Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಹೆನ್ರಿಕ್ ಹಿಮ್ಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Heinrich Himmler

ಅಧಿಕಾರ ಅವಧಿ
6 January 1929 – 29 April 1945
ನಾಯಕ Adolf Hitler
ಪೂರ್ವಾಧಿಕಾರಿ Erhard Heiden
ಉತ್ತರಾಧಿಕಾರಿ Karl Hanke

ಅಧಿಕಾರ ಅವಧಿ
4 June 1942 – 30 January 1943
ಪೂರ್ವಾಧಿಕಾರಿ Reinhard Heydrich
ಉತ್ತರಾಧಿಕಾರಿ Ernst Kaltenbrunner

ಅಧಿಕಾರ ಅವಧಿ
24 August 1943 – 29 April 1945
Chancellor Adolf Hitler
ಪೂರ್ವಾಧಿಕಾರಿ Wilhelm Frick
ಉತ್ತರಾಧಿಕಾರಿ Wilhelm Stuckart
ವೈಯಕ್ತಿಕ ಮಾಹಿತಿ
ಜನನ 7 October 1900
Munich, Bavaria, Germany
ಮರಣ 23 May 1945(1945-05-23) (aged 44)
Lüneburg, Lower Saxony, Germany
ರಾಜಕೀಯ ಪಕ್ಷ National Socialist German Workers' Party (NSDAP)
ಸಂಗಾತಿ(ಗಳು) Margarete Bode
ಮಕ್ಕಳು Gudrun, Helge, Nanette Dorotha
ಧರ್ಮ Roman Catholic (early)
ಸಹಿ
ಮಿಲಿಟರಿ ಸೇವೆ
Allegiance German Empire German Empire
ಸೇವೆ/ಶಾಖೆ Heer
ವರ್ಷಗಳ ಸೇವೆ 1917–1918
Rank Fahnenjunker
Unit 11th Bavarian Infantry Regiment
Battles/wars World War I

ಹೆನ್ರಿಕ್ ಲ್ಯೂಟಿಪೋಲ್ಡ್‌ ಹಿಮ್ಲರ್ (pronounced [ˈhaɪnʁɪç ˈluˑɪtˌpɔlt ˈhɪmlɐ] ( ) 7 ಅಕ್ಟೋಬರ್‌‌ 1900 – 23 ಮೇ 1945), SSನ ರೀಕ್ಸ್‌‌ಫಹ್ರರ್‌‌, ಅಂದರೆ ಓರ್ವ ಸೇನಾ ದಳಪತಿ, ಮತ್ತು ನಾಜಿ ಪಕ್ಷದ ಓರ್ವ ಅಗ್ರಗಣ್ಯ ಸದಸ್ಯನಾಗಿದ್ದ. ಜರ್ಮನ್‌ ಆರಕ್ಷಕ ಪಡೆಯ ಓರ್ವ ಮುಖ್ಯಸ್ಥನಾಗಿ ಮತ್ತು ನಂತರದಲ್ಲಿ ಗೃಹಖಾತೆಯ ಸಚಿವನಾಗಿ, ಗೆಸ್ಟಾಪೊವನ್ನು ಒಳಗೊಂಡಂತೆ ಎಲ್ಲಾ ಆಂತರಿಕ ಮತ್ತು ಬಾಹ್ಯ ಆರಕ್ಷಕ ಮತ್ತು ಭದ್ರತಾ ಪಡೆಗಳ ಮೇಲ್ವಿಚಾರಣೆಯನ್ನು ಹಿಮ್ಲರ್ ವಹಿಸಿದ್ದ. ರೀಕ್ಸ್‌‌ಫಹ್ರರ್‌‌ ಆಗಿ ಮತ್ತು ನಂತರದಲ್ಲಿ ಬದಲಿ (ಸ್ವದೇಶಿ) ಸೇನೆಯ ದಳಪತಿಯಾಗಿ ಮತ್ತು ರೀಕ್‌‌‌ನ ಸಮಗ್ರ ಆಡಳಿತಕ್ಕೆ (ಜೆನರಲ್‌‌ಬೆಲ್ವೊಲ್‌ಮ್ಯಾಟೈಟರ್‌ ಫರ್‌ ಡೈ ವೆರ್ವಾಲ್ಟಂಗ್‌‌ ) ಸಂಬಂಧಿಸಿದ ಪ್ರಧಾನ ಪೂರ್ಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹಿಮ್ಲರ್, ನಾಜಿ ಜರ್ಮನಿಯಲ್ಲಿ ಎರಡನೇ ಅತ್ಯಂತ ಶಕ್ತಿವಂತ ಮನುಷ್ಯನಾಗುವವರೆಗಿನ ಹಂತವನ್ನು ತಲುಪಿದ.

ಸೆರೆ ಶಿಬಿರಗಳು, ಮೂಲೋತ್ಪಾಟನ ಶಿಬಿರಗಳು, ಮತ್ತು ಐನ್‌ಸ್ಯಾಟ್ಜ್‌ಗ್ರಪ್ಪೆನ್‌‌ (ಅಕ್ಷರಶಃ ಅರ್ಥ: ವಿಶೇಷ ಕಾರ್ಯಪಡೆಗಳು; ಸಾಯಿಸುವ ದಳಗಳಾಗಿ ಇವು ಅನೇಕಬಾರಿ ಬಳಸಲ್ಪಟ್ಟವು) ಪಡೆಗಳ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸಿದ ಹಿಮ್ಲರ್, ಅಗಾಧ ಪ್ರಮಾಣದಲ್ಲಿ ಜನರನ್ನು ಸಾಯಿಸುವ ಕೃತ್ಯದಲ್ಲಿ ಸಮಭಾಗಿಯಾಗಿದ್ದ; ಸುಮಾರು ಆರು ದಶಲಕ್ಷದಷ್ಟು ಯೆಹೂದಿಗಳು, 200,000 ಮತ್ತು 500,000 ಸಂಖ್ಯೆಯ ನಡುವಿನ ರೋಮಾನಿ ಜನರು,[][], ಅನೇಕ ಮಂದಿ ಯುದ್ಧದ ಸೆರೆಯಾಳುಗಳು, ಮತ್ತು ಪ್ರಾಯಶಃ ಮತ್ತೊಂದು ಮೂರರಿಂದ ನಾಲ್ಕು ದಶಲಕ್ಷದಷ್ಟು ಪೋಲೆಂಡಿನ ಜನರು, ಕಮ್ಯುನಿಸ್ಟರು, ಅಥವಾ ಸಲಿಂಗಕಾಮಿಗಳು, ಶಾರೀರಿಕ ಮತ್ತು ಮಾನಸಿಕ ದೌರ್ಬಲ್ಯಗಳನ್ನು ಹೊಂದಿರುವ ಜನರು, ಜೆಹೊವಾಹ್‌ನ ಸಾಕ್ಷಿಗಳು ಮತ್ತು ಪಾಪನಿವೇದನೆ ಮಾಡಿಕೊಳ್ಳುವ ಚರ್ಚಿನ ಸದಸ್ಯರಂಥ, ಬದುಕಲು ಯೋಗ್ಯರಲ್ಲದವರು ಎಂಬುದಾಗಿ ನಾಜಿಗಳಿಂದ ಪರಿಗಣಿಸಲ್ಪಟ್ಟಿದ್ದ ಜನರು ಅಥವಾ ಆ "ಹಾದಿಯಲ್ಲಿದ್ದ" ಇತರ ಗುಂಪುಗಳು ಹೀಗೆ ಸತ್ತ ಜನಗಳಲ್ಲಿ ಸೇರಿದ್ದರು. ಯುದ್ಧವು ಅಂತ್ಯಗೊಳ್ಳುವುದಕ್ಕೆ ಸ್ವಲ್ಪವೇ ಮುಂಚಿತವಾಗಿ, ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸದೆ ತನ್ನನ್ನು ಉಳಿಸಿದ್ದೇ ಆದಲ್ಲಿ, ಪಾಶ್ಚಾತ್ಯ ಮಿತ್ರರಾಷ್ಟ್ರಗಳಿಗೆ ಜರ್ಮನಿಯ ಮತ್ತು ಸ್ವತಃ ತನ್ನ ಶರಣಾಗತಿಯಾಗುವುದರ ಕುರಿತು ಅವನು ಪ್ರಸ್ತಾವವನ್ನು ಮುಂದಿರಿಸಿದ್ದ.

ಬ್ರಿಟಿಷ್‌ ಪಡೆಗಳಿಂದ ಬಂಧಿಸಲ್ಪಟ್ಟ ನಂತರ, ಯಾವುದೇ ಪ್ರಶ್ನೆಗಳಿಗೆ ತಾನು ಈಡಾಗುವುದಕ್ಕೆ ಮುಂಚೆಯೇ ಅವನು ಆತ್ಮಹತ್ಯೆ ಮಾಡಿಕೊಂಡ.

ಆರಂಭಿಕ ಜೀವನ

[ಬದಲಾಯಿಸಿ]
1907ರಲ್ಲಿನ ಹಿಮ್ಲರ್

ಮ್ಯೂನಿಚ್‌‌‌ನಲ್ಲಿನ ರೋಮನ್‌ ಕ್ಯಾಥಲಿಕ್‌‌[] ಪಂಗಡವೊಂದಕ್ಕೆ ಸೇರಿದ್ದ ಬವೇರಿಯಾದ ಮಧ್ಯಮ-ವರ್ಗದ ಕುಟುಂಬವೊಂದರಲ್ಲಿ ಹೆನ್ರಿಕ್ ಹಿಮ್ಲರ್ ಜನಿಸಿದ. ಅವನ ತಂದೆಯಾದ ಜೋಸೆಫ್‌ ಗೆಬ್‌ಹಾರ್ಡ್‌ ಹಿಮ್ಲರ್, ಓರ್ವ ಪ್ರೌಢಶಾಲಾ ಶಿಕ್ಷಕ ಮತ್ತು ಪ್ರತಿಷ್ಠಿತ ವಿಟ್ಲ್ಸ್‌ಬ್ಯಾಕರ್‌‌ ಜಿಮ್ನಾಷಿಯಂನ ಅಥವಾ ಉಚ್ಚಶಿಕ್ಷಣದ ತರಬೇತಿ ಶಾಲೆಯ ಪ್ರಾಂಶುಪಾಲನಾಗಿದ್ದ.[] ಅವನ ತಾಯಿಯಾದ ಆನ್ನಾ ಮಾರಿಯಾ ಹಿಮ್ಲರ್ (ಮದುವೆಗೆ ಮುಂಚಿನ ಹೆಸರು ಹೇಡರ್‌), ಓರ್ವ ಧರ್ಮನಿಷ್ಠ ರೋಮನ್‌ ಕ್ಯಾಥಲಿಕ್‌‌ ಆಗಿದ್ದಳು. ಅವನಿಗೆ ಗೆಬ್‌ಹಾರ್ಡ್‌ ಲುಡ್‌ವಿಗ್‌‌ ಹಿಮ್ಲರ್ ಎಂಬ ಹೆಸರಿನ ಓರ್ವ ಹಿರಿಯ ಸೋದರನಿದ್ದು, ಅವನು 1898ರ ಜುಲೈ 29ರಂದು ಜನಿಸಿದ, ಮತ್ತು ಅರ್ನ್ಸ್ಟ್‌ ಹರ್ಮಾನ್‌‌ ಹಿಮ್ಲರ್ ಎಂಬ ಹೆಸರಿನ ಓರ್ವ ಕಿರಿಯ ಸೋದರನೂ ಅವನಿಗಿದ್ದು, ಅವನು 1905ರ ಡಿಸೆಂಬರ್‌‌ 23ರಂದು ಜನಿಸಿದ.[]

ಬವೇರಿಯಾದ ರಾಜ ಕುಟುಂಬದ ಬವೇರಿಯಾದ ಪ್ರಿನ್ಸ್‌‌ ಹೆನ್ರಿಕ್ ಎಂಬ ಅವನ ಧರ್ಮಪಿತನ ಹೆಸರನ್ನೇ ಹೆನ್ರಿಕ್‌ಗೂ ಇಡಲಾಯಿತು; ಗೆಬ್‌ಹಾರ್ಡ್‌ ಹಿಮ್ಲರ್ ಈತನಿಗೆ ಪಾಠ ಹೇಳಿಕೊಟ್ಟ.[] 1910ರಲ್ಲಿ, ಲ್ಯಾಂಡ್‌ಷಟ್‌‌‌ನಲ್ಲಿನ ಜಿಮ್ನಾಷಿಯಂನ್ನು (ಉಚ್ಚಶಿಕ್ಷಣದ ತರಬೇತಿ ಶಾಲೆಯನ್ನು) ಸೇರಿಕೊಂಡ ಹಿಮ್ಲರ್, ಅಲ್ಲಿ ಸಾಂಪ್ರದಾಯಿಕ ಶಿಷ್ಟ ಸಾಹಿತ್ಯವನ್ನು ಅಧ್ಯಯನ ಮಾಡಿದ. ಅಲ್ಲಿನ ಪ್ರಾಂಶುಪಾಲನಾಗಿದ್ದ ಹಿಮ್ಲರ್‌ನ ತಂದೆಯು, ಇತರ ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ಮತ್ತು ಶಿಕ್ಷಿಸಲು ಅವನನ್ನು ನಿಯೋಜಿಸಿದ. ಅವನನ್ನು ಓರ್ವ ಹುಟ್ಟು ಅಪರಾಧಿ ಎಂದೂ ಸಹ ಅವನ ತಂದೆಯು ಕರೆಯುತ್ತಿದ್ದ.[] ಕ್ರೀಡಾಸ್ಪರ್ಧೆಯಲ್ಲಿ ಹೋರಾಟ ನಡೆಸುತ್ತಿದ್ದುದರ ಜೊತೆಜೊತೆಗೇ ತನ್ನ ಶಾಲಾಚಟುವಟಿಕೆಯಲ್ಲಿಯೂ ಅವನು ಉತ್ತಮವಾದ ಕಾರ್ಯಕ್ಷಮತೆಯನ್ನು ಮೆರೆಯುತ್ತಿದ್ದ. ತನ್ನ ತಂದೆಯ ಅಣತಿಯ ಮೇರೆಗೆ, ತನ್ನ 10ನೇ ವಯಸ್ಸಿನಿಂದ 24ನೇ ವಯಸ್ಸಿನವರೆಗೂ ಅವನು ಒಂದು ದಿನಚರಿ ಬರೆಯುವುದನ್ನು ನಿರ್ವಹಿಸಿಕೊಂಡು ಬಂದ. ಚದುರಂಗ, ಹಾರ್ಪ್ಸಿಕಾರ್ಡ್‌, ಅಂಚೆ ಚೀಟಿ ಸಂಗ್ರಹಿಸುವಿಕೆ, ಮತ್ತು ತೋಟಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಅವನು ತೊಡಗಿಸಿಕೊಂಡು ತನ್ನತನವನ್ನು ಮೆರೆದ. ತನ್ನ ತಾರುಣ್ಯದಿಂದ ಮೊದಲ್ಗೊಂಡು ಪ್ರೌಢವಯಸ್ಸನ್ನು ತಲುಪುವವರೆಗೂ ಹಿಮ್ಲರ್ ಮಹಿಳೆಯರೊಂದಿಗಿನ ಒಡನಾಟಗಳಲ್ಲಿ ಎಂದಿಗೂ ನಿರಾಳತೆಯನ್ನು ಹೊಮ್ಮಿಸಲಿಲ್ಲ ಅಥವಾ ನಿರಾತಂಕವಾಗಿರಲಿಲ್ಲ.[]

ಹಿಮ್ಲರ್‌‌ನ ದಿನಚರಿಗಳು (1914–1918) ತೋರಿಸುವ ಪ್ರಕಾರ, ಆತ ಯುದ್ಧದ ಸುದ್ದಿಯಲ್ಲಿ ಅತೀವವಾಗಿ ಆಸಕ್ತನಾಗಿದ್ದ. ತಂದೆಯು ರಾಜವಂಶದೊಂದಿಗೆ ಹೊಂದಿರುವ ಸಂಪರ್ಕಗಳನ್ನು ಬಳಸಿಕೊಂಡು, ತನಗೆಂದು ಓರ್ವ ಅಧಿಕಾರಿ ಅಭ್ಯರ್ಥಿಯ ಸ್ಥಾನವನ್ನು ದಕ್ಕಿಸಿಕೊಡುವಂತೆ ಹಿಮ್ಲರ್‌‌ ತನ್ನ ತಂದೆಯನ್ನು ಪ್ರಾರ್ಥಿಸಿದ. ಅವನ ಹೆತ್ತವರು ಅಂತಿಮವಾಗಿ ಇದಕ್ಕೆ ಮಣಿದು, ಬವೇರಿಯಾದ 11ನೇ ಸೇನಾಭಾಗದಲ್ಲಿ (1918ರಲ್ಲಿ ಪ್ರೌಢಶಾಲೆಯಿಂದ ತೇರ್ಗಡೆಯಾದ ನಂತರ) ತರಬೇತಿಯನ್ನು ಪಡೆಯಲು ಅನುವುಮಾಡಿಕೊಟ್ಟರು. ಅವನು ಕ್ರೀಡಾಪಟುವಾಗಿರಲಿಲ್ಲವಾದ್ದರಿಂದ, ತನ್ನ ಸೇನಾ ತರಬೇತಿಯುದ್ದಕ್ಕೂ ಅವನು ಹೋರಾಟ ನಡೆಸಬೇಕಾಯಿತು. ಜರ್ಮನಿಯು ಸೋಲು ಕಾಣುವುದರೊಂದಿಗೆ 1918ರಲ್ಲಿ ಯುದ್ಧವು ಕೊನೆಗೊಂಡಿತು; ಅಷ್ಟೇ ಅಲ್ಲ, ಓರ್ವ ವೃತ್ತಿಪರ ಸೇನಾ ಅಧಿಕಾರಿಯಾಗುವ ಹಿಮ್ಲರ್‌ನ ಮಹತ್ವಾಕಾಂಕ್ಷೆಗಳೂ ಸಹ ಕೊನೆಗೊಂಡವು.

1919ರಿಂದ 1922ರವರೆಗೆ ಮ್ಯೂನಿಚ್‌ನ ಟೆಕ್ನಿಸ್ಕೆ ಹೊಚ್‌ಸ್ಕುಲೆ ಎಂಬಲ್ಲಿ ಹಿಮ್ಲರ್ ಬೆಳೆವಿಜ್ಞಾನವನ್ನು ಅಧ್ಯಯನ ಮಾಡಿದ; ಇದಾದ ನಂತರ ಒಂದು ಒಕ್ಕಲು ಜಮೀನಿನಲ್ಲಿ ತರುವಾಯದ ಕಾಯಿಲೆಯ ಕುರಿತಾಗಿ ಒಂದು ಅಲ್ಪ-ಕಾಲದ ಶಿಷ್ಯವೃತ್ತಿಯನ್ನು ಕೈಗೊಂಡ.[]

ತಾನೊಬ್ಬ ಧರ್ಮನಿಷ್ಠ ರೋಮನ್‌ ಕ್ಯಾಥಲಿಕ್ ಎಂಬುದಾಗಿ ಆತ ತನ್ನ ದಿನಚರಿಗಳಲ್ಲಿ ಸಮರ್ಥಿಸಿಕೊಂಡಿದ್ದಾನೆ, ಮತ್ತು ರೋಮನ್‌ ಚರ್ಚಿನಿಂದ ತಾನೆಂದಿಗೂ ಬೇರೆಡೆಗೆ ಮುಖಮಾಡುವುದಿಲ್ಲ ಎಂಬುದಾಗಿ ಬರೆದುಕೊಂಡಿದ್ದಾನೆ. ಆದಾಗ್ಯೂ, ಅವನು ಧಾರ್ಮಿಕ ಮಂಡಲಿಯೊಂದರ ಓರ್ವ ಸದಸ್ಯನಾಗಿದ್ದ, ಮತ್ತು ನಂತರದಲ್ಲಿ ಥುಲೆ ಸೊಸೈಟಿಯ ಸದಸ್ಯನೂ ಆಗಿದ್ದ; ಈ ಎರಡೂ ಸಂಘಗಳ ತತ್ತ್ವಗಳು ಚರ್ಚಿನ ತತ್ತ್ವಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ಅವನ ಅರಿವಿಗೆ ಬಂತು. ಹಿಮ್ಲರ್‌‌ನ ತಾತ್ತ್ವಿಕ ಸಿದ್ಧಾಂತವನ್ನು ಏರಿಯೋಸೋಫಿ ಎಂಬ ಹೆಸರಿನಿಂದ ಜೀವನಚರಿತ್ರೆಕಾರರು ವ್ಯಾಖ್ಯಾನಿಸಿದ್ದಾರೆ; ಇದು ಆರ್ಯರ ಜನಾಂಗ ಮತ್ತು ಜರ್ಮನರ ಮಧ್ಯಸ್ಥ-ಪೇಗನ್‌‌ ತತ್ತ್ವದ ಜನಾಂಗ ಶ್ರೇಷ್ಠತೆಯ ಕುರಿತಾದ ಅವನದೇ ಧಾರ್ಮಿಕ ಸಿದ್ಧಾಂತವಾಗಿದ್ದು, ಉತ್ತರದ ಯುರೋಪ್‌‌‌‌ನ ಪ್ರಾಚೀನ ಟ್ಯೂಟನ್‌‌ರ ಬುಡಕಟ್ಟುಗಳ ಜಾನಪದ ಅಧ್ಯಯನ ಮತ್ತು ಪುರಾಣದ ಕುರಿತಾಗಿ ಅವನು ನೀಡಿರುವ ಅರ್ಥವಿವರಣೆಗಳಿಂದ ಇದು ಆಂಶಿಕವಾಗಿ ಅಭಿವೃದ್ಧಿಪಡಿಸಲ್ಪಟ್ಟಿದೆ. ಈ ಅವಧಿಯಲ್ಲಿ, ಯೋಧನಾಗುವುದರ ಪರಿಕಲ್ಪನೆಯು ಅವನನ್ನು ಮತ್ತೊಮ್ಮೆ ಎಡೆಬಿಡದೆ ಕಾಡಲು ಶುರುಮಾಡಿತು. ಒಂದು ವೇಳೆ ಜರ್ಮನಿಯು ಕೂಡಲೇ ಯುದ್ಧದಲ್ಲಿ ತನ್ನನ್ನು ತೊಡಗಿಸಿಕೊಳ್ಳದಿದ್ದಲ್ಲಿ, ಕದನವನ್ನು ಅರಸಿಕೊಂಡು ತಾನು ಮತ್ತೊಂದು ದೇಶಕ್ಕೆ ತೆರಳುವುದಾಗಿ ಅವನು ಬರೆದುಕೊಂಡ.

1923ರಲ್ಲಿ, ಅರ್ನ್ಸ್ಟ್‌‌ ರೋಹಂ ಅಡಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ, ಅಡಾಲ್ಫ್‌ ಹಿಟ್ಲರ್‌‌‌‌‌‌ನ ಬೀರ್‌‌ ಹಾಲ್‌ ಬಂಡಾಯದಲ್ಲಿ ಹಿಮ್ಲರ್ ಪಾಲ್ಗೊಂಡ. 1926ರಲ್ಲಿ, ಬಿರುಗಾಳಿಯಿಂದ ತಪ್ಪಿಸಿಕೊಳ್ಳುವ ಒಂದು ಸಂದರ್ಭದಲ್ಲಿ ಹೊಟೇಲೊಂದರ ಪಡಸಾಲೆಯಲ್ಲಿ ಅವನು ತನ್ನ ಭಾವೀಪತ್ನಿಯನ್ನು ಭೇಟಿಯಾದ. ಮಾರ್ಗರೇಟ್‌ ಸೀಗ್ರೋತ್‌‌ (ಜನ್ಮನಾಮ ಬೋಡೆನ್‌‌) ಅವನಿಗಿಂತ ಏಳು ವರ್ಷಗಳಷ್ಟು ಹಿರಿಯಳಾಗಿದ್ದು, ಓರ್ವ ವಿಚ್ಛೇದಿತೆ, ಮತ್ತು ಪ್ರಾಟೆಸ್ಟೆಂಟ್‌ ಪಂಥದವಳಾಗಿದ್ದಳು. 1928ರ ಜುಲೈ 3ರಂದು, ಅವರಿಬ್ಬರೂ ಮದುವೆಯಾದರು. ಈ ಸಮಯದ ಅವಧಿಯಲ್ಲಿ, ಓರ್ವ ಕೋಳಿ ಸಾಕಣೆಗಾರನ ಕೆಲಸದಲ್ಲಿ ಹಿಮ್ಲರ್ ತೊಡಗಿಸಿಕೊಂಡರೂ, ಅದರಲ್ಲಿ ಯಶಸ್ಸು ಕಾಣಲಿಲ್ಲ.[೧೦] ಅವರ ಏಕೈಕ ಮಗುವಾದ ಗಡ್ರನ್‌‌, 1929ರ ಆಗಸ್ಟ್‌‌ 8ರಂದು ಜನ್ಮತಾಳಿತು. ಹಿಮ್ಲರ್ ತನ್ನ ಮಗಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ, ಮತ್ತು ಪ್ಯೂಪಿ (ಆಂಗ್ಲ:"dolly") ಎಂದು ಅವಳನ್ನು ಕರೆಯುತ್ತಿದ್ದ. ಮಾರ್ಗರೇಟ್‌‌ ನಂತರದಲ್ಲಿ ಓರ್ವ ಮಗನನ್ನು ದತ್ತು ಸ್ವೀಕರಿಸಿದಳು, ಆದರೆ ಅವನಲ್ಲಿ ಹಿಮ್ಲರ್ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ವಿಚ್ಛೇದನವನ್ನು ಬಯಸದೆಯೇ 1940ರಲ್ಲಿ ಹೆನ್ರಿಕ್ ಮತ್ತು ಮಾರ್ಗರೇಟ್‌‌ ಹಿಮ್ಲರ್ ಪ್ರತ್ಯೇಕವಾದರು. ಆ ಸಮಯದಲ್ಲಿ, ಹೆಡ್ವಿಗ್‌‌ ಪೊಥಾಸ್ಟ್‌ ಎಂಬ ಹೆಸರಿನ ಓರ್ವ ಕಾರ್ಯದರ್ಶಿಯೊಂದಿಗೆ ಹಿಮ್ಲರ್ ಸ್ನೇಹವನ್ನು ಬೆಳೆಸಿಕೊಂಡ; 1941ರಲ್ಲಿ ತನ್ನ ಉದ್ಯೋಗವನ್ನು ಬಿಟ್ಟ ಅವಳು ಹೆಮ್ಲರ್‌‌ನ ಯಜಮಾನಿಯಾದಳು. ಅವಳ ಇಬ್ಬರು ಮಕ್ಕಳಿಗೆ- (1942ರಲ್ಲಿ ಜನಿಸಿದ) ಹೆಲ್ಜ್‌‌ ಎಂಬ ಓರ್ವ ಮಗ, ಹಾಗೂ (1944ರಲ್ಲಿ ಜನಿಸಿದ) ನ್ಯಾನೆಟ್‌ ಡೊರೊಥಿಯಾ ಎಂಬ ಓರ್ವ ಮಗಳಿಗೆ- ಹಿಮ್ಲರ್‌ ತಂದೆಯೆನಿಸಿಕೊಂಡ.

ಕೃಷಿಯಲ್ಲಿ ಮತ್ತು "ಮರಳಿ ಮಣ್ಣಿಗೆ" (ಬ್ಯಾಕ್‌ ಟು ದಿ ಲ್ಯಾಂಡ್‌) ಎಂಬ ಆಂದೋಲನಲ್ಲಿಯೂ ಹಿಮ್ಲರ್ ಅತ್ಯಾಸಕ್ತನಾಗಿದ್ದ. ಒಂದು ಕೃಷಿಕ ಜೀವನವನ್ನು ನಡೆಸುವುದರ ಕುರಿತು ಅವನು ಮತ್ತು ಅವನ ಹೆಂಡತಿ ಇಬ್ಬರೂ ರಮ್ಯವಾದ ಪರಿಕಲ್ಪನೆಗಳನ್ನು ಹೊಂದಿದ್ದರು. ಆರ್ಟಮೇನಿಯನ್‌‌ ಸಮಾಜ ಎಂಬ ಹೆಸರಿನ, ಮರಳಿ-ಮಣ್ಣಿನೆಡೆಗೆ ತೊಡಗಿಸಿಕೊಳ್ಳುವ ತುಡಿತವನ್ನು ಹೊಂದಿರುವ, ಆದರೆ ಜನಾಂಗೀಯ ಸಿದ್ಧಾಂತದೊಂದಿಗೆ ಬೆರೆತಿರುವ, ಯುವಜನರ ಒಂದು ತೆರನಾದ ಆದರ್ಶಾತ್ಮಕ ಸಮೂಹವನ್ನು ಅವನು ಸೇರಿಕೊಂಡ. ಈ ಆಂದೋಲನದ ನಾಯಕರ ಪೈಕಿ ಒಬ್ಬನಾಗಿ ಅವನು ಹೊರಹೊಮ್ಮಿದ. ನಂತರದಲ್ಲಿ ಆಸ್ಕ್‌ವಿಟ್ಜ್‌‌ ವಲಯದಲ್ಲಿ ಆಡಳಿತ ನಡೆಸಿದ ರುಡಾಲ್ಫ್‌‌ ಹಾಬ್‌‌[೧೧] ಎಂಬಾತನನ್ನು, ಮತ್ತು SSನ RuSHAದಲ್ಲಿ (ಜನಾಂಗ ಮತ್ತು ಪುನರ್ವಸತಿ ಕಲ್ಪಿಸುವಿಕೆ ಕಚೇರಿಯಲ್ಲಿ) ನಂತರದಲ್ಲಿ ಕೆಲಸ ಮಾಡಿದ ರಿಚರ್ಡ್‌ ವಾಲ್ಥರ್‌‌ ಡರ್ರೆ ಎಂಬಾತನನ್ನು ಈ ಆಂದೋಲನದ ಮೂಲಕ ಹಿಮ್ಲರ್‌‌ ಸ್ಪಷ್ಟವಾಗಿ ಕಾಣುವಂತೆ ಭೇಟಿಮಾಡಿದ.[೧೨]

SSನಲ್ಲಿನ ಏಳಿಗೆ

[ಬದಲಾಯಿಸಿ]
ಚಿತ್ರ:HimmlerOberfhr.jpg
ಒಬರ್‌ಫಹ್ರರ್‌‌ನ ಶ್ರೇಣಿಯೊಂದಿಗಿನ ಹಿಂದಿನ SS ಸಮವಸ್ತ್ರದಲ್ಲಿರುವ (ಕಪ್ಪು ಟೈ ಮತ್ತು ಟೋಪಿ) ಹಿಮ್ಲರ್.

SSನಲ್ಲಿನ ಆರಂಭಿಕ ಅವಧಿ: 1925–1934

[ಬದಲಾಯಿಸಿ]

1925ರಲ್ಲಿ ಹಿಮ್ಲರ್ SSನ್ನು ಸೇರಿಕೊಂಡ; ಬವೇರಿಯಾದಲ್ಲಿನ SS-ಗೌಫುಹ್ರೆರ್‌‌ (ಜಿಲ್ಲೆ ನಾಯಕ) ಎಂಬ ಹೊಣೆಗಾರಿಕೆಯು ಅವನ ಮೊದಲ ಸ್ಥಾನವಾಗಿತ್ತು. 1927ರಲ್ಲಿ, SS-ಒಬರ್‌ಫಹ್ರರ್ ಶ್ರೇಣಿಯೊಂದಿಗೆ ಅವನು ಉಪ–ರೀಕ್ಸ್‌‌ಫಹ್ರರ್‌‌-SS ಆದ, ಮತ್ತು 1929ರಲ್ಲಿ SS ದಳಪತಿ ಎರ್ಹಾರ್ಡ್‌ ಹೀಡನ್‌‌ ಎಂಬಾತ ರಾಜೀನಾಮೆ ನೀಡುವುದರೊಂದಿಗೆ, ರೀಕ್ಸ್‌‌ಫಹ್ರರ್‌‌-SS ಆಗಿ ಹಿಮ್ಲರ್ ನೇಮಿಸಲ್ಪಟ್ಟ. ಆ ಸಮಯದಲ್ಲಿ, SS ಆಗ 280 ಸದಸ್ಯರನ್ನು ಹೊಂದಿತ್ತು ಮತ್ತು ಅದು ಸಾಕಷ್ಟು ದೊಡ್ಡದಾಗಿದ್ದ ಸ್ಟರ್ಮಾಬ್ಟೀಲಂಗ್‌ನ (SA) ಒಂದು ಹೆಕ್ಕಿತೆಗೆದ ಸಮೂಹವಷ್ಟೇ ಆಗಿತ್ತು. ಮುಂದಿನ ವರ್ಷದ ಹೊತ್ತಿಗೆ, ಸಂಘಟನೆಯ ಒಂದು ಪ್ರಮುಖ ವಿಸ್ತರಣೆಯನ್ನು ಹಿಮ್ಲರ್ ಪ್ರಾರಂಭಿಸಿದ, ಮತ್ತು, 1930ರಲ್ಲಿ SS-ಗ್ರಪೆನ್‌ಫಹ್ರರ್‌‌ ಶ್ರೇಣಿಗೆ ಅವನು ಬಡತಿ ಪಡೆದ (ಆ ಸಮಯದಲ್ಲಿ, SSನ ರಾಷ್ಟ್ರೀಯ ದಳಪತಿಗೆ ಸಂಬಂಧಿಸಿದಂತೆ ರೀಕ್ಸ್‌‌ಫಹ್ರರ್‌‌ ಎಂಬುದು ಕೇವಲ ಒಂದು ಪಟ್ಟವಾಗಿತ್ತು).

1933ರ ಹೊತ್ತಿಗೆ, SS ಸಂಘಟನೆಯು 52,000 ಸದಸ್ಯರನ್ನು ಹೊಂದಿತ್ತು. ಎಲ್ಲಾ ಸದಸ್ಯರೂ ಸಹ ಹಿಟ್ಲರ್‌‌ನ ಆರ್ಯನ್‌‌ ಹೆರ್ರೆನ್‌ವೋಕ್‌‌‌‌ಗೆ ("ಆರ್ಯನ್‌‌ ಆಚಾರ್ಯ ಜನಾಂಗ") ಸೇರಿದವರಾಗಿರಬೇಕು ಎಂಬುದನ್ನು ಖಾತ್ರಿಪಡಿಸುವುದಕ್ಕಾಗಿ, ಸದಸ್ಯತ್ವವು ಬಯಸುವ ಕಟ್ಟುನಿಟ್ಟಿನ ಅವಶ್ಯಕತೆಗಳನ್ನು ಸಂಘಟನೆಯು ಜಾರಿಗೆ ತಂದಿತು. SS ಸಂಘಟನೆಯನ್ನು SA ನಿಯಂತ್ರಣದಿಂದ ಪ್ರತ್ಯೇಕಿಸುವ ಒಂದು ಪ್ರಯತ್ನವನ್ನು ಹಿಮ್ಲರ್ ಮತ್ತು ಅವನ ಉಪ-ಅಧಿಕಾರಿಯಾದ ರೀನ್‌ಹಾರ್ಡ್‌ ಹೇಡ್ರಿಕ್‌‌ ಪ್ರಾರಂಭಿಸಿದರು. ಕಪ್ಪು ಬಣ್ಣದ SS ಸಮವಸ್ತ್ರಗಳನ್ನು SAನ ಕಂದು ಅಂಗಿಗಳು 1932ರಲ್ಲಿ ಪಲ್ಲಟಗೊಳಿಸಿದವು ಮತ್ತು 1934ರ ವೇಳೆಗೆ ಎಲ್ಲರ ಸಾಮಾನ್ಯ ಬಳಕೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಅವು ತಯಾರಿಸಲ್ಪಟ್ಟವು.[೧೩] 1933ರಲ್ಲಿ, SS-ಓಬರ್‌‌ಗ್ರಪೆನ್‌ಫಹ್ರರ್‌‌ ಆಗಿ ಹಿಮ್ಲರ್ ಬಡತಿ ಪಡೆದ. ಇದರಿಂದಾಗಿ ಹಿರಿಯ SA ದಳಪತಿಗಳಿಗೆ ಸಮಾನವಾಗಿರುವ ಒಂದು ಸ್ಥಾನವನ್ನು ಅವನು ಪಡೆಯುವಂತಾಯಿತು; ಅಷ್ಟು ಹೊತ್ತಿಗೆ SA ದಳಪತಿಗಳು SS ಸಂಘಟನೆಯನ್ನು ದ್ವೇಷಿಸಉತ್ತಿದ್ದರು ಮತ್ತು ಅದರ ಶಕ್ತಿಯನ್ನು ಕಂಡು ಅಸೂಯೆಪಡುತ್ತಿದ್ದರು.

ಜರ್ಮನ್‌ ಸೇನೆಗೆ ಮತ್ತು ನಾಜಿ ನಾಯಕತ್ವಕ್ಕೆ, SA ಮತ್ತು ಅದರ ನಾಯಕ ಅರ್ನ್ಸ್ಟ್‌‌ ರೋಹಂ ಒಂದು ಬೆದರಿಕೆಯನ್ನು ಒಡ್ಡಿದರು ಎಂಬುದಕ್ಕೆ ಹಿಮ್ಲರ್, ಹರ್ಮಾನ್‌ ಗೋರಿಂಗ್‌, ಮತ್ತು ಜನರಲ್‌ ವೆರ್ನರ್‌ ವಾನ್‌ ಬ್ಲೊಂಬರ್ಗ್‌ ಸಮ್ಮತಿಸಿದರು. ಸಮಾಜವಾದಿ ಮತ್ತು ಶ್ರೀಸಾಮಾನ್ಯ ಪಕ್ಷದ ದೃಷ್ಟಿಕೋನಗಳನ್ನು ರೋಹಂ ಹೊಂದಿದ್ದ, ಮತ್ತು ನಿಜವಾದ ಕ್ರಾಂತಿ ಎಂಬುದಿನ್ನೂ ಪ್ರಾರಂಭವಾಗಿಲ್ಲ ಎಂದು ನಂಬಿದ್ದ. SAಯು ಶಸ್ತ್ರಾಸ್ತ್ರಗಳನ್ನು-ಹೊಂದಿರುವ ಸಂಸ್ಥಾನದ ಏಕಮಾತ್ರ ಪಡೆಯಾಗಿ ಮಾರ್ಪಡಬೇಕು ಎಂಬುದು ಅವನ ಅಭಿಪ್ರಾಯವಾಗಿತ್ತು. ಒಂದು ದಿಢೀರ್‌ ಕಾರ್ಯಾಚರಣೆಯನ್ನು ಕೈಗೊಳ್ಳಲು SAಯನ್ನು ರೋಹಂ ಬಳಸಿಕೊಳ್ಳುವುದು ನಿಶ್ಚಿತ ಎಂಬ ಭಾವನೆಯನ್ನು ಕೆಲವೊಂದು ನಾಜಿಯ, ಸೇನೆಯ ಮತ್ತು ರಾಜಕೀಯದ ನಾಯಕರು ಭಾವಿಸುವುದಕ್ಕೆ ಇದು ಕಾರಣವಾಯಿತು.

ಹಿಮ್ಲರ್ ಮತ್ತು ಗೋರಿಂಗ್‌ರಿಂದ ಮನವೊಲಿಸಲ್ಪಟ್ಟ ಹಿಟ್ಲರ್‌‌, ರೋಹಂನನ್ನು ನಿರ್ಮೂಲಗೊಳಿಸಬೇಕು ಎಂಬ ಅಭಿಪ್ರಾಯಕ್ಕೆ ಸಮ್ಮತಿಸಿದ. ಅವನು ಈ ಹೊಣೆಗಾರಿಕೆಯನ್ನು ರೀನ್‌ಹಾರ್ಡ್‌ ಹೇಡ್ರಿಕ್‌‌, ಕರ್ಟ್‌ ಡಾಲ್ಯೂಜ್‌‌, ಮತ್ತು ವೆರ್ನರ್‌ ಬೆಸ್ಟ್‌‌‌‌ರಿಗೆ ನಿಯೋಜಿಸಿದ; ಅವರು ರೋಹಂನ ಗಲ್ಲಿಗೇರಿಸುವಿಕೆಗೆ (ಇದನ್ನು ಥಿಯೋಡಾರ್‌ ಐಕೆ ನೆರವೇರಿಸಿದ) ಆದೇಶಿಸಿದರು. SAಗೆ ಸೇರಿದ ಇತರ ಹಿರಿಯ ಅಧಿಕಾರಿಗಳು, ಮತ್ತು ಹಿಟ್ಲರ್‌ನ ಒಂದಷ್ಟು ವೈಯಕ್ತಿಕ ಶತ್ರುಗಳಿಗೆ (ಗ್ರೆಗರ್‌ ಸ್ಟ್ರಾಸ್ಸರ್‌‌ ಮತ್ತು ಕರ್ಟ್‌ ವಾನ್‌ ಸ್ಕ್ಲೀಷರ್‌‌‌ನಂಥವರು) ಸಂಬಂಧಪಟ್ಟಂತೆಯೂ 1934ರ ಜೂನ್‌ 30ರಂದು ಇದೇ ಆದೇಶವು ಜಾರಿಯಾಯಿತು; ಇದೇ ನೈಟ್‌ ಆಫ್‌ ದಿ ಲಾಂಗ್‌ ನೈವ್ಸ್‌‌ ಎಂಬುದಾಗಿ ಚಿರಪರಿಚಿತವಾಯಿತು. ಅದರ ಮರುದಿನ, ಕೇವಲ ಹಿಟ್ಲರ್‌ಗೆ ಮಾತ್ರವೇ ಬಾಧ್ಯಸ್ಥನಾಗಿರುವ ಒಂದು ಸ್ವತಂತ್ರ ಸಂಘಟನೆಯಾಗಿ SS ಮಾರ್ಪಟ್ಟಿತು, ಮತ್ತು ಹಿಮ್ಲರ್‌ನ ರೀಕ್ಸ್‌‌ಫಹ್ರರ್‌‌-SS ಪಟ್ಟವು ಅತ್ಯಂತ ಉನ್ನತವಾದ ಔಪಚಾರಿಕ SS ಶ್ರೇಣಿ ಎಂದು ಕರೆಸಿಕೊಂಡಿತು.

ಅಧಿಕಾರದ ಬಲವರ್ಧನೆ

[ಬದಲಾಯಿಸಿ]
ಚಿತ್ರ:Vlcsnap-5522132.png
ಎಡದಿಂದ ಬಲಕ್ಕೆ: ಹಿಮ್ಲರ್, ರೀನ್‌ಹಾರ್ಡ್‌ ಹೇಡ್ರಿಕ್‌‌, ಕಾರ್ಲ್‌ ವೋಲ್ಫ್‌‌ ಮತ್ತು ಓರ್ವ ಗುರುತಿಸಲ್ಪಡದ ಸಹಾಯಕ‌‌‌‌, ಓಬರ್‌‌ಸಾಲ್ಜ್‌‌ಬರ್ಗ್‌‌ನಲ್ಲಿನ ಚಿತ್ರ‌‌‌, ಮೇ 1939

1934ರ ಏಪ್ರಿಲ್‌ 20ರಂದು, ಹಿಮ್ಲರ್ ಮತ್ತು ಹೇಡ್ರಿಕ್ ಜೊತೆಯಲ್ಲಿ ಗೋರಿಂಗ್‌ ಒಂದು ಪಾಲುದಾರಿಕೆಯನ್ನು ರೂಪಿಸಿದ. ಪ್ರಷ್ಯಾದ ಗುಪ್ತ ಆರಕ್ಷಕ ಪಡೆಯಾದ ಗೆಸ್ಟಾಪೊ (ಗೆಹೀಮ್‌ ಸ್ಟಾಟ್ಸ್‌ಪೊಲೈಜೀ) ಮೇಲಿನ ಅಧಿಕಾರವನ್ನು ಹಿಮ್ಲರ್‌‌ಗೆ ಗೋರಿಂಗ್‌ ವರ್ಗಾಯಿಸಿದ; ಅಷ್ಟೇ ಅಲ್ಲ, ಪ್ರಷ್ಯಾದ ಆಚೆಗಿನ ಎಲ್ಲಾ ಜರ್ಮನ್‌ ಆರಕ್ಷಕ ಪಡೆಯ ಮುಖ್ಯಸ್ಥನನ್ನಾಗಿಯೂ ಹಿಮ್ಲರ್‌ನನ್ನು ಅವನು ನೇಮಿಸಿದ. 1934ರ ಏಪ್ರಿಲ್‌ 22ರಂದು, ಹೇಡ್ರಿಕ್‌ನನ್ನು ಗೆಸ್ಟಾಪೊವಿನ ಮುಖ್ಯಸ್ಥನಾಗಿ ಹಿಮ್ಲರ್ ನೇಮಿಸಿದ. ಅದೇ ರೀತಿಯಲ್ಲಿ, SDಯ ಮುಖ್ಯಸ್ಥನಾಗಿ ಹೇಡ್ರಿಕ್‌‌ ಮುಂದುವರಿದ.[೧೪]

"ರೀಕ್‌ನಲ್ಲಿನ ಆರಕ್ಷಕರ ಕರ್ತವ್ಯಗಳ ನಿಯಂತ್ರಣವನ್ನು ಒಗ್ಗೂಡಿಸುವುದಕ್ಕೆ" ಸಂಬಂಧಿಸಿದ ಒಂದು ಅಧಿಕೃತ ಕಟ್ಟಳೆಯನ್ನು ಹಿಟ್ಲರ್‌‌ ಘೋಷಿಸಿದ ನಂತರ, ಜರ್ಮನ್‌ ಆರಕ್ಷಕ ಪಡೆಯ ಮುಖ್ಯಸ್ಥನಾಗಿ 1936ರ ಜೂನ್‌ 17ರಂದು ಹಿಮ್ಲರ್ ನೇಮಿಸಲ್ಪಟ್ಟ.[೧೫] ಸಾಂಪ್ರದಾಯಿಕವಾಗಿ ಹೇಳುವುದಾದರೆ, ಜರ್ಮನಿಯಲ್ಲಿದ್ದ ಕಾನೂನು ವಿಧಿಸುವಿಕೆಯ ಪರಿಪಾಠವು ಒಂದು ಸಂಸ್ಥಾನದ ಹಾಗೂ ಸ್ಥಳೀಯ ವಿಷಯವಾಗಿತ್ತು. ಈ ಪಾತ್ರದಲ್ಲಿ, ಗೃಹಖಾತೆ ಸಚಿವ ವಿಲ್ಹೆಮ್‌ ಫ್ರಿಕ್‌‌ ಎಂಬಾತನಿಗೆ ಹಿಮ್ಲರ್ ನಾಮಮಾತ್ರಕ್ಕೆ ಅಧೀನದ ಅಧಿಕಾರಿಯಾಗಿದ್ದ. ಆದಾಗ್ಯೂ, ಸದರಿ ಅಧಿಕೃತ ಕಟ್ಟಳೆಯು ಆರಕ್ಷಕರನ್ನು SSನೊಂದಿಗೆ ಪರಿಣಾಕಾರಿಯಾಗಿ ವಿಲೀನಗೊಳಿಸಿತು ಮತ್ತು ಫ್ರಿಕ್‌‌ನ ನಿಯಂತ್ರಣದಿಂದ ಅದನ್ನು ಕಾರ್ಯತಃ ಸ್ವತಂತ್ರವಾಗಿಸಿತು.

ಜರ್ಮನಿಯ ಎಲ್ಲಾ ಏಕಪ್ರಕಾರವಾಗಿಸಿದ ಕಾನೂನು ಜಾರಿಯ ಸಂಸ್ಥೆಗಳು ಒಂದು ಹೊಸ ಆರ್ಡ್‌ನಂಗ್ಸ್‌ಪೊಲೀಜೀ (ಆರ್ಪೋ: "ಸುವ್ಯವಸ್ಥೆಯ ಆರಕ್ಷಕ") ಆಗಿ ಒಗ್ಗೂಡಿಸಲ್ಪಟ್ಟಿದ್ದರಿಂದ ಹಿಮ್ಲರ್ ಅಧಿಕಾರವನ್ನು ಗಳಿಸಿದ ಮತ್ತು ಅವನ ಮುಖ್ಯ ಕಚೇರಿಯು SSನ ಒಂದು ಕೇಂದ್ರಕಚೇರಿಯ ಶಾಖೆಯಾಯಿತು. ತನ್ನ ಪಟ್ಟವನ್ನು ಹೊರತುಪಡಿಸಿ, ಸಮವಸ್ತ್ರ ಧರಿಸಿದ ಆರಕ್ಷಕರ ಕೇವಲ ಭಾಗಶಃ ನಿಯಂತ್ರಣವನ್ನು ಹಿಮ್ಲರ್ ಗಳಿಸಿದ. ಅವನಿಗೆ ನೀಡಲ್ಪಟ್ಟ ವಾಸ್ತವಿಕ ಅಧಿಕಾರಗಳ ಪೈಕಿ ಕೆಲವನ್ನು ಗೃಹಖಾತೆಯ ಇಲಾಖೆಯು ಹಿಂದೆ ಚಲಾಯಿಸುತ್ತಿತ್ತು. 1943ರಲ್ಲಷ್ಟೇ ಹಿಮ್ಲರ್‌‌ನನ್ನು ಗೃಹಖಾತೆಯ ಸಚಿವನನ್ನಾಗಿ ನೇಮಿಸಲಾಯಿತು; ಈ ಅವಧಿಯಲ್ಲಿಯೇ ಸಚಿವನ ಅಧಿಕಾರದ ವರ್ಗಾವಣೆಯು ಸಂಪೂರ್ಣಗೊಂಡಿತು.

1936ರ ನೇಮಕಾತಿಯೊಂದಿಗೆ, ಜರ್ಮನಿಯ ರಾಜಕೀಯೇತರ ಪತ್ತೇದಾರ ಪಡೆಯಾದ ಕ್ರಿಮಿನಲ್‌ಪೊಲೀಜೀ (ಕ್ರಿಪ್ಕೊ: ಅಪರಾಧ ಆರಕ್ಷಕ) ಮೇಲಿನ ಸಚಿವನ ಅಧಿಕಾರವನ್ನೂ ಸಹ ಹಿಮ್ಲರ್ ಗಳಿಸಿದ; ಈ ಪಡೆಯನ್ನು ಆತ ಗೆಸ್ಟಾಪೊದೊಂದಿಗೆ ವಿಲೀನಗೊಳಿಸಿ, ಹೇಡ್ರಿಕ್‌ನ ನಿಯಂತ್ರಣದ ಅಡಿಯಲ್ಲಿ ಸಿಕೆರ್‌ಹೀಟ್ಸ್‌ಪೊಲೀಜೀ (ಸಿಪೋ: ಭದ್ರತಾ ಆರಕ್ಷಕ) ಎಂಬ ಪಡೆಯನ್ನಾಗಿಸಿದ, ಮತ್ತು ತನ್ಮೂಲಕ ಜರ್ಮನಿಯ ಸಮಗ್ರ ಪತ್ತೇದಾರ ಪಡೆಯ ಮೇಲೆ ಕಾರ್ಯಾಚರಣಾ ಹತೋಟಿಯನ್ನು ಗಳಿಸಿಕೊಂಡ.[೧೬] ಕ್ರಿಪ್ಕೊ ತನ್ನದೇ ಆದ ನಾಗರಿಕ ಆಡಳಿತದ ಅಡಿಯಲ್ಲಿ ಮುಖ್ಯವಾಗಿ ಉಳಿಯುವುದರೊಂದಿಗೆ ಮತ್ತು ನಂತರದಲ್ಲಿ ಪಕ್ಷ ಸಾಧನವಾಗಿ (ಪಕ್ಷವು ನಾಗರಿಕ ಆಡಳಿತವನ್ನು ಲಗತ್ತಿಸಿತು) ಮಾರ್ಪಡುವುದರೊಂದಿಗೆ, ರೀಕ್‌‌‌ ವ್ಯಾಪ್ತಿಯೊಳಗಡೆ ಈ ವಿಲೀನವು ಎಂದಿಗೂ ಸಂಪೂರ್ಣವೆನಿಸಲಿಲ್ಲ. ಆದಾಗ್ಯೂ, ಶುದ್ಧಾಂಗವಾಗಿ ರೀಕ್‌‌‌ನೊಳಗಡೆ ಸಂಘಟಿಸಲ್ಪಡದ ಆಕ್ರಮಿತ ಪ್ರದೇಶಗಳಲ್ಲಿ, SS ಆದೇಶಸರಣಿಯ ವ್ಯಾಪ್ತಿಯೊಳಗಿನ ಸಿಪೋ ಬಲವರ್ಧನೆಯು ಬಹುತೇಕ ಪರಿಣಾಮಕಾರಿಯಾಗಿ ಸಾಬೀತುಗೊಳಿಸಲ್ಪಟ್ಟಿತು. 1939ರ ಸೆಪ್ಟೆಂಬರ್‌ನಲ್ಲಿ, IIನೇ ಜಾಗತಿಕ ಸಮರದ ಏಕಾಏಕಿ ಆರಂಭವನ್ನು ಅನುಸರಿಸಿ, ರೀಕ್ಸ್‌‌ಸಿಕೆರ್‌ಹೀಟ್ಸ್‌ಹೌಪ್ಟಾಮ್ಟ್‌ (RSHA: ರೀಕ್‌‌‌ ಮುಖ್ಯ ಭದ್ರತಾ ಕಚೇರಿ) ಅನ್ನು ಹಿಮ್ಲರ್ ರೂಪಿಸಿದ; ಈ ವ್ಯವಸ್ಥೆಯಲ್ಲಿ ಸಿಪೋ (ಗೆಸ್ಟಾಪೊ ಮತ್ತು ಕ್ರಿಪ್ಕೊ), ಸೀಕೆರ್‌ಹೀಟ್ಸ್‌ಡಯೆನ್ಸ್ಟ್‌ (SD: ಭದ್ರತಾ ಸೇವೆಗಳು) ಜೊತೆಯಲ್ಲಿ ಸೇರಿಕೊಂಡು, ಹೇಡ್ರಿಕ್‌ನ ನಿಯಂತ್ರಣದ ಅಡಿಯಲ್ಲಿನ ಸಂಬಂಧಿತ ವಿಭಾಗಗಳಾಗಿ ಮಾರ್ಪಟ್ಟವು.[೧೭]

ಸಮಗ್ರ ಸೆರೆಶಿಬಿರ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಹಿಮ್ಲರ್ ನೋಡಿಕೊಂಡ. ಆದಾಗ್ಯೂ, IIನೇ ಜಾಗತಿಕ ಸಮರವು ಒಮ್ಮೆಗೆ ಪ್ರಾರಂಭವಾಗುತ್ತಿದ್ದಂತೆ, ಸೆರೆ ಶಿಬಿರಗಳಾಗಿ ಔಪಚಾರಿಕವಾಗಿ ವರ್ಗೀಕರಿಸಲ್ಪಡದ, ಪ್ರವೇಶ ನಿರ್ಬಂಧದ ಹೊಸ ಶಿಬಿರಗಳು ಸ್ಥಾಪಿಸಲ್ಪಟ್ಟವು ಮತ್ತು ಇವುಗಳ ಮೇಲೆ ಹಿಮ್ಲರ್ ಮತ್ತು SS ಹತೋಟಿಯನ್ನು ಚಲಾಯಿಸಲಿಲ್ಲ. ಸ್ಟಾಲಿನ್‌ಗ್ರಾಡ್‌ ದುರ್ಘಟನೆಯ ಒಂದು ಫಲವಾಗಿ, ಆಡಳಿತ ವ್ಯವಸ್ಥೆಯ ಕುರಿತಾಗಿ ಏಕಾಏಕಿ ಆರಂಭಗೊಂಡ ಜನಪ್ರಿಯವಾದ, ಕೇವಲ ಬಾಯಿಮಾತಿನ ಟೀಕೆಯನ್ನು ಅನುಸರಿಸಿ, ಇಂಥ ಟೀಕೆಗೆ ತಡೆಹಾಕುವಲ್ಲಿನ ಗೆಸ್ಟಾಪೊದ ಕಾರ್ಯನಿರ್ವಹಣೆಗೆ ನಿರಾಶೆಯನ್ನು ವ್ಯಕ್ತಪಡಿಸಿದ ಪಕ್ಷದ ಸಾಧನವು, 1943ರಲ್ಲಿ ಪೊಲಿಟಿಸ್ಕೆ ಸ್ಟಾಫೆಲ್ನ್‌‌ (ರಾಜಕೀಯ ದಳಗಳು) ಪಡೆಯನ್ನು ತನ್ನದೇ ರಾಜಕೀಯ ನಿಯಂತ್ರಣದ ವಿಭಾಗವಾಗಿ ಸ್ಥಾಪಿಸಿ, ತನ್ಮೂಲಕ ಈ ಕ್ಷೇತ್ರದಲ್ಲಿನ ಗೆಸ್ಟಾಪೊವಿನ ಏಕಸ್ವಾಮ್ಯವನ್ನು ಮುರಿಯಿತು.

ಈ ವರ್ಷಗಳ ಅವಧಿಯಲ್ಲಿ, SS-ವರ್ಫ್ಯುಗಂಗ್‌ಸ್ಟ್ರುಪ್‌‌ (SS-VT) ಎಂದು ಕರೆಯಲ್ಪಟ್ಟ ತನ್ನದೇ ಆದ ಸೇನಾಶಾಖೆಯನ್ನು SS ಅಭಿವೃದ್ಧಿಪಡಿಸಿತು; ಈ ಶಾಖೆಯೇ ಕಾಲಾನಂತರದಲ್ಲಿ ವಫೆನ್‌‌-SS ಎಂಬುದಾಗಿ ವಿಕಸನಗೊಂಡಿತು. ನಾಮಮಾತ್ರಕ್ಕೆ ಹಿಮ್ಲರ್‌‌ನ ಅಧಿಕಾರದ ಅಡಿಯಲ್ಲಿದ್ದರೂ ಸಹ, ಒಂದು ಸಂಪೂರ್ಣವಾದ ಸೈನ್ಯೀಕರಿಸಲ್ಪಟ್ಟ ಹತೋಟಿಯ ಸ್ವರೂಪವನ್ನು ವಫೆನ್‌‌-SS ಅಭಿವೃದ್ಧಿಪಡಿಸಿತು ಮತ್ತು ವೆಹ್ರ್‌‌ಮ್ಯಾಕ್ಟ್‌‌‌ಗೆ ಸಮಾನಾಂತರವಾಗಿದ್ದ ಯುದ್ಧ ಪ್ರಯತ್ನದಲ್ಲಿ ಕಾರ್ಯಕಾರಿಯಾಗಿ ಅದು ಸಂಘಟಿಸಲ್ಪಟ್ಟಿತು. ವಫೆನ್‌‌ SSನ್ನು ಒಂದು ಗೌರವಾರ್ಹವಾದ ಸೇನಾ ಸಂಘಟನೆಯಾಗಿ ಗುರುತಿಸಲು ಅನೇಕ ಸಮಕಾಲೀನ ವ್ಯಾಖ್ಯಾನಕಾರರು ನಿರಾಕರಿಸುತ್ತಾರೆ. ನಾಗರಿಕರನ್ನು ಮತ್ತು ನಿರಾಯುಧ ಸೆರೆಯಾಳುಗಳನ್ನು ಕೊಲೆಮಾಡುವಂಥ ಕುಖ್ಯಾತ ಘಟನೆಗಳಲ್ಲಿ ಇದರ ಘಟಕಗಳು ಪಾಲ್ಗೊಂಡಿದ್ದವು. ಅಂತರರಾಷ್ಟ್ರೀಯ ಸೇನಾ ನ್ಯಾಯಾಧಿಕರಣವು SS ಸಂಘಟನೆಯನ್ನು ಒಂದು ಅಪರಾಧಿ ಸಂಘಟನೆಯೆಂದು ಘೋಷಿಸುವುದರ ಹಿಂದಿದ್ದ ಅನೇಕ ಕಾರಣಗಳಲ್ಲಿ ಇದೂ ಒಂದಾಗಿತ್ತು.

ಹಿಮ್ಲರ್ ಮತ್ತು ಸಾಮೂಹಿಕ ಹತ್ಯಾಕಾಂಡ

[ಬದಲಾಯಿಸಿ]
1936ರಲ್ಲಿ ಡಕಾವು ಸೆರೆ ಶಿಬಿರಕ್ಕೆ ಭೇಟಿನೀಡಿರುವ ಹಿಮ್ಲರ್ (ಮುಂಭಾಗದ ಬಲಕ್ಕೆ, ಸೆರೆಯಾಳಿನ ಪಕ್ಕದಲ್ಲಿ).

ನೈಟ್‌ ಆಫ್‌ ದಿ ಲಾಂಗ್‌ ನೈವ್ಸ್‌‌ ಘಟನೆಯ ನಂತರ, ಜರ್ಮನಿಯ ಸೆರೆ ಶಿಬಿರಗಳ ವ್ಯವಸ್ಥೆಯನ್ನು SS-ಟೋಟೆನ್‌ಕೊಪ್‌ವರ್ಬ್ಯಾಂಡೆಯು ಸಂಘಟಿಸಿತು ಮತ್ತು ನಿರ್ವಹಿಸಿತು; ಮತ್ತು 1941ರ ನಂತರ, ಆಕ್ರಮಿತ ಪೋಲೆಂಡ್‌ನಲ್ಲಿನ ಮೂಲೋತ್ಪಾಟನ ಶಿಬಿರಗಳ ನಿರ್ವಹಣೆಯನ್ನೂ ಅದು ನಡೆಸಿತು. SS ಸಂಘಟನೆಯು ತನ್ನ ಗುಪ್ತಚರ ವಿಭಾಗವಾದ ಭದ್ರತಾ ಸೇವಾ ವ್ಯವಸ್ಥೆಯ (ಸೀಕೆರ್‌ಹೀಟ್ಸ್‌ಡಯೆನ್ಸ್ಟ್‌ , ಅಥವಾ SD) ಮೂಲಕ, ಹಲವು ಪ್ರಭೇದದ ಜನರೊಂದಿಗೆ ವ್ಯವಹರಿಸಿತು. ಯೆಹೂದಿಗಳು, ಜಿಪ್ಸಿಗಳು, ಕಮ್ಯುನಿಸ್ಟರು ಮತ್ತು ಉಂಟರ್‌‌ಮೆನ್ಸ್‌ಕ್‌ (ಉಪ-ಮಾನವರು) ಅಥವಾ ಆಡಳಿತ ವ್ಯವಸ್ಥೆಗೆ ವಿರುದ್ಧವಾಗಿರುವವರ ಪೈಕಿ ಒಂದು ಗುಂಪಿಗೆ ಸೇರಿದವರೆಂದು ನಾಜಿಗಳಿಂದ ಪರಿಗಣಿಸಲ್ಪಟ್ಟ ಇತರ ಯಾವುದೇ ಸಾಂಸ್ಕೃತಿಕ, ಜನಾಂಗದ, ರಾಜಕೀಯ ಅಥವಾ ಧಾರ್ಮಿಕ ಅಂಗದ ಸದಸ್ಯತ್ವವನ್ನು ಹೊಂದಿರುವಂಥ ವ್ಯಕ್ತಿಗಳು ಹೀಗೆ ಸಂಪರ್ಕಿಸಲ್ಪಟ್ಟವರಲ್ಲಿ ಸೇರಿದ್ದರು, ಮತ್ತು ಇಂಥವರನ್ನು ಸದರಿ ಭದ್ರತಾ ಸೇವಾ ವ್ಯವಸ್ಥೆಯು ಸೆರೆ ಶಿಬಿರಗಳಲ್ಲಿ ಇರಿಸಿತು. ಈ ಶಿಬಿರಗಳ ಪೈಕಿ ಮೊದಲನೆಯದನ್ನು ಡಕಾವು ಎಂಬಲ್ಲಿ 1933ರ ಮಾರ್ಚ್‌ 22ರಂದು ಹಿಮ್ಲರ್ ಪ್ರಾರಂಭಿಸಿದ. ಈತ ಸಾಮೂಹಿಕ ಹತ್ಯಾಕಾಂಡದ ಮುಖ್ಯ ಶಿಲ್ಪಿಯಾಗಿದ್ದ; ಲಕ್ಷಗಟ್ಟಲೆ ಬಲಿಪಶುಗಳ ಕೊಲೆಯನ್ನು ಸಮರ್ಥಿಸಿಕೊಳ್ಳಲು ಆತ ಆಧ್ಯಾತ್ಮ ಜ್ಞಾನದ ಅಂಶಗಳು ಹಾಗೂ ಜನಾಂಗೀಯ ನಾಜಿ ಸಿದ್ಧಾಂತದಲ್ಲಿನ ಒಂದು ಅಂಧಾಭಿಮಾನದ ನಂಬಿಕೆಯನ್ನು ಬಳಸಿಕೊಂಡ. ಪೋಲೆಂಡಿನ ಜನರಿಗೆ ಸಂಬಂಧಿಸಿದಂತೆಯೂ ಸಹ ಹಿಮ್ಲರ್ ಇದೇ ಬಗೆಯ ಯೋಜನೆಗಳನ್ನು ಹೊಂದಿದ್ದ; ಬುದ್ಧಿಜೀವಿಗಳು ಕೊಲ್ಲಲ್ಪಡಬೇಕು, ಮತ್ತು ಕೇವಲ ಸಂಚಾರಿ ಸಂಕೇತಗಳನ್ನು ಓದುವಷ್ಟರ ಮಟ್ಟಿಗೆ ಪೋಲೆಂಡಿನ ಬಹುಪಾಲು ಇತರ ಜನರು ಅಕ್ಷರಸ್ಥರಾಗಿದ್ದರೆ ಸಾಕು ಎಂಬುದು ಅವನ ಅಭಿಪ್ರಾಯವಾಗಿತ್ತು. 1941ರ ಡಿಸೆಂಬರ್‌ 18ರಂದು, ಹಿಟ್ಲರ್‌‌ನನ್ನು ಹಿಮ್ಲರ್ ಭೇಟಿಮಾಡಿದ ಎಂಬುದನ್ನು ಅವನ ಭೇಟಿ ನಿಶ್ಚಯದ ಪುಸ್ತಕವು ತೋರಿಸುತ್ತದೆ. ಆ ದಿನಕ್ಕೆ ಸಂಬಂಧಿಸಿದಂತೆ ಇರುವ ನಮೂದು ಈ ಪ್ರಶ್ನೆಯನ್ನು ಒಡ್ಡುತ್ತದೆ: "ರಷ್ಯಾದ ಯೆಹೂದಿಗಳ ಕುರಿತು ಏನು ಮಾಡಬೇಕು?"; ನಂತರದ ಮುಂದುವರಿದ ಭಾಗದಲ್ಲಿ, "ಅಲ್ಸ್‌‌ ಪಾರ್ಟಿಸಾನಿಯನ್‌ ಔಸ್‌ಜುರಾಟನ್‌" (ಗೆರಿಲ್ಲಾ ಸೈನಿಕರಂತೆ ಅವರನ್ನು ಬೇರುಸಹಿತ ಕಿತ್ತುಹಾಕಬೇಕು") ಎಂಬ ಉತ್ತರವು ದೊರೆಯುತ್ತದೆ.[೧೮]

ಹಿಟ್ಲರ್‌‌ಗೆ ಪ್ರತಿಯಾಗಿ, ಹಿಮ್ಲರ್ ಸೆರೆ ಶಿಬಿರಗಳ ತಪಾಸಣೆಯನ್ನು ನಡೆಸಿದ. ಈ ತಪಾಸಣೆಗಳ ಫಲವಾಗಿ, ಒಂದು ಹೊಸತಾದ ಮತ್ತು ಯಥೋಚಿತವಾದ ಸಾಯಿಸುವ ವಿಧಾನವನ್ನು ನಾಜಿಗಳು ಹುಡುಕತೊಡಗಿದರು; ಅನಿಲದ ಕೋಣೆಗಳ ಬಳಕೆಯಲ್ಲಿ ಅದು ತನ್ನ ಪರಮಾವಧಿಯನ್ನು ಕಂಡಿತು.

ಜರ್ಮನಿಯಲ್ಲಿ ನಾರ್ಡಿಕ್‌ ಕುಲದ ಆರ್ಯನ್ನರ ಒಂದು ಮೇರು ಜನಾಂಗದ ತಳಿಸೃಷ್ಟಿ ಮಾಡಲು ಹಿಮ್ಲರ್ ಬಯಸಿದ್ದ. ಓರ್ವ ಕೋಳಿ ಸಾಕಣೆಗಾರನಾಗಿ ಅವನು ಹೊಂದಿದ್ದ ಅನುಭವವು ಪ್ರಾಣಿ ತಳಿಸೃಷ್ಟಿ ಮಾಡುವಿಕೆಗೆ ಸಂಬಂಧಿಸಿದ ಮೊದಲ ಪಾಠಗಳನ್ನು ಅವನಿಗೆ ಕಲಿಸಿಕೊಟ್ಟವು; ಇವನ್ನೇ ಮಾನವರಿಗೂ ಅನ್ವಯಿಸುವ ಕುರಿತು ಅವನು ಪ್ರಸ್ತಾವಿಸಿದ. ಯುದ್ಧವು ಕೊನೆಗೊಂಡ ಹಲವಾರು ದಶಕಗಳ ಒಳಗಾಗಿ,ಸುಸಂತಾನದ ಆಯ್ಕೆಯ ತಳಿಸೃಷ್ಟಿಯ ಮೂಲಕ ಜರ್ಮನ್‌ ಜನತೆಯನ್ನು ತಾನು ಸೃಷ್ಟಿಸಬಲ್ಲೆ ಎಂಬುದು, ಮತ್ತು ಆ ಜನಸಮುದಾಯವು ಕಾಣಿಸುವಿಕೆಯಲ್ಲಿ ಸಮಗ್ರವಾಗಿ "ನಾರ್ಡಿಕ್‌ ಕುಲದ" ರೀತಿಯಲ್ಲಿರುತ್ತದೆ ಎಂಬುದು ಅವನ ನಂಬಿಕೆಯಾಗಿತ್ತು.[೧೯]

ಪೋಸೆನ್‌‌ ಭಾಷಣ

[ಬದಲಾಯಿಸಿ]

1943ರ ಅಕ್ಟೋಬರ್‌ 4ರಂದು, ಪೊಜ್‌ನಾನ್‌‌ (ಪೋಸೆನ್‌‌) ನಗರದಲ್ಲಿ ನಡೆದ SS ಸಂಘಟನೆಯ ಒಂದು ಸಭೆಯ ಸಂದರ್ಭದಲ್ಲಿ, ಯೆಹೂದೀಯ ಜನರ ಮೂಲೋತ್ಪಾಟನದ ಕುರಿತು ಹಿಮ್ಲರ್ ಸ್ಪಷ್ಟವಾಗಿ ಉಲ್ಲೇಖಿಸಿದ. ಭಾಷಣಕ್ಕೆ ಸಂಬಂಧಿಸಿದಂತೆ ಇರುವ ಒಂದು ಶ್ರವ್ಯ ಧ್ವನಿಮುದ್ರಣದ[೨೦] ಒಂದು ಪ್ರತಿನಕಲಿನಿಂದ ಪಡೆಯಲಾದ ಉದ್ಧೃತಭಾಗವೊಂದನ್ನು ಈ ಕೆಳಗೆ ನೀಡಲಾಗಿದೆ:

I also want to refer here very frankly to a very difficult matter. We can now very openly talk about this among ourselves, and yet we will never discuss this publicly. Just as we did not hesitate on 30 June 1934, to perform our duty as ordered and put comrades who had failed up against the wall and execute them, we also never spoke about it, nor will we ever speak about it. Let us thank God that we had within us enough self-evident fortitude never to discuss it among us, and we never talked about it. Every one of us was horrified, and yet every one clearly understood that we would do it next time, when the order is given and when it becomes necessary.

I am now referring to the evacuation of the Jews, to the extermination of the Jewish People. This is something that is easily said: 'The Jewish People will be exterminated', says every Party member, 'this is very obvious, it is in our program — elimination of the Jews, extermination, a small matter.' And then they turn up, the upstanding 80 million Germans, and each one has his decent Jew. They say the others are all swine, but this particular one is a splendid Jew. But none has observed it, endured it. Most of you here know what it means when 100 corpses lie next to each other, when there are 500 or when there are 1,000. To have endured this and at the same time to have remained a decent person — with exceptions due to human weaknesses — has made us tough, and is a glorious chapter that has not and will not be spoken of. Because we know how difficult it would be for us if we still had Jews as secret saboteurs, agitators and rabble rousers in every city, what with the bombings, with the burden and with the hardships of the war. If the Jews were still part of the German nation, we would most likely arrive now at the state we were at in 1916 and '17 . . . .

Heinrich Himmler, 4 October 1943

IIನೇ ಜಾಗತಿಕ ಸಮರ

[ಬದಲಾಯಿಸಿ]
1939ರ ಸೆಪ್ಟೆಂಬರ್‌ನಲ್ಲಿ ಪೋಲೆಂಡ್‌ನಲ್ಲಿ ಹಿಟ್ಲರ್‌‌ (ಕೇವಲ ಕಪ್ಪು ದಿರಿಸಿನಲ್ಲಿ, ಧ್ವಜದ ಎಡದಲ್ಲಿರುವವ) ಜೊತೆಯಲ್ಲಿ ಹಿಮ್ಲರ್ (ಧ್ವಜದ ಹಿಂದೆ ಇರುವವ) ಇರುವುದು.

1939ರಲ್ಲಿ ಆಪರೇಷನ್‌‌ ಹಿಮ್ಲರ್ ಎಂಬ ಕಾರ್ಯಾಚರಣೆಯನ್ನು ಹಿಮ್ಲರ್ ಯೋಜಿಸಿ ನಿರ್ದೇಶಿಸಿದ; ಇದು ಯುರೋಪ್‌‌ನಲ್ಲಿ, IIನೇ ಜಾಗತಿಕ ಸಮರಕ್ಕೆ ಸಂಬಂಧಿಸಿದ ಮೊದಲ ವಾದಯೋಗ್ಯ ಕಾರ್ಯಾಚರಣೆಯಾಗಿದೆ.

1941ರಲ್ಲಿ ಸೋವಿಯೆಟ್‌ ಒಕ್ಕೂಟದ ಆಕ್ರಮಣವು (ಆಪರೇಷನ್‌‌ ಬಾರ್ಬರೊಸ್ಸಾ) ಆಗುವುದಕ್ಕೆ ಮುಂಚಿತವಾಗಿ, "ಯೆಹೂದ್ಯ-ಕ್ರಾಂತಿಕಾರಿ ತತ್ತ್ವ"ದ ಪಡೆಗಳ ವಿರುದ್ಧದ ಮೂಲೋತ್ಪಾಟನದ ಯುದ್ಧವೊಂದಕ್ಕೆ ಸಂಬಂಧಿಸಿದಂತೆ ತನ್ನ SS ಸಂಘಟನೆಯನ್ನು ಹಿಮ್ಲರ್ ಸಜ್ಜುಗೊಳಿಸಿದ. ನಾಜಿ ಜರ್ಮನಿ ಮತ್ತು ಮಧ್ಯ ಯುಗಗಳ ನಡುವೆ ಹೋಲಿಕೆಗಳನ್ನು ಮಾಡುವಲ್ಲಿ ಯಾವಾಗಲೂ ಖುಷಿಯನ್ನು ಕಾಣುತ್ತಿದ್ದ ಹಿಮ್ಲರ್, ಆಕ್ರಮಣವನ್ನು ಧಾರ್ಮಿಕಯುದ್ಧಗಳಿಗೆ ಹೋಲಿಸಿದ. ಯುರೋಪ್‌ನ ಎಲ್ಲೆಡೆಯಿಂದ ಸ್ವಯಂಸೇವಕರನ್ನು ಅವನು ಒಗ್ಗೂಡಿಸಿದ; ಅದರಲ್ಲೂ ವಿಶೇಷವಾಗಿ, ಡೆನ್ಮಾರ್ಕ್‌ ದೇಶದವರು, ನಾರ್ವೆಯವರು, ಸ್ವೀಡನ್ನಿನವರು ಮತ್ತು ಡಚ್ಚರ ರೀತಿಯಲ್ಲಿ ಜರ್ಮನ್ನರಿಗೆ ಜನಾಂಗೀಯವಾಗಿ ಅತ್ಯಂತ ನಿಕಟವಾಗಿರುವವರು ಎಂದು ಗ್ರಹಿಸಲ್ಪಟ್ಟಿರುವ ನಾರ್ಡಿಕ್‌ ಕುಲದ ಮನೆತನಕ್ಕೆ ಸೇರಿದವರು ಅವರ ಪೈಕಿ ಹೆಚ್ಚಾಗಿದ್ದರು. ಆಕ್ರಮಣದ ನಂತರ, ಉಕ್ರೇನಿಯನ್ನರು, ಲಾಟ್ವಿಯಾದ ಜನರು, ಲಿಥುವೇನಿಯಾದ ಜನರು, ಮತ್ತು ಈಸ್ಟೋನಿಯಾದ ಸ್ವಯಂಸೇವಕರೂ ಸಹ ನೇಮಿಸಲ್ಪಟ್ಟರು; ಇದು ಜರ್ಮನ್ನರಲ್ಲದ ಸ್ವಯಂಸೇವಕರು ಈ ಕಡೆಗೆ ಆಕರ್ಷಿಸಲ್ಪಡಲು ಕಾರಣವಾಯಿತು. "ನಿರೀಶ್ವರವಾದಿ ಕ್ರಾಂತಿಕಾರಿ ಪಡೆಗಳಿಂದ" ಹಳೆಯ ಯುರೋಪ್‌ನ ಸಾಂಪ್ರದಾಯಿಕ ಮೌಲ್ಯಗಳನ್ನು ರಕ್ಷಿಸಲು ಯುರೋಪಿಯನ್ನರ-ಸಲುವಾಗಿರುವ ಒಂದು ಧಾರ್ಮಿಕಯುದ್ಧ ಎಂದು ಘೋಷಿಸುವ ಮೂಲಕ ಇವರನ್ನೆಲ್ಲಾ ಆಕರ್ಷಿಸಲಾಯಿತು. ಸಾವಿರಾರು ಜನರು ಸ್ವಯಂಸೇವಕರಾಗಿ ನೇಮಿಸಲ್ಪಟ್ಟರು ಮತ್ತು ಅನೇಕ ಸಾವಿರಕ್ಕೂ ಹೆಚ್ಚಿನ ಮಂದಿ ಒತ್ತಾಯದಿಂದ ಸೇರಿಸಲ್ಪಟ್ಟರು.

ಬಾಲ್ಟಿಕ್‌ ಸಂಸ್ಥಾನಗಳಲ್ಲಿನ ಅನೇಕ ಸ್ಥಳೀಯರು ರಷ್ಯದ ಸೈನ್ಯದ ವಿರುದ್ಧ ಸೇವೆ ಸಲ್ಲಿಸಲು ಸಿದ್ಧರಿದ್ದರು; ಸೋವಿಯೆಟ್‌ ಒಕ್ಕೂಟದಿಂದ ಸ್ವಾಧೀನಕ್ಕೊಳಗಾದ ನಂತರ ಅವರು ತೋರಿಸಿದ ದಬ್ಬಾಳಿಕೆಯು ಸ್ಥಳೀಯರಿಗೆ ಹಿಡಿಸದೇ ಇದ್ದುದು ಅವರ ಈ ನಿರ್ಧಾರಕ್ಕೆ ಕಾರಣವಾಗಿತ್ತು. ವಫೆನ್‌‌-SS ಸಂಘಟನೆಯೊಳಗೆ ಈ ಜನರನ್ನು ಒತ್ತಾಯದಿಂದ ಸೇರಿಸಲಾಗಿತ್ತು. ಸೋವಿಯೆಟ್‌ ಪಡೆಗಳ ವಿರುದ್ಧ ನೇಮಕಗೊಂಡಿದ್ದ ಅವರು ಸ್ವೀಕಾರಾರ್ಹವಾಗಿ ಕಾರ್ಯನಿರ್ವಹಿಸಿದರು.[೨೧] ಪಾಶ್ಚಾತ್ಯ ಮತ್ತು ನಾರ್ಡಿಕ್‌ ಯುರೋಪ್‌ನಲ್ಲಿ ನಡೆದ ವಫೆನ್‌‌ SS ನೇಮಕಾತಿಯು ತುಂಬಾ ಕಡಿಮೆ ಜನರನ್ನು ಒಗ್ಗೂಡಿಸಿತಾದರೂ, ಸಾಕಷ್ಟು ಸಂಖ್ಯೆಯಲ್ಲಿ ವಫೆನ್‌‌-SS ಸೈನ್ಯದಳಗಳು ಸಂಸ್ಥಾಪಿಸಲ್ಪಟ್ಟವು; ಲಿಯೋನ್‌ ಡೆಗ್ರೆಲ್ಲೆ ನೇತೃತ್ವದ ವ್ಯಾಲೋನಿಯಾದ ದತ್ತದಳವು ಇಂಥದೊಂದು ಸೈನ್ಯದಳವಾಗಿತ್ತು. ಯುದ್ಧವು ಒಮ್ಮೆ ಕೊನೆಗೊಂಡರೆ, ನಾಜಿ ಕಕ್ಷೆಯ ವ್ಯಾಪ್ತಿಯೊಳಗಿನ ಪುನರ್ವಶಮಾಡಿಕೊಂಡ ಬರ್ಗಂಡಿ ಪ್ರದೇಶದ ಪ್ರಧಾನಾಧಿಕಾರಿಯಾಗಿ ಲಿಯೋನ್‌ ಡೆಗ್ರೆಲ್ಲೆಯನ್ನು ನೇಮಿಸಲು ಹಿಮ್ಲರ್ ಯೋಜಿಸಿದ.

1942ರಲ್ಲಿ, ಹಿಮ್ಲರ್ನ ಬಲಗೈ-ಬಂಟನಾದ ರೀನ್‌ಹಾರ್ಡ್‌ ಹೇಡ್ರಿಕ್‌‌ ಎಂಬಾತ ಪ್ರಾಗ್ವೆಯ ಸಮೀಪ ಹತ್ಯೆಗೊಳಗಾದ; ಬ್ರಿಟಿಷ್‌ ಗುಪ್ತಚರ ವಿಭಾಗ ಮತ್ತು ಝೆಕೊಸ್ಲೋವಾಕ್‌‌ ದಂಗೆಕೋರರಿಂದ ಪೂರೈಕೆ ಮಾಡಲ್ಪಟ್ಟ ಝೆಕ್‌‌ ವಿಶೇಷ ಪಡೆಗಳಿಂದ ಆದ ಒಂದು ದಾಳಿಯ ನಂತರ ಅವನ ಹತ್ಯೆ ಸಂಭವಿಸಿತು. ಲಿಡೈಸ್‌ ಹಳ್ಳಿಯ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ಸಮಗ್ರ ಸಮುದಾಯವನ್ನು ಸಾಯಿಸುವ ಮೂಲಕ, ಹಿಮ್ಲರ್ ತತ್‌ಕ್ಷಣವೇ ಪ್ರತೀಕಾರವನ್ನು ಕೈಗೊಂಡ.

ಗೃಹಖಾತೆ ಸಚಿವ

[ಬದಲಾಯಿಸಿ]

1943ರಲ್ಲಿ, ಫ್ರಿಕ್‌‌ನ ಸ್ಥಾನದಲ್ಲಿ ಹಿಮ್ಲರ್‌‌ ರೀಕ್‌‌‌ನ ಗೃಹಖಾತೆ ಸಚಿವನಾಗಿ ನೇಮಿಸಲ್ಪಟ್ಟ; ಹಿಂದೆ ಫ್ರಿಕ್‌‌ ಜೊತೆಯಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅವಧಿಯವರೆಗೆ ಹಿಮ್ಲರ್ ಮುಖಾಮುಖಿ ಸೆಣಸಾಟದಲ್ಲಿ ತೊಡಗಿದ್ದ. ಉದಾಹರಣೆಗೆ, ಜನರನ್ನು ಸೆರೆ ಶಿಬಿರಗಳಿಗೆ ಕಳಿಸಲು ಬಳಸಲ್ಪಡುತ್ತಿದ್ದ "ರಕ್ಷಣಾತ್ಮಕ ಸುಫರ್ದಿನ" ಆದೇಶಗಳ ವ್ಯಾಪಕ ಬಳಕೆಯನ್ನು ನಿರ್ಬಂಧಿಸಲು ಫ್ರಿಕ್‌ ಪ್ರಯತ್ನಿಸಿದ್ದ; ಇದನ್ನು ಕೇವಲ ಹಿಮ್ಲರ್ ಮಾತ್ರವೇ ನಿರಾಕರಿಸಿದ್ದ. ಭಿನ್ನಮತೀಯರನ್ನು ಶಿಕ್ಷಿಸಲು ಇರುವ ಒಂದು ಸಾಧನವಾಗಿ ಸೆರೆ ಶಿಬಿರಗಳನ್ನು ಫ್ರಿಕ್‌ ನೋಡಿದರೆ, ನಾಜಿ ಆಳ್ವಿಕೆಯನ್ನು ಒಪ್ಪಿಕೊಳ್ಳುವಂತೆ ಜನರಲ್ಲಿ ಭಯಹುಟ್ಟಿಸಲು ಇರುವ ಒಂದು ವಿಧಾನವಾಗಿ ಸೆರೆ ಶಿಬಿರಗಳನ್ನು ಹಿಮ್ಲರ್ ಕಂಡ.

ಹಿಮ್ಲರ್‌ನ ನೇಮಕಾತಿಯು SS ಸಂಘಟನೆಯೊಂದಿಗೆ ಗೃಹಖಾತೆ ಇಲಾಖೆಯು ಪರಿಣಾಕಾರಿಯಾಗಿ ವಿಲೀನಗೊಳ್ಳಲು ಕಾರಣವಾಯಿತು. ಅದೇನೇ ಇದ್ದರೂ, ಪಕ್ಷ ಸಾಧನದಿಂದ ಆದ ನಾಗರಿಕ ಸೇವೆಯ ಜೋಡಣೆಯನ್ನು ಹಿಮ್ಮುಖವಾಗಿಸಲು ತನ್ನ ಹೊಸ ಕಚೇರಿಯನ್ನು ಬಳಸಲು ಹಿಮ್ಲರ್ ಬಯಸಿದ ಮತ್ತು ಪಕ್ಷದ ಜಿಲ್ಲಾನಾಯಕರ ಅಧಿಕಾರಕ್ಕೆ ಸವಾಲು ಎಸೆಯಲು ಪ್ರಯತ್ನಿಸಿದ.

ಹಿಟ್ಲರ್‌‌ನ ಖಾಸಗಿ ಕಾರ್ಯದರ್ಶಿ ಮತ್ತು ಪಕ್ಷದ ಪ್ರಧಾನಾಧಿಕಾರಿಯಾದ ಮಾರ್ಟಿನ್‌ ಬೋರ್‌ಮನ್‌‌‌ನಿಂದ ಈ ಮಹತ್ವಾಕಾಂಕ್ಷೆಯು ನಿಷ್ಪರಿಣಾಮಗೊಳಿಸಲ್ಪಟ್ಟಿತು. ಇದು ಹಿಟ್ಲರ್‌‌ನ ಕಡೆಯಿಂದ ಒಂದಷ್ಟು ಅಸಂತೋಷಕ್ಕೆ ಈಡಾಯಿತು; ಸಾಂಪ್ರದಾಯಿಕ ನಾಗರಿಕ ಸೇವೆಗೆ ಸಂಬಂಧಿಸಿದಂತೆ ಅವನು ಹೊಂದಿದ್ದ ದೀರ್ಘಕಾಲದ ಉಪೇಕ್ಷೆಯು, ನಾಜಿ ಆಡಳಿತಾತ್ಮಕ ಆಲೋಚನೆಯ ಬುನಾದಿಗಳಲ್ಲಿ ಒಂದಾಗಿತ್ತು. ಮೀಸಲು ಸೇನೆಯ (ಕೆಳಗೆ ನೋಡಿ: ಎರ್ಸಾಟ್‌ಝೀರ್‌‌ ) ಮುಖ್ಯಸ್ಥನಾಗಿ ತನ್ನ ನೇಮಕಾತಿಯಾದ ನಂತರ ಹಿಮ್ಲರ್ ತನ್ನ ಅಧಿಕಾರವನ್ನು ಬಳಸಿಕೊಂಡು ಆರಕ್ಷಕರನ್ನು ವಫೆನ್‌‌-SSಗೆ ವರ್ಗಾಯಿಸುವ ಮೂಲಕ, ಸೇನೆಯ ಮತ್ತು ಆರಕ್ಷಕರ ವಿಷಯಗಳೆರಡರಲ್ಲೂ ಕೈಯಾಡಿಸಲು ಪ್ರಯತ್ನಿಸಿದಾಗ, ಸ್ವತಃ ಅವನಿಂದಲೇ ಪರಿಸ್ಥಿತಿಗಳು ಮತ್ತಷ್ಟು ಹದಗೆಡುವಂತಾಯಿತು.

ತನ್ನ ಅಧಿಕಾರದ ನೆಲೆಗೆ ಹಿಮ್ಲರ್ ಬೆದರಿಕೆ ಹಾಕಲು ಶುರುಮಾಡಿದ್ದರಿಂದಾಗಿ, ಬೊರ್ಮನ್‌‌ ಅವನಿಗೆ ಅಷ್ಟು ಬೇಗ ಅವಕಾಶ ಕೊಡುವುದು ಸಾಧ್ಯವಿರಲಿಲ್ಲ; ಪ್ರಚಂಡ ಪ್ರತಿಭಟನೆಗಳು ಸ್ಫೋಟಗೊಳ್ಳುವವರೆಗೂ, ಅವನು ಆರಂಭದಲ್ಲಿ ಕಾರ್ಯನೀತಿಗಳಲ್ಲಿ ಮಾತಾಡದೆ ಸಮ್ಮತಿಸುತ್ತಿದ್ದ. ನಂತರ, ಯೋಜನೆಯ ವಿರುದ್ಧ ಎದ್ದುನಿಂತ ಬೊರ್ಮನ್‌‌, ಹಿಮ್ಲರ್‌ನನ್ನು ನಂಬಿಕೆಗೆಟ್ಟ ಸ್ಥಿತಿಯಲ್ಲಿ ಇರಿಸಿದ; ಅದರಲ್ಲೂ ವಿಶೇಷವಾಗಿ ಪಕ್ಷದೊಂದಿಗೆ ಈ ಸ್ಥಿತಿ ನಿರ್ಮಾಣವಾಗಿ, ಅದರ ಜಿಲ್ಲಾನಾಯಕರು ಈಗ ಬೊರ್ಮನ್‌‌ನನ್ನು ತಮ್ಮ ಸಂರಕ್ಷಕನಾಗಿ ಕಂಡರು.

ಜುಲೈ 20ರ ಒಳಸಂಚು

[ಬದಲಾಯಿಸಿ]

ಜರ್ಮನ್‌ ಸೇನೆ ಗುಪ್ತಚರ (ಅಬ್‌ವೆಹ್ರ್‌‌‌ ) ವಿಭಾಗದ ಮುಖ್ಯಸ್ಥ, ನೌಕಾಬಲಾಧಿಪತಿ‌‌ ವಿಲ್‌ಹೆಮ್‌ ಕೆನಾರಿಸ್‌‌‌‌‌ನ್ನು ಒಳಗೊಂಡಂತೆ ಅದರ ನಾಯಕರು, ಹಿಟ್ಲರ್‌‌ನನ್ನು ಹತ್ಯೆಮಾಡುವುದರ ಕುರಿತಾದ 1944ರ ಜುಲೈ 20ರ ಒಳಸಂಚಿನಲ್ಲಿ ಪಾಲ್ಗೊಂಡಿದ್ದಾರೆ ಎಂದು ನಿರ್ಣಯಿಸಲ್ಪಟ್ಟಿತು. ಅಬ್‌ವೆಹ್ರ್‌‌‌‌ ನ್ನು ವಿಸರ್ಜಿಸುವಂತೆ ಇದು ಹಿಟ್ಲರ್‌‌ನನ್ನು ಪ್ರಚೋದಿಸಿತು ಮತ್ತು ಹಿಮ್ಲರ್‌‌ನ ಭದ್ರತಾ ಸೇವಾ ವ್ಯವಸ್ಥೆಯನ್ನು (ಸೀಕೆರ್‌ಹೀಟ್ಸ್‌ಡಯೆನ್ಸ್ಟ್‌ , ಅಥವಾ SD) ಮೂರನೇ ರೀಕ್‌‌‌ನ ಏಕಮಾತ್ರ ಗುಪ್ತಚರ ಸೇವಾ ವ್ಯವಸ್ಥೆಯಾಗಿ ಮಾಡುವಂತೆ ಪ್ರೇರೇಪಿಸಿತು. ಇದು ಹಿಮ್ಲರ್‌‌ನ ವೈಯಕ್ತಿಕ ಅಧಿಕಾರವನ್ನು ಹೆಚ್ಚಿಸಿತು.

ಮೀಸಲು (ಅಥವಾ ಬದಲಿ) ಸೇನೆಯ (ಎರ್ಸಾಟ್‌ಝೀರ್‌‌ ) ಪ್ರಧಾನ ದಂಡನಾಯಕನಾದ ಜನರಲ್‌‌ ಫ್ರೆಡ್ರಿಕ್‌ ಫ್ರಾಮ್‌‌ ಹೆಸರು ಪಿತೂರಿಯಲ್ಲಿ ಸೂಚಿಸಲ್ಪಟ್ಟಿತು. ಫ್ರಾಮ್‌‌‌ನ ತೆಗೆಯುವಿಕೆಯೊಂದಿಗೆ ಸೇನೆಯ ಕುರಿತಾಗಿ ಹಿಟ್ಲರ್‌‌ ಹೊಂದಿದ ಸಂದೇಹವೂ ಸೇರಿಕೊಂಡಿತು ಮತ್ತು ಫ್ರಾಮ್‌‌‌ನ ಉತ್ತರಾಧಿಕಾರಿಯಾಗಿ ಹಿಮ್ಲರ್‌ನನ್ನು ನೇಮಿಸಿಲು ಅದು ದಾರಿಮಾಡಿಕೊಟ್ಟಿತು. ಆದರೆ, ಕ್ಷಿಪ್ರವಾಗಿ ಕ್ಷಯಿಸುತ್ತಿದ್ದ ಜರ್ಮನ್‌ ಸಶಸ್ತ್ರ ಪಡೆಗಳಿಗೆ (ವೆಹ್ರ್‌‌ಮ್ಯಾಕ್ಟ್‌‌ ) ಮತ್ತಷ್ಟು ಅಪಾಯಕಾರಿಯಾಗುವಂತೆ ವಫೆನ್‌‌ SS ಸಂಘಟನೆಯನ್ನು ಮತ್ತಷ್ಟು ವಿಸ್ತರಿಸಲು ಅವನು ಈ ಸ್ಥಾನವನ್ನು ದುರುಪಯೋಗಪಡಿಸಿಕೊಂಡ.

ಹಿಮ್ಲರ್‌ಗೆ ದುರದೃಷ್ಟಕರವಾಗಿ ಪರಿಣಮಿಸುವಂತೆ, ಹಿರಿಯ ಅಧಿಕಾರಿಗಳೂ ಸೇರಿದಂತೆ ಪಿತೂರಿಯಲ್ಲಿ SS ಸಂಘಟನೆಯ ಅನೇಕ ಅಧಿಕಾರಿಗಳು ಸೇರಿಕೊಂಡಿರುವುದನ್ನು ತನಿಖೆಯು ತಕ್ಷಣವೇ ಹೊರಗೆಡವಿತು; ಪಕ್ಷದ ಶಿಕ್ಷಿತವರ್ಗದ ಕೆಲವೇ ಅಧಿಕಾರಿಗಳ ಹೆಸರು ಸೂಚಿಸಲ್ಪಟ್ಟಿದ್ದರಿಂದಾಗಿ, SS ಸಂಘಟನೆಯ ವಿರುದ್ಧ ಹೋರಾಟ ನಡೆಸುವುದಕ್ಕೆ ಇದು ಬೊರ್ಮನ್‌ಗೆ ಮತ್ತಷ್ಟು ಶಕ್ತಿಯನ್ನು ನೀಡಿತು. ಅದಕ್ಕಿಂತ ಹೆಚ್ಚು ಮುಖ್ಯವಾಗಿ, ಬೊರ್ಮನ್ ವಿರುದ್ಧದ ಅಧಿಕಾರದ ಹೋರಾಟದಲ್ಲಿ ವಿಜಯ ಸಾಧಿಸಲು ಹಿಮ್ಲರ್‌ಗೆ ಅಸಾಧ್ಯ ಎಂದು ನಂಬಿದ SS ಸಂಘಟನೆಯ ಕೆಲವೊಬ್ಬ ಹಿರಿಯ ಅಧಿಕಾರಿಗಳು, ಸ್ವತಃ ಹಿಮ್ಲರ್ ವಿರುದ್ಧವೇ ಸಂಚು ಮಾಡಲು ಪ್ರಾರಂಭಿಸಿದರು. ಈ ಕರ್ತವ್ಯಭ್ರಷ್ಟರ ಪೈಕಿ, ರೀಕ್ಸ್‌‌ಸಿಕೆರ್‌ಹೀಟ್ಸ್‌ಹೌಪ್ಟಾಮ್ಟ್‌ ಮುಖ್ಯಸ್ಥನಾಗಿ ಹೇಡ್ರಿಕ್‌‌ನ ಉತ್ತರಾಧಿಕಾರಿಯಾಗಿದ್ದ ಅರನ್ಸ್ಟ್‌‌ ಕಾಲ್ಟೆನ್‌ಬ್ರೂನರ್‌‌, ಮತ್ತು ಗೆಸ್ಟಾಪೊವಿನ ಮುಖ್ಯಸ್ಥನಾದ ಗ್ರಪೆನ್‌ಫಹ್ರರ್‌‌ ಹೆನ್ರಿಕ್ ಮುಲ್ಲರ್‌‌‌ ಸೇರಿದ್ದರು.

ಪ್ರಧಾನ ದಂಡನಾಯಕ

[ಬದಲಾಯಿಸಿ]

1944ರ ಅಂತ್ಯದಲ್ಲಿ, ಹೊಸದಾಗಿ ರೂಪುಗೊಂಡ ಆರ್ಮಿ ಗ್ರೂಪ್‌‌ ಅಪ್ಪರ್‌ ರೈನ್‌ (ಹೀರೆಸ್‌ಗ್ರಪ್‌‌ ಒಬರ್‌ಹೀನ್‌‌ ) ಪಡೆಗೆ ಹಿಮ್ಲರ್ ಪ್ರಧಾನ ದಂಡನಾಯಕನಾದ. ರೈನ್‌‌ ನದಿಯ ಪಶ್ಚಿಮದ ದಡದ ಉದ್ದಕ್ಕೂ ಆಲ್ಸೇಸ್‌ ಪ್ರದೇಶದಲ್ಲಿ ಮುಂದುವರಿದುಕೊಂಡು ಬರುತ್ತಿದ್ದ U.S.ನ 7ನೇ ಸೇನೆ ಮತ್ತು ಫ್ರೆಂಚರ 1ನೇ ಸೇನೆಗಳ ವಿರುದ್ಧ ಕಾದಾಡಲು ಈ ಸೇನಾ ಗುಂಪು ರೂಪುಗೊಂಡಿತು. U.S.ನ 7ನೇ ಸೇನೆಯು ಜನರಲ್‌‌ ಅಲೆಕ್ಸಾಂಡರ್‌ ಪ್ಯಾಚ್‌ ಎಂಬಾತನ ನಿಯಂತ್ರಣದ ಅಡಿಯಲ್ಲಿದ್ದರೆ, ಫ್ರೆಂಚರ 1ನೇ ಸೇನೆಯು ಜನರಲ್‌‌ ಜೀನ್‌ ಡೆ ಲ್ಯಾಟ್ರೆ ಡೆ ಟ್ಯಾಸಿಗ್ನಿ ಎಂಬಾತನ ನಿಯಂತ್ರಣದ ಅಡಿಯಲ್ಲಿತ್ತು.

ಅಮೆರಿಕನ್ನರು ಮತ್ತು ಫ್ರೆಂಚರನ್ನು ಹಿಮ್ಮೆಟ್ಟಿಸಲು ಆಪರೇಷನ್‌‌ ನಾರ್ತ್‌ ವಿಂಡ್‌ (ಉಂಟರ್‌ನೆಹ್‌ಮೆನ್‌ ನಾರ್ದ್‌‌‌ವಿಂಡ್‌ ) ಎಂಬ ಕಾರ್ಯಾಚರಣೆಯನ್ನು ಹಿಮ್ಲರ್‌‌ನ ಸೇನಾ ಗುಂಪು 1945ರ ಜನವರಿ 1ರಂದು ಶುರುಮಾಡಿತು. ಜನವರಿಯ ಅಂತ್ಯದ ವೇಳೆಗೆ, ಆರಂಭದ ಒಂದಷ್ಟು ಸೀಮಿತ ಯಶಸ್ಸಿನ ನಂತರ, ಹಿಮ್ಲರ್‌ನನ್ನು ಪೂರ್ವಭಾಗಕ್ಕೆ ವರ್ಗಾಯಿಸಲಾಯಿತು. ರಕ್ಷಣಾತ್ಮಕ ಕಾರ್ಯವು ಮುಗಿದ ನಂತರ, ಜನವರಿ 24ರ ಹೊತ್ತಿಗೆ ಆರ್ಮಿ ಗ್ರೂಪ್‌‌ ಅಪ್ಪರ್‌ ರೈನ್‌ನ್ನು ವಿಸರ್ಜಿಸಲಾಯಿತು. ಜನವರಿ 25ರಂದು ಆಪರೇಷನ್‌‌ ನಾರ್ತ್‌ ವಿಂಡ್‌ ಕಾರ್ಯಾಚರಣೆಯು ಅಧಿಕೃತವಾಗಿ ಕೊನೆಗೊಂಡಿತು.

