Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಖಾರ್ಕಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸಂಪ್ಷನ್ ಕಥೆಡ್ರಲ್, ಖಾರ್ಕಾಫ್

ಖಾರ್ಕಾಫ್ ಯುಕ್ರೇನ್‍ನ ಎರಡನೇ ಅತಿ ದೊಡ್ಡ ನಗರವಾಗಿದೆ.[] ಹಿಂದೆ ಸೋವಿಯೆತ್ ದೇಶದ ಉಕ್ರೇನಿಯನ್ ಸೋವಿಯೆತ್ ಸಮಾಜವಾದಿ ಗಣರಾಜ್ಯದಲ್ಲಿಯ ಒಂದು ನಗರವಾಗಿತ್ತು. ಅಬ್ಲಾಸ್ಟ್ (oblast) (ಆಡಳಿತವಿಭಾಗ) ಕೇಂದ್ರ. ಮಾಸ್ಕೋಗೆ ದಕ್ಷಿಣ-ನೈಋತ್ಯದಲ್ಲಿ 400 ಮೈ. ದೂರದಲ್ಲಿ, ಲೋಪಾನ್ ಮತ್ತು ಖಾರ್ಕಾಫ್ ನದಿಗಳ ಸಂಗಮದ ಬಳಿ ಸುಮಾರು ಇಪ್ಪತ್ತು ಉಪನಗರಗಳಿಂದ ಕೂಡಿರುವ ಇದರ ಜನಸಂಖ್ಯೆ 1,421,125 (2022).

ಇತಿಹಾಸ

[ಬದಲಾಯಿಸಿ]

ರಷ್ಯದ ದಕ್ಷಿಣದ ಗಡಿನೆಲದ ರಕ್ಷಣೆಯ ಉದ್ದೇಶದಿಂದ 1654ರಲ್ಲಿ ಈ ನಗರವನ್ನು ನಿರ್ಮಿಸಲಾಯಿತು.[] 18ನೆಯ ಶತಮಾನದಲ್ಲಿ ಇದು ವ್ಯಾಪಾರ ಕೈಗಾರಿಕಾ ಕೇಂದ್ರವಾಗಿ ಬೆಳೆಯಿತು. 1732ರಲ್ಲಿ ಪ್ರಾಂತೀಯ ಕೇಂದ್ರವಾಯಿತು. 19ನೆಯ ಶತಮಾನದಲ್ಲಿ ಇಲ್ಲಿ ಕೈಗಾರಿಕೆಗಳು ಶೀಘ್ರವಾಗಿ ಅಭಿವೃದ್ಧಿ ಹೊಂದಿದುವು. ರಷ್ಯನ್ ಕ್ರಾಂತಿಯ ವೇಳೆಗೆ ಇದು ರಷ್ಯದ ಐದನೆಯ ದೊಡ್ಡ ನಗರವಾಗಿ ಪರಿಣಮಿಸಿತ್ತು. ಉಕ್ರೇನಿಯನ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ (1917) 1934ರವರೆಗೆ ಆ ರಾಜ್ಯದ ರಾಜಧಾನಿಯಾಗಿತ್ತು. ಕ್ರಾಂತಿಯ ಅನಂತರವೂ ಖಾರ್ಕಾಫಿನ ಬೆಳವಣಿಗೆ ನಿಲ್ಲಲಿಲ್ಲ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇದಕ್ಕೆ ಅಗಾಧ ನಷ್ಟ ಸಂಭವಿಸಿದರೂ ಯುದ್ಧಾನಂತರದಲ್ಲಿ ಚೇತರಿಸಿಕೊಂಡಿತು.

ವಿಶೇಷತೆಗಳು

[ಬದಲಾಯಿಸಿ]

ಈ ನಗರದಲ್ಲಿ ಅದುರು ಕರಗಿಸುವುದು, ಎಂಜಿನ್, ಟ್ರಾಕ್ಟರ್,[] ಬೈಸಿಕಲ್, ಕೃಷಿ ಉಪಕರಣ, ವಿದ್ಯುತ್ ಸಲಕರಣೆ ಹಾಗೂ ಜಲವಿದ್ಯುತ್ ಉತ್ಪಾದಕ ಯಂತ್ರ ತಯಾರಿಕೆ ಮುಂತಾದ ಬಣ್ಣ, ಬಿಸ್ಕತ್, ಹಿಟ್ಟು, ಜವಳಿ-ಇವು ಇಲ್ಲಿಯ ಇತರ ಕೆಲವು ಮುಖ್ಯ ಕೈಗಾರಿಕೆಗಳು.

ಖಾರ್ಕಾಫ್ ಹಿಂದಿನ ಸೋವಿಯೆತ್ ದೇಶದ ಮೂರನೆಯ ದೊಡ್ಡ ರೈಲ್ವೆ ಜಂಕ್ಷನ್ (ಮೊದಲಿನ ಎರಡು ಮಾಸ್ಕೋ ಮತ್ತು ಲೆನಿನ್‍ಗ್ರಾಡ್) ಆಗಿತ್ತು. ಮಾಸ್ಕೋ, ಕೀಯೆಫ್, ಒಡೆಸ್ಸ, ಬಾಕೂ ಇವುಗಳೊಂದಿಗೂ ಇತರ ಮುಖ್ಯ ನಗರಗಳೊಂದಿಗೂ ಸಂಬಂಧ ಕಲ್ಪಿಸುವ ಅನೇಕ ಹೆದ್ದಾರಿಗಳು ಇದರ ಮೂಲಕ ಹಾಯ್ದುಹೋಗುತ್ತವೆ. ವಿಮಾನ ಸಂಪರ್ಕವೂ ಉಂಟು.

ಖಾರ್ಕಾಫ್ ಒಂದು ಮುಖ್ಯ ಸಾಂಸ್ಕೃತಿಕ ಮತ್ತು ಶಿಕ್ಷಣ ಕೇಂದ್ರ. ಇಲ್ಲಿಯ ಎ.ಎಂ. ಗಾರ್ಕಿ ವಿಶ್ವವಿದ್ಯಾಲಯ 1805ರಲ್ಲಿ ಸ್ಥಾಪಿತವಾದದ್ದು. ಇಲ್ಲಿ ಉನ್ನತ ಶಿಕ್ಷಣ ಸಂಶೋಧನ ಕೇಂದ್ರಗಳೂ ಇವೆ. ಸಂಗೀತ ಭವನ, ನಾಟ್ಯಶಾಲೆಗಳು, ವಸ್ತು ಸಂಗ್ರಹಾಲಯಗಳು-ಇವು ಇತರ ಆಕರ್ಷಣೆಗಳು.

ಉಲ್ಲೇಖಗಳು

[ಬದಲಾಯಿಸಿ]
  1. Kharkiv "never had eastern-western conflicts" Archived 20 March 2022 ವೇಬ್ಯಾಕ್ ಮೆಷಿನ್ ನಲ್ಲಿ., Euronews (23 October 2014)
  2. What Makes Kharkiv Ukrainian Archived 8 December 2014 ವೇಬ್ಯಾಕ್ ಮೆಷಿನ್ ನಲ್ಲಿ., The Ukrainian Week (23 November 2014)
  3. Stalin, Joseph (1931). "To the Workers and the Administrative and Technical personnel of Kharkov Tractor Works Project". Stalin Collected Works. 13. Archived from the original on 10 July 2022. Retrieved 12 August 2022.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: