ , Q94a2.
  24. ಮೂಲಾರ್ಥವೇನೆಂದರೆ : ಸಾಮಾಜಿಕ ಶಿಸ್ತನ್ನು ಪಡೆಯ/ಹೊಂದಲು ಸಮಾಜದ ಜನರು ಸರ್ಕಾರಕ್ಕೆ ತಮ್ಮ ಕೆಲ ಹಕ್ಕುಗಳನ್ನು ಬಿಟ್ಟುಕೊಟ್ಟಿರುತ್ತಾರೆ.
  25. ನೋಡಿ H L A ಹಾರ್ಟ್‌‌ , 'ಪಾಸಿಟಿವಿಸಮ್‌‌ ಅಂಡ್‌‌ ದ ಸೆಪರೇಷನ್‌ ಆಫ್‌‌ ಲಾ ಅಂಡ್‌ ಮಾರಲ್ಸ್‌‌' (೧೯೫೮) ೭೧ Harv. L. Rev. ೫೯೩
  26. ಡೇವಿಡ್‌ ಹ್ಯೂಮ್, A ಟ್ರೀಟೈಸ್‌‌ ಆಫ್‌‌ ಹ್ಯೂಮನ್‌ ನೇಚರ್‌ (೧೭೩೯)ಇಪಠ್ಯ
  27. ಜಾನ್‌‌ ಆಸ್ಟಿನ್‌‌, ದ ಪ್ರಾವಿನ್ಸ್‌ ಆಫ್‌ ಜ್ಯೂರಿಸ್‌ಪ್ರೂಡೆನ್ಸ್‌ ಡಿಟರ್‌ಮೈನ್‌ಡ್‌ (೧೮೩೧)
  28. H.L.A. ಹಾರ್ಟ್‌‌, ದ ಕಾನ್ಸೆಪ್ಟ್‌‌ ಆಫ್‌ ಲಾ (೧೯೬೧) ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ, ISBN ೦-೧೯-೮೭೬೧೨೨-೮
  29. "ಎಡಿನ್‌ಬರ್ಗ್ ವಿಶ್ವವಿದ್ಯಾಲಯ". Archived from the original on 2006-06-01. Retrieved 2010-07-21.
  30. ಜೋಸೆಫ್‌‌ ರಾಜ್‌‌, ದ ಅಥಾರಿಟಿ ಆಫ್‌ ಲಾ (೧೯೭೯) ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ
  31. ch. ೨, ಜೋಸೆಫ್‌‌ ರಾಜ್, ದ ಅಥಾರಿಟಿ ಆಫ್‌ ಲಾ (೧೯೭೯)
  32. ರೊನಾಲ್ಡ್‌ ಡ್ವಾರ್ಕಿನ್‌, ಲಾಸ್‌ ಎಂಪೈರ್‌ (೧೯೮೬) ಹಾರ್ವರ್ಡ್‌‌ ವಿಶ್ವವಿದ್ಯಾಲಯ ಮುದ್ರಣಾಲಯ
  33. “ಜ್ಯೂರಿಸ್‌ಪ್ರೂಡೆನ್ಸ್‌”. ವೆಸ್ಟ್‌’ಸ್‌ ಎನ್‌ಸೈಕ್ಲೋಪೀಡಿಯಾ ಆಫ್‌‌ ‌ಅಮೇರಿಕನ್‌‌ ಲಾ. Ed. ಜೆಫ್ರೆ ಲೆಹ್‌ಮನ್‌‌ , ಷಿರೆಲ್ಲೆ ಫೆಲ್ಪ್ಸ್‌. ಡೆಟ್ರಾಯಿಟ್‌‌‌: ಥಾಮ್ಸನ್‌/ಗೇಲ್‌, ೨೦೦೫.
  34. ಫ್ರೆಡ್‌ರಿಕ್‌ ಕಾರ್ಲ್‌ ವಾನ್‌ ಸೇವಿಗ್ನಿ, ಆನ್‌‌ ದ ವೊಕೇಷನ್‌ ಆಫ್‌ ಅವರ್‌ ಏಜ್‌ ಫಾರ್‌ ಲೆಜಿಲ್ಸೇಷನ್‌ ಅಂಡ್‌ ಜ್ಯೂರಿಸ್‌ಪ್ರೂಡೆನ್ಸ್ (ಅಬ್ರಹಾಂ A. ಹೇವರ್ಡ್‌ trans., ೧೮೩೧)
  35. ವೆಬ್‌ಸ್ಟರ್ಸ್‌‌ ನ್ಯೂವರ್ಲ್ಡ್‌‌ ಡಿಕ್ಷನರಿ ಆಫ್‌ ದ ಅಮೇರಿಕನ್‌‌ ಲಾಂಗ್ವೇಜ್‌‌, p. ೩೭೮ (೨d Coll. Ed. ೧೯೭೮).
  36. ಮೆಟಲಿಬರಿ ಅಂಕಿಕ/ಡಿಜಿಟಲ್‌‌ ಗ್ರಂಥಾಲಯದಲ್ಲಿ ನೋಡಿ ಯುಟಿಲಿಟೇರಿಯನಿಸಮ್‌‌ Archived 2007-05-05 ವೇಬ್ಯಾಕ್ ಮೆಷಿನ್ ನಲ್ಲಿ.


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Austin, John (೧೮೩೧). The Province of Jurisprudence Determined.
  • ಫ್ರೀಮನ್‌‌‌, M.D.A. (೨೦೦೧). ಲ್ಲಾಯ್ಡ್‌‌ಸ್‌‌ ಇಂಟ್ರೊಡಕ್ಷನ್‌ ಟು ಜ್ಯೂರಿಸ್‌ಪ್ರುಡೆನ್ಸ್‌ . ೭ನೇ ed. ಲಂಡನ್‌‌ : ಸ್ವೀಟ್‌‌ ಮತ್ತು ಮ್ಯಾಕ್ಸ್‌ವೆಲ್‌‌.
  • Hart, H.L.A. (೧೯೬೧). The Concept of Law. Oxford University Press.
  • ಹಾರ್ಟ್‌‌ಜ್ಲರ್‌‌‌, H. ರಿಚರ್ಡ್‌‌ (೧೯೭೬). ಜಸ್ಟೀಸ್‌, ಲೀಗಲ್‌‌ ಸಿಸ್ಟಂಸ್‌‌, ಅಂಡ್‌ ಸೋಷಿಯಲ್‌ ಸ್ಟ್ರಕ್ಚರ್‌‌ . ಪೋರ್ಟ್‌ ವಾಷಿಂಗ್ಟನ್‌‌, NY: ಕೆನ್ನಿಕಟ್‌‌ ಮುದ್ರಣಾಲಯ.
  • ಹಚಿನ್‌ಸನ್‌‌‌, ಅಲನ್‌ C., ed. (೧೯೮೯). ಕ್ರಿಟಿಕಲ್‌ ಲೀಗಲ್‌ ಸ್ಟಡೀಸ್‌‌ . ಟೊಟೊವಾ, NJ: ರೋಮನ್‌‌ & ಲಿಟಲ್‌ಫೀಲ್ಡ್‌‌.
  • ಕೆಂಪಿನ್‌‌, Jr., ಫ್ರೆಡೆರಿಕ್‌‌ G. (೧೯೬೩). ಲೀಗಲ್‌‌ ಹಿಸ್ಟರಿ : ಲಾ ಅಂಡ್‌‌ ಸೋಷಿಯಲ್‌ ಚೇಂಜ್‌‌ . ಎಂಗಲ್‌ವುಡ್‌‌ ಕ್ಲಿಫ್ಸ್‌‌‌, NJ: ಪ್ರೆಂಟಿಸ್‌-ಹಾಲ್‌‌.
  • ಲ್ಲೆವೆಲ್ಲಿಯನ್‌‌, ಕಾರ್ಲ್‌ N. (೧೯೮೬). ಕಾರ್ಲ್‌ N. ಲ್ಲೆವೆಲ್ಲಿಯನ್‌‌, ಆನ್‌ ಲೀಗಲ್‌‌ ರಿಯಲಿಸಮ್‌ . ಬರ್ಮಿಂಗ್‌ಹ್ಯಾಮ್‌‌, AL: ನ್ಯಾಯಿಕ ಶ್ರೇಷ್ಠಕೃತಿಗಳ ಗ್ರಂಥಾಲಯ. (ಕಾನೂನು/ನ್ಯಾಯದ ಲಕ್ಷಣದ ಬಗ್ಗೆ ಒಳಹೊರಗಿನ ವಿವರ ನೀಡುವ ಶ್ರೇಷ್ಠ ಕೃತಿ "ದ ಬ್ರಾಂಬಲ್‌ ಬುಶ್‌‌"ರನ್ನು ಹೊಂದಿದೆ).
  • ಮುರ್ಫಿ, ಕಾರ್ನೆಲಿಯಸ್‌‌ F. (೧೯೭೭). ಇಂಟ್ರೊಡಕ್ಷನ್‌‌ ಟು ಲಾ, ಲೀಗಲ್‌ ಪ್ರೋಸೆಸ್‌ ಅಂಡ್‌ ಪ್ರೊಸಿಜರ್‌/ಡ್ಯೂರ್‌‌ . St. ಪಾಲ್, MN: ವೆಸ್ಟ್‌ ಪಬ್ಲಿಷಿಂಗ್‌‌.
  • ರಾಲ್ಸ್‌‌, ಜಾನ್‌‌ (೧೯೯೯). A ಥಿಯರಿ ಆಫ್‌‌ ಜಸ್ಟೀಸ್‌‌‌ , ಪರಿಷ್ಕೃತ ed. ಕೇಂಬ್ರಿಡ್ಜ್‌‌ : ಹಾರ್ವರ್ಡ್‌‌ ವಿಶ್ವವಿದ್ಯಾಲಯ ಮುದ್ರಣಾಲಯ. (ನ್ಯಾಯದ ಬಗ್ಗೆ ತಾತ್ವಿಕ ಜಿಜ್ಞಾಸೆ).
  • ಝಿನ್‌‌, ಹಾವರ್ಡ್‌ (೧೯೯೦). ಡಿಕ್ಲರೇಷನ್ಸ್‌ ಆಫ್‌‌ ಇಂಡಿಪೆಂಡೆನ್ಸ್‌ : ಕ್ರಾಸ್‌-ಎಕ್ಸಾಮಿನಿಂಗ್‌‌ ಅಮೇರಿಕನ್‌ ಐಡಿಯಾಲಜಿ. ನ್ಯೂಯಾರ್ಕ್‌ : ಹಾರ್ಪರ್‌‌ ಕಾಲಿನ್ಸ್‌ ಪ್ರಕಾಶಕರು ಪಬ್ಲಿಷರ್ಸ್‌‌.

ಬಾಹ್ಯ ಕೊಂಡಿಗಳು

[ಬದಲಾಯಿಸಿ]