ಮತ್ತೊಂದೆಡೆ, ರಷ್ಯದ ಸೈನ್ಯದ ವಿಸ್ಟುಲಾ-ಓಡೆರ್‌ ಆಕ್ರಮಣವನ್ನು ತಡೆಗಟ್ಟಲು ಜರ್ಮನ್‌ ಸೇನೆಯು (ವೆಹ್ರ್‌‌ಮ್ಯಾಕ್ಟ್‌‌ ಹೀರ್‌‌‌ ) ವಿಫಲಗೊಂಡಿತ್ತು; ಆದ್ದರಿಂದ, ಸೋವಿಯೆಟ್‌ ಸೇನೆಯು ಬರ್ಲಿನ್ ಕಡೆಗೆ ಮುಂದುವರಿಯದಂತೆ ಅದನ್ನು ತಡೆಗಟ್ಟುವ ಸಲುವಾಗಿ, ಆರ್ಮಿ ಗ್ರೂಪ್‌ ವಿಸ್ಟುಲಾ (ಹೀರೆಸ್‌ಗ್ರಪ್‌ ವೈಕ್‌ಸೆಲ್‌‌ ) ಎಂಬ ಹೆಸರಿನ, ಹೊಸದಾಗಿ ರೂಪುಗೊಂಡ ಮತ್ತೊಂದು ಸೇನಾ ಗುಂಪಿನ ನಿಯಂತ್ರಣವನ್ನು ಹೊಂದುವ ಅಧಿಕಾರವನ್ನು ಹಿಮ್ಲರ್‌ಗೆ ಹಿಟ್ಲರ್‌ ನೀಡಿದ. ಆರ್ಮಿ ಗ್ರೂಪ್‌‌ ಅಪ್ಪರ್‌ ರೈನ್‌ನ ವೈಫಲ್ಯದ ಹೊರತಾಗಿಯೂ, ಮತ್ತು ಪಡೆಗಳಿಗೆ ಆದೇಶ ನೀಡುವುದಕ್ಕೆ ಸಂಬಂಧಿಸಿದಂತೆ ಹಿಮ್ಲರ್‌ಗೆ ಅನುಭವ ಮತ್ತು ಸಾಮರ್ಥ್ಯದ ಒಟ್ಟಾರೆ ಕೊರತೆ ಇದ್ದರೂ ಸಹ, ಆರ್ಮಿ ಗ್ರೂಪ್‌ ವಿಸ್ಟುಲಾದ ಮುಂದಾಳತ್ವವನ್ನು ಹಿಮ್ಲರ್‌ಗೆ ಹಿಟ್ಲರ್‌‌ ನೀಡಿದ. ಓರ್ವ ಎದುರಾಳಿಗೆ ಅಪಮಾನ ಮಾಡುವ ತೀವ್ರಾಪೇಕ್ಷೆಯನ್ನು ಹೊಂದಿದ್ದ ಮಾರ್ಟಿನ್‌ ಬೋರ್‌ಮನ್‌‌‌ನ ಪ್ರೇರೇಪಣೆಯು ಈ ನೇಮಕಾತಿಗೆ ಕಾರಣವಾಗಿದ್ದ ಸಾಧ್ಯತೆಯಿತ್ತು, ಅಥವಾ ಸಾಮಾನ್ಯ ಸಿಬ್ಬಂದಿಯ "ವೈಫಲ್ಯಗಳ" ಕಡೆಗೆ ಹಿಟ್ಲರ್‌‌ನ ಕೋಪ ಮುಂದುವರಿದಿದ್ದೂ ಇದಕ್ಕೆ ಕಾರಣವಾಗಿದ್ದ ಸಾಧ್ಯತೆಯಿತ್ತು.

ಆರ್ಮಿ ಗ್ರೂಪ್‌‌ ವಿಸ್ಟುಲಾದ ಪ್ರಧಾನ ದಂಡನಾಯಕನಾಗಿ, ಸ್ಕ್ನೀಡೆಮುಹ್ಲ್‌‌ ಎಂಬಲ್ಲಿ ಹಿಮ್ಲರ್ ತನ್ನ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ. ತನ್ನ ವಿಶೇಷ ಟ್ರೇನ್‌ ಆದ (ಸಾಂಡೆರ್ಜುಗ್‌ ) ಸಾಂಡೆರ್ಜುಗ್‌ ಸ್ಟೀಯೆರ್‌ಮಾರ್ಕ್‌‌‌‌‌‌ ನ್ನು ಅವನು ತನ್ನ ಕೇಂದ್ರಕಚೇರಿಯಾಗಿ ಬಳಸಿಕೊಂಡ. ಸದರಿ ಟ್ರೇನಿನಲ್ಲಿ ಕೇವಲ ಒಂದೇ ಒಂದು ದೂರವಾಣಿ ಮಾರ್ಗವು ಇದ್ದು, ಯಾವುದೇ ಸಂಕೇತಗಳ ಕಳಚುವಿಕೆಯ ವ್ಯವಸ್ಥೆ ಇಲ್ಲದಿದ್ದಾಗಲೂ ಹಿಮ್ಲರ್ ಇದನ್ನು ಕೈಗೊಂಡ. ತನ್ನ ಸಂಕಲ್ಪಶಕ್ತಿಯನ್ನು ತೋರಿಸಲು ಉತ್ಸುಕನಾಗಿದ್ದ ಹಿಮ್ಲರ್‌‌, ಸಾಮಾನ್ಯ ಸಿಬ್ಬಂದಿಯಿಂದ ಒತ್ತಾಯಿಸಲ್ಪಟ್ಟ ಒಂದು ಕ್ಷಿಪ್ರ ಪ್ರತಿ-ದಾಳಿಯಲ್ಲಿ ಮಾತನಾಡದೆ ಸಮ್ಮತಿಸಿದ. ಈ ಕಾರ್ಯಾಚರಣೆಯು‌ ಕ್ಷಿಪ್ರವಾಗಿ ಸಿಕ್ಕಿಹಾಕಿಕೊಂಡಿತು ಮತ್ತು ಸೇನಾದಳಗಳ ಎಂದಿನ ದಳಪತಿಯನ್ನು ವಜಾಮಾಡಿದ ಹಿಮ್ಲರ್, ಅವನ ಸ್ಥಾನಕ್ಕೆ ನಾಜಿ ಹೈನ್ಜ್‌‌ ಲ್ಯಾಮರ್‌ಡಿಂಗ್‌‌‌‌‌‌ನ್ನು ನೇಮಿಸಿದ. ಅವನ ಕೇಂದ್ರಕಚೇರಿಯೂ ಸಹ ಬಲವಂತವಾಗಿ ಫಾಲ್ಕನ್‌ಬರ್ಗ್‌ ಎಂಬಲ್ಲಿಗೆ ವರ್ಗಾವಣೆಗೊಂಡಿತು. ಜನವರಿ 30ರಂದು, ತನ್ನ ಪಡೆಗಳನ್ನು ಉತ್ತೇಜಿಸುವ ಸಲುವಾಗಿ ಕಠಿಣ ಆದೇಶಗಳನ್ನು ಹಿಮ್ಲರ್ ಜಾರಿಮಾಡಿದ: ಟಾಡ್‌ ಅಂಡ್‌ ಸ್ಟ್ರೇಫ್‌ ಫರ್‌ ಫ್ಲಿಚ್‌ಟ್ವರ್ಗೆಸ್ಸೆನ್‌ಹೀಟ್‌ — ಅಂದರೆ, "ಯಾರು ತಮ್ಮ ಹೊಣೆಗಾರಿಕೆಗಳನ್ನು ಮರೆಯುತ್ತಾರೋ ಅವರಿಗೆ ಸಾವು ಮತ್ತು ಶಿಕ್ಷೆ ಕಾದಿದೆ" ಎಂಬುದೇ ಆ ಆದೇಶವಾಗಿತ್ತು. ಹದಗೆಡುತ್ತಿದ್ದ ಸನ್ನಿವೇಶವು ಹಿಮ್ಲರ್‌ನನ್ನು, ಹಿಟ್ಲರ್‌‌ನಿಂದ ಬರುತ್ತಿದ್ದ ಹೆಚ್ಚಿನ ಮಟ್ಟದ ಒತ್ತಡದ ಅಡಿಯಲ್ಲಿ ಸಿಲುಕುವಂತೆ ಮಾಡಿತು; ಸಮಾವೇಶಗಳಲ್ಲಿ ಆತ ತನ್ನನ್ನು ಸಮರ್ಥಿಸಿಕೊಳ್ಳದಾದ ಮತ್ತು ಧೈರ್ಯಗೆಟ್ಟ. ಪೊಮೆರೇನಿಯಾದ ಮೇಲೆ ಫೆಬ್ರುವರಿಯ ಮಧ್ಯಭಾಗದಲ್ಲಿ ಅವನ ಪಡೆಗಳು ಮಾಡಿದ ಆಕ್ರಮಣಕ್ಕೆ ಜನರಲ್‌‌ ವಾಲ್ಟರ್‌ ವೆನ್ಕ್‌‌‌‌ನ ನಿರ್ದೇಶನವಿತ್ತು; ಹಿಟ್ಲರ್ ಮೇಲೆ ಜನರಲ್‌ ಹೈನ್ಜ್‌‌ ಗುಡೆರಿಯನ್‌‌ ಉಂಟುಮಾಡಿದ ತೀವ್ರ ಒತ್ತಡದ ನಂತರ ಇದು ನಡೆಯಿತು. ಮಾರ್ಚ್‌‌ನ ಆರಂಭದ ಹೊತ್ತಿಗೆ‌, ಹಿಮ್ಲರ್‌‌ನ ಕೇಂದ್ರಕಚೇರಿಯು ಓಡರ್‌ ನದಿಯ ಪಶ್ಚಿಮ ಭಾಗಕ್ಕೆ ವರ್ಗಾವಣೆಗೊಂಡಿತ್ತಾದರೂ, ಅವನ ಸೇನಾ ಗುಂಪನ್ನು ಇನ್ನೂ ವಿಸ್ಟುಲಾ ಎಂದೇ ಕರೆಯಲಾಗುತ್ತಿತ್ತು. ಹಿಟ್ಲರ್‌‌ ಜೊತೆಗಿನ ಸಮಾಲೋಚನೆಗಳಲ್ಲಿ, ಸ್ಥಾನಬಿಟ್ಟವರೆಡೆಗೆ ಹಿಟ್ಲರ್‌‌ ತೋರಿಸುತ್ತಿದ್ದ ಹೆಚ್ಚಿನ ಮಟ್ಟದ ಕಠೋರತೆಯನ್ನು ಹಿಮ್ಲರ್ ಪ್ರತಿಧ್ವನಿಸಿದ.

ಮಾರ್ಚ್ 13ರಂದು‌, ಹಿಮ್ಲರ್ ತನ್ನ ಮುಂದಾಳತ್ವವನ್ನು ಕೈಬಿಟ್ಟ ಮತ್ತು, ಅಸೌಖ್ಯದ ಕಾರಣವನ್ನು ಮುಂದುಮಾಡಿ, ಹೋಹೆನ್‌ಲೈಚೆನ್‌‌ನಲ್ಲಿನ ಒಂದು ಆರೋಗ್ಯಧಾಮಕ್ಕೆ ವಿಶ್ರಾಂತಿಗಾಗಿ ತೆರಳಿದ. ಅಲ್ಲಿ ಆತನನ್ನು ಗುಡೆರಿಯನ್‌‌‌ ಭೇಟಿಮಾಡಿದ ಮತ್ತು ಆರ್ಮಿ ಗ್ರೂಪ್‌ ವಿಸ್ಟುಲಾದ ಪ್ರಧಾನ ದಂಡನಾಯಕನ ಹುದ್ದೆಗೆ ಅವನು ನೀಡಿದ ರಾಜೀನಾಮೆಯನ್ನು ಅದೇ ರಾತ್ರಿ ಹಿಟ್ಲರ್‌ಗೆ ಒಯ್ದು ಮುಟ್ಟಿಸಿದ. ಮಾರ್ಚ್ 20ರಂದು‌, ಹಿಮ್ಲರ್ ಸ್ಥಾನದಲ್ಲಿ ಜನರಲ್‌‌‌ ಗೊಥಾರ್ಡ್‌ ಹೈನ್‌ರಿಸಿ ಎಂಬಾತನನ್ನು ಪ್ರತಿಷ್ಠಾಪಿಸಲಾಯಿತು.

ಶಾಂತಿ ಸಂಧಾನಗಳು

[ಬದಲಾಯಿಸಿ]
ಚಿತ್ರ:Himmler45.jpg
1945ರಲ್ಲಿ ಕಂಡಂತೆ ಹೆನ್ರಿಕ್ ಹಿಮ್ಲರ್.

1944–45ರ ಚಳಿಗಾಲದಲ್ಲಿ, 910,000ದಷ್ಟಿದ್ದ ಹಿಮ್ಲರ್‌ನ ವಫೆನ್‌‌-SS ಸಂಘಟನೆಯ ಸದಸ್ಯರ ಸಂಖ್ಯೆಯು, ಆಲ್ಜೀಮೈನ್‌‌-SS (ಕಡೇಪಕ್ಷ ಬರಹದಲ್ಲಿ) ಆಯೋಜಿಸಿಕೊಟ್ಟ ಸದಸ್ಯತ್ವದಿಂದಾಗಿ ಸುಮಾರು ಎರಡು ದಶಲಕ್ಷವನ್ನು ಮುಟ್ಟಿತು. ಆದಾಗ್ಯೂ, 1945ರ ಆರಂಭದ ಹೊತ್ತಿಗೆ ಜರ್ಮನ್‌ ವಿಜಯದಲ್ಲಿ ಹಿಮ್ಲರ್ ನಂಬಿಕೆಯನ್ನು ಕಳೆದುಕೊಂಡಿದ್ದ; ತನ್ನ ಮಸಾಜುಗಾರ ಫೆಲಿಕ್ಸ್‌‌ ಕರ್ಸ್ಟನ್‌‌ ಎಂಬಾತನೊಂದಿಗೆ ಮತ್ತು ವಾಲ್ಟರ್‌ ಸ್ಕೆಲ್ಲೆನ್‌ಬರ್ಗ್‌‌‌‌ನೊಂದಿಗೆ ಆತ ಕೈಗೊಂಡ ಚರ್ಚೆಗಳು ಪ್ರಾಯಶಃ ಇದಕ್ಕೆ ಭಾಗಶಃ ಕಾರಣವಾಗಿದ್ದವು.[೨೨] ಒಂದು ವೇಳೆ, ನಾಜಿ ಆಡಳಿತ ವ್ಯವಸ್ಥೆಯು ಬದುಕುಳಿಯಬೇಕೆಂದರೆ, ಬ್ರಿಟನ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಅದು ಶಾಂತಿಯನ್ನು ಕೇಳುವುದು ಅಗತ್ಯ ಎಂದು ಅವನು ಅರಿತುಕೊಂಡ. ಸೋವಿಯೆಟ್ ಪಡೆಗಳ ವಿರುದ್ಧ ನಿಂತು ರಾಜಧಾನಿಯನ್ನು ರಕ್ಷಿಸುವ ಸಲುವಾಗಿ ಖುದ್ದಾಗಿ ನಾಯಕತ್ವವನ್ನು ವಹಿಸಿಕೊಳ್ಳಲು ಬರ್ಲಿನ್‌‌ನಲ್ಲಿ ಉಳಿದುಕೊಳ್ಳುವ ಮೂಲಕ, ಹಿಟ್ಲರ್‌ ತನ್ನನ್ನು ಆಡಳಿತ ನಡೆಸುವುದರಿಂದ ಪರಿಣಾಕಾರಿಯಾಗಿ ಅಸಮರ್ಥಗೊಳಿಸಿದ ಎಂಬುದೂ ಸಹ ಅವನ ಭಾವನೆಯಾಗಿತ್ತು.

ಇದರ ಕೊನೆಗೆ, ಡೆನ್ಮಾರ್ಕಿನ ಗಡಿಯ ಸಮೀಪದ, ಲ್ಯೂಬೆಕ್‌‌‌ ಎಂಬಲ್ಲಿ ಸ್ವೀಡನ್‌ನ ಫಾಲ್ಕ್‌‌ ಬರ್ನಾಡಾಟ್‌ ಎಂಬ ಶ್ರೀಮಂತನನ್ನು ಅವನು ಸಂಪರ್ಕಿಸಿದ. ಜರ್ಮನಿಯ ಹಂಗಾಮಿ ನಾಯಕ ಎಂಬಂತೆ ಸ್ವತಃ ತನ್ನನ್ನು ಬಿಂಬಿಸಿಕೊಂಡ ಅವನು, ಇನ್ನೆರಡು ದಿನಗಳೊಳಗಾಗಿ ಹಿಟ್ಲರ್‌ ಹೆಚ್ಚೂಕಮ್ಮಿ ಖಚಿತವಾಗಿ ಸಾಯುತ್ತಾನೆ ಎಂದು ಬರ್ನಾಡಾಟ್‌ಗೆ ತಿಳಿಸಿದ. ಪಶ್ಚಿಮದ ಪಡೆಗೆ ಶರಣಾಗಲು ಜರ್ಮನಿಯು ಬಯಸಿದೆ ಎಂಬುದಾಗಿ ಜನರಲ್‌‌‌ ಡ್ವೈಟ್‌ ಐಸೆನ್‌ಹೋವರ್‌‌‌ಗೆ ತಿಳಿಸುವಂತೆ ಅವನು ಬರ್ನಾಡಾಟ್‌ನನ್ನು ಕೇಳಿಕೊಂಡ. ವೆಹ್ರ್‌‌ಮ್ಯಾಕ್ಟ್‌‌ನ ಅವಶೇಷಗಳ ಜೊತೆಜೊತೆಗೆ, ಸೋವಿಯೆಟ್ ಪಡೆಗಳೊಂದಿಗೆ ಬ್ರಿಟಿಷರು ಮತ್ತು ಅಮೆರಿಕನ್ನರು ಹೋರಾಡುತ್ತಾರೆ ಎಂದು ಹಿಮ್ಲರ್ ಆಶಿಸಿದ. ಬರ್ನಾಡಾಟ್‌ನ ಮನವಿಯ ಅನುಸಾರ, ಹಿಮ್ಲರ್ ತನ್ನ ಪ್ರಸ್ತಾವವನ್ನು ಬರಹದಲ್ಲಿ ನೀಡಿದ.

ಏಪ್ರಿಲ್‌ 28ರಂದು ಸಂಜೆಯ ವೇಳೆಗೆ, ಪಾಶ್ಚಾತ್ಯ ಮಿತ್ರರಾಷ್ಟ್ರಗಳೊಂದಿಗೆ ಸಂಧಾನಗಳನ್ನು ನಡೆಸಲು ಹಿಮ್ಲರ್ ಮಾಡುತ್ತಿರುವ ಪ್ರಯತ್ನಗಳ ಕುರಿತಾಗಿ, BBCಯು ರಾಯಿಟರ್ಸ್‌‌ ಸುದ್ದಿ ವರದಿಯೊಂದನ್ನು ಬಿತ್ತರಿಸಿತು. ಈ ಸುದ್ದಿಯನ್ನು ಹಿಟ್ಲರ್‌‌ಗೆ ತಿಳಿಸಿದಾಗ, ಅವನು ಕ್ರೋಧಾವೇಶದಿಂದ ಕುದಿಯತೊಡಗಿದ. ಕೆಲವೇ ದಿನಗಳಷ್ಟು ಮುಂಚಿತವಾಗಿ, ರೀಕ್‌ನ ನಾಯಕತ್ವವನ್ನು ವಹಿಸಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಹರ್ಮಾನ್‌ ಗೋರಿಂಗ್‌ ಹಿಟ್ಲರ್‌‌ನನ್ನು ಕೇಳಿಕೊಂಡಿದ್ದ — ಬೊರ್ಮನ್‌‌ನ ಪ್ರೇರೇಪಣೆಯಿಂದಾಗಿ, ಹಿಟ್ಲರ್ ಈ ನಡೆಯನ್ನು ಕೆಳಗಿಳಿಯುವುದರ ಅಥವಾ ಒಂದು ದಿಢೀರ್‌ ಕಾರ್ಯಾಚರಣೆಯನ್ನು ಎದುರಿಸುವುದರ ಕುರಿತಾದ ಒಂದು ಬೇಡಿಕೆ ಎಂಬುದಾಗಿ ಅರ್ಥೈಸಿಕೊಂಡ. ಆದಾಗ್ಯೂ, ಅನುಮತಿಗಾಗಿ ಮನವಿ ಮಾಡಿಕೊಳ್ಳಲು ಹಿಮ್ಲರ್ ತಲೆಕೆಡಿಸಿಕೊಂಡಿರಲಿಲ್ಲ. ಸ್ವಾಮಿನಿಷ್ಠೆಯಲ್ಲಿ ಜೋಸೆಫ್‌‌ ಗೋಬೆಲ್ಸ್‌‌ ನಂತರದ ಸ್ಥಾನದಲ್ಲಿ ಹಿಮ್ಲರ್ ಇದ್ದಾನೆ ಎಂದು ಬಹಳ ಕಾಲದಿಂದಲೂ ಹಿಟ್ಲರ್‌ ನಂಬಿಕೊಂಡು ಬಂದಿದ್ದರಿಂದ, ಈ ಸುದ್ದಿಯು ಹಿಟ್ಲರ್‌ನನ್ನು ಘಾಸಿಗೊಳಿಸಿತು; ವಾಸ್ತವವಾಗಿ, ಹಿಮ್ಲರ್‌ನನ್ನು ಹಿಟ್ಲರ್‌‌ ಅನೇಕಬಾರಿ "ಡೆರ್‌ ಟ್ರ್ಯೂ ಹೆನ್ರಿಕ್" (ನಿಷ್ಠಾವಂತ ಹೆನ್ರಿಕ್) ಎಂದೇ ಕರೆಯುತ್ತಿದ್ದ. ಹಿಟ್ಲರ್‌‌ ಶಾಂತಗೊಂಡ ನಂತರ, ತನ್ನೊಂದಿಗೇ ನೆಲಗೂಡಿನಲ್ಲಿ ಇದ್ದವರೊಂದಿಗೆ ಅವನು ಮಾತನಾಡುತ್ತಾ, ಹಿಮ್ಲರ್ ತೋರಿಸಿದ ಪರಮಾವಧಿಯ ವಿಶ್ವಾಸಘಾತುಕತೆಯನ್ನು ತಾನು ಹಿಂದೆಂದೂ ಕಂಡಿರಲಿಲ್ಲ ಎಂದು ಹೇಳಿಕೊಂಡ.

ಹಿಮ್ಲರ್‌ನ ವಿಶ್ವಾಸಘಾತುಕತೆಯ ನಡವಳಿಕೆಯೊಂದಿಗೆ, ಸೋವಿಯೆಟ್ ಪಡೆಗಳು ರಾಯಭಾರ ಕಚೇರಿಯಿಂದ ಕೇವಲ 300 ಮೀಟರ್‌ಗಳಷ್ಟು ದೂರದಲ್ಲಿ ಮಾತ್ರವೇ (ಸುಮಾರು ಒಂದು ಮೊಹಲ್ಲಾದ ಕೇರಿಯ ಉದ್ದದಷ್ಟು) ಇವೆ ಎಂಬ ವರದಿಗಳೂ ಸೇರಿಕೊಂಡುದರಿಂದ, ಹಿಟ್ಲರ್‌ ತನ್ನ ಕೊನೆಯ ಉಯಿಲು ಮತ್ತು ಮರಣಶಾಸನವನ್ನು ಬರೆಯುವಂತೆ ಅವು ಪ್ರಚೋದಿಸಿದವು. ಆತ ಆತ್ಮಹತ್ಯೆ ಮಾಡಿಕೊಂಡ ದಿನಕ್ಕೆ ಒಂದು ದಿನ ಮುಂಚಿತವಾಗಿ ಮುಗಿಸಲ್ಪಟ್ಟ ಆ ಮರಣಶಾಸನದಲ್ಲಿ, ಹಿಮ್ಲರ್ ಮತ್ತು ಗೋರಿಂಗ್‌ರನ್ನು ಅವನು ವಿಶ್ವಾಸಘಾತುಕರು ಎಂಬುದಾಗಿ ಘೋಷಿಸಿದ್ದ. ಹಿಮ್ಲರ್‌ನಿಂದ ಪಕ್ಷದ ಮತ್ತು ಸಂಸ್ಥಾನದ ಕಚೇರಿಗಳ ವತಿಯಿಂದ ನೀಡಲಾಗಿದ್ದ ಎಲ್ಲಾ ಅಧಿಕಾರ-ಸವಲತ್ತುಗಳನ್ನೂ ಅವನು ಕಿತ್ತುಕೊಂಡ: ರೀಕ್ಸ್‌‌ಫಹ್ರರ್‌‌-SS, ಜರ್ಮನ್‌ ಆರಕ್ಷಕ ಪಡೆಯ ಮುಖ್ಯಸ್ಥ, ಜರ್ಮನ್‌ ರಾಷ್ಟ್ರಸ್ಥಾನದ ಆಯುಕ್ತ, ರೀಕ್‌‌‌ನ ಗೃಹಖಾತೆಯ ಸಚಿವ, ವೋಕ್ಸ್‌ಸ್ಟರ್ಮ್‌‌‌‌ನ ಪರಮೋಚ್ಚ ದಳಪತಿ, ಮತ್ತು ಸ್ವದೇಶಿ ಸೇನೆಯ ಪರಮೋಚ್ಚ ದಳಪತಿ ಇವೆಲ್ಲವೂ ಆ ಪಟ್ಟಿಯಲ್ಲಿ ಸೇರಿದ್ದವು. ಅಂತಿಮವಾಗಿ, ನಾಜಿ ಪಕ್ಷದಿಂದ ಹಿಮ್ಲರ್‌‌ನನ್ನು ಉಚ್ಚಾಟಿಸಿದ ಹಿಟ್ಲರ್‌‌, ಅವನ ಬಂಧನಕ್ಕಾಗಿ ಆದೇಶಿಸಿದ.

