ಪಾಂಚಾಲ
ಗೋಚರ
ಪಾಂಚಾಲ ಉತ್ತರ ಭಾರತದ ಮೇಲಿನ ಗಂಗಾನದಿ ಬಯಲಿನ ದೊಆಬ್‍ನಲ್ಲಿ ಸ್ಥಿತವಾಗಿದ್ದ ಒಂದು ಪ್ರಾಚೀನ ರಾಜ್ಯದ ಹೆಸರಾಗಿತ್ತು ಮತ್ತು ಇದು ಆಧುನಿಕ ಉತ್ತರಾಖಂಡ ಹಾಗೂ ಪಶ್ಚಿಮ ಉತ್ತರ ಪ್ರದೇಶವನ್ನು ಒಳಗೊಂಡಿತ್ತು. ವೈದಿಕ ಕಾಲದ ಉತ್ತರಾರ್ಧದ ಅವಧಿಯಲ್ಲಿ (ಕ್ರಿ.ಶ. ೮೫೦-೫೦೦), ಅದು ದಕ್ಷಿಣ ಏಷ್ಯಾದ ಅತ್ಯಂತ ಪ್ರಬಲ ರಾಜ್ಯಗಳಲ್ಲಿ ಒಂದಾಗಿತ್ತು, ಮತ್ತು ಕುರು ರಾಜ್ಯದೊಂದಿಗೆ ನಿಕಟವಾಗಿ ಮೈತ್ರಿಹೊಂದಿತ್ತು. ಕ್ರಿ.ಶ. ೫ನೇ ಶತಮಾನದ ವೇಳೆಗೆ, ಅದು ಜನಾಧಿಪತ್ಯದ ಒಕ್ಕೂಟವಾಗಿತ್ತು, ಮತ್ತು ದಕ್ಷಿಣ ಏಷ್ಯಾದ ಹದಿನಾರು ಮಹಾಜನಪದಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.