ಶ್ರೀಮಂತ ಬರ್ನಾಡಾಟ್‌ ಜೊತೆಗಿನ ಹಿಮ್ಲರ್‌‌ನ ಸಂಧಾನಗಳು ವಿಫಲಗೊಂಡವು. ಮಹಾ ನೌಕಾಬಲಾಧಿಪತಿ‌‌ಯಾದ ಕಾರ್ಲ್‌ ಡೋನಿಟ್ಜ್‌‌ ಎಂಬಾತನ ಜೊತೆಗೆ ಅವನು ಸೇರಿಕೊಂಡ; ಕಾರ್ಲ್‌ ಡೋನಿಟ್ಜ್‌‌ ಅಷ್ಟು ಹೊತ್ತಿಗಾಗಲೇ ಹತ್ತಿರದ ಪ್ಲೋನ್‌‌ ಎಂಬಲ್ಲಿ, ಪಶ್ಚಿಮದ ರಂಗದ ಉತ್ತರದ ಭಾಗದ ವ್ಯಾಪ್ತಿಯೊಳಗಿನ ಎಲ್ಲಾ ಜರ್ಮನ್‌ ಪಡೆಗಳ ಅಧಿಪತ್ಯವನ್ನೂ ಹೊಂದಿದ್ದ. ಹೊಸ ಜರ್ಮನ್‌ ಸರ್ಕಾರದಲ್ಲಿ ಹಿಮ್ಲರ್‌‌‌ಗೆ ಯಾವ ಜಾಗವೂ ಇಲ್ಲ ಎಂದು ವಿವರಿಸಿ ಹೇಳುವ ಮೂಲಕ, ಅವನನ್ನು ಡೋನಿಟ್ಜ್‌‌ ಆಚೆಗೆ ಕಳಿಸಿದ. ಆದಾಗ್ಯೂ, ಉಳಿದ ಸೆರೆ ಶಿಬಿರಗಳಿಂದ ಸ್ಕ್ಯಾಂಡಿನೇವಿಯಾದ ಸುಮಾರು 15,000 ಸೆರೆಯಾಳುಗಳನ್ನು ಬಿಡುಗಡೆಗೊಳಿಸುವಲ್ಲಿ ಈ ಸಂಧಾನಗಳು ನೆರವಾದವು.

ಓರ್ವ ದೇಶಭ್ರಷ್ಟನಾಗುವುದರ ಮೂಲಕ ಅಮೆರಿಕನ್ನರ ಕಡೆಗೆ ನಂತರ ತನ್ನನ್ನು ತೊಡಗಿಸಿಕೊಂಡ ಹಿಮ್ಲರ್ ಐಸೆನ್‌ಹೋವರ್‌‌ನ ಕೇಂದ್ರಕಚೇರಿಯನ್ನು ಸಂಪರ್ಕಿಸಿದ, ಮತ್ತು ಒಂದು ವೇಳೆ ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸದೆ ತನ್ನನ್ನು ಉಳಿಸಿದ್ದೇ ಆದಲ್ಲಿ, ಮಿತ್ರರಾಷ್ಟ್ರಗಳಿಗೆ ಜರ್ಮನಿಯ ಎಲ್ಲಾ ಪಡೆಗಳು ಶರಣಾಗುವಂತೆ ಮಾಡುವುದಾಗಿ ಪ್ರಕಟಿಸಿದ. ಜರ್ಮನಿಯ ಯುದ್ಧಾನಂತರದ ಸರ್ಕಾರದಲ್ಲಿ ತನ್ನನ್ನು "ಆರಕ್ಷಕ ಪಡೆಯ ಸಚಿವ"ನನ್ನಾಗಿ ನೇಮಿಸುವಂತೆ ಅವನು ಐಸೆನ್‌ಹೋವರ್‌ನ್ನು ಕೇಳಿಕೊಂಡ. ಈ ಕುರಿತು ವರದಿಯಾದಂತೆ, ಕೇಂದ್ರಕಚೇರಿಗೆ ಸಂಬಂಧಿಸಿದ ಪರಮೋಚ್ಚ ಯುದ್ಧೋದ್ದೇಶದ ಪಡೆಯ (SHAEF) (ಸುಪ್ರೀಮ್‌ ಹೆಡ್‌ಕ್ವಾರ್ಟರ್ಸ್‌ ಅಲೈಡ್‌ ಎಕ್ಸ್‌ಪೆಡಿಷನರಿ ಫೋರ್ಸ್‌-SHAEF) ದಳಪತಿಯೊಂದಿಗಿನ ತನ್ನ ಮೊದಲ ಭೇಟಿಯನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ಅವನು ಆಲೋಚಿಸಿದ ಮತ್ತು ಭೇಟಿಯ ಸಂದರ್ಭದಲ್ಲಿ ಅವನಿಗೆ ನಾಜಿ ವಂದನೆಯ ಭಂಗಿಯನ್ನು ಪ್ರಸ್ತುತಪಡಿಸಬೇಕೇ ಅಥವಾ ಕೈಕುಲುಕುವಿಕೆಯೊಂದಿಗೆ ಭೇಟಿಯಾಗಬೇಕೇ ಎಂಬುದೂ ಅವನ ಆಲೋಚನಾ ಸರಣಿಯಲ್ಲಿ ಸೇರಿತ್ತು. ಹಿಮ್ಲರ್ ಜೊತೆಗೆ ಯಾವುದೇ ತೆರನಾದ ಬಾಂಧವ್ಯ-ವ್ಯವಹಾರವನ್ನು ಹೊಂದಲು ಐಸೆನ್‌ಹೋವರ್‌‌ ತಿರಸ್ಕರಿಸಿದ; ಅಷ್ಟೇ ಅಲ್ಲ, ತರುವಾಯದಲ್ಲಿ ಹಿಮ್ಲರ್‌‌ನನ್ನು ಓರ್ವ ಪ್ರಮುಖ ಯುದ್ಧ ಅಪರಾಧಿ ಎಂದು ಘೋಷಿಸಲಾಯಿತು.

ಸೆರೆ ಹಿಡಿಯುವಿಕೆ ಮತ್ತು ಸಾವು

[ಬದಲಾಯಿಸಿ]
1945ರಲ್ಲಿ ವಿಷಪ್ರಾಶನದಿಂದ ಹಿಮ್ಲರ್ ಆತ್ಮಹತ್ಯೆ ಮಾಡಿಕೊಂಡ ನಂತರ ಸಂಬಂಧಿಸಿದ ಸುಫರ್ದಿನಲ್ಲಿರುವ ಅವನ ಕಳೇಬರ
ಲಂಡನ್‌ನಲ್ಲಿರುವ ಇಂಪೀರಿಯಲ್‌ ವಾರ್‌ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಹಿಮ್ಲರ್‌‌ನ ಸಾವಿನ ಮುಖವಾಡ

ತನ್ನ ಹಿಂದಿನ ಸಹೋದ್ಯೋಗಿಗಳಿಗೆ ಬೇಡವಾದ ಮತ್ತು ಮಿತ್ರರಾಷ್ಟ್ರಗಳಿಂದ ಬೆನ್ನಟ್ಟಲ್ಪಟ್ಟ ಹಿಮ್ಲರ್, ಹಲವಾರು ದಿನಗಳವರೆಗೆ ಡೆನ್ಮಾರ್ಕಿನ ಗಡಿಯ ಸಮೀಪವಿರುವ ಫ್ಲೆನ್ಸ್‌‌ಬರ್ಗ್‌ ಆಸುಪಾಸಿನಲ್ಲಿ ಅಲೆದಾಡಿದ. ಬಂಧನವನ್ನು ತಪ್ಪಿಸಿಕೊಳ್ಳುವ ಪ್ರಯತ್ನವಾಗಿ, ಗುಪ್ತ ಸೇನಾ ಆರಕ್ಷಕ ಪಡೆಯ ಓರ್ವ ಸಾರ್ಜೆಂಟ್‌-ಮೇಜರ್‌ ಎಂಬಂತೆ ಅವನು ಸ್ವತಃ ತನ್ನ ವೇಷಮರೆಸಿಕೊಂಡ; ಇದಕ್ಕಾಗಿ ಹೆನ್ರಿಕ್ ಹಿಟ್‌ಝಿಂಗರ್ ಎಂಬ ಹೆಸರನ್ನು ಬಳಸಿಕೊಂಡ ಅವನು, ತನ್ನ ಮೀಸೆಯನ್ನು ಬೋಳಿಸಿಕೊಂಡ ಮತ್ತು ತನ್ನ ಎಡಗಣ್ಣಿನ[೨೩] ಮೇಲ್ಭಾಗದಲ್ಲಿ ಒಂದು ಕಣ್ಣಿನ ತೇಪೆಯ ಪಟ್ಟಿಯನ್ನು ಧರಿಸಿಕೊಂಡ; ಬವೇರಿಯಾಕ್ಕೆ ತಾನು ಹಿಂದಿರುಗಬಹುದು ಎಂಬ ಭರವಸೆಯಿಂದ ಅವನು ಹೀಗೆಲ್ಲಾ ಮಾಡಿಕೊಂಡಿದ್ದ. ಖೋಟಾ ದಸ್ತಾವೇಜುಗಳ ಒಂದು ಜೊತೆಯೊಂದಿಗೆ ಅವನು ಸ್ವತಃ ಸಜ್ಜುಗೊಂಡಿದ್ದ, ಆದರೆ ಸಂಪೂರ್ಣವಾಗಿ ಕ್ರಮಬದ್ಧವಾಗಿದ್ದ ಇವನ ಕಾಗದಪತ್ರಗಳು ಎಷ್ಟೊಂದು ಅಸಾಮಾನ್ಯವಾಗಿದ್ದವೆಂದರೆ, ಬ್ರೆಮೆನ್‌‌ನಲ್ಲಿನ ಒಂದು ಬ್ರಿಟಿಷ್‌ ಸೇನಾ ತುಕಡಿಗೆ ಇವನ ಕುರಿತು ಸಂದೇಹಗಳು ಹುಟ್ಟಿಕೊಂಡವು. ಮೇಜರ್‌‌ ಸಿಡ್ನಿ ಎಕ್ಸೆಲ್‌‌ ಎಂಬಾತನಿಂದ ಮೇ 22ರಂದು ಹಿಮ್ಲರ್ ಬಂಧಿಸಲ್ಪಟ್ಟ ಮತ್ತು ಸೆರೆಯ ಅವಧಿಯಲ್ಲಿ, ಅತಿ ಶೀಘ್ರವಾಗಿ ಅವನ ಗುರುತುಹಿಡಿಯಲಾಯಿತು. ಇತರ ಜರ್ಮನ್‌ ನಾಯಕರೊಂದಿಗೆ ಓರ್ವ ಯುದ್ಧ ಅಪರಾಧಿಯಾಗಿ ನ್ಯೂರೆಂಬರ್ಗ್‌‌‌‌ನಲ್ಲಿ ಹಿಮ್ಲರ್ ವಿಚಾರಣೆಯನ್ನು ಎದುರಿಸುವಂತೆ ನಿಗದಿಪಡಿಸಲಾಗಿತ್ತು; ಆದರೆ, ವಿಚಾರಣೆಯು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿಯೇ ಒಂದು ಪೊಟಾಷಿಯಂ ಸೈನೈಡ್‌ ಕ್ಯಾಪ್‌‌ಸ್ಯೂಲ್‌ನ್ನು ಸೇವಿಸುವ ಮೂಲಕ ಮೇ 23ರಂದು[೨೪] ಅವನು ಲ್ಯೂನ್‌ಬರ್ಗ್‌‌‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಇಚ್‌ ಬಿನ್‌‌ ಹೆನ್ರಿಕ್ ಹಿಮ್ಲರ್! ("ನಾನೇ ಹೆನ್ರಿಕ್ ಹಿಮ್ಲರ್!") ಎಂಬದು ಅವನ ಕೊನೆಯ ಮಾತುಗಳಾಗಿದ್ದವು. ಮತ್ತೊಂದು ಕಥನವು ಹೇಳುವ ಪ್ರಕಾರ, ತನ್ನ ಹಲ್ಲುಗಳ ಪೈಕಿ ಒಂದರಲ್ಲಿ ಅಡಗಿಸಿಕೊಂಡಿದ್ದ ಸೈನೈಡ್‌ ಮಾತ್ರೆಯನ್ನು ಹಿಮ್ಲರ್ ಕಚ್ಚಿದ್ದ; ಓರ್ವ ಬ್ರಿಟಿಷ್‌ ವೈದ್ಯನು ಇದನ್ನು ಹುಡುಕಿದಾಗ, "ಅವನು ಕೊನೆಗೂ ಸಾಧಿಸಿದ!" ಎಂಬುದಾಗಿ ಆ ವೈದ್ಯನು ಕಿರಿಚಿಕೊಂಡಿದ್ದು ಗಮನಾರ್ಹವಾಗಿತ್ತು.

ಆದಾಗ್ಯೂ, ಬ್ರಿಟಿಷ್‌ ಸೇನಾ ಕಾರ್ಪೊರಲ್‌‌ ಹ್ಯಾರಿ ಔಗ್‌ಟನ್‌ ಜೋನ್ಸ್‌ನ ದಿನಚರಿಯನ್ನು ಆಧರಿಸಿದ ಮತ್ತೊಂದು ಕಥನವು ಹುಟ್ಟಿಕೊಂಡಿದೆ‌.[೨೫] 2010ರ ಆಗಸ್ಟ್‌‌ನಲ್ಲಿ, ಸಾರ್ವಜನಿಕರಿಗಾಗಿ ಮೊಟ್ಟಮೊದಲ ಬಾರಿಗೆ ಬಿಡುಗಡೆಯಾದ ಕಾರ್ಪೊರಲ್‌‌ ಜೋನ್ಸ್‌ನ ದಿನಚರಿಯು ಹೊರಗೆಡಹಿರುವ ಮಾಹಿತಿಯ ಪ್ರಕಾರ, 1945ರ ಮೇ 23ರಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ, ಅವನನ್ನು ಇರಿಸಲಾಗಿದ್ದ ಲ್ಯೂನ್‌ಬರ್ಗ್‌ ಸೈನಿಕರ ಸಾಲುಮನೆಗಳಲ್ಲಿದ್ದ ಹಲವಾರು ಜರ್ಮನ್‌ ಸೆರೆಯಾಳುಗಳು ಪಾಲ್ಗೊಂಡಿದ್ದ ಗಲಭೆಯೊಂದರ ಕಡೆಗೆ ಅವನ ಗಮನವನ್ನು ಸೆಳೆಯಲಾಯಿತು. ಹಿಮ್ಲರ್ ಸೈನಿಕರ ಸಾಲುಮನೆಯ ಕೋಣೆಗಳಲ್ಲಿದ್ದ ಎಂಬುದಾಗಿ ಕಾರ್ಪೊರಲ್‌‌ ಜೋನ್ಸ್‌ಗೆ ತಿಳಿಸಲಾಯಿತು. ತನಗೆದುರಾದ ಓರ್ವ ಬ್ರಿಟಿಷ್‌ ಕ್ಯಾಪ್ಟನ್‌ಗೆ ಹಿಮ್ಲರ್ ಹೀಗೆ ಹೇಳಿದ, "ಅಯ್ಯಾ ಹುಡುಗಾ, ನೀನಿನ್ನೂ ಕೇವಲ ಒಬ್ಬ ಕಿರಿಯ ಕ್ಯಾಪ್ಟನ್‌; ನನ್ನನ್ನು ಕರೆದುಕೊಂಡು ಹೋಗಬೇಕೆಂದಿದ್ದರೆ ನಿನ್ನ ಮೇಲ್ವಿಚಾರಕ ಕರ್ನಲ್‌ನನ್ನು ನೋಡಲು ನಾನು ಬಯಸುತ್ತೇನೆ." ಅವನನ್ನು ಕರೆದಕೊಂಡು ಹೋಗುವಂತೆ ಆ ಅಧಿಕಾರಿಯು ಕಾರ್ಪೊರಲ್‌‌ ಜೋನ್ಸ್‌ಗೆ ತಿಳಿಸಿದ; ಆದರೆ ಅವನೆಡೆಗೆ ಅವರು ನಡೆದುಹೋಗುತ್ತಿದ್ದಂತೆ, ಹಿಮ್ಲರ್ ತನ್ನ ಕೈಯನ್ನು ಬಾಯೊಳಗೆ ಇರಿಸಿಕೊಂಡ ಮತ್ತು ಕೆಲಕ್ಷಣದಲ್ಲಿ ಸತ್ತುಬಿದ್ದ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಪೈಕಿ ತಾನೂ ಒಬ್ಬನಾಗಿ ಹೋದದ್ದು ಹೇಗೆ ಎಂಬುದನ್ನು ಕಾರ್ಪೊರಲ್‌‌ ಜೋನ್ಸ್‌ ನಂತರದಲ್ಲಿ ಬರೆದ.[೨೫] ಹಿಮ್ಲರ್‌ನನ್ನು ಎಚ್ಚರಕ್ಕೆ ತರುವಲ್ಲಿನ ಹಲವಾರು ಪ್ರಯತ್ನಗಳು ವಿಫಲಗೊಂಡವು.[೨೬] ಅದಾದ ಕೆಲವೇ ಕ್ಷಣಗಳಲ್ಲಿ, ಹಿಮ್ಲರ್‌ನ ದೇಹವನ್ನು ಲ್ಯೂನ್‌ಬರ್ಗ್‌ ಕುರುಚಲು ಭೂಮಿಯಲ್ಲಿನ ಒಂದು ಗುರುತುಮಾಡದ ಸಮಾಧಿಯಲ್ಲಿ ಹೂಳಲಾಯಿತು. ಹಿಮ್ಲರ್‌‌‌ನ ಸಮಾಧಿಯ ನಿಖರವಾದ ತಾಣವು ಅಜ್ಞಾತವಾಗಿಯೇ ಉಳಿಯಿತು.

ಸುಳ್ಳು ದಾಖಲೆಗಳು, ಕಟ್ಟುಕಥೆಗಳು ಮತ್ತು ಪಿತೂರಿ ಸಿದ್ಧಾಂತಗಳು

[ಬದಲಾಯಿಸಿ]

2008ರ ಮೇ ತಿಂಗಳಲ್ಲಿ, ಬ್ರಿಟಿಷ್‌ ಆರಕ್ಷಕ ಪಡೆಯು ಕೈಗೊಂಡ ಒಂದು ತನಿಖೆಯು, "2000ನೇ ಇಸವಿಯ ನಂತರ 12 ಕಡತಗಳಿಗೆ ವರ್ಗಾಯಿಸಲ್ಪಟ್ಟಿದ್ದ 29 ಸುಳ್ಳು ದಾಖಲೆಗಳನ್ನು ಗುರುತಿಸಿತು"; ಹಿಮ್ಲರ್‌‌‌ನ ಇತ್ತೀಚಿನ ಪಿತೂರಿಗಳು ಮತ್ತು ಊಹನಗಳಿಗೆ ಅವು ಪೂರಕವಾಗಿ ಬಳಸಲ್ಪಟ್ಟಿದ್ದವು.

ಫೈನಾನ್ಷಿಯಲ್‌ ಟೈಮ್ಸ್‌‌ ಈ ಕುರಿತು ಮತ್ತಷ್ಟು ಮಾಹಿತಿಯನ್ನು ತನ್ನ ವರದಿಯಲ್ಲಿ ತಿಳಿಸುತ್ತಾ, "IIನೇ ಜಾಗತಿಕ ಸಮರದ ಕುರಿತು ಮೂರು ಪುಸ್ತಕಗಳನ್ನು ಬರೆದಿದ್ದ ಓರ್ವ ಇತಿಹಾಸಕಾರನು ಈ ಮೂಲಗಳನ್ನು ಸುಳ್ಳು ದಾಖಲೆಗಳು ಎಂಬುದಾಗಿ ಉಲ್ಲೇಖಿಸಿದ್ದಾನೆ ಎಂದು ತಿಳಿಸಿತು.[೨೭]

ಮಾರ್ಟಿನ್‌ ಅಲೆನ್‌‌ ಎಂಬ ಲೇಖಕನು ಗಮನಾರ್ಹರಾದ ಇತರ ನಾಜಿಗಳ ಬಗ್ಗೆ ಬರೆಯುವಾಗ, ಸಂವೇದನಾತ್ಮಕ ಆಪಾದನೆಗಳನ್ನು ಮಾಡುತ್ತಿದ್ದ ಮತ್ತು ಅದಕ್ಕಾಗಿ ಸೃಷ್ಟಿಸಲ್ಪಟ್ಟ ವಿಷಯಗಳನ್ನು ನೆಚ್ಚಿಕೊಳ್ಳುತ್ತಿದ್ದ ಎಂಬುದಾಗಿ ವ್ಯಾಪಕವಾಗಿ ವರದಿಯಾಗಿದೆ. "ವಿಂಡ್ಸರ್‌‌ನ ಡ್ಯೂಕ್‌‌‌ನಿಂದ ಹಿಟ್ಲರ್‌ಗೆ ಬಂದಿತೆಂದು ಹೇಳಲಾದ ಒಂದು ಪತ್ರದ ಕುರಿತು ಸವಾಲೆಸೆದಾಗ, ಅದನ್ನು ತನ್ನ ದಿವಂಗತ ತಂದೆಗೆ ಆಲ್ಬರ್ಟ್‌ ಸ್ಪೀರ್‌‌ ಕೊಟ್ಟಿದ್ದ, ನಂತರದಲ್ಲಿ ಅದು ತನ್ನ ಮನೆಯ ಅಟ್ಟಳಿಕೆಯಲ್ಲಿ ಕಂಡುಬಂತು ಎಂಬುದಾಗಿ ಅಲೆನ್‌‌ ಪ್ರತಿಕ್ರಿಯಿಸಿದ."[೨೮]

ಐತಿಹಾಸಿಕ ದೃಷ್ಟಿಕೋನಗಳು

[ಬದಲಾಯಿಸಿ]

ಹಿಮ್ಲರ್‌‌ನನ್ನು ಪ್ರಚೋದಿಸಿದ ಮಾನಸಿಕ ಅಂಶಗಳು, ಪ್ರೇರಣೆಗಳು, ಮತ್ತು ಪ್ರಭಾವಗಳ ಕುರಿತು ಇತಿಹಾಸಕಾರರಲ್ಲಿ ಅಭಿಪ್ರಾಯಭೇದಗಳಿವೆ. ಕೆಲವೊಬ್ಬರು ಭಾವಿಸುವ ಪ್ರಕಾರ, ಅವನ ಮೇಲೆ ಹಿಟ್ಲರ್‌‌ನ ಪ್ರಾಬಲ್ಯವಿತ್ತು; ಸಂಪೂರ್ಣವಾಗಿ ಅವನ ಪ್ರಭಾವದ ಅಡಿಯಲ್ಲಿ ಮತ್ತು ಹಿಟ್ಲರ್‌‌ನ ದೃಷ್ಟಿಕೋನಗಳನ್ನು ಅವುಗಳ ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯುವ ಒಂದು ಅತ್ಯಾವಶ್ಯಕ ಸಾಧನವಾಗಿ ಅವನು ಕಾರ್ಯನಿರ್ವಹಿಸುತ್ತಿದ್ದ. ಇತರರು ಭಾವಿಸುವ ಪ್ರಕಾರ, ಹಿಮ್ಲರ್ ತನ್ನದೇ ಆದ ರೀತಿಯಲ್ಲಿ ಅತೀವವಾಗಿ ಯೆಹೂದ್ಯ-ವಿರೋಧಿ ಅಭಿಪ್ರಾಯಗಳನ್ನು ಹೊಂದಿದ್ದ ಓರ್ವ ವ್ಯಕ್ತಿಯಾಗಿದ್ದ, ಮತ್ತು ಜನಹತ್ಯೆಯನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಆತ ತನ್ನ ಯಜಮಾನನಿಗಿಂತಲೂ ಹೆಚ್ಚು ಉತ್ಸುಕನಾಗಿದ್ದ. ಇಷ್ಟಾದರೂ, ಇತರರು ಹಿಮ್ಲರ್‌‌ನನ್ನು ಓರ್ವ ಅಧಿಕಾರದ-ಹುಚ್ಚನನ್ನಾಗಿ ನೋಡುತ್ತಾರೆ; ಆತ ಅಧಿಕಾರ ಮತ್ತು ಪ್ರಭಾವವನ್ನು ಒಗ್ಗೂಡಿಸಿ ಇಟ್ಟುಕೊಳ್ಳುವುದರ ಕಡೆಗೇ ತನ್ನನ್ನು ಸಮರ್ಪಿಸಿಕೊಂಡಿದ್ದ ಎಂಬುದು ಇಂಥ ಕೆಲವರ ಭಾವನೆ.[ಸೂಕ್ತ ಉಲ್ಲೇಖನ ಬೇಕು]

ರಾಬರ್ಟ್‌ S. ವಿಸ್‌ಟ್ರಿಕ್ ಪ್ರಕಾರ, "ಯೆಹೂದ್ಯ ಪಕ್ಷಪಾತ-ವಿರೋಧಿ ವಿಷಯವನ್ನು ಆಧರಿಸಿದ ಒಂದು ಋಣಾತ್ಮಕ ಪರಿಕಲ್ಪನೆಯಿಂದ" "SS ಸಂಘಟನೆಯನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ ಒಂದು ಸಂಘಟನಾತ್ಮಕ ಹೊಣೆಗಾರಿಕೆಯ ಕಡೆಗೆ" ಜನಾಂಗದ ಪ್ರಶ್ನೆಯನ್ನು ರೂಪಾಂತರಿಸುವುದು ಹಿಮ್ಲರ್‌‌ನ ಹೊಸ ನಿರ್ಣಾಯಕ ಮಾರ್ಪಾಟು ಆಗಿತ್ತು... ಎಲ್ಲಾ ತಪ್ಪಿತಸ್ಥ ಮನೋಭಾವ ಮತ್ತು ಹೊಣೆಗಾರಿಕೆಯ ಆಚೆಗೆ, ಕಾಲಜ್ಞಾನ ಸ್ವರೂಪದ ಒಂದು 'ಆದರ್ಶೀಕರಣ'ದೊಂದಿಗೆ SS ಸಂಘಟನೆಯ ಕುರಿತು ಉಪದೇಶಿಸುವಲ್ಲಿ ಯಶಸ್ವಿಯಾದದ್ದು ಹಿಮ್ಲರ್‌ನ ಕುಶಲ-ಹೊಡೆತವಾಗಿತ್ತು; ಇದು ಸಾಮೂಹಿಕ ಕೊಲೆಯನ್ನು ಹುತಾತ್ಮತೆ ಮತ್ತು ತನ್ನೆಡೆಗೇ ಇರುವ ಕ್ರೌರ್ಯದ ಒಂದು ಸ್ವರೂಪವಾಗಿ ತರ್ಕಬದ್ಧವಾಗಿಸಿತು."[೨೯]

ಯುದ್ಧಕಾಲದ ವ್ಯಂಗ್ಯಚಿತ್ರಕಾರನಾದ ವಿಕ್ಟರ್‌ ವೇಯ್ಜ್‌‌ ಎಂಬಾತ ಹಿಮ್ಲರ್‌ನನ್ನು ಒಂದು ದೈತ್ಯ ಅಷ್ಟಪಾದಿಯ (ಆಕ್ಟಪಸ್‌) ರೀತಿಯಲ್ಲಿ ಚಿತ್ರಿಸಿದ; ದಮನಕ್ಕೊಳಗಾದ ರಾಷ್ಟ್ರಗಳನ್ನು ತನ್ನ ಎಂಟೂ ಬಾಹುಗಳಲ್ಲಿ ಅವನು ಹಿಡಿದಿಟ್ಟುಕೊಂಡಿರುವಂತೆ ಚಿತ್ರಿಸಿದ್ದು ಆ ಚಿತ್ರದ ವಿಶೇಷತೆಯಾಗಿತ್ತು.[೩೦]

ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓರ್ವ ಇತಿಹಾಸಕಾರನಾಗಿರುವ ವೋಲ್ಫ್‌ಗ್ಯಾಂಗ್‌ ಸೌವೆರ್ ಎಂಬಾತನ ಅಭಿಪ್ರಾಯದಲ್ಲಿ, "ಹಿಮ್ಲರ್ ನಿಯಮ-ನಿಷ್ಠುರ, ತತ್ತ್ವಾತ್ಮಕ, ಮತ್ತು ನೀರಸ ವ್ಯಕ್ತಿಯಾಗಿದ್ದರೂ ಸಹ, ಅವನು ಹಿಟ್ಲರ್‌‌ನ ಪ್ರಭಾವದ ಅಡಿಯಲ್ಲಿ ವಾಸ್ತವಿಕ ಅಧಿಕಾರದಲ್ಲಿನ ಎರಡನೇ ವ್ಯಕ್ತಿಯಾಗಿ ಹೊರಹೊಮ್ಮಿದ. ಅಸಾಮಾನ್ಯ ಬುದ್ಧಿಸೂಕ್ಷ್ಮತೆ, ಉಜ್ಜ್ವಲವಾದ ಮಹತ್ವಾಕಾಂಕ್ಷೆ, ಮತ್ತು ಹಿಟ್ಲರ್‌‌ನೆಡೆಗಿನ ದಾಸ್ಯ-ಮನೋಭಾವದ ಸ್ವಾಮಿನಿಷ್ಠೆಯ ಒಂದು ಸಂಯೋಜನೆಯಲ್ಲಿ ಅವನ ಬಲವು ಅಡಗಿತ್ತು‌‌."[೩೧]

ತನ್ನ ಖಾಸಗಿ ಮಸಾಜುಗಾರನಾದ ಫೆಲಿಕ್ಸ್‌‌ ಕರ್ಸ್ಟನ್‌‌ನೊಂದಿಗೆ ಹಿಮ್ಲರ್ ಮಾತನಾಡುತ್ತಾ, ತಾನು ಯಾವಾಗಲೂ ಭಗವದ್ಗೀತೆಯ ಒಂದು ಪ್ರತಿಯನ್ನು ಒಯ್ಯುವುದಾಗಿ ತಿಳಿಸಿದ; ಯೆಹೂದ್ಯ ನಿರ್ನಾಮಕಾರ್ಯವನ್ನು ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಆವರಿಸುತ್ತಿದ್ದ ತಪ್ಪಿತಸ್ಥ ಮನೋಭಾವವನ್ನು ಇದು ದೂರಮಾಡುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು; ಯೋಧ ಅರ್ಜುನನ ರೀತಿಯಲ್ಲಿಯೇ, ತಾನು ಮಾಡುವ ಕರ್ಮಗಳಿಗೆ ಯಾವುದೇ ರೀತಿಯ ಅಂಟಿಕೆ ಅಥವಾ ಮಮತೆಯನ್ನು ಇರಿಸಿಕೊಳ್ಳದೆಯೇ, ಕೇವಲ ತನ್ನ ಕರ್ತವ್ಯವನ್ನಷ್ಟೇ ತಾನು ಮಾಡುತ್ತಿರುವುದಾಗಿ ಈ ಸಂದರ್ಭದಲ್ಲಿ ಹಿಮ್ಲರ್‌‌ ಅವನಿಗೆ ತಿಳಿಸಿದ.[೩೨] ಜಾಕೋಬ್‌ ವಿಲ್ಹೆಮ್‌‌ ಹೌವೆರ್‌ ಎಂಬಾತ ಭಗವದ್ಗೀತೆಯ ಕುರಿತು ನೀಡಿರುವ ಅರ್ಥವಿವರಣೆಯಲ್ಲಿರುವ ಕರ್ತವ್ಯದ ಪರಿಕಲ್ಪನೆಗಳು, ಪ್ರಾಯಶಃ ಹಿಮ್ಲರ್‌‌‌ನ ಪರಿಕಲ್ಪನೆಗಳ ಮೇಲೆ ಪ್ರಭಾವ ಬೀರಿರಬಹುದು.[೩೩]

ನೋರ್ಮನ್‌ ಬ್ರೂಕ್‌‌ ಎಂಬಾತನ ವಾರ್‌ ಕ್ಯಾಬಿನೆಟ್‌ ಡೈರೀಸ್‌‌ ,[೩೪] ಎಂಬ ಕೃತಿಯ ಒಂದು ಉದ್ಧೃತಭಾಗದಲ್ಲಿ, ಯುದ್ಧದ ಸಮಯದಲ್ಲಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದ ಹಿಮ್ಲರ್ ಕುರಿತಾಗಿ ಆವಲೋಕಿಸಿ, ಅವನ ಹತ್ಯೆಯನ್ನು ಸಮರ್ಥಿಸಿದ. ನಾಜಿ ನಾಯಕರನ್ನು ಗಲ್ಲಿಗೇರಿಸಬೇಕು ಎಂಬ ಒಂದು ಸೂಚನೆಗೆ ಪ್ರತಿಕ್ರಿಯಿಸುವ ಮೂಲಕ ಬ್ರೂಕ್‌ ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, "ಅವರು ಹಿಮ್ಲರ್‌‌ನೊಂದಿಗೆ ಸಂಧಾನವನ್ನು ಮಾಡಿಕೊಳ್ಳಬೇಕೇ ಮತ್ತು 'ಶಾಂತಿಯ ಷರತ್ತುಗಳು ಒಮ್ಮೆಗೆ ಸಮ್ಮತಿಸಲ್ಪಟ್ಟ ನಂತರದಲ್ಲಿ ಅವನನ್ನು ಪಕ್ಕಕ್ಕೆ ತಳ್ಳಬಹುದೇ' ಎಂಬುದರ ಕುರಿತು ಕೇಳಲು ಇದು ಚರ್ಚಿಲ್‌ನನ್ನು ಪ್ರಚೋದಿಸಿತು. ಜರ್ಮನ್‌ ಶರಣಾಗತಿಗೆ ಸಂಬಂಧಿಸಿದಂತಿರುವ ಒಂದು ವ್ಯವಹಾರವನ್ನು ಹಿಮ್ಲರ್‌ನೊಂದಿಗೆ ನಡೆಸುವ ಸೂಚನೆಯನ್ನು ಮತ್ತು ನಂತರದಲ್ಲಿ ಅವನನ್ನು ಹತ್ಯೆಮಾಡುವುದನ್ನು ಸ್ವದೇಶಿ ಕಚೇರಿಯ ಬೆಂಬಲದೊಂದಿಗೆ ನೆರವೇರಿಸಲಾಯಿತು. ‘ಹಾಗೆ ಮಾಡಲು ಸಾಕಷ್ಟು ಅಧಿಕಾರ ನೀಡಲಾಗಿತ್ತು’, ಎಂಬುದಾಗಿ ಚರ್ಚಿಲ್‌ ವ್ಯಾಖ್ಯಾನಿಸಿರುವಂತೆ ಸಂಕ್ಷಿಪ್ತ ಸಾರಾಂಶವು ದಾಖಲಿಸಲ್ಪಟ್ಟಿತು."[೩೫]

ಹಿಮ್ಲರ್ ಕುರಿತಾದ ಇತ್ತೀಚಿನ ಕೃತಿಯು, ಹಿಟ್ಲರ್‌‌ಗಾಗಿ ಅವನು ಹೇಗೆ ಪೈಪೋಟಿ ನಡೆಸಿದ ಮತ್ತು ಹಿಟ್ಲರ್‌‌ನ ಗಮನ ಮತ್ತು ಗೌರವಕ್ಕಾಗಿ ಹೇಗೆ ಹಾತೊರೆದ ಎಂಬುದರ ಕಡೆ ಗಮನ ಹರಿಸಿದೆ. ಅವನು ಹಿಟ್ಲರ್‌ನನ್ನು ಕೈಬಿಟ್ಟು ಮಿತ್ರರಾಷ್ಟ್ರಗಳ ಜೊತೆಯಲ್ಲಿ ಪ್ರತ್ಯೇಕ ಸಂಧಾನಗಳನ್ನು ಶುರುಮಾಡಿಕೊಂಡಾಗಿನ, ಯುದ್ಧದ ಕೊನೆಯ ದಿನಗಳ ಘಟನೆಗಳು ಈ ನಿಟ್ಟಿನಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಗಮನಾರ್ಹವಾಗಿವೆ.

ಮಿತ್ರರಾಷ್ಟ್ರಗಳಿಂದ ತಾನು ಗ್ರಹಿಸಲ್ಪಟ್ಟದ್ದು ಹೇಗೆ ಎಂಬುದರ ಕುರಿತಾದ ಒಂದು ವಿರೂಪಗೊಂಡ ದೃಷ್ಟಿಕೋನವನ್ನು ಹಿಮ್ಲರ್ ಹೊಂದಿದ್ದ ಎಂದು ಕಂಡುಬರುತ್ತದೆ; US ಮತ್ತು ಬ್ರಿಟಿಷ್‌ ನಾಯಕರನ್ನು ಭೇಟಿಯಾಗಿ "ಸಂಭಾವಿತರ ರೀತಿಯಲ್ಲಿ" ಚರ್ಚೆಗಳನ್ನು ನಡೆಸಲು ಅವನು ಆಶಿಸಿದ್ದ. ಯೆಹೂದಿಗಳು ಮತ್ತು ಪ್ರಮುಖ ಸೆರೆಯಾಳುಗಳಿಗೆ ಸಂಬಂಧಿಸಿದಂತೆ, ಕಟ್ಟಕಡೆಯ ಕೊನೆಯ-ಕ್ಷಣದ ತಾತ್ಕಾಲಿಕ ವಿಮೋಚನೆಗಳ ಮೂಲಕ ಅವರ ಪ್ರತೀಕಾರವನ್ನು ಬಿಡಿಸಲು ಅವನು ಪ್ರಯತ್ನಿಸಿದ. ಅವನನ್ನು ಬಂಧಿಸಿದ ಬ್ರಿಟಿಷ್‌ ಯೋಧರ ಪ್ರಕಾರ, ಓರ್ವ ಸೆರೆಯಾಳಾಗಿ ತಾನು ಪರಿಗಣಿಸಲ್ಪಟ್ಟಿದ್ದಕ್ಕೆ ಹಿಮ್ಲರ್ ನಿಜವಾಗಿಯೂ ಆಘಾತಕ್ಕೊಳಗಾಗಿದ್ದ.

ಡೆರ್‌ ಸ್ಪೀಗೆಲ್‌‌ ಎಂಬ ಜರ್ಮನ್‌ ಸುದ್ದಿ ನಿಯತಕಾಲಿಕವು 2008ರಲ್ಲಿ ಹಿಮ್ಲರ್‌‌ನನ್ನು "ಸಾರ್ವಕಾಲಿಕ ಮಹಾನ್‌ ಸಾಮೂಹಿಕ ಕೊಲೆಗಾರ" ಎಂದು ಹೆಸರಿಸಿತು; ಸಾಮೂಹಿಕ ಹತ್ಯಾಕಾಂಡದ ಶಿಲ್ಪಿಯಾಗಿ ಅವನು ವಹಿಸಿದ ಪಾತ್ರವನ್ನು ಪ್ರತಿಬಿಂಬಿಸುವ ಉದ್ದೇಶ ಇದರ ಹಿಂದೆ ಇತ್ತು.[೩೬] ಆಧುನಿಕ ಜರ್ಮನಿಯಲ್ಲಿನ ಅವನ ಕುರಿತಾದ ಸಾರ್ವಜನಿಕ ಗ್ರಹಿಕೆಯನ್ನು ಪ್ರತಿಬಿಂಬಿಸುವ ಸಂದರ್ಭದಲ್ಲಿ, ಜನಹತ್ಯೆಯ ಕುರಿತಾದ ಅಂಕಿ-ಅಂಶಗಳ ಸಂಶೋಧನೆಯು ಈ ಸಮರ್ಥನೆಯನ್ನು ಒಂದು ಅತೀವವಾದ ಅತಿ-ಅಂದಾಜು ಎಂದು ತೋರಿಸುತ್ತದೆ; ಅವನ ವೈಯಕ್ತಿಕ ಹೊಣೆಗಾರಿಕೆಯನ್ನು ಒಟ್ಟಾರೆಯಾಗಿ ಪರಿಗಣಿಸಿ, ಹಿಟ್ಲರ್‌‌ ಮತ್ತು ಅವನ ಇತರ ಲೆಫ್ಟಿನೆಂಟ್‌ಗಳ ಜೊತೆಯಲ್ಲಿ ಹೋಲಿಸಿದಾಗಲೂ ಇದು ಉತ್ಪ್ರೇಕ್ಷೆಯಾಗಿ ಕಾಣುತ್ತದೆ.[೩೭]

SS ವೃತ್ತಿಜೀವನದ ಸಾರಾಂಶ

[ಬದಲಾಯಿಸಿ]
  • SS ಸಂಖ್ಯೆ: 168
  • ನಾಜಿ ಪಕ್ಷದ ಸಂಖ್ಯೆ: 14303
  • ಪ್ರಾಥಮಿಕ ಸ್ಥಾನ: ರೀಕ್ಸ್‌‌ಫಹ್ರರ್‌‌-SS ಅಂಡ್‌ ಚೆಫ್‌ ಡೆರ್‌ ಡ್ಯೂಟ್‌ಷೆನ್‌ ಪೊಲಿಜೀ
  • ಹಿಂದಿನ SS-ಸ್ಥಾನಗಳು: SS-ನಾಯಕ (1925), SS-ಜಿಲ್ಲಾ ನಾಯಕ (1926), ಉಪ-ರೀಕ್ಸ್‌‌ಫಹ್ರರ್‌‌ (1927)
  • ವಫೆನ್‌‌-SS ಸೇವೆ: ಪೂರ್ವನಿಶ್ಚಿತ ಸ್ಥಿತಿಯಂತೆ ರೀಕ್ಸ್‌‌ಫಹ್ರರ್‌‌-SS ಆಗಿ ಪರಮೋಚ್ಚ ದಳಪತಿ. ಸಣ್ಣ ಪ್ರಮಾಣದಲ್ಲಿ ಕಾರ್ಯಾಚರಣಾ ಅಧಿಕಾರವನ್ನು ಚಲಾಯಿಸಿದ.
  • ರಾಜಕೀಯ ಸ್ಥಾನಗಳು: ರೀಕ್‌‌‌ಸ್ಲೀಟರ್‌‌ ಡೆರ್‌‌ NSDAP

ಶ್ರೇಣಿಯ ದಿನಾಂಕಗಳು

  • SS-ಫಹ್ರರ್‌‌: 1925
  • SS-ಒಬರ್‌ಫಹ್ರರ್‌‌: 1927
  • SS-ಗ್ರಪೆನ್‌ಫಹ್ರರ್‌‌: 1930
  • SS-ಓಬರ್‌‌ಗ್ರಪೆನ್‌ಫಹ್ರರ್‌‌: 1933
  • ರೀಕ್ಸ್‌‌ಫಹ್ರರ್‌‌-SS: ಜೂನ್‌, 1934

1929ರ ನಂತರ, ತನ್ನ "ರೀಕ್ಸ್‌‌ಫಹ್ರರ್‌‌" ಪಟ್ಟದಿಂದ ಏಕಮಾತ್ರವಾಗಿ ಹಿಮ್ಲರ್ ಸ್ವತಃ ತನಗೆ ಉಲ್ಲೇಖಿಸಿಕೊಳ್ಳುತ್ತಿದ್ದ; ಇದು 1934ರವರೆಗೆ ಒಂದು ವಾಸ್ತವಿಕ ಶ್ರೇಣಿಯಾಗಿರಲಿಲ್ಲ.

ಪ್ರಶಸ್ತಿಗಳು

SS ಸಂಘಟನೆಯ ಮುಖ್ಯಸ್ಥನಾಗಿ, ಅನೇಕ ನಾಜಿ ಸೇನೆಯ, ನಾಗರಿಕ, ಮತ್ತು ರಾಜಕೀಯ ಪ್ರಶಸ್ತಿಗಳನ್ನು "ತನಗೆ ತಾನೇ ಕೊಟ್ಟುಕೊಳ್ಳುವ" ಸ್ಥಾನದಲ್ಲಿ ಇರುವ ಅನನ್ಯ ಸಾಮರ್ಥ್ಯವನ್ನು ಹಿಮ್ಲರ್ ಹೊಂದಿದ್ದ. ಆದಾಗ್ಯೂ, ಹಿಮ್ಲರ್‌‌ನ ಅಧಿಕೃತ ಪ್ರಶಸ್ತಿಗಳು ಮತ್ತು ಭೂಷಣಗಳು, ಮುಖ್ಯವಾಗಿ ಸೇವಾ ಭೂಷಣಗಳಿಗೆ ಮತ್ತು ಅರ್ಹತೆಯ ಪದಕಗಳಿಗೆ ಸಂಬಂಧಿಸಿದಂತೆ ಅವನಿಗೆ ಅರ್ಹತೆಯನ್ನು ನೀಡಿವೆ; ಇದು ವಿನ್ಯಾಸದಿಂದಾಗಿ ಸ್ಪಷ್ಟವಾಗಿದೆ.[೩೮] ಅನೇಕ ಅಗ್ರಗಣ್ಯ ನಾಜಿ ನಾಯಕರಂತೆ (ಅವರಲ್ಲಿ ಹಿಟ್ಲರ್‌‌ ಕೂಡಾ ಸೇರಿದ್ದ) ಹಿಮ್ಲರ್ ಕೂಡಾ ಅದ್ದೂರಿಯ ಭೂಷಣಗಳು ಮತ್ತು ಪ್ರಶಸ್ತಿಗಳನ್ನು ಸ್ವತಃ ತನಗೆ ದಯಪಾಲಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಿದ್ದ; ಆದರೆ ಉತ್ತೇಜನದ ಒಂದು ಭಾಗವಾಗಿ ಇಂಥ ಪ್ರಶಸ್ತಿಗಳನ್ನು ನೋಡುವ ಆಂದೋಲನದ ಕಿರಿಯ ಸದಸ್ಯರಿಗೆ ಸಂಬಂಧಿಸಿದಂತೆ, ಈ ಗೌರವಗಳನ್ನು ಅವನು ಉಳಿಸಿಕೊಂಡ. ಇದರ ಕೊನೆಗೆ, ಐರನ್‌ ಕ್ರಾಸ್‌ ಪದಕವನ್ನು ಮತ್ತು ವಾರ್‌‌ ಮೆರಿಟ್‌ ಕ್ರಾಸ್‌‌ ಪದಕವನ್ನು ಹಿಮ್ಲರ್‌‌ಗೆ ಎಂದಿಗೂ ಪ್ರದಾನ ಮಾಡಲಿಲ್ಲ; SS ಸಂಘಟನೆಯ ಮತ್ತು ಆರಕ್ಷಕ ಪಡೆಯ ಮುಖ್ಯಸ್ಥನಾಗಿ ಅವನು ನಿರ್ವಹಿಸಿದ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಪ್ರಶಸ್ತಿಗಳಿಗೆ ಆತ ಹೆಚ್ಚೂಕಮ್ಮಿ ನಿಸ್ಸಂಶಯವಾಗಿ ಅರ್ಹನಾಗಿದ್ದರೂ ಸಹ ಅವು ಅವನಿಗೆ ದಕ್ಕಲಿಲ್ಲ.[೩೯]

ಹಿಮ್ಲರ್‌ನ ಅಧಿಕೃತ ಭೂಷಣಗಳ ಹೆಸರುಗಳು ಈ ರೀತಿಯಲ್ಲಿದ್ದವು:

  • ಬ್ಲಡ್‌ ಆರ್ಡರ್‌‌‌
  • ಗೋಲ್ಡನ್‌ ನಾಜಿ ಪಾರ್ಟಿ ಬ್ಯಾಡ್ಜ್‌‌
  • ಗೋಲ್ಡನ್‌ ಹಿಟ್ಲರ್‌‌ ಯೂತ್‌ ಬ್ಯಾಡ್ಜ್‌‌
  • ಕಂಬೈನ್ಡ್‌ ಪೈಲಟ್ಸ್‌-ಅಬ್ಸರ್ವೇಷನ್‌ ಬ್ಯಾಡ್ಜ್‌‌ (ವಜ್ರಖಚಿತ ಬಂಗಾರದ ಪದಕ)
  • ಒಲಿಂಪಿಕ್‌ ಗೇಮ್ಸ್‌ ಡೆಕೊರೇಷನ್‌ (ಮೊದಲ ದರ್ಜೆ)
  • ನಾಜಿ ಪಾರ್ಟಿ ಜನರಲ್‌ ಗೌ ಬ್ಯಾಡ್ಜ್‌‌
  • ನ್ಯೂರೆಂಬರ್ಗ್‌ ಪಾರ್ಟಿ ಡೇ ಬ್ಯಾಡ್ಜ್‌ ಆಫ್‌ 1929
  • SS ಸುದೀರ್ಘ ಸೇವೆಯ ಪ್ರಶಸ್ತಿ (12 ವರ್ಷಗಳ ಸೇವೆಗೆ)
  • NSDAP ಸುದೀರ್ಘ ಸೇವೆಯ ಪ್ರಶಸ್ತಿ (15 ವರ್ಷಗಳ ಸೇವೆಗೆ)
  • ಆನ್‌ಸ್ಕ್ಲಸ್‌ ಪದಕ
  • ಸ್ಟೂಡೆಂಟ್‌ಲ್ಯಾಂಡ್‌ ಪದಕ (ಡಬ್ಲ್ಯೂ/ಪ್ರಾಗ್ವೆ ಕ್ಯಾಸಲ್‌ ಬಾರ್‌‌)
  • ಮೆಮೆಲ್‌ ಪದಕ
  • ವೆಸ್ಟ್‌‌ ವಾಲ್‌ ಪದಕ (1944)
  • SS ಗೌರವಾರ್ಥ ಉಂಗುರ
  • SS ಗೌರವಾರ್ಥ ಕತ್ತಿ
  • SA ಸ್ಪೋರ್ಟ್ಸ್‌ ಬ್ಯಾಡ್ಜ್‌‌ (ಕಂಚಿನಲ್ಲಿ)
  • ಹಳೆಯ ಗಾರ್ಡ್‌ಗೆ ಸಂಬಂಧಿಸಿದ ಗೌರವಾರ್ಥ ಚೆವ್ರನ್‌

ಜರ್ಮನಿಯ ಮಿತ್ರರಾಷ್ಟ್ರಗಳಿಂದ ಹಿಮ್ಲರ್‌ಗೆ ಯಥೇಚ್ಛ ಪ್ರಮಾಣದಲ್ಲಿ ವಿದೇಶಿ ಪ್ರಶಸ್ತಿಗಳೂ ಸಹ ನೀಡಲ್ಪಟ್ಟವು; ಇವುಗಳಲ್ಲಿ ಅತ್ಯಂತ ಗಮನಾರ್ಹವಾದವು ರೊಮೇನಿಯಾ ಮತ್ತು ಇಟಲಿಯಿಂದ ಬಂದ ಪ್ರಶಸ್ತಿಗಳಾಗಿದ್ದು, ಅವು ಹಿಮ್ಲರ್‌ಗೆ ಉನ್ನತ ಶ್ರೇಣಿಯ ದರ್ಜೆಗಳನ್ನು ಪ್ರದಾನ ಮಾಡಿದವು. ಹಲವಾರು ಜರ್ಮನ್‌ ಸಂಸ್ಥಾನಗಳ ಭೂಷಣಗಳೂ ಸಹ ಹಿಮ್ಲರ್ ಪಾಲಾದವು; ಇವುಗಳ ಪೈಕಿ, ಹಿಂದೆ ಅವನು ಆರಕ್ಷಕ ಪಡೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ಪ್ರದೇಶವಾದ ಬವೇರಿಯಾದಿಂದ ನೀಡಲ್ಪಟ್ಟ ಭೂಷಣಗಳು ಅತ್ಯಂತ ಗಮನಾರ್ಹವಾದುದಾಗಿವೆ. ಸಂಪೂರ್ಣ ದಿರಿಸಿನ ಸಮವಸ್ತ್ರವು ಅತ್ಯಗತ್ಯವಾಗಿರುವ ಅತ್ಯಂತ ಔಪಚಾರಿಕವಾಗಿರುವ ಸಂಸ್ಥಾನದ ಕಾರ್ಯಕ್ರಮಗಳಲ್ಲಿ ಧರಿಸಿದ್ದನ್ನು ಹೊರತುಪಡಿಸಿದರೆ, ಈ ಹೆಚ್ಚುವರಿ ಒದಕಗಳನ್ನು ಹಿಮ್ಲರ್ ಧರಿಸಿದ್ದು ತೀರಾ ಅಪರೂಪ.

ಇತರ ಸೇವೆ

  • ಅಧಿಕಾರಿ ಕೆಡೆಟ್‌ (ಬವೇರಿಯಾದ 11ನೇ ಪದಾತಿಸೈನ್ಯದ ಸೇನಾಭಾಗ): 1918
  • ಸ್ವದೇಶಿ ಸೇನೆಯ ಮುಖ್ಯಸ್ಥ: 1944
  • ವೋಲ್ಕ್‌ಸ್ಟರ್ಮ್‌‌ನ ಪರಮೋಚ್ಚ ದಳಪತಿ: 1945

ಇವನ್ನೂ ಗಮನಿಸಿ

[ಬದಲಾಯಿಸಿ]
  • ನಾಜಿ ಆಧ್ಯಾತ್ಮ ಜ್ಞಾನ
  • ಆಹ್ನೆನೆರ್ಬೆ - ನಾಜಿ ಮಾನವಶಾಸ್ತ್ರಜ್ಞರು, ಇವರ ಪೈಕಿ ಕೆಲವರು ಟಿಬೆಟ್‌ಗೆ ತೆರಳಿದರು. ಹಿಮ್ಲರ್ ಇದರ ಭಾಗಶಃ-ಸಂಸ್ಥಾಪಕ.
  • ನಾಜಿ ಜರ್ಮನಿಯ ಸಂಗ್ರಹ-ಪದಕೋಶ
  • ನಾಝಿ ಪಕ್ಷದ ನಾಯಕರು ಹಾಗೂ ಅಧಿಕಾರಿಗಳ ಪಟ್ಟಿ
  • SS ಸಿಬ್ಬಂದಿಗಳ ಪಟ್ಟಿ
  • SS-ಜಲ್ಲೆಯುಕ್ಟರ್‌‌ — SS ಸಂಘಟನೆಗೆ ಹಿಮ್ಲರ್ ನೀಡಿದ ಯೂಲೆಟೈಡ್‌ ಕೊಡುಗೆ
  • ನಾಜಿ ಜರ್ಮನಿಯ ಜನಾಂಗೀಯ ಕಾರ್ಯನೀತಿ — ಹಿಮ್ಲರ್‌‌ನ ಪಾಲ್ಗೊಳ್ಳುವಿಕೆ
  • ಅಲ್ಲಾಕ್‌ ಪೋರ್ಸೆಲೈನ್‌‌ — ಕಲಾಕೃತಿಗಳ ತಯಾರಿಕೆಗೆ ಸಂಬಂಧಿಸಿದಂತಿರುವ ಒಂದು ಕೈಗಾರಿಕಾ ನೆಲೆಯನ್ನು ಸ್ಥಾಪಿಸಲು ಹಿಮ್ಲರ್ ಯೋಜಿಸಿದ್ದ ಅಚ್ಚುಮೆಚ್ಚಿನ ಯೋಜನೆಗಳಲ್ಲಿ ಒಂದು; ಹಿಮ್ಲರ್‌‌‌ನ ದೃಷ್ಟಿಯಲ್ಲಿ, ಇದು ನಿಜವಾದ ಅರ್ಥದಲ್ಲಿ ಜರ್ಮನರ ಸಂಸ್ಕೃತಿಯ ಪ್ರತಿನಿಧಿಯ ಎನಿಸಿತ್ತು.
  • ‌ಲೆಬೆನ್ಸ್‌ಬಾರ್ನ್ - ಹೊಂಬಣ್ಣದ ಕೂದಲಿನ, ನೀಲಿಕಣ್ಣುಗಳ ಮಕ್ಕಳನ್ನು ಬೆಳೆಸಲೆಂದು ಹಿಮ್ಲರ್‌ನ ಹೊಣೆಗಾರಿಕೆಯ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ ಒಂದು ಯೋಜನೆ

ಆಕರಗಳು

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ಇದರಲ್ಲಿ ಉಲ್ಲೇಖಿಸಲ್ಪಟ್ಟಿರುವುದು: ರಿ. Archived 16 May 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.ಹಾಲಕಾಸ್ಟ್‌‌ ವಿಕ್ಟಿಮ್‌ ಅಸೆಟ್ಸ್‌ ಲಿಟಿಗೇಷನ್‌ (ಸ್ವಿಸ್‌ ಬ್ಯಾಂಕ್ಸ್‌) ಸ್ಪೆಷಲ್‌ ಮಾಸ್ಟರ್‌‌'ಸ್‌ ಪ್ರಪೋಸಲ್ಸ್‌, 11 ಸೆಪ್ಟೆಂಬರ್‌‌ 2000 Archived 16 May 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.).
  2. "ಸಿಂಟಿ ಅಂಡ್‌ ರೋಮಾ", ಯುನೈಟೆಡ್‌ ಸ್ಟೇಟ್ಸ್‌ ಹಾಲಕಾಸ್ಟ್‌ ಮೆಮರಿಯಲ್‌ ಮ್ಯೂಸಿಯಂ.
  3. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ
  4. ಆಂಡರ್‌ಸ್ಕ್‌‌, A.: ಡೆರ್‌ ವಾಟರ್‌ ಐನ್ಸ್‌ ಮರ್ಡರ್ಸ್‌ (ಓರ್ವ ಕೊಲೆಗಾರನ ತಂದೆ). ಡಯೋಜೀನ್ಸ್‌‌, 2006. ISBN 978-3-257-23608-8
  5. Heinz 1972
  6. ಬ್ರೀಟ್‌ಮನ್‌‌, ಪುಟ 9
  7. "ಟೈಮ್‌ ನಿಯತಕಾಲಿಕ, ಜೂನ್‌‌ 16, 1947". Archived from the original on 15 ಜನವರಿ 2009. Retrieved 24 ಆಗಸ್ಟ್ 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  8. ಬ್ರೀಟ್‌ಮನ್‌‌, ಪುಟ 11
  9. Breitman 2004, p. 12
  10. BBC ಹಿಸ್ಟೋರಿಕ್‌ ಫಿಗರ್ಸ್‌‌ - ಹೆನ್ರಿಕ್ ಹಿಮ್ಲರ್
  11. ಹೋಯೆಸ್‌ ಮತ್ತು ಪಸ್ಕುಲಿ, ಪುಟ 203
  12. ಹೋಹ್ನೆ, ಆರ್ಡರ್‌ ಆಫ್‌ ದಿ ಡೆತ್‌'ಸ್‌ ಹೆಡ್‌ (2000ದ ಆವೃತ್ತಿ), ಪುಟ 47-49
  13. Lumsden 2001, p. 53
  14. Williams 2003, p. 61
  15. Williams 2003, p. 77
  16. Lumsden 2001, pp. 80, 83
  17. Lumsden 2001, p. 83
  18. ‌ಬೌವೆರ್, ಯೆಹುಡಾ ರೀಥಿಂಕಿಂಗ್‌ ದಿ ಹಾಲಕಾಸ್ಟ್‌ ಯೇಲ್‌ ಯೂನಿವರ್ಸಿಟಿ ಪ್ರೆಸ್‌‌, 2000, ಪುಟ 5
  19. ಪ್ರಿಂಗ್ಲ್‌‌, ಹೀಥರ್‌‌: ದಿ ಮಾಸ್ಟರ್‌ ಪ್ಲಾನ್‌‌: ಹಿಮ್ಲರ್‌'ಸ್‌ ಸ್ಕಾಲರ್ಸ್‌ ಅಂಡ್‌ ದಿ ಹಾಲಕಾಸ್ಟ್‌ . ಹೈಪೇರಿಯನ್‌‌, ನ್ಯೂಯಾರ್ಕ್‌, 2006. ISBN 0-7868-6886-4
  20. "ಪೊಜ್‌ನಾನ್‌‌ ಭಾಷಣ". Archived from the original on 7 ಮೇ 2012. Retrieved 24 ಆಗಸ್ಟ್ 2010.
  21. ಟೂಮಾಸ್‌ ಹಿಯೋ, ಪೀಟರ್‌ ಕಾಸಿಕ್‌‌ (2006). "ಈಸ್ಟೋನಿಯನ್‌ ಯುನಿಟ್ಸ್‌ ಇನ್‌ ದಿ ವಫೆನ್‌‌-SS". ಟೂಮಾಸ್‌ ಹಿಯೋ, ಮೀಲಿಸ್‌ ಮಾರಿಪೂ, ಮತ್ತು ಇಂಡ್ರೆಕ್‌ ಪಾವ್ಲೆ; ಇದರಲ್ಲಿರುವಂಥದ್ದು: ಈಸ್ಟೋನಿಯಾ 1940–1945: ರಿಪೋರ್ಟ್ಸ್‌ ಆಫ್‌ ದಿ ಈಸ್ಟೋನಿಯನ್‌ ಇಂಟರ್‌ನ್ಯಾಷನಲ್‌ ಕಮಿಷನ್‌ ಫಾರ್‌ ದಿ ಇನ್ವೆಸ್ಟಿಗೇಷನ್‌‌ ಆಫ್‌ ಕ್ರೈಮ್ಸ್‌ ಎಗೇನ್ಸ್ಟ್‌ ಹ್ಯುಮಾನಿಟಿ. ಟ್ಯಾಲ್ಲಿನ್‌‌. ಪುಟಗಳು 927–968
  22. Crocker, Harry (13 ನವೆಂಬರ್ 2001). Triumph: A 2,000 Year History of the Catholic Church. Prima Lifestyles. ISBN 0761529241.
  23. ಹೆನ್ರಿಕ್ ಹಿಮ್ಲರ್ Archived 1 October 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. - ಪೆಟ್ಟಿ ಬೌರ್‌ಜಿಯೋಯಿಸ್‌ ಅಂಡ್‌ ಗ್ರಾಂಡ್‌ ಇನ್‌ಕ್ವಿಸಿಟರ್‌‌: ಜೊವಾಚಿಮ್‌ C ಫೆಸ್ಟ್‌‌
  24. "ಆರ್ಕೈವ್ ನಕಲು". Archived from the original on 2 ಆಗಸ್ಟ್ 2010. Retrieved 24 ಆಗಸ್ಟ್ 2010.
  25. ೨೫.೦ ೨೫.೧ [ http://www.dailymail.co.uk/news/article-1299606/Final-moments-Nazi-Heinrich-Himmler-revealed-soldiers-war-diary.html 2010ರ ಆಗಸ್ಟ್‌‌ 2ರ ಮೇಲ್‌ ಆನ್‌ಲೈನ್‌ನ ಯೋಧರ ಯುದ್ಧ ದಿನಚರಿಯಲ್ಲಿ ಹೊರಗೆಡಹಲ್ಪಟ್ಟಿರುವ ನಾಜಿ ಹೆನ್ರಿಕ್ ಹಿಮ್ಲರ್‌‌ನ ಅಂತಿಮ ಕ್ಷಣಗಳು]
  26. "ಹೆನ್ರಿಕ್ ಹಿಮ್ಲರ್": ರೋಜರ್‌ ಮ್ಯಾನ್‌ವೆಲ್‌‌ ಮತ್ತು ಹೆನ್ರಿಕ್ ಫ್ರೇಂಕೆಲ್‌‌
  27. ಉಲ್ಲೇಖ ದೋಷ: Invalid <ref> tag; no text was provided for refs named autogenerated1
  28. ಹಿಸ್ಟಾರಿಕ್‌ ಫೋರ್ಜರಿ ಅಂಡ್‌ ಫ್ರಾಡ್ Archived 10 March 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  29. ‌‌ರಾಬರ್ಟ್‌ S. ವಿಸ್‌ಟ್ರಿಕ್, ಹೂ ಈಸ್‌ ಹೂ ಇನ್‌ ನಾಜಿ ಜರ್ಮನಿ, ರೌಲೆಟ್ಜ್‌‌ 1997.
  30. ಹೆನ್ರಿಕ್ ಹಿಮ್ಲರ್ : ನಾಜಿ ಜರ್ಮನಿ
  31. "GI - IIನೇ ಜಾಗತಿಕ ಸಮರ ಸ್ಮಾರಕ". Archived from the original on 11 ಡಿಸೆಂಬರ್ 1997. Retrieved 24 ಆಗಸ್ಟ್ 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  32. ಪ್ಯಾಡ್‌ಫೀಲ್ಡ್‌‌, ಪೀಟರ್‌ ಹಿಮ್ಲರ್ ನ್ಯೂಯಾರ್ಕ್‌: 1990, ಹೆನ್ರಿ ಹೋಲ್ಟ್‌‌, ಪುಟ 402; ರೋಜರ್‌ ಮ್ಯಾನ್‌ವೆಲ್‌‌, ಹೆನ್ರಿಕ್ ಫ್ರೇಂಕೆಲ್‌‌, ಹಿಮ್ಲರ್ , ಪುಟ್ನಮ್‌‌‌, 1965, ಪುಟ 181; ಟೆಡ್‌ ಮಾರ್ಗಾನ್‌, ಆನ್‌ ಅನ್‌ಸರ್ಟನ್‌ ಅವರ್‌: ದಿ ಫ್ರೆಂಚ್‌, ದಿ ಜರ್ಮನ್ಸ್‌‌, ದಿ ಜ್ಯೂಸ್‌, ದಿ ಕ್ಲೌಸ್‌ ಬಾರ್ಬೀ ಟ್ರಯಲ್‌, ಅಂಡ್‌ ದಿ ಸಿಟಿ ಆಫ್‌ ಲಯೋನ್‌ , 1940-1945, ಆರ್ಬೊರ್‌ ಹೌಸ್‌, 1990, ಪುಟ 372
  33. ಕಾರ್ಲಾ O. ಪೋವ್‌, ನ್ಯೂ ರಿಲಿಜನ್ಸ್‌ ಅಂಡ್‌ ದಿ ನಾಜಿಸ್‌ , ರೌಲೆಟ್ಜ್‌‌, 2006, ಪುಟ 31
  34. http://www.nationalarchives.gov.ukನಲ್ಲಿರುವ ನ್ಯೂಸ್‌ | ಕ್ಯಾಬಿನೆಟ್‌ ಸೆಕ್ರೆಟರೀಸ್‌´ ನೋಟ್‌ಬುಕ್ಸ್‌‌ ಫ್ರಮ್‌ ವರ್ಲ್ಡ್‌ ವಾರ್‌ ಟೂ
  35. ‌ಡೊವಾರ್ಡ್, ಜೇಮೀ. "ಹಿಟ್ಲರ್‌‌ ಮಸ್ಟ್‌‌ ಡೈ ವಿಥೌಟ್‌ ಟ್ರಯಲ್‌ — ಚರ್ಚಿಲ್‌‌." ‌‌ದಿ ಅಬ್ಸರ್ವರ್ 1 ಜನವರಿ 2006.
  36. ಮೂಲ: ಡೆರ್‌ ಸ್ಪೀಗೆಲ್‌‌ , ಸಂಚಿಕೆಯ ದಿನಾಂಕ 3 ನವೆಂಬರ್‌‌‌ 2008: ಹಿಟ್ಲರ್ಸ್‌‌ ವೊಲ್‌ಸ್ಟ್ರೆಕರ್‌ – ಔಸ್‌ ಡೆಮ್‌ ಲೆಬೆನ್‌ ಐನ್ಸ್‌ ಮ್ಯಾಸೆನ್‌ಮೊರ್ಡರ್ಸ್‌‌
  37. ರಮ್ಮೆಲ್‌‌, R.J. "ಸ್ಟಾಟಿಸ್ಟಿಕ್ಸ್‌ ಆಫ್‌ ಡೆಮೊಸೈಡ್‌: ಜೀನೋಸೈಡ್‌ ಅಂಡ್‌ ಮಾಸ್‌ ಮರ್ಡರ್‌ ಸಿನ್ಸ್‌‌ 1900". ಚಾರ್ಲೋಟ್ಸ್‌ವಿಲ್ಲೆ: ಸೆಂಟರ್‌ ಫಾರ್‌ ನ್ಯಾಷನಲ್‌ ಸೆಕ್ಯುರಿಟಿ ಲಾ, ಸ್ಕೂಲ್‌ ಆಫ್‌ ಲಾ, ಯೂನಿವರ್ಸಿಟಿ ಆಫ್‌ ವರ್ಜೀನಿಯಾ, 1997. <http://www.mega.nu/ampp/rummel/note5.htm Archived 16 May 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.>
  38. ಹೆನ್ರಿಕ್ ಹಿಮ್ಲರ್‌‌ನ SS ಸೇವಾ ದಾಖಲೆ; ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ಆರ್ಕೀವ್ಸ್‌; ಕಾಲೇಜ್‌ ಪಾರ್ಕ್‌, ಮೇರಿಲ್ಯಾಂಡ್‌
  39. "ಹೆನ್ರಿಕ್ ಹಿಮ್ಲರ್: ಎ ಫೋಟೋಗ್ರಫಿಕ್‌ ಕ್ರಾನಿಕಲ್‌ ಆಫ್‌ ಹಿಟ್ಲರ್‌‌'ಸ್‌ ರೀಕ್ಸ್‌ಪಹ್ರೆರ್‌-SS", ಮಾರ್ಟಿನ್‌ ಮ್ಯಾನ್ಸನ್‌‌, ಸ್ಕಿಫರ್‌‌ ಸೇನಾ ಇತಿಹಾಸ, 2001


ಗ್ರಂಥಸೂಚಿ

[ಬದಲಾಯಿಸಿ]
  • Breitman, Richard (2004). Himmler and the Final Solution: The Architect of Genocide. Pimlico, Random House, London. ISBN 1-84413-089-4. {{cite book}}: Invalid |ref=harv (help)
  • ಹೈಗರ್‌‌, ಅರ್ನ್ಸ್ಟ್‌: "ಫಿಕ್ಷನ್ಸ್‌, ಫ್ಯಾಕ್ಟ್ಸ್‌, ಅಂಡ್‌ ಫೋರ್ಜರೀಸ್‌: ದಿ ‘ರಿವೆಲೇಷನ್ಸ್‌’ ಆಫ್‌ ಪೀಟರ್‌ ಅಂಡ್‌ ಮಾರ್ಟಿನ್‌ ಅಲೆನ್‌‌ ಎಬೌಟ್‌ ದಿ ಹಿಸ್ಟರಿ ಆಫ್‌ ದಿ ಸೆಕಂಡ್ ವರ್ಲ್ಡ್ ವಾರ್‌‌"; ದಿ ಜರ್ನಲ್‌ ಆಫ್‌ ಇಂಟಲಿಜೆನ್ಸ್‌ ಹಿಸ್ಟರಿ ಯಲ್ಲಿರುವಂಥದು, ಸಂಪುಟ 6 ಸಂಖ್ಯೆ 1 (ಬೇಸಿಗೆ ಆವೃತ್ತಿ 2006 [2007ರಲ್ಲಿ ಪ್ರಕಟಿತ]), ಪುಟಗಳು 105–117
  • Hale, Christopher (2003). Himmler's Crusade: The true story of the 1938 Nazi expedition into Tibet. Transworld Publishers, London. ISBN 0-593-04952-7. {{cite book}}: Invalid |ref=harv (help)
  • Himmler, Katrin (2005). Die Brüder Himmler. Eine deutsche Familiengeschichte. S. Fischer Verlag, Frankfurt a. M. ISBN 3-10-033629-1. {{cite book}}: Invalid |ref=harv (help) (ಜರ್ಮನ್‌ ಭಾಷೆಯಲ್ಲಿ— ಹೆನ್ರಿಕ್ ಹಿಮ್ಲರ್ ಲೇಖಕನ ತಂದೆಯ ಚಿಕ್ಕಪ್ಪ)
  • Höhne, Heinz (2000). The Order of the Death's Head: The Story of Hitler's SS. Translated from German by Richard Barry. Penguin Classic. ISBN 0141390123. {{cite book}}: Invalid |ref=harv (help)
  • Höhne, Heinz (1972). The Order of the Death's Head: The Story of Hitler's SS. London: Pan Books Ltd. ISBN 0-330-02963-0. {{cite book}}: Invalid |ref=harv (help)
  • Höss, Rudolf. Paskuly, Steven. Levi, Primo. Translated by Andrew Pollinger (1996). Death Dealer: The Memoirs of the SS Kommandant at Auschwitz. Da Capo Press. ISBN 0306806983. {{cite book}}: Invalid |ref=harv (help)CS1 maint: multiple names: authors list (link)
  • Lumsden, Robin (2001). A Collector's Guide To: The Allgemeine — SS. Ian Allan Publishing, Inc. ISBN 0-7110-2905-9. {{cite book}}: Invalid |ref=harv (help)
  • Padfield, Peter (2001). Himmler. Reichsführer-SS. Cassel & Co, London. ISBN 0-304-35839-8. {{cite book}}: Invalid |ref=harv (help)
  • Pringle, Heather (2006). The Master Plan: Himmler's Scholars and the Holocaust. Hyperion, New York. ISBN 0786868864. {{cite book}}: Invalid |ref=harv (help)
  • Reitlinger, Gerald (1956). The SS: Alibi of a Nation 1922-1945. {{cite book}}: Invalid |ref=harv (help)
  • Russell, Stuart (2007). La fortezza di Heinrich Himmler — Il centro ideologico di Weltanschauung delle SS — Cronaca per immagini della scuola-SS Haus Wewelsburg 1934-1945. Roma: Editrice Thule Italia. ISBN 9788890278105. {{cite book}}: Invalid |ref=harv (help); Unknown parameter |trans_title= ignored (help)
  • Thomas, Hugh W., M.D. Strange Death of Heinrich Himmler: A Forensic Investigation. {{cite book}}: Invalid |ref=harv (help)CS1 maint: multiple names: authors list (link)
  • Williams, Max (2003). Reinhard Heydrich: The Biography: Volumes 1. Ulric Publishing. ISBN 0-9537577-5-7. {{cite book}}: Invalid |ref=harv (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ರೀಕ್ಸ್‌‌ಫಹ್ರರ್‌‌-SS
ಹೆನ್ರಿಕ್ ಹಿಮ್ಲರ್
ಡೆರ್‌‌ ಫಹ್ರರ್‌‌
ಅಡಾಲ್ಫ್‌‌‌ ಹಿಟ್ಲರ್‌‌
Government offices
Preceded by Reichsführer-SS
1929–1945
Succeeded by
Political offices
Preceded by Interior Minister of Germany
1943–1945
Succeeded by
Military offices
Preceded by
None
Commander of Army Group Upper Rhine
10 December 1944-24 January 1945
Succeeded by
None
Preceded by
None
Commander of Army Group Vistula
25 January 1945-13 March 1945
Succeeded by
Generaloberst Gotthard Heinrici
(20 March)
Awards and achievements
Preceded by Cover of Time Magazine
12 February 1945
Succeeded by

ಟೆಂಪ್ಲೇಟು:The Holocaust (